QR Code Scam: ಪ್ರಸ್ತುತ, ಈ ಡಿಜಿಟಲ್ ಯುಗದಲ್ಲಿ ಕ್ಯೂ‌ಆರ್ ಕೋಡ್ ಪಾವತಿಯು ಸರಳ ಪಾವತಿ ವಿಧಾನವಾಗಿದ್ದು ಇದು ಹೆಚ್ಚು ಜನಪ್ರಿಯವಾಗುತ್ತಿದೆ. ಆದರೆ, ಎಚ್ಚರ! ಇಂತಹ ಕ್ಯೂ‌ಆರ್ ಕೋಡ್‌ಗಳ ಮೇಲೆ ಹದ್ದಿನ ಕಣ್ಣಿಟ್ಟಿರುವ ವಂಚಕರು ಕ್ಷಣಾರ್ಧದಲ್ಲಿ ನಿಮ್ಮ ಖಾತೆಯನ್ನು ಖಾಲಿ ಮಾಡಬಹುದು. 


COMMERCIAL BREAK
SCROLL TO CONTINUE READING

ವಾಸ್ತವವಾಗಿ, ನಕಲಿ ವೆಬ್‌ಸೈಟ್‌ಗಳು ಅಥವಾ ಪಾವತಿ ಲಿಂಕ್‌ಗಳಿಗೆ ಲಿಂಕ್ ಮಾಡಲು ವಂಚಕರು ಕ್ಯೂ‌ಆರ್ ಕೋಡ್‌ಗಳನ್ನು ಹೆಚ್ಚಾಗಿ ಬಳಸುತ್ತಿದ್ದಾರೆ. ಇಂತಹ ಕ್ಯೂ‌ಆರ್ ಕೋಡ್‌ಗಳನ್ನು ಸ್ಕ್ಯಾನ್ ಮಾಡಿದಾಗ ಅವು ನಿಮ್ಮನ್ನು ಮೋಸದ ವೆಬ್‌ಸೈಟ್ ಅಥವಾ ಪಾವತಿ ಲಿಂಕ್‌ಗೆ ಕರೆದೊಯ್ಯಬಹುದು. ಮಾತ್ರವಲ್ಲ, ಇದರ ಬಳಕೆಯಿಂದ ನಿಮ್ಮ ಖಾತೆ ಸಂಪೂರ್ಣವಾಗಿ ಖಾಲಿಯಾಗಬಹುದು. ಇಂತಹ ವಂಚನೆಗಳಿಂದ ಪಾರಾಗಲು ಕೆಲವು ಸುರಕ್ಸಿತ ವಿಧಾನಗಳನ್ನು ಅಳವಡಿಸಿಕೊಳ್ಳುವುದು ತುಂಬಾ ಅಗತ್ಯ. 


ಇದನ್ನೂ ಓದಿ- ರೈಲ್ವೆ ನಿಲ್ದಾಣದಲ್ಲಿ ಅಪ್ಪಿತಪ್ಪಿಯೂ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಈ ಕೆಲಸಗಳನ್ನು ಮಾಡಲೇಬಾರದು


ಕ್ಯೂಆರ್ ಕೋಡ್ ಸ್ಕ್ಯಾನ್ ಹಗರಣದಿಂದ ಪಾರಾಗಲು ಇಲ್ಲಿವೆ ಸುರಕ್ಷಿತ ಸಲಹೆಗಳು: 
ಈ ಮಾಹಿತಿಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ: 

ಇಂತಹ ವಂಚನೆಗಳಿಂದ ಪಾರಾಗಲು ನೀವು ಮಾಡಬೇಡಿರುವ ಮೊದಲ ಕೆಲಸ ಯಾರೊಂದಿಗೂ ಸಹ ನಿಮ್ಮ ವೈಯಕ್ತಿಕ ಮಾಹಿತಿ, ಯುಪಿ‌ಐ ಐಡಿ, ಬ್ಯಾಂಕಿಂಗ್ ವಿವರ, ಓ‌ಟಿ‌ಪಿಗಳನ್ನು ಹಂಚಿಕೊಳ್ಳಬೇಡಿ. 


ಅನುಮಾನಾಸ್ಪದ ಕ್ಯೂ‌ಆರ್ ಕೋಡ್‌ಗಳ ಬಗ್ಗೆ ಇರಲಿ ಎಚ್ಚರ: 
ನೀವು ಪಾವತಿ ಮಾಡುವ ವೇಳೆ ಯಾವುದೇ ರೀತಿಯ ಹಾನಿಗೊಳಗಾಗಿರುವ ಅಥವಾ ಅನುಮಾನಾಸ್ಪದ ಕ್ಯೂ‌ಆರ್ ಕೋಡ್‌ಗಳು ಕಂಡು ಬಂದಲ್ಲಿ ಅದನ್ನು ಸ್ಕ್ಯಾನ್ ಮಾಡುವ ತಪ್ಪನ್ನು ಎಂದಿಗೂ ಮಾಡಬೇಡಿ. 


ಮೊಬೈಲ್ ನಂಬರ್ ಶೇರ್ ಮಾಡಬೇಡಿ: 
ಅಪರಿಚಿತರೊಂದಿಗೆ ಎಂದಿಗೂ ಸಹ ನಿಮ್ಮ ಮೊಬೈಲ್ ನಂಬರ್ ಶೇರ್ ಮಾಡಬೇಡಿ. 


ಇದನ್ನೂ ಓದಿ- ವಾಟ್ಸಾಪ್‌ನಲ್ಲಿ ಇನ್ಮುಂದೆ ಒರಿಜಿನಲ್ ಕ್ವಾಲಿಟಿ ಫೋಟೋಸ್, ವಿಡಿಯೋಸ್ ಶೇರ್ ಮಾಡಬಹುದು


ಆನ್‌ಲೈನ್ ವಹಿವಾಟು ಮಾಡುವಾಗ ಎಚ್ಚರ: 
ನೀವು ಆನ್‌ಲೈನ್ ವಹಿವಾಟುಗಳನ್ನು ನಡೆಸುವಾಗ ಮೊದಲು ಮಾರಾಟಗಾರರ ಗುರುತನ್ನು ಖಚಿತಪಡಿಸಿಕೊಳ್ಳಿ. ನಂತರವಷ್ಟೇ ಮುಂದುವರೆಯಿರಿ. 


ಈ ರೀತಿಯ ಕ್ರಮ ಕೈಗೊಳ್ಳುವುದರಿಂದ ವಂಚನೆಗಳನ್ನು ತಪ್ಪಿಸಬಹುದು. ನಿಮ್ಮ ಹಣವನ್ನು ಸುರಕ್ಷಿತವಾಗಿರಿಸಬಹುದು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://youtu.be/--phA9ji8NM
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.