ನವದೆಹಲಿ: Prepaid Recharge Plan - ದೇಶದ ಅತಿದೊಡ್ಡ ಟೆಲಿಕಾಂ ಕಂಪನಿಯಾದ ರಿಲಯನ್ಸ್ ಜಿಯೋ (Reliance Jio) ಇತ್ತೀಚೆಗೆ ತನ್ನ ಗ್ರಾಹಕರ ಇಂಟರ್ನೆಟ್ ಬಳಕೆಯನ್ನು ಗಮನದಲ್ಲಿಟ್ಟುಕೊಂಡು ಡೈಲಿ ಡೇಟಾ ಮಿತಿಯನ್ನು (Daily Data Limit) ತೆಗೆದುಹಾಕಲು ನಿರ್ಧರಿಸಿದೆ ಮತ್ತು ಕೆಲವು ಹೊಸ ಯೋಜನೆಗಳನ್ನು ಪ್ರಾರಂಭಿಸಿದೆ. ಇದರಲ್ಲಿ ಅತ್ಯಂತ ವಿಶೇಷವಾದ ಯೋಜನೆ 597 ರೂ, ಇದು 90 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ.


COMMERCIAL BREAK
SCROLL TO CONTINUE READING

ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (Bharat Sanchar Nigam Limited) ನ 499 ರೂ.ಗಳ ಯೋಜನೆಗೆ ಪೈಪೋಟಿ ನೀಡಲು ಮಾರುಕಟ್ಟೆಗೆ ಈ ಯೋಜನೆ ಬಿಡುಗಡೆ ಮಾಡಲಾಗಿರುವುದರಿಂದ ಇದನ್ನು ಕೆಲವು ತಜ್ಞರು ಜಿಯೋ (Jio)ಮಾಸ್ಟರ್‌ಸ್ಟ್ರೋಕ್ ಯೋಜನೆ ಎಂದು ಕರೆಯುತ್ತಿದ್ದಾರೆ. ಎರಡೂ ಕಂಪನಿಗಳು ತಮ್ಮ ಯೋಜನೆಗಳೊಂದಿಗೆ 90 ದಿನಗಳ ಮಾನ್ಯತೆಯನ್ನು ನೀಡುತ್ತಿವೆ. ಆದರೆ ನೀವು ಸೂಕ್ಷ್ಮವಾಗಿ ಗಮನಿಸಿದರೆ, ಬೆಲೆಯಲ್ಲಿ ಸುಮಾರು 100 ರೂಪಾಯಿಗಳ ವ್ಯತ್ಯಾಸವಿದೆ. ಯಾವ ಕಂಪನಿಯ ಯೋಜನೆ ಉತ್ತಮ ಎಂಬ ಪ್ರಶ್ನೆ ಈಗ ನಿಮ್ಮ ಮನಸ್ಸಿನಲ್ಲಿ ಉದ್ಭವಿಸಿರಬೇಕು. ಹಾಗಾದರೆ ಬನ್ನಿ ಈ ಕುರಿತು ಹೆಚ್ಚಿನ ಮಾಹಿತಿ ತಿಳಿಯೋಣ ಬನ್ನಿ.


Jio ಕಂಪನಿಯ ರೂ.579 ರ ಪ್ರೀಪೇಡ್ ಯೋಜನೆ
ರಿಲಯನ್ಸ್ ಜಿಯೋನ 90 ದಿನಗಳ ಪ್ರಿಪೇಯ್ಡ್ ಯೋಜನೆಯ ಬೆಲೆ 597 ರೂ. ಕಂಪನಿಯು ಇತ್ತೀಚೆಗೆ ಇದನ್ನು ಪ್ರಾರಂಭಿಸಿದೆ. ಇದು ದೈನಂದಿನ ಡೇಟಾ ಮಿತಿಯಿಲ್ಲದೆ ಬರುತ್ತದೆ. ಅಂದರೆ, ಯೋಜನೆಯನ್ನು ಸಕ್ರೀಯಗೊಳಿಸಿದ ಬಳಿಕ ಯೋಜನೆಯಲ್ಲಿ ಸಿಗುವ 75GB ಇಂಟರ್ನೆಟ್ ಅನ್ನು ನೀವು ಏಕಕಾಲದಲ್ಲಿ ಬಳಸಬಹುದು. ಇದಲ್ಲದೆ, ಜಿಯೋ ತನ್ನ ಗ್ರಾಹಕರಿಗೆ ಅನಿಯಮಿತ ಧ್ವನಿ ಕರೆ, 100 ಎಸ್‌ಎಂಎಸ್ ಮತ್ತು ಜಿಯೋ ಆ್ಯಪ್‌ಗಳ ಉಚಿತ ಚಂದಾದಾರಿಕೆಯನ್ನು ನೀಡುತ್ತಿದೆ.


ಇದನ್ನೂ ಓದಿ- LIC Policy: LICಯ ಈ ಪಾಲಸಿಯಲ್ಲಿ ನಿತ್ಯ ರೂ.30 ಹೂಡಿಕೆ ಮಾಡಿ ಲಕ್ಷಾಧಿಪತಿಯಾಗಬಹುದು


BSNL ಕಂಪನಿಯ ರೂ.499 ರೂ. ಪ್ರೀಪೇಡ್ ಯೋಜನೆ
ಬಿಎಸ್‌ಎನ್‌ಎಲ್‌ನ 90 ದಿನಗಳ ಯೋಜನೆಯ ಬೆಲೆ 499 ರೂ. ಈ ಯೋಜನೆಯಲ್ಲಿ ಗ್ರಾಹಕರಿಗೆ ಪ್ರತಿದಿನ 2 ಜಿಬಿ ಡೇಟಾವನ್ನು ನೀಡಲಾಗುತಿದೆ. ಈ ರೀತಿಯಾಗಿ, ಈ ಯೋಜನೆಯ ಅಡಿ ಗ್ರಾಹಕರಿಗೆ 180 ಜಿಬಿ ಡೇಟಾ ಸಿಗುತ್ತದೆ. ಯೋಜನೆಯಲ್ಲಿ ಎಲ್ಲಾ ನೆಟ್‌ವರ್ಕ್‌ಗಳಲ್ಲಿ ಅನಿಯಮಿತ ಧ್ವನಿ ಕರೆ ಮತ್ತು ದಿನಕ್ಕೆ 100 ಎಸ್‌ಎಂಎಸ್ ನೀಡಲಾಗುತ್ತದೆ. ಇದಲ್ಲದೆ ಬಿಎಸ್‌ಎನ್‌ಎಲ್ ಟ್ಯೂನ್ ಮತ್ತು ಜಿಂಗ್‌ನಂತಹ ಸೇವೆಗಳನ್ನು ಉಚಿತವಾಗಿ ನೀಡಲಾಗುತ್ತಿದೆ. 


ಇದನ್ನೂ ಓದಿ- Gold Hallmarking ನಿಯಮದ ಬಳಿಕ ಮನೆಯಲ್ಲಿಟ್ಟ ಚಿನ್ನ ಏನಾಗಲಿದೆ, ಹಾಲ್ಮಾರ್ಕಿಂಗ್ ಮಾಡಿಸಬೇಕೆ? ಬೇಡವೇ?


ನಿಮಗಾಗಿ ಯಾವ ಪ್ಲಾನ್ ಲಾಭಕಾರಿ
ಬಿಎಸ್ಎನ್ಎಲ್ ಯೋಜನೆ ಸುಮಾರು 100 ರೂ.ಗಳಿಂದ ಅಗ್ಗವಾಗಿದೆ ಮತ್ತು ಸುಮಾರು 105 ಜಿಬಿ ಹೆಚ್ಚಿನ ಡೇಟಾ ನೀಡುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ನಿಮಗೆ ದೈನಂದಿನ ಡೇಟಾ ಮಿತಿಯಲ್ಲಿ ತೊಂದರೆ ಇಲ್ಲದಿದ್ದರೆ, ನೀವು ಬೇರೆ ಏನನ್ನೂ ಯೋಚಿಸದೆ ನಿಮ್ಮ ಬಿಎಸ್ಎನ್ಎಲ್ ಸಂಖ್ಯೆಯನ್ನು ರೀಚಾರ್ಜ್ ಮಾಡಬಹುದು. ಆದರೆ ನೀವು ಮನೆಯಿಂದ ಕೆಲಸ ಮಾಡುತ್ತಿದ್ದರೆ ಅಥವಾ ದಿನದ ಅಂತ್ಯದವರೆಗೆ ನಿಮ್ಮ ದೈನಂದಿನ ಡೇಟಾ ಕಡಿಮೆಯಾಗುತ್ತಿದ್ದರೆ, ನೀವು ಜಿಯೋ ಯೋಜನೆಯನ್ನು ಸಕ್ರಿಯಗೊಳಿಸಬಹುದು.


ಇದನ್ನೂ ಓದಿ-Happy Father's Day 2021: ನಿಮ್ಮ ಮಗುವಿನ ಭವಿಷ್ಯ ಬದಲಾಯಿಸಲು ಇಲ್ಲಿವೆ 5 Money Mantra


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.