ಬೆಂಗಳೂರು : Realme ತನ್ನ C-Series ಸ್ಮಾರ್ಟ್‌ಫೋನ್ ಅನ್ನು ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆ ಮಾಡಲಿದೆ. ಇದರ ಹೆಸರು Realme C55 ಆಗಿರಲಿದೆ. ಮುಂಬರುವ ಸ್ಮಾರ್ಟ್‌ಫೋನ್ ಬಗ್ಗೆ ಕಂಪನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಇವೆಂಟ್ ಲೈವ್ ಮಾಡಲಾಗಿದೆ. ಐಫೋನ್ 14 ಪ್ರೊ ಸರಣಿಯಂತಹ ಡೈನಾಮಿಕ್  ಐ ಲ್ಯಾಂಡ್ ನೀಡಲಾಗಿದೆ.  Realme C55 ಅನ್ನು ಈಗಾಗಲೇ ಇಂಡೋನೇಷ್ಯಾದಲ್ಲಿ ಬಿಡುಗಡೆ ಮಾಡಲಾಗಿದೆ.  


COMMERCIAL BREAK
SCROLL TO CONTINUE READING

Realme C55 ಭಾರತ ಬಿಡುಗಡೆ ದಿನಾಂಕ :
Realme C55 ನ ಇವೆಂಟ್ ಪೇಜ್ ಅನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ನೋಡಬಹುದು. ಇದು ತಿಂಗಳ ಕೊನೆಯಲ್ಲಿ ಭಾರತದಲ್ಲಿ ಬಿಡುಗಡೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಈ ಕಾರ್ಯಕ್ರಮದ ಶೀರ್ಷಿಕೆ 'ಚಾಂಪಿಯನ್ಸ್ ಆಫ್ ಎಂಟರ್‌ಟೈನ್‌ಮೆಂಟ್'. ರಿಯಲ್ ಮಿ ಯಾವಾಗಲೂ ಒಂದೇ ರೀತಿಯ ಟ್ಯಾಗ್‌ಲೈನ್‌ಗಳೊಂದಿಗೆ ಫೋನ್‌ಗಳನ್ನು ಬಿಡುಗಡೆ ಮಾಡುತ್ತದೆ. 


ಇದನ್ನೂ ಓದಿ :  ಈ ಮೂರು ಬಗೆಯ ಸ್ಮಾರ್ಟ್‌ವಾಚ್‌ಗಳ ಬಗ್ಗೆ ನಿಮಗೆಷ್ಟು ಗೊತ್ತು?


Realme C55 ಸ್ಪೆಸಿಫಿಕೆಶನ್ :  
Realme C55 6.52-ಇಂಚಿನ 90Hz ರಿಫ್ರೆಶ್ ರೇಟ್ IPS LCD ಪ್ಯಾನೆಲ್ ಅನ್ನು ಹೊಂದಿರುತ್ತದೆ. ಫೋನ್ MediaTek Helio G88 ಪ್ರೊಸೆಸರ್‌ನಿಂದ ಚಾಲಿತವಾಗುತ್ತದೆ. 8GB ವರೆಗೆ LPDDR4X RAM ಮತ್ತು 256GB ವರೆಗಿನ  ಇಂಟರ್ನಲ್ ಸ್ಟೋರೇಜ್ ನೀಡಲಾಗಿದೆ. ಫೋನ್‌ನಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಇರಲಿದೆ. ಇದು 64MP  ಪ್ರೈಮರಿ  ಮತ್ತು 2MP ಡೆಪ್ತ್ ಸೆನ್ಸಾರ್ ಅನ್ನು ಹೊಂದಿರುತ್ತದೆ. 8MP ಸೆಲ್ಫಿ ಕ್ಯಾಮೆರಾ ಕೂಡಾ ನೀಡಲಾಗಿದೆ. 


Realme C55 ಬ್ಯಾಟರಿ :
USB ಟೈಪ್-C ಚಾರ್ಜಿಂಗ್ ಪೋರ್ಟ್‌ನಲ್ಲಿ 33W SuperVOOC  ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಬ್ಯಾಟರಿಯನ್ನು ನೀಡಲಾಗಿದೆ. Realme C55 ಆಂಡ್ರಾಯ್ಡ್ 13-ಆಧಾರಿತ Realme UI 4.0 ಸ್ಕಿನ್ ಅನ್ನು ಬಾಕ್ಸ್‌ನಿಂದ ಬೂಟ್ ಮಾಡುತ್ತದೆ.


ಇದನ್ನೂ ಓದಿ :  ಮಾರುತಿ ಕಾರುಗಳ ಮೇಲೆ ಬಂಪರ್ ಡಿಸ್ಕೌಂಟ್- ಮಾರ್ಚ್ 31ರವರೆಗೆ ಮಾತ್ರ ಈ ಸುವರ್ಣಾವಕಾಶ


Realme C55 ಅಂದಾಜು ಬೆಲೆ : 
Realme C55 ಬಜೆಟ್ ಸ್ಮಾರ್ಟ್‌ಫೋನ್ ಆಗಿರುತ್ತದೆ. ವರದಿಗಳ ಪ್ರಕಾರ, ಫೋನ್‌ನ 6GB RAM + 128GB ಸ್ಟೋರೇಜ್ ರೂಪಾಂತರದ ಬೆಲೆ 13,390 ರೂ. ಆಗಿರಲಿದೆ ಎನ್ನಲಾಗಿದೆ. ತಿಂಗಳಾಂತ್ಯದಲ್ಲಿ ಈ ಫೋನ್ ಲಾಂಚ್ ಆಗುವ ಸಾಧ್ಯತೆ ಇದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.