ಬೆಂಗಳೂರು : ಸ್ಯಾಮ್‌ಸಂಗ್ ಇತ್ತೀಚೆಗೆ ತನ್ನ ಹೊಸ ಫೋನ್ Galaxy A55 ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಫೋನ್ ಅನ್ನು ಬಿಡುಗಡೆ ಮಾಡಿದ ನಂತರ ಕಳೆದ ಬಾರಿ ಲಾಂಚ್ ಮಾಡಿದ Galaxy A54 ಬೆಲೆಯನ್ನು ಕಡಿತಗೊಳಿಸಿದೆ. ಈ ಮೂಲಕ ಎರಡನೇ ಬಾರಿಗೆ ಗ್ಯಾಲಕ್ಸಿ ಎ54 ಬೆಲೆಯಲ್ಲಿ ಇಳಿಕೆಯಾಗಿದೆ. ಕಳೆದ ಡಿಸೆಂಬರ್ ನಲ್ಲಿ ಮೊದಲ ಬಾರಿಗೆ ಇದರ ಬೆಲೆ 2000 ರೂ.ಯಷ್ಟು ಇಳಿಕೆಯಾಗಿತ್ತು. ಈ ಫೋನ್‌ನಲ್ಲಿ ಎರಡು ರೂಪಾಂತರಗಳಿವೆ ಮತ್ತು ಎರಡರ ಬೆಲೆಯನ್ನು 3500 ರೂಪಾಯಿಗಳಷ್ಟು ಕಡಿಮೆ ಮಾಡಲಾಗಿದೆ.


COMMERCIAL BREAK
SCROLL TO CONTINUE READING

Samsung Galaxy A54 ಬೆಲೆ :
ಕಳೆದ ವರ್ಷ ಡಿಸೆಂಬರ್‌ನಲ್ಲಿ ಬಿಡುಗಡೆಯಾದ Galaxy A54 ಫೋನ್‌ನ ಬೆಲೆಯನ್ನು ಸ್ಯಾಮ್‌ಸಂಗ್ ಎರಡು ಬಾರಿ ಕಡಿತಗೊಳಿಸಿದೆ. ಮೊದಲ ಬಾರಿಗೆ ಡಿಸೆಂಬರ್‌ನಲ್ಲಿ ಇದರ ಬೆಲೆಯನ್ನು  2,000 ರೂ.ಗಳಷ್ಟು ಇಳಿಕೆ ಮಾಡಿತ್ತು.   ಇದಾದ ನಂತರ ಅದರ ಬೆಲೆ 36,999 ಮತ್ತು 38,999ಗೆ ಇಳಿದಿತ್ತು. ಇದೀಗ ಕಂಪನಿಯು ಮತ್ತೆ ಈ ಫೋನ್ ಬೆಲೆಯನ್ನು 3,500 ರೂ.ಯಷ್ಟು ಇಳಿಕೆ ಮಾಡಿದೆ.  ಹೊಸ ಬೆಲೆಯ ಪ್ರಕಾರ, 128GB ಮಾದರಿಯನ್ನು 33,499 ರೂಗಳಿಗೆ ಮತ್ತು  256GB ಮಾದರಿಯನ್ನು 35,499 ರೂ.ಗೆ ಖರೀದಿಸಬಹುದು. ಈ ಫೋನ್ Awesome White, Awesome Lime, Awesome Violet ಮತ್ತು  Awesome Graphite ಹೀಗೆ ನಾಲ್ಕು ಬಣ್ಣಗಳಲ್ಲಿ ಲಭ್ಯವಿದೆ. 


ಇದನ್ನೂ ಓದಿ : 2 ಪ್ರಿಪೇಯ್ಡ್ ಯೋಜನೆಗಳ ವ್ಯಾಲಿಡಿಟಿ ಹೆಚ್ಚಿಸಿದ BSNL


Samsung Galaxy A54 ವಿಶೇಷಣಗಳು : 
Samsung Galaxy A54 ಫೋನ್ Exynos 1380 ಚಿಪ್‌ಸೆಟ್ ಅನ್ನು ಹೊಂದಿದೆ. ಇದು 8GB ಯ RAM ನೊಂದಿಗೆ ಬರುತ್ತದೆ. ಇದು ಎರಡು 128GB ಮತ್ತು 256GB ಎರಡು ಸ್ಟೋರೇಜ್ ಆಯ್ಕೆಯೊಂದಿಗೆ ಬರುತ್ತದೆ. ಫೋನ್ 6.4 ಇಂಚಿನ ಡಿಸ್ಪ್ಲೇಯನ್ನು ಹೊಂದಿದೆ. ಅದರ ರೆಸಲ್ಯೂಶನ್ 1080x2400 ಪಿಕ್ಸೆಲ್ ಗಳದ್ದಾಗಿದೆ. Samsung Galaxy A54 ಇತ್ತೀಚಿನ Android 13 ಆಪರೇಟಿಂಗ್ ಸಿಸ್ಟಮ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದರಲ್ಲಿ ಎರಡು ಸಿಮ್ ಅಳವಡಿಸುವ ಸೌಲಭ್ಯವಿದ್ದು, ಐಪಿ68 ರೇಟಿಂಗ್ ಹೊಂದಿರುವುದರಿಂದ ಧೂಳು ಮತ್ತು ನೀರಿನಿಂದ ಕೂಡ ರಕ್ಷಣೆ ಪಡೆಯಬಹುದು.


Samsung Galaxy A54 ಫೋನ್ 5000 mAh ನ ಶಕ್ತಿಶಾಲಿ ಬ್ಯಾಟರಿಯನ್ನು ಹೊಂದಿದೆ. ಇದು 25W ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಅಂದರೆ ಅದು ತ್ವರಿತವಾಗಿ ಚಾರ್ಜ್ ಆಗುತ್ತದೆ. ಇದು ಮೂರು ಹಿಂಬದಿಯ ಕ್ಯಾಮೆರಾಗಳನ್ನು ಹೊಂದಿದೆ. ಮುಖ್ಯ ಕ್ಯಾಮೆರಾ 50MP ಆಗಿದ್ದು ಅದು ಉತ್ತಮ ಫೋಟೋಗಳನ್ನು ತೆಗೆಯಬಲ್ಲದು. ಎರಡನೆಯದು 12MP ಅಲ್ಟ್ರಾ-ವೈಡ್ ಆಂಗಲ್ ಕ್ಯಾಮೆರಾ.   ಮೂರನೆಯದು 5MP ಡೆಪ್ತ್ ಸೆನ್ಸಾರ್. ಎಲ್ ಇಡಿ ಫ್ಲ್ಯಾಷ್ ಕೂಡಾ ಇರುವುದರಿಂದ ಕತ್ತಲೆಯಲ್ಲಿ ಉತ್ತಮ ಫೋಟೋಗಳನ್ನು ತೆಗೆಯಬಹುದಾಗಿದೆ. ಸೆಲ್ಫಿಗಾಗಿ 32MP ಫ್ರಂಟ್ ಕ್ಯಾಮೆರಾವನ್ನು ನೀಡಲಾಗಿದೆ.


ಇದನ್ನೂ ಓದಿ : ಮೋದಿ ಸರ್ಕಾರದ ದಿಟ್ಟ ಹೆಜ್ಜೆ : 18 OTT, 19 ವೆಬ್‌ಸೈಟ್‌ಗಳು, 10 ಅಪ್ಲಿಕೇಶನ್‌ಗಳು ಮತ್ತು 57 ಸಾಮಾಜಿಕ ಮಾಧ್ಯಮ ಖಾತೆಗಳಿಗೆ ನಿಷೇಧ !


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.