ಮೆಟಾ ಕಂಪನಿಯು Instagram ಮತ್ತು WhatsApp ಹೆಸರಿನ ಎರಡು ಅಪ್ಲಿಕೇಶನ್‌ಗಳನ್ನು ಹೊಂದಿದ್ದು ಅದು ಪ್ರಪಂಚದಾದ್ಯಂತ ಸಾಕಷ್ಟು ಜನಪ್ರಿಯವಾಗಿದೆ. WhatsAppನಲ್ಲಿ,ಬೇರೆಯವರಿಗೆ ಸಂದೇಶಗಳನ್ನು ಕಳುಹಿಸಬಹುದು, ಕರೆಗಳನ್ನು ಮಾಡಬಹುದು, ವೀಡಿಯೊ ಕರೆಗಳನ್ನು ಮಾಡಬಹುದು ಮತ್ತು ಫೋಟೋಗಳು ಮತ್ತು ವೀಡಿಯೊಗಳನ್ನು ಹಂಚಿಕೊಳ್ಳಬಹುದು.Instagramನಲ್ಲಿಯೂ ಫೋಟೋ ಮತ್ತು ವೀಡಿಯೊಗಳನ್ನು ಹಂಚಿಕೊಳ್ಳಬಹುದು ಮತ್ತು ಕರೆಗಳನ್ನು ಮಾಡಬಹುದು. ಇನ್‌ಸ್ಟಾಗ್ರಾಮ್‌ನಲ್ಲಿ ರೀಲ್ಸ್ ಎಂಬ ವಿಶೇಷ ವೈಶಿಷ್ಟ್ಯವಿದೆ.ಆದರೆ ವಾಟ್ಸಾಪ್‌ನಲ್ಲಿ ಈ ವೈಶಿಷ್ಟ್ಯ ಇಲ್ಲ. 


COMMERCIAL BREAK
SCROLL TO CONTINUE READING

ನಿಮ್ಮ ಮೊಬೈಲ್ ನಲ್ಲಿ WhatsApp ಮಾತ್ರ ಇದ್ದು, Instagram ರೀಲ್ಸ್ ನೋಡಬೇಕಾದರೆ ಅದನ್ನು  WhatsApp ನಲ್ಲಿಯೇ ವೀಕ್ಷಿಸಬಹುದು. WhatsAppನಲ್ಲಿ Instagram ರೀಲ್ಸ್ ಅನ್ನು  ವೀಕ್ಷಿಸುವುದು ಹೇಗೆ ನೋಡೋಣ. 


ಇದನ್ನೂ ಓದಿ : ಸ್ಮಾರ್ಟ್​ಫೋನ್ ಚಾರ್ಜಿಂಗ್ ತುಂಬಾ ನಿಧಾನ ಆಗ್ತಿದ್ಯಾ? ಇವೇ ಪ್ರಮುಖ ಕಾರಣ, ನೀವೇ ಸರಿಪಡಿಸಬಹುದು..! ಹೇಗ್ ಗೊತ್ತಾ?


WhatsAppನಲ್ಲಿ Instagram ರೀಲ್‌ಗಳನ್ನು ವೀಕ್ಷಿಸುವುದು ಹೇಗೆ? : 
ಹಂತ 1: ಮೊದಲು ನಿಮ್ಮ ಫೋನ್‌ನಲ್ಲಿ WhatsApp ನ ಇತ್ತೀಚಿನ ಆವೃತ್ತಿಯನ್ನು ಡೌನ್‌ಲೋಡ್ ಮಾಡಿ.
ಹಂತ 2: ನಂತರ WhatsApp ಓಪನ್ ಮಾಡಿದಾಗ ನೀಲಿ-ಗುಲಾಬಿ ಬಣ್ಣದ ವೃತ್ತವು ಮೇಲ್ಭಾಗದಲ್ಲಿ ಗೋಚರಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ.
ಹಂತ 3: ಈಗ ಚಾಟ್ ಬಾಕ್ಸ್ ತೆರೆಯುತ್ತದೆ.ಅಲ್ಲಿ 'Show me Instagram reels ಎಂದು ಬರೆಯಿರಿ. 
ಹಂತ 4: ಆಗ WhatsApp ನಿಮಗೆ ಕೆಲವು ರೀಲ್‌ಗಳನ್ನು ತೋರಿಸುತ್ತದೆ. 


ನೀವು ನಿರ್ದಿಷ್ಟ Instagram ಖಾತೆಯ ರೀಲ್‌ಗಳನ್ನು ನೋಡಬೇಕಾದರೆ WhatsApp ನಲ್ಲಿ "[ಖಾತೆಯ ಹೆಸರು] ರೀಲ್‌ಗಳನ್ನು ಶೋ ಮಾಡುವಂತೆ ಕೇಳಬಹುದು. ಆಗ ಆ ನಿರ್ರ್ದಿಷ್ಟ ಅಕೌಂಟ್ ನ ರೀಲ್ಸ್ ಮಾತ್ರ ಕಾಣಿಸುತ್ತದೆ. ಆದರೆ ಇದಕ್ಕಾಗಿ ಮೊದಲು WhatsApp ನಲ್ಲಿ Meta AI ಅನ್ನು ಆಕ್ಟಿವ್ ಮಾಡಿಕೊಳ್ಳಬೇಕಾಗುತ್ತದೆ. 


ಇದನ್ನೂ ಓದಿ : ಹೊಸ ಫೋನ್ ಬಿಡುಗಡೆ ಮಾಡಿದ Motorola! ಡಿಸೈನ್, ವೈಶಿಷ್ಟ್ಯ ಬೆಲೆ ಎಲ್ಲವೂ ಸೂಪರ್ !


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.