ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್ಗಿಂತ ಅಗ್ಗದ ಬೆಲೆಯಲ್ಲಿ ಸರಕುಗಳನ್ನು ಮಾರಾಟ ಮಾಡುತ್ತಿರುವ ಶಾಪಿಂಗ್ ಸೈಟ್ ಗಳಿವು .!
Best Online Deals:ಹಬ್ಬದ ಸೀಸನ್‌ನಲ್ಲಿ ಕಡಿಮೆ ವೆಚ್ಚದಲ್ಲಿ ಹೆಚ್ಚು ಶಾಪಿಂಗ್ ಮಾಡುವ ಮನಸ್ಸಿದ್ದರೆ, ಕೆಲವು ಸರ್ಕಾರಿ ಮತ್ತು ಖಾಸಗಿ ಶಾಪಿಂಗ್ ಸೈಟ್‌ಗಳ ಬಗ್ಗೆ ಮಾಹಿತಿ ಇಲ್ಲಿದೆ. ಅಲ್ಲಿ ಉತ್ಪನ್ನಗಳ ಮೇಲೆ ಭಾರೀ ರಿಯಾಯಿತಿಗಳನ್ನು ನೀಡಲಾಗುತ್ತಿದೆ.
Best Online Deals : ಭಾರತದಲ್ಲಿ ಹಬ್ಬದ ಸೀಸನ್ ಪ್ರಾರಂಭವಾಗಿದೆ. ಹೀಗಾಗಿ ಜನರು ಹೆಚ್ಚು ಶಾಪಿಂಗ್ ಮಾಡಲು ಇಷ್ಟಪಡುತ್ತಾರೆ. ಕೆಲವು ವರ್ಷಗಳ ಹಿಂದಷ್ಟೇ ಈ ಆನ್‌ಲೈನ್ ಶಾಪಿಂಗ್ ಆರಂಭವಾಗಿತ್ತು. ಆದರೆ ದಿನ ಕಳೆದಂತೆ ಜನರು ಆನ್‌ಲೈನ್ ಶಾಪಿಂಗ್ ನಟ್ಟ ಹೆಚ್ಚು ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್‌ನಂತಹ ಆನ್‌ಲೈನ್ ಶಾಪಿಂಗ್ ಸೈಟ್‌ಗಳು ಈಗಾಗಲೇ ಮಾರುಕಟ್ಟೆಯಲ್ಲಿ ತನ್ನ ಛಾಪು ಮೂಡಿಸಿವೆ. ಈ ಸೈಟ್ ಗಳು ಈಗಾಗಲೇ ಸಾಕಷ್ಟು ರಿಯಾಯಿತಿಗಳನ್ನು ನೀಡುತ್ತದೆ. ಹಬ್ಬದ ಸೀಸನ್‌ನಲ್ಲಿ ಕಡಿಮೆ ವೆಚ್ಚದಲ್ಲಿ ಹೆಚ್ಚು ಶಾಪಿಂಗ್ ಮಾಡುವ ಮನಸ್ಸಿದ್ದರೆ, ಕೆಲವು ಸರ್ಕಾರಿ ಮತ್ತು ಖಾಸಗಿ ಶಾಪಿಂಗ್ ಸೈಟ್‌ಗಳ ಬಗ್ಗೆ ಮಾಹಿತಿ ಇಲ್ಲಿದೆ. ಅಲ್ಲಿ ಉತ್ಪನ್ನಗಳ ಮೇಲೆ ಭಾರೀ ರಿಯಾಯಿತಿಗಳನ್ನು ನೀಡಲಾಗುತ್ತಿದೆ.
Gem: ಇದೊಂದು ಸರ್ಕಾರಿ ಆನ್‌ಲೈನ್ ಶಾಪಿಂಗ್ ಸೈಟ್ ಆಗಿದೆ. ಅದರ ಬಗ್ಗೆ ಕೆಲವು ಸಮಯದ ಹಿಂದೆ ಸಮೀಕ್ಷೆಯನ್ನು ಸಹ ಮಾಡಲಾಗಿದೆ. ಈ ಸೈಟ್ ನಲ್ಲಿ ಕೆಲವು ಉತ್ಪನ್ನಗಳನ್ನು ಅತ್ಯಂತ ಕೈಗೆಟುಕುವ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಈ ಬಗ್ಗೆ ಮಾರುಕಟ್ಟೆಯಲ್ಲಿ ಸಾಕಷ್ಟು ಚರ್ಚೆ ಕೂಡಾ ನಡೆದಿದೆ.
ಇದನ್ನೂ ಓದಿ : ವೊಡಾಫೋನ್-ಐಡಿಯಾ ಬಳಕೆದಾರರಿಗೆ ಎದುರಾಗಿದೆ ಸಮಸ್ಯೆ, ಫೋನ್‌ನಿಂದ ಕಣ್ಮರೆಯಾಗುವುದು ನೆಟ್‌ವರ್ಕ್
ಮೀಶೋ: ಮೀಶೋ ಭಾರತದಲ್ಲಿ ಅತ್ಯಂತ ಟ್ರೆಂಡಿಂಗ್ ಶಾಪಿಂಗ್ ಪ್ಲಾಟ್‌ಫಾರ್ಮ್ ಆಗಿದೆ. ಇತರ ಆನ್‌ಲೈನ್ ವೆಬ್‌ಸೈಟ್‌ಗಳಿಗೆ ಹೋಲಿಸಿದರೆ ಇದರಲ್ಲಿ ಅತೀ ಕಡಿಮೆ ಬೆಲೆಗೆ ಸರಕುಗಳನ್ನು ಖರೀದಿಸುವುದು ಸಾಧ್ಯವಾಗುತ್ತದೆ. ಬಟ್ಟೆ ಅಥವಾ ಮಕ್ಕಳ ಆಟಿಕೆಗಳ ಶಾಪಿಂಗ್ ಮಾಡುವುದಾದರೆ, ಪ್ರತಿ ಉತ್ಪನ್ನದ ಮೇಲೆ ಭಾರೀ ರಿಯಾಯಿತಿಗಳನ್ನು ನೀಡಲಾಗುತ್ತಿದೆ. ದೀಪಾವಳಿ ಶಾಪಿಂಗ್ ಮಾಡಲು ಇದು ಉತ್ತಮ ಆಯ್ಕೆಯಾಗಿದೆ. ಇಲ್ಲಿ ಉತ್ಪನ್ನಗಳ ಮೇಲೆ ಶೇಕಡಾ 50 ಕ್ಕಿಂತ ಹೆಚ್ಚಿನ ರಿಯಾಯಿತಿ ಸಿಗಲಿದೆ.
ಶಾಪ್ಸಿ: ಈ ವೆಬ್‌ಸೈಟ್‌ನಲ್ಲಿ ಶಾಪಿಂಗ್ ಮಾಡುವುದರ ಜೊತೆಗೆ ಹಣ ಕೂಡಾ ಸಂಪಾದಿಸಬಹುದು. ಈ ವೆಬ್‌ಸೈಟ್ ಅನ್ನು ಇತ್ತೀಚೆಗಷ್ಟೇ ಪರಿಚಯಿಸಲಾಗಿದೆ. ಇಲ್ಲಿ ಶಾಪಿಂಗ್ ಮಾಡುವ ಮೂಲಕ ಹಣವನ್ನು ಉಳಿಸುವುದು ಸಾಧ್ಯವಾಗುತ್ತದೆ. ಈ ಹಬ್ಬದ ಸೀಸನ್ ನಲ್ಲಿ ಮನಸೋ ಇಚ್ಛೆ ಶಾಪಿಂಗ್ ಮಾಡಿ ಹಣವನ್ನೂ ಉಳಿಸಬೇಕೆಂದರೆ ಇದು ಅತ್ಯಂತ ಉತ್ತಮ ಆಯ್ಕೆಯಾಗಿದೆ.
ಇದನ್ನೂ ಓದಿ : ಸ್ಟ್ರಾಂಗ್ ಬ್ಯಾಟರಿ, ಉತ್ತಮ ಕ್ಯಾಮರಾದೊಂದಿಗೆ ಬಿಡುಗಡೆ ಆಗಲಿದೆ ಜಿಯೋದ ಅಗ್ಗದ 5G ಸ್ಮಾರ್ಟ್‌ಫೋನ್
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.