ನವದೆಹಲಿ: ರಿಯಲ್ಮೆ (Realme) ಕಳೆದ ವಾರ ತನ್ನ ಸಬ್-ಬ್ರಾಂಡ್ ಡಿಜೊ (Dizo)ವನ್ನು ಬಿಡುಗಡೆ ಮಾಡಿತು ಮತ್ತು ಶೀಘ್ರದಲ್ಲೇ ಹಲವಾರು ಹೊಸ ಐಒಟಿ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವುದಾಗಿ ಘೋಷಿಸಿತು. ಕಂಪನಿಯ ಈ ಪ್ರಕಟಣೆಯ ನಂತರ, ಮುಂಬರುವ ಸಾಧನಗಳಿಗೆ ಸಂಬಂಧಿಸಿದ ಸೋರಿಕೆಗಳು ಮುಂಚೂಣಿಗೆ ಬರುತ್ತಿವೆ. ಅದೇ ಸಮಯದಲ್ಲಿ, ರಿಯಲ್ಮೆ ತನ್ನ ಉಪ-ಬ್ರಾಂಡ್ ಡಿಜೊ ಅಡಿಯಲ್ಲಿ ಎರಡು ಹೊಸ ಫೀಚರ್ ಫೋನ್‌ಗಳನ್ನು (Feature Phones) ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಿದೆ ಎಂದು ಹೊಸ ವರದಿಯೊಂದು ಹೊರಬಂದಿದೆ. ಈ ಫೀಚರ್ ಫೋನ್‌ಗಳು ಭಾರತದ ಜಿಯೋ ಫೀಚರ್ ಫೋನ್‌ಗಳಿಗೆ ಕಠಿಣ ಸ್ಪರ್ಧೆಯನ್ನು ನೀಡಬಲ್ಲವು ಎಂದು ಹೇಳಲಾಗುತ್ತಿದೆ.


COMMERCIAL BREAK
SCROLL TO CONTINUE READING

ಸೋರಿಕೆಯಾಗಿರುವ ಮಾಹಿತಿಯ ಪ್ರಕಾರ, ಮೊದಲ ಎರಡು ಫೀಚರ್ ಫೋನ್‌ಗಳನ್ನು (Feature Phones) ಡಿಜೊದ ಪೋರ್ಟ್ಫೋಲಿಯೊದಲ್ಲಿ ಸೇರಿಸಲಾಗುವುದು. ಕಂಪನಿಯು ಶೀಘ್ರದಲ್ಲೇ ಡಿಜೊ ಸ್ಟಾರ್ 500 (Dizo Star 500) ಮತ್ತು ಡಿಜೊ ಸ್ಟಾರ್ 300 (Dizo Star 300) ಅನ್ನು ಬಿಡುಗಡೆ ಮಾಡಬಹುದು. ಇತ್ತೀಚೆಗೆ ಅವುಗಳನ್ನು ಚೀನಾದ ಪ್ರಮಾಣೀಕರಣ ತಾಣದಲ್ಲಿ ವಿಂಗಡಿಸಲಾಗಿದೆ. ಇದರಲ್ಲಿ ಮುಂಬರುವ ಫೀಚರ್ ಫೋನ್‌ನ ವಿನ್ಯಾಸದ ಜೊತೆಗೆ ಕೆಲವು ವೈಶಿಷ್ಟ್ಯಗಳನ್ನು ಬಹಿರಂಗಪಡಿಸಲಾಗಿದೆ.


ಇದನ್ನೂ ಓದಿ- Smartphone ಬಳಕೆದಾರರೇ ಮರೆತೂ ಕೂಡ ಈ ತಪ್ಪುಗಳನ್ನು ಎಂದಿಗೂ ಮಾಡಲೇಬೇಡಿ


ಡಿಜೊ ಸ್ಟಾರ್ 500 ಮತ್ತು ಡಿಜೊ ಸ್ಟಾರ್ 300: ವಿನ್ಯಾಸ (Dizo Star 500 and Dizo Star 300: Design) :
ಲಭ್ಯವಾಗಿರುವ ಮಾಹಿತಿ ಪ್ರಕಾರ, ಡಿಜೊ ಸ್ಟಾರ್ 500 (Dizo Star 500) ವಿನ್ಯಾಸವು ಸಾಂಪ್ರದಾಯಿಕ ಫೀಚರ್ ಫೋನ್‌ಗೆ ಹೋಲುತ್ತದೆ ಮತ್ತು ಬಳಕೆದಾರರು ಅದರಲ್ಲಿ ಭೌತಿಕ ಕೀಪ್ಯಾಡ್ ಪಡೆಯುತ್ತಾರೆ. ಫೋನ್‌ನಲ್ಲಿ ಡ್ಯುಯಲ್ ಸಿಮ್ ಬೆಂಬಲದೊಂದಿಗೆ ಸಂಪರ್ಕಕ್ಕಾಗಿ ಡ್ಯುಯಲ್ ಬ್ಯಾಂಡ್ 2 ಜಿ ಬೆಂಬಲವನ್ನು ನೀಡಬಹುದು. ಫೋನ್‌ನ ಹಿಂದಿನ ಫಲಕದಲ್ಲಿ ಡಿಜೊ ಬ್ರಾಂಡಿಂಗ್ ಜೊತೆಗೆ ಒಂದೇ ಕ್ಯಾಮೆರಾ ಕಾಣಿಸುತ್ತದೆ. ಫೋನ್‌ನಲ್ಲಿ ಪವರ್ ಬ್ಯಾಕಪ್‌ಗಾಗಿ 1,830 ಎಮ್‌ಎಹೆಚ್ ಬ್ಯಾಟರಿಯನ್ನು ನೀಡಬಹುದು, ಇದು ಮೈಕ್ರೊ ಎಸ್‌ಡಿ ಕಾರ್ಡ್ ಬೆಂಬಲದೊಂದಿಗೆ ಬರುತ್ತದೆ ಎಂದು ನಿರೀಕ್ಷಿಸಲಾಗಿದೆ.


ಇದನ್ನೂ ಓದಿ- ಪೇಟಿಎಂನಲ್ಲಿ ಎಲ್ಪಿಜಿ ಬುಕ್ ಮಾಡಿ, 800 ರೂ.ವರೆಗೆ ಕ್ಯಾಶ್ಬ್ಯಾಕ್ ಪಡೆಯಿರಿ


ಮತ್ತೊಂದೆಡೆ, ನಾವು ಡಿಜೊ ಸ್ಟಾರ್ 300 ಬಗ್ಗೆ ಹೇಳುವುದಾದರೆ, ಅದಕ್ಕೆ ಸಣ್ಣ ಪರದೆಯೊಂದಿಗೆ ಕೀಪ್ಯಾಡ್ ಕೂಡ ನೀಡಬಹುದು. ಫೋನ್ ಎಲ್ಇಡಿ ಫ್ಲ್ಯಾಷ್ನೊಂದಿಗೆ ಒಂದೇ ಕ್ಯಾಮೆರಾವನ್ನು ಹೊಂದಿರಲಿದೆ. ಫೋನ್‌ನಲ್ಲಿ ದೊಡ್ಡ ಸ್ಪೀಕರ್ ಗ್ರಿಲ್ ಕಾಣಿಸುತ್ತದೆ. ಇದರೊಂದಿಗೆ ಫೋನ್‌ನಲ್ಲಿ ಪ್ರಭಾವಶಾಲಿ ಸಂಗೀತ ಗುಣಮಟ್ಟವನ್ನೂ ನೀಡಲಾಗುವುದು. ಇದರಲ್ಲಿ ಡ್ಯುಯಲ್ ಸಿಮ್ ಬೆಂಬಲದೊಂದಿಗೆ ಮೈಕ್ರೊ ಎಸ್ಡಿ ಕಾರ್ಡ್ ಸ್ಲಾಟ್ ಮತ್ತು 2 ಜಿ ಬೆಂಬಲವನ್ನು ನೀಡಲಾಗುವುದು. ಇದಲ್ಲದೆ ಫೋನ್‌ನಲ್ಲಿ 2,500 ಎಮ್‌ಎಹೆಚ್ ಬ್ಯಾಟರಿ ನೀಡಬಹುದು ಎಂದು ವರದಿಗಳು ತಿಳಿಸಿವೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ