ನವದೆಹಲಿ: Ptron ಹೊಸ ಬಜೆಟ್ ಸ್ಮಾರ್ಟ್ ವಾಚ್ Ptron FORCE X11 ಬಿಡುಗಡೆ ಮಾಡಿದೆ. ಹಲವಾರು ಅದ್ಭುತ ವೈಶಿಷ್ಟ್ಯಗಳನ್ನು ಹೊಂದಿರುವ ಇದರ ಪ್ರಾರಂಭಿಕ ಬೆಲೆ 2,799 ರೂ. ಇದೆ. ಈ ವಾಚ್ BoAt ಮತ್ತು ಇತರೆ ಕಂಪನಿಗಳ ಸ್ಮಾರ್ಟ್ ವಾಚ್ ಗಳಿಗೆ ಪೈಪೋಟಿ ನೀಡಲಿದೆ. Ptron ಹೆಚ್ಚಿನ ವೈಶಿಷ್ಟ್ಯಗಳನ್ನು ಹೊಂದಿರುವ 5 ಸಾವಿರ ರೂ. ದರ ಶ್ರೇಣಿಯ ಇತರ ಸ್ಮಾರ್ಟ್ ವಾಚ್ ಗಳಿಗೆ ಮಾರುಕಟ್ಟೆಯಲ್ಲಿ ನೇರ ಸ್ಪರ್ಧೆಯನ್ನು ಒಡ್ಡಲಿದೆ. 1.7 ಇಂಚಿನ ಡಿಸ್ಪ್ಲೇ ಮತ್ತು ಹಲವು ಉತ್ತಮ ವೈಶಿಷ್ಟ್ಯಗಳೊಂದಿಗೆ ಈ ವಾಚ್ ಬರುತ್ತದೆ. ಸ್ಮಾರ್ಟ್‌ವಾಚ್‌(Smart Watch)ನ ಅದ್ಭುತ ವಿನ್ಯಾಸವು ಈಗಾಗಲೇ ಜನರ ಗಮನಸೆಳೆದಿದೆ. Ptron FORCE X11 ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿರಿ.


COMMERCIAL BREAK
SCROLL TO CONTINUE READING

Ptron FORCE X11 ವೈಶಿಷ್ಟ್ಯಗಳು


Ptron FORCE X11 ಸ್ಮಾರ್ಟ್ ವಾಚ್ 240×280 ರೆಸಲ್ಯೂಶನ್‌ನೊಂದಿಗೆ ದೊಡ್ಡ 1.7-ಇಂಚಿನ Touch-enabled Color Display ಹೊಂದಿದೆ. 2.5D Curved Glassನ್ನು ಮಿಶ್ರಲೋಹದ ಚೌಕಟ್ಟಿನೊಂದಿಗೆ ಜೋಡಿಸಲಾಗಿದೆ. ಇದು ನಿಮಗೆ ಪ್ರೀಮಿಯಂ ಅನುಭವವನ್ನು ನೀಡುತ್ತದೆ. ಅಂತರ್ನಿರ್ಮಿತ ಮೈಕ್ರೊಫೋನ್ ಮತ್ತು ಬ್ಲೂಟೂತ್ ಕರೆಗೆ ಬೆಂಬಲವೂ ಇದೆ. ಅಂದರೆ ನೀವು ಈ ವಾಚ್ ನಿಂದಲೇ ಕರೆಗಳನ್ನು ಮಾಡಲು ಮತ್ತು ಸ್ವೀಕರಿಸಲು ಸಾಧ್ಯವಾಗುತ್ತದೆ.


ಇದನ್ನೂ ಓದಿ: Offer! iPhone 12 Mini ಮೇಲೆ ಭಾರೀ ರಿಯಾಯಿತಿ, ಅರ್ಧಕ್ಕಿಂತ ಕಡಿಮೆ ಬೆಲೆಗೆ ಸಿಗಲಿದೆ ದುಬಾರಿ ಮೊಬೈಲ್


Ptron FORCE X11 ವಿನ್ಯಾಸ


ಇದರ ಹೊರತಾಗಿ ಆಪಲ್ ವಾಚ್ ಶೈಲಿಯ ಸೈಡ್-ಮೌಂಟೆಡ್ ಕ್ರೌನ್ ಸಹ ಇದೆ. ಇದನ್ನು ಬಳಸಿಕೊಂಡು ನೀವು ವಾಚ್ ಇಂಟರ್ಫೇಸ್ ಅನ್ನು ನ್ಯಾವಿಗೇಟ್ ಮಾಡಬಹುದು. Multiple watch faces ಎಂದರೆ ನಿಮಗಿಷ್ಟವಾದ ವಾಚ್‌ನ ಡೀಫಾಲ್ಟ್ ನೋಟವನ್ನು ಕಸ್ಟಮೈಸ್ ಮಾಡಬಹುದು.


Ptron FORCE X11 ಇತರೆ ವೈಶಿಷ್ಟ್ಯಗಳು


ಆರೋಗ್ಯ ವೈಶಿಷ್ಟ್ಯಗಳ ವಿಷಯದಲ್ಲಿ ನೀವು Sp02 ಸಂವೇದಕ, BP ಮಾನಿಟರ್, Sleep ಮಾನಿಟರ್, ಹೃದಯ ಬಡಿತದ ಮಾನಿಟರ್ ಮತ್ತು 7 ಕ್ರೀಡಾ ವಿಧಾನಗಳಿಗೆ ಬೆಂಬಲವನ್ನು ಪಡೆಯುತ್ತೀರಿ. ವಾಚ್‌ನ ಬ್ಯಾಟರಿ ಸುಮಾರು 7 ದಿನಗಳವರೆಗೆ ಬರುತ್ತದೆ. Ptron FORCE X11 ಅನ್ನು IP68 ರೇಟಿಂಗ್ ಮೂಲಕ ನೀರು ಮತ್ತು ಧೂಳಿನಿಂದ ರಕ್ಷಣೆ ಇರುತ್ತದೆ. ಇದು ಕಪ್ಪು ಮತ್ತು ಗುಲಾಬಿ ಬಣ್ಣದ ಆಯ್ಕೆಗಳಲ್ಲಿ ಬರುತ್ತದೆ. Amazonನಲ್ಲಿ ಈಗಾಗಲೇ ಇದು ಖರೀದಿಗೆ ಲಭ್ಯವಿದೆ.


ಇದನ್ನೂ ಓದಿ: Flipkart Sale: ಫ್ಲಿಪ್‌ಕಾರ್ಟ್‌ನಲ್ಲಿ OPPO 5G ಸ್ಮಾರ್ಟ್‌ಫೋನ್ ಅನ್ನು ಕೇವಲ 300 ರೂ.ಗೆ ಖರೀದಿಸಲು ಸುವರ್ಣಾವಕಾಶ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.