Flipkart Electronics Sale Realme C25Y Offer: ನೀವು ಕೂಡ ಒಂದು ಉತ್ತಮ ಸ್ಮಾರ್ಟ್‌ಫೋನ್ ಖರೀದಿಸಲು ಬಯಸುತ್ತಿದ್ದು, ನಿಮ್ಮ ಬಳಿ ಅದಕ್ಕೆ ಬೇಕಾದ ಬಜೆಟ್ ಇಲ್ಲ ಎಂದಾದರೆ, ನಾವು ನಿಮಗಾಗಿ ಒಂದು ಅದ್ಭುತ ಕೊಡುಗೆಯ ಮಾಹಿತಿಯನ್ನು ನೀಡುತ್ತಿದ್ದೇವೆ. ಆನ್‌ಲೈನ್ ಶಾಪಿಂಗ್ ಪ್ಲಾಟ್‌ಫಾರ್ಮ್ ಫ್ಲಿಪ್‌ಕಾರ್ಟ್‌ನಿಂದ, ನೀವು 128GB ಶೇಖರಣಾ ಸಾಮರ್ಥ್ಯ ಹೊಂದಿರುವ Realme ನ ಅದ್ಭುತ ಸ್ಮಾರ್ಟ್‌ಫೋನ್ ಅನ್ನು ರೂ.13,999 ಬದಲಿಗೆ ಕೇವಲ ರೂ.149 ಕ್ಕೆ ಖರೀದಿಸಬಹುದು. ಫ್ಲಿಪ್‌ಕಾರ್ಟ್ ಎಲೆಕ್ಟ್ರಾನಿಕ್ಸ್ ಮಾರಾಟವು ಫ್ಲಿಪ್‌ಕಾರ್ಟ್‌ನಲ್ಲಿ ನಡೆಯುತ್ತಿದೆ. ಅದರ ಕೊನೆಯ ದಿನ ಇಂದು ಅಂದರೆ ಜುಲೈ 10, 2022 ಆಗಿದೆ.


COMMERCIAL BREAK
SCROLL TO CONTINUE READING

Realme 128GB ಸ್ಮಾರ್ಟ್‌ಫೋನ್ ಅನ್ನು ಅಗ್ಗವಾಗಿ ಖರೀದಿಸಿ
ಮಾರುಕಟ್ಟೆಯಲ್ಲಿ Realme C25Y ಬೆಲೆ 13,999 ರೂ. ಆಗಿದೆ. ಈ ಸ್ಮಾರ್ಟ್‌ಫೋನ್ ಅನ್ನು ಫ್ಲಿಪ್‌ಕಾರ್ಟ್‌ನಲ್ಲಿ 14% ರಿಯಾಯಿತಿಯ ಬಳಿಕ ರೂ 11,999 ಗೆ ಮಾರಾಟ ಮಾಡಲಾಗುತ್ತಿದೆ. ಈ ಸ್ಮಾರ್ಟ್‌ಫೋನ್ ಖರೀದಿಸುವಾಗ ನೀವು ಫ್ಲಿಪ್‌ಕಾರ್ಟ್ ನಲ್ಲಿ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ ನಿಂದ ಹಣವನ್ನು ಪಾವತಿಸಿದರೆ, ನೀವು ರೂ 600 ಕ್ಯಾಶ್‌ಬ್ಯಾಕ್ ಪಡೆಯುತ್ತೀರಿ, ಇದು ಫೋನ್‌ನ ಬೆಲೆಯನ್ನು ರೂ 11,399ಕ್ಕೆ ಇಳಿಕೆ ಮಾಡುತ್ತದೆ.


ಇದನ್ನೂ ಓದಿ-Interesting Video: ಸಸ್ಯಗಳು ಮಲಗಿ ಏಳುವುದನ್ನು ಎಂದಾದರು ನೋಡಿದ್ದೀರಾ? ಈ ವೈರಲ್ ವಿಡಿಯೋ ಒಮ್ಮೆ ನೋಡಿ ಗೊತ್ತಾಗುತ್ತದೆ


ಈ ರೀತಿಯಲ್ಲಿ 149 ರೂ.ಗೆ ಖರೀದಿಸಿ
ನೀವು ಈ ಸ್ಮಾರ್ಟ್‌ಫೋನ್ ಅನ್ನು ಕೇವಲ 149 ರೂಪಾಯಿಗೆ ಖರೀದಿಸಲು ಬಯಸುತ್ತಿದ್ದರೆ, ಅದಕ್ಕಾಗಿ ನೀವು ನಿಮ್ಮ ಹಳೆಯ ಸ್ಮಾರ್ಟ್‌ಫೋನ್ ಅನ್ನು ಮಾರಾಟ ಮಾಡಬೇಕು. ಫ್ಲಿಪ್‌ಕಾರ್ಟ್ ಈ ಡೀಲ್‌ನಲ್ಲಿ ಎಕ್ಸ್‌ಚೇಂಜ್ ಆಫರ್ ಅನ್ನು ಸಹ ನೀಡುತ್ತಿದೆ, ಇದರಲ್ಲಿ ನಿಮ್ಮ ಹಳೆಯ ಸ್ಮಾರ್ಟ್‌ಫೋನ್‌ಗೆ ಬದಲಾಗಿ ಈ ಸ್ಮಾರ್ಟ್‌ಫೋನ್ ಖರೀದಿಸಲು ನೀವು ರೂ 11,250 ವರೆಗೆ ರಿಯಾಯಿತಿಯನ್ನು ಪಡೆಯುವಿರಿ. ಈ ಎಕ್ಸ್‌ಚೇಂಜ್ ಆಫರ್‌ನ ಸಂಪೂರ್ಣ ಪ್ರಯೋಜನವನ್ನು ನೀವು ಪಡೆದರೆ, ನಿಮಗಾಗಿ ಈ ಫೋನ್‌ನ ಬೆಲೆಯು ರೂ 11,499 ರಿಂದ ಕೇವಲ ರೂ 149 ಕ್ಕೆ ಇಳಿಕೆಯಾಗಲಿದೆ.


ಇದನ್ನೂ ಓದಿ-WhatsApp Features: ಇನ್ಮುಂದೆ ಎರಡು ಸ್ಮಾರ್ಟ್ ಫೋನ್ ಗಳಲ್ಲಿ ಒಂದೇ ವಾಟ್ಸ್ ಆಪ್ ಖಾತೆಯನ್ನು ಬಳಸಬಹುದು!


Realme C25Y ನ ವೈಶಿಷ್ಟ್ಯಗಳು
ರಿಯಲಮೀ ಕಂಪನಿಯ ಈ 4G ಸ್ಮಾರ್ಟ್‌ಫೋನ್ ಯುನಿಸಾಕ್ T618 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು ಇದರಲ್ಲಿ ನೀವು 4GB RAM ಜೊತೆಗೆ 128GB ಆಂತರಿಕ ಶೇಖರಣೆಯನ್ನು ಪಡೆಯುತ್ತೀರಿ. 6.5-ಇಂಚಿನ HD + ಡಿಸ್ಪ್ಲೇ ಹೊಂದಿರುವ ಈ ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್‌ನೊಂದಿಗೆ ಬರುತ್ತದೆ. ಇದರಲ್ಲಿ ನೀವು 50MP ನ ಪ್ರೈಮರಿ ಸಂವೇದಕವನ್ನು, 2MP ಯ ಸೆಕೆಂಡರಿ ಸಂವೇದಕ ಮತ್ತು 2MP ಯ ಟರ್ಶರಿ ಸಂವೇದಕವನ್ನು ಪಡೆಯುತ್ತೀರಿ. ಇದರಲ್ಲಿ ನಿಮಗೆ 8MP ನ ಸೆಲ್ಫಿ ಕ್ಯಾಮೆರಾವನ್ನು ಸಹ ನೀಡಲಾಗಿದೆ. ಈ ಸ್ಮಾರ್ಟ್‌ಫೋನ್ 5,000mAh ಬ್ಯಾಟರಿಯೊಂದಿಗೆ ಬರುತ್ತದೆ.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.