ಸರ್ಕಾರದಿಂದ ಉಚಿತ ಸ್ಮಾರ್ಟ್ಫೋನ್! ಮೂರು ವರ್ಷದವರೆಗೆ ಇಂಟರ್ನೆಟ್ ಮತ್ತು ಕರೆ ಸೌಲಭ್ಯ ಕೂಡಾ ಫ್ರೀ
Free Smartphone Scheme: ಈ ಸರ್ಕಾರ ಜನರಿಗೆ ಉಚಿತವಾಗಿ ಸ್ಮಾರ್ಟ್ ಫೋನ್ ವಿತರಿಸಲಿದೆ. ಈ ಸ್ಮಾರ್ಟ್‌ಫೋನ್‌ನೊಂದಿಗೆ 3 ವರ್ಷಗಳವರೆಗೆ ಉಚಿತ ಕರೆ ಮತ್ತು ಇಂಟರ್ ನೆಟ್ ಸೌಲಭ್ಯ ಸಿಗಲಿದೆ.
Free Smartphone Scheme : ಪ್ರಸ್ತುತ ಎಲ್ಲರ ಕೈಯ್ಯಲ್ಲೂ ಸ್ಮಾರ್ಟ್‌ಫೋನ್‌ಗಳನ್ನು ಕಾಣುತ್ತೇವೆ. ಸ್ಮಾರ್ಟ್ ಫೋನ್ ಗಳಿಲ್ಲದೆ ಯಾವ ಕೆಲಸವೂ ನಡೆಯುವುದಿಲ್ಲ. ವಿವಿಧ ಮಾದರಿಯ, ವಿನ್ಯಾಸದ ಮಾರ್ಟ್ ಫೋನ್ ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಆದರೆ, ಸರ್ಕಾರವೇ ಎಲ್ಲರಿಗೂ ಉಚಿತ ಸ್ಮಾರ್ಟ್ ಫೋನ್ ವಿತರಿಸಿದರೆ ಹೇಗೆ? ಈ ಸುದ್ದಿ ಕೇಳುವಾಗ ಬಾಲಿಶವಾಗಿ ಕಾಣಬಹುದು. ಆದರೆ ಈ ಸುದ್ದಿ ಸತ್ಯ. ಮುಂದಿನ ವರ್ಷ ಅಂದರೆ 2023 ರಲ್ಲಿ ರಾಜಸ್ಥಾನದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಇದಕ್ಕಾಗಿ ಎಲ್ಲಾ ಪಕ್ಷಗಳು ಈಗಾಗಲೇ ಸಜ್ಜಾಗಿವೆ. ಚುನಾವಣೆ ಗೆದ್ದ ನಂತರ ತನ್ನ ಮತದಾರರಿಗೆ ಉಚಿತ ಸ್ಮಾರ್ಟ್‌ಫೋನ್‌ಗಳನ್ನು ನೀಡುವುದಾಗಿ ರಾಜಸ್ಥಾನ ಸರ್ಕಾರ ಭರವಸೆ ನೀಡಿದೆ.
ಅಪ್ಲಿಕೇಶನ್‌ಗಳು ಕೂಡಾ ಇನ್ಸ್ಟಾಲ್ ಆಗಲಿವೆ :
ಈ ಸ್ಮಾರ್ಟ್‌ಫೋನ್‌ನಲ್ಲಿ ಅಪ್ಲಿಕೇಶನ್‌ಗಳು ತನ್ನಷ್ಟಕ್ಕೇ ಇನ್ಸ್ಟಾಲ್ ಆಗುತ್ತವೆ. ಈ ಸ್ಮಾರ್ಟ್ ಫೋನ್ ಮೂಲಕವೇ ಸರ್ಕಾರ ಪ್ರಚಾರ ನಡೆಸಲಿದೆ. ಮೊಬೈಲ್‌ನಲ್ಲಿ ಸ್ವಯಂಚಾಲಿತವಾಗಿ ಇನ್ಸ್ಟಾಲ್ ಆಗುವ ಅಪ್ಲಿಕೇಶನ್‌ಗಳನ್ನು ಡಿಲೀಟ್ ಮಾಡಲು ಸಾಧ್ಯವಾಗುವುದಿಲ್ಲ. ಈ ಅಪ್ಲಿಕೇಶನ್‌ಗಳೊಂದಿಗೆಯೇ ಸ್ಮಾರ್ಟ್‌ಫೋನ್ ಅನ್ನು ರನ್ ಮಾಡಬೇಕು. ಈ ಸ್ಮಾರ್ಟ್‌ಫೋನ್‌ಗಳು ಸರ್ಕಾರದ ಪ್ರಚಾರದ ವಾಲ್‌ಪೇಪರ್‌ಗಳು ಮತ್ತು ಪಕ್ಷದ ಘೋಷಣೆಗಳನ್ನು ಹೊಂದಿರುತ್ತದೆ.
ಇದನ್ನೂ ಓದಿ : Diwali sale: ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್ ಖರೀದಿಗೆ ಮುಗಿಬಿದ್ದ ಜನರು!
ಸರ್ಕಾರ ಯಾವ ಸ್ಮಾರ್ಟ್ಫೋನ್ ನೀಡಲಿದೆ? :
ಸರ್ಕಾರ ಕೋಟಿಗಟ್ಟಲೆ ಮಹಿಳೆಯರಿಗೆ ವಿತರಿಸಲು ಹೊರಟಿರುವ ಸ್ಮಾರ್ಟ್‌ಫೋನ್ ಯಾವ ಮಾದರಿಯದ್ದು ಮತ್ತು ಯಾವ ಕಂಪನಿಯದ್ದು ಎನ್ನುವ ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ. ಸರ್ಕಾರವು ವಿತರಿಸಲು ಬಳಸುವ ಸ್ಮಾರ್ಟ್‌ಫೋನ್‌ಗಳು ಆರಂಭಿಕ ಹಂತದ ಸ್ಮಾರ್ಟ್‌ಫೋನ್‌ಗಳಾಗಿವೆ ಎನ್ನಲಾಗಿದೆ. 7000 ರೂಪಾಯಿಯಿಂದ 10000 ರೂಪಾಯಿವರೆಗಿನ ಸ್ಮಾರ್ಟ್‌ಫೋನ್ ಇದಾಗಿರಲಿದೆ. ಈ ಸ್ಮಾರ್ಟ್‌ಫೋನ್‌ನಲ್ಲಿ ಉತ್ತಮ ಕ್ಯಾಮೆರಾ ಮತ್ತು ವೈಶಿಷ್ಟ್ಯಗಳು ಹೊಂದಿರಲಿದೆ ಎಂದು ಭಾವಿಸುತ್ತಿದ್ದರೆ, ನಿಮ್ಮ ಅಂದಾಜು ಸುಳ್ಳಾಗಿರಲಿದೆ. ಇದು ಸಾಮಾನ್ಯ ಕ್ಯಾಮೆರಾ ಮತ್ತು ಡಿಸ್‌ಪ್ಲೇ ಸೇರಿದಂತೆ ವೇಗದ ಪ್ರೊಸೆಸರ್ ಅನ್ನು ಒಳಗೊಂಡಿರುವ ಸ್ಮಾರ್ಟ್‌ಫೋನ್‌ಗಳಾಗಿರಲಿವೆ. ಈ ಸ್ಮಾರ್ಟ್‌ಫೋನ್‌ನೊಂದಿಗೆ 3 ವರ್ಷಗಳವರೆಗೆ ಉಚಿತ ಕರೆ ಮತ್ತು ಇಂಟರ್ ನೆಟ್ ಸೌಲಭ್ಯ ಸಿಗಲಿದೆ.
ಇದನ್ನೂ ಓದಿ : YouTube ನಲ್ಲಿ Subscribers ಹೆಚ್ಚಿಸುವ ಜೊತೆಗೆ ಲಕ್ಷಗಟ್ಟಲೇ ಹಣಗಳಿಸಲು ಬಯಸಿದರೆ, ಈ ಅವಕಾಶ ಮಿಸ್ ಮಾಡ್ಕೋಬೇಡಿ.!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.a