Whatsapp- ವಾಟ್ಸಾಪ್‌ನಲ್ಲಿ ಡಿಲೀಟ್ ಮಾಡಲಾದ ಸಂದೇಶ ಓದಲು ಇಲ್ಲಿದೆ ಸುಲಭ ಟ್ರಿಕ್
Whatsapp Tips And Tricks: ವಾಟ್ಸಾಪ್‌ನಲ್ಲಿ ನೀವು ಅಳಿಸಿದ ಸಂದೇಶಗಳನ್ನು ಮತ್ತೊಮ್ಮೆ ಓದಬಹುದು. ಇದಕ್ಕಾಗಿ ನೀವು ಕೆಲವು ಹಂತಗಳನ್ನು ಅನುಸರಿಸಬೇಕು. ಅದರ ನಂತರ ನೀವು ಅಳಿಸಿದ ಎಲ್ಲಾ ಸಂದೇಶಗಳು ಕಾಣಿಸಿಕೊಳ್ಳುತ್ತವೆ. ಹೇಗೆ ಎಂದು ತಿಳಿಯೋಣ ...
Whatsapp Tips And Tricks: ಲಕ್ಷಾಂತರ ಭಾರತೀಯರು ವಾಟ್ಸಾಪ್ (Whatsapp) ಬಳಸುತ್ತಾರೆ. ಇಂದಿನ ಯುಗದಲ್ಲಿ ವಾಟ್ಸಾಪ್ ಬಳಕೆದಾರ ಜೀವನಾಡಿ ಎಂದರೂ ತಪ್ಪಾಗುವುದಿಲ್ಲ. ಇದರಲ್ಲಿ, ಬಳಕೆದಾರರು ಚಾಟ್ ಮಾಡುವುದರ ಜೊತೆಗೆ ಆಡಿಯೋ ಮತ್ತು ವಿಡಿಯೋ ಕರೆಗಳನ್ನು ಮಾಡಬಹುದು. ವಾಟ್ಸಾಪ್ ಅನ್ನು ಹೆಚ್ಚು ಮೋಜು ಮಾಡಲು ಬಳಕೆದಾರರು ಹೊಸ ತಂತ್ರಗಳನ್ನು ಹುಡುಕುತ್ತಲೇ ಇರುತ್ತಾರೆ. ಆದರೆ ವಾಟ್ಸಾಪ್‌ನಲ್ಲಿರುವ ಹಲವು ವೈಶಿಷ್ಟ್ಯಗಳ ಬಗ್ಗೆ ಬಳಕೆದಾರರಿಗೆ ತಿಳಿದಿಲ್ಲ.
ಸಾಮಾನ್ಯವಾಗಿ ಜನರು ವಾಟ್ಸಾಪ್‌ನಲ್ಲಿ ಅನಗತ್ಯ ಸಂದೇಶಗಳನ್ನು ಅಳಿಸುತ್ತಾರೆ. ಆದರೆ ಹಲವು ವೇಳೆ ಇದರಲ್ಲಿ ಮಿಸ್ ಆಗಿ ಪ್ರಮುಖ ಸಂದೇಶಗಳನ್ನು ಸಹ ಅಳಿಸಲಾಗುತ್ತದೆ. ಆದರೆ ನೀವು ಡಿಲೀಟ್ ಮಾಡಲಾದ ಸಂದೇಶವನ್ನು ಮತ್ತೊಮ್ಮೆ ಓದಬಹುದು ಎಂದು ನಿಮಗೆ ತಿಳಿದಿದೆಯೇ? ಇಂದು ನಾವು ನಿಮಗೆ ಅಂತಹ ಒಂದು ಟ್ರಿಕ್ ಬಗ್ಗೆ ಹೇಳಲಿದ್ದೇವೆ.
ಇದನ್ನೂ ಓದಿ- ಒಂದು ಸಲ ನೋಡಿದ ಮೇಲೆ ಡಿಲೀಟ್ ಆಗಲಿದೆ ಫೋಟೋ : Whatsapp ತಂದಿದೆ ಹೊಸ ವೈಶಿಷ್ಟ್ಯ
ವಾಟ್ಸಾಪ್ (Whatsapp) ನಲ್ಲಿ ನೀವು ಅಳಿಸಿದ ಸಂದೇಶಗಳನ್ನು ನೋಡಬಹುದಾದ ಯಾವುದೇ ವೈಶಿಷ್ಟ್ಯವಿಲ್ಲ. ಆದರೆ ಕೆಲವು ಪ್ರಮುಖ ಸಂದೇಶಗಳನ್ನು ಅಳಿಸಲಾಗಿದೆ ಮತ್ತು ನೀವು ಅದನ್ನು ಓದಲು ಬಯಸಿದರೆ, ನಂತರ ನೀವು ಮೂರನೇ ವ್ಯಕ್ತಿಯ ಅಪ್ಲಿಕೇಶನ್ ಅನ್ನು ಬಳಸಬೇಕಾಗುತ್ತದೆ. ನೀವು ಪ್ರಮುಖ ಸಂದೇಶಗಳನ್ನು ಓದಲು ಬಯಸಿದರೆ, ನೀವು ಇತರ ಅಪ್ಲಿಕೇಶನ್‌ಗಳ ಸಹಾಯವನ್ನು ತೆಗೆದುಕೊಳ್ಳಬಹುದು.
ಇದನ್ನೂ ಓದಿ- 5,000mAh ಬ್ಯಾಟರಿ ಸಾಮರ್ಥ್ಯದ Vivo Y12G ಸ್ಮಾರ್ಟ್‌ಫೋನ್ ಬಿಡುಗಡೆ; ಇದರ ಬೆಲೆ, ವಿಶೇಷತೆ ತಿಳಿಯಿರಿ
ಅಳಿಸಿದ ವಾಟ್ಸಾಪ್ ಸಂದೇಶಗಳನ್ನು ಹೇಗೆ ಓದುವುದು?
1. ನೀವು ವಾಟ್ಸಾಪ್ (Whatsapp)ನಲ್ಲಿ ಅಳಿಸಿದ ಸಂದೇಶಗಳನ್ನು ಓದಲು ಬಯಸಿದರೆ, ನಂತರ ನೀವು ಮೂರನೇ ವ್ಯಕ್ತಿಯ ಅಪ್ಲಿಕೇಶನ್ WhatsRemoved+ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕು.
2. ಪ್ಲೇಸ್ಟೋರ್‌ನಿಂದ WhatsRemoved+ ಅನ್ನು ಸ್ಥಾಪಿಸಿ. ಅದರ ನಂತರ ನಿಯಮಗಳು ಮತ್ತು ಷರತ್ತುಗಳನ್ನು ಸ್ವೀಕರಿಸಿ.
3. ಅಪ್ಲಿಕೇಶನ್ ಬಳಸಲು, ನೀವು ಅಧಿಸೂಚನೆಗಳಿಗೆ ಪ್ರವೇಶವನ್ನು ನೀಡಬೇಕು.
4. ನಂತರ ನೀವು ಅಧಿಸೂಚನೆಗಳನ್ನು ಉಳಿಸಲು ಬಯಸುವ ಅಪ್ಲಿಕೇಶನ್‌ಗಳನ್ನು ಆಯ್ಕೆ ಮಾಡಿ.
5. ಅದರ ನಂತರ WhatsApp ಸಕ್ರಿಯಗೊಳಿಸಿ ಮತ್ತು ಮುಂದುವರಿಸಿ ಕ್ಲಿಕ್ ಮಾಡಿ.
6. ನಂತರ ನೀವು ಪುಟಕ್ಕೆ ಹೋದಾಗ, ಅಳಿಸಿದ ಸಂದೇಶಗಳನ್ನು WhatsApp ನಲ್ಲಿ ತೋರಿಸಲಾಗುತ್ತದೆ.
7. ಪರದೆಯ ಮೇಲ್ಭಾಗದಲ್ಲಿ ಪತ್ತೆಯಾದ ಆಯ್ಕೆಯ ಬಳಿ ವಾಟ್ಸಾಪ್ ಐಕಾನ್ ಕಾಣಿಸುತ್ತದೆ, ಅದರ ಮೇಲೆ ಕ್ಲಿಕ್ ಮಾಡಿ.
8. ಇದನ್ನು ಸಕ್ರಿಯಗೊಳಿಸಿದ ನಂತರ, ನೀವು ಅಳಿಸಿದ WhatsApp ಸಂದೇಶಗಳನ್ನು ಓದಲು ಸಾಧ್ಯವಾಗುತ್ತದೆ.
ಗಮನಿಸಿ: ಈ ಸುದ್ದಿ ಮಾಹಿತಿಗಾಗಿ ಮಾತ್ರ. WhatsApp ಅಂತಹ ಯಾವುದೇ ವೈಶಿಷ್ಟ್ಯವನ್ನು ಒದಗಿಸುವುದಿಲ್ಲ. ನಿಮಗೆ ಥರ್ಡ್ ಪಾರ್ಟಿ ಆಪ್ ಸುರಕ್ಷಿತವೆಂದು ಕಾಣದಿದ್ದರೆ ಮತ್ತು ಅದನ್ನು ಬೆದರಿಕೆಯೆಂದು ಪರಿಗಣಿಸಿದರೆ, ಅದನ್ನು ಇನ್‌ಸ್ಟಾಲ್ ಮಾಡಬೇಡಿ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ