ದೆಹಲಿ : ಜನಪ್ರಿಯ ಮೆಸೆಂಜರ್ ಆಪ್ WhatsApp ತನ್ನ ಗೌಪ್ಯತಾ ನೀತಿಯಲ್ಲಿ ಬದಲಾವಣೆ ತಂದ  ಬೆನ್ನಲ್ಲೇ ಅದರ ಬಲುದೊಡ್ಡ ಪ್ರಯೋಜನ ಮತ್ತೊಂದು ಮೆಸೆಂಜರ್ ಆಪ್ Telegramಗೆ ಆಗಿದೆ. ಬಳಕೆದಾರರ ಖಾಸಗೀತನಕ್ಕೆ ಧಕ್ಕೆ ಉಂಟುಮಾಡುವುದಿಲ್ಲ ಎಂದು ವಾಟ್ಸಾಪ್ ಸ್ಪಷ್ಟನೆ ನೀಡಿದ ಬಳಿಕವೂ ಈ ಟ್ರೆಂಡ್ ಕಡಿಮೆಯಾಗಿಲ್ಲ. ವಾಟ್ಸಾಪ್ ಡೌನ್ ಲೋಡ್ ಸಂಖ್ಯೆ ಕುಸಿತಿದೆ. ಜೊತೆಗೆ ಟೆಲಿಗ್ರಾಂ, ಸಿಗ್ನಲ್ ಆಪ್ ಡೌನ್ ಲೋಡ್ ರಾಕೇಟ್ ವೇಗದಲ್ಲಿ ಮೇಲೇರುತ್ತಿದೆ.  ಟೆಲಿಗ್ರಾಂ ಬಳಕೆದಾರರ ಸಂಖ್ಯೆ 50 ಕೋಟಿಗೆ ಏರಿಕೆಯಾಗಿದೆ.  ಕಳೆದ 72 ಗಂಟೆಗಳಲ್ಲಿ 25 ಕೋಟಿ ಹೊಸ ಗ್ರಾಹಕರು ಸೇರ್ಪಡೆಯಾಗಿದ್ದಾರೆ ಎಂದು ಸ್ವಯಂ ಟೆಲಿಗ್ರಾಂ ಹೇಳಿಕೊಂಡಿದೆ. 


COMMERCIAL BREAK
SCROLL TO CONTINUE READING

ಏಷ್ಯಾದಲ್ಲಿ ಶೇ. 38ರಷ್ಟು, ಐರೋಪ್ಯ ದೇಶಗಳಲ್ಲಿ ಶೇ. 27, ಲ್ಯಾಟಿನ್ ಅಮೇರಿಕದಲ್ಲಿ ಶೇ. 21,  ಮಧ್ಯಪ್ರಾಚ್ಯ ಮತ್ತು ಆಫ್ರಿಕಾ ದೇಶಗಳಲ್ಲಿ ಶೇ 8 ರಷ್ಟು ಗ್ರಾಹಕರು ಟೆಲಿಗ್ರಾಂ (Telegram) ಡೌನ್ ಲೋಡ್ (Download)ಮಾಡಿದ್ದಾರೆ ಎಂದು ಕಂಪನಿ ಹೇಳಿದೆ. ಭಾರತದಲ್ಲಿ ಎಷ್ಟು ಜನ ಟೆಲಿಗ್ರಾಂಗೆ ಶಿಫ್ಟ್ ಆಗಿದ್ದಾರೆ ಎನ್ನುವುದರ ಮಾಹಿತಿ ಕಂಪನಿ ನೀಡಿಲ್ಲ. ಆದರೆ, ಲಭ್ಯ ಮಾಹಿತಿಗಳ ಪ್ರಕಾರ, ಜ. 10 ರ ತನಕ ಸುಮಾರು 10 ಲಕ್ಷ ಭಾರತೀಯರು ಟೆಲಿಗ್ರಾಂಗೆ ವಲಸೆ ಬಂದಿದ್ದಾರೆ ಎನ್ನಲಾಗಿದೆ. 


ಇದನ್ನೂ ಓದಿ: ವಿಜ್ಞಾನಿಗಳಿಗೆ ದೊರೆತ Super Earth, ಭೂಮಿಯ ರೀತಿಯ ಜೀವನದ ಸಾಧ್ಯತೆ!


ಈ ಬಗ್ಗೆ ಮಾತನಾಡಿರುವ ಟೆಲಿಗ್ರಾಂ ಸಿಇಒ ಪರೇಲ್ ದರೋವ್, ಜಾಗತಿಕ ಮಟ್ಟದಲ್ಲಿ ಟೆಲಿಗ್ರಾಂ ಬಳಕೆದಾರರ ಸಂಖ್ಯೆ ಅತ್ಯಂತ ಹೆಚ್ಚಾಗಿದೆ. ಕೇವಲ ಉಚಿತ ಸೇವೆ ಪಡೆಯಲು ಜನರು ತಮ್ಮ ಪ್ರೈವೆಸಿ (Privacy) ಬಿಟ್ಟುಕೊಡಲು ತಯಾರಿಲ್ಲ, ಗ್ರಾಹಕರ ಸುರಕ್ಷತೆಗೆ ನಾವು ಆದ್ಯತೆ ನೀಡುತ್ತೇವೆ. 2013ರಲ್ಲಿ ಕಂಪನಿ ಆರಂಭವಾಗಿದ್ದು, ಅಲ್ಲಿಂದ  ಇಲ್ಲಿವರೆಗೆ ಒಂದು ಜಿಬಿ ಡಾಟಾ (Data) ಕೂಡಾ ಸೋರಿಕೆಯಾಗಿಲ್ಲ ಎಂದು ಅವರು ಹೆಮ್ಮೆ ವ್ಯಕ್ತಪಡಿಸಿದ್ದಾರೆ


ಇದೇ ವೇಳೆ ಮತ್ತೊಂದು ಮಸೆಂಜರ್ ಆಪ್ ಸಿಗ್ನಲ್ (Signal) ಕೂಡಾ ಭಾರತದಲ್ಲಿ ಜನಪ್ರಿಯವಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ 40 ಲಕ್ಷ ಬಳಕೆದಾರರು ಸಿಗ್ನಲ್ ಆಪ್ ಡೌನ್ ಲೋಡ್ ಮಾಡಿಕೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ. ವಾಟ್ಸಾಪ್ (WhatsApp) ವಿವಾದ ಸೃಷ್ಟಿಯಾಗುವ ತನಕ ಸಿಗ್ನಲ್ ಆಪ್ ಭಾರತದಲ್ಲಿ ಅಷ್ಟೊಂದು ಪರಿಚಿತವಾಗಿರಲಿಲ್ಲ.


ಇದನ್ನೂ ಓದಿ: ಹೊಸ ರೀಚಾರ್ಜ್ ಯೋಜನೆ ಪ್ರಾರಂಭಿಸಿದ BSNL, ಸಿಗಲಿದೆ ಈ ಎಲ್ಲಾ ಪ್ರಯೋಜನ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy


ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy


ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.