Realme ಲಾಂಚ್ ಮಾಡಿದೆ 12 ಸಾವಿರ ರೂ.ಗಿಂತ ಕಡಿಮೆ ಬೆಲೆ ಅದ್ಬುತ Smartphone
ನಾರ್ಜೊ 50A ವಾಟರ್‌ಡ್ರಾಪ್ ನಾಚ್‌ನೊಂದಿಗೆ 6.5-ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. ಇದು 400 ನಿಟ್‌ಗಳ ಬ್ರೈಟ್ ನೆಸ್ ಮತ್ತು 88.7 ಪ್ರತಿಶತ ಸ್ಕ್ರೀನ್-ಟು-ಬಾಡಿ ಅನುಪಾತವನ್ನು ನೀಡುತ್ತದೆ. ಹಿಂಭಾಗದಲ್ಲಿ, ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ.
ನವದೆಹಲಿ : ರಿಯಲ್‌ಮಿ (Realme) ತನ್ನ ಹೊಸ ಸ್ಮಾರ್ಟ್ ಟಿವಿಗಳಾದ ನಿಯೋ ಮತ್ತು ಬ್ಯಾಂಡ್ 2 ಸಹಭಾಗಿತ್ವದಲ್ಲಿ ಇಂದು (ಸೆಪ್ಟೆಂಬರ್ 24, 2021) ಭಾರತದಲ್ಲಿ ನಾರ್ಜೊ 50 ಸರಣಿಯ ಎರಡು ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಹೊಸ ಹ್ಯಾಂಡ್‌ಸೆಟ್‌ಗಳಲ್ಲಿ ನಾರ್ಜೊ 50 ಎ (Narzo 50A) ಮತ್ತು ನಾರ್ಜೊ 50 ಐ (Narzo 50i) ಸೇರಿವೆ. ಎರಡೂ ಸ್ಮಾರ್ಟ್‌ಫೋನ್‌ಗಳಲ್ಲಿ Narzo 50A ಹೆಚ್ಚು ಶಕ್ತಿಶಾಲಿಯಾಗಿದೆ.
ನಾರ್ಜೊ 50 ಎ ವಿಶೇಷತೆಗಳು :
ರಿಯಲ್‌ಮಿಯ (Realme) Narzo 50A ಪ್ಯಾಕ್‌ಗಳು MediaTek Helio G85 ಪ್ರೊಸೆಸರ್ ಅನ್ನು ಗೇಮಿಂಗ್‌ಗೆ ಹೊಂದುವಂತೆ ಮಾಡಲಾಗಿದೆ. ARM Mali G52 GPU ನೊಂದಿಗೆ ಜೋಡಿಸಲಾಗಿದೆ. ಈ ಡಿವೈಸ್ 6,000mAh ಬ್ಯಾಟರಿಯನ್ನು ಹೊಂದಿದೆ. ಅದು 18W ವೇಗದ ಚಾರ್ಜಿಂಗ್ ಅನ್ನು ಸಪೋರ್ಟ್ ಮಾಡುತ್ತದೆ. ಮತ್ತು ರಿವರ್ಸ್ ಚಾರ್ಜ್ ಬೆಂಬಲದೊಂದಿಗೆ ಇತರ ಉತ್ಪನ್ನಗಳನ್ನು ಚಾರ್ಜ್ ಮಾಡಲು ಸಹಾಯ ಮಾಡುತ್ತದೆ. ಇದು ಭದ್ರತೆಗಾಗಿ ಹಿಂಬದಿಯಲ್ಲಿ ಫಿಂಗರ್‌ಪ್ರಿಂಟ್ ರೀಡರ್ ಅನ್ನು ಅಳವಡಿಸಲಾಗಿದೆ. 256GB ವರೆಗಿನ ಮೆಮೊರಿ ವಿಸ್ತರಣೆಗಾಗಿ ಮೈಕ್ರೊ SD ಕಾರ್ಡ್ ಸ್ಲಾಟ್ ಅನ್ನು ಬೆಂಬಲಿಸುತ್ತದೆ.
ಇದನ್ನೂ ಓದಿ : ಭಾರತದಲ್ಲಿ ಫ್ಲೆಕ್ಸ್ ಇಂಜಿನ್ ಗಳನ್ನು ಕಡ್ಡಾಯ ಮಾಡುವುದಾಗಿ ನಿತಿನ್ ಗಡ್ಕರಿ ಘೋಷಣೆ
ನಾರ್ಜೊ 50A ವಾಟರ್‌ಡ್ರಾಪ್ ನಾಚ್‌ನೊಂದಿಗೆ 6.5-ಇಂಚಿನ ಡಿಸ್‌ಪ್ಲೇಯನ್ನು (Phone display) ಹೊಂದಿದೆ. ಇದು 400 ನಿಟ್‌ಗಳ ಬ್ರೈಟ್ ನೆಸ್ ಮತ್ತು 88.7 ಪ್ರತಿಶತ ಸ್ಕ್ರೀನ್-ಟು-ಬಾಡಿ ಅನುಪಾತವನ್ನು ನೀಡುತ್ತದೆ. ಹಿಂಭಾಗದಲ್ಲಿ, ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ 50 ಮೆಗಾಪಿಕ್ಸೆಲ್ ಎಐ ಕ್ಯಾಮೆರಾ, 2 ಮೆಗಾಪಿಕ್ಸೆಲ್ ಪೋರ್ಟ್ರೇಟ್ ಲೆನ್ಸ್ ಮತ್ತು 2 ಮೆಗಾಪಿಕ್ಸೆಲ್ ಮ್ಯಾಕ್ರೋ ಸೆನ್ಸರ್, ಮುಂಭಾಗದಲ್ಲಿ 8 ಮೆಗಾಪಿಕ್ಸೆಲ್ ಸೆಲ್ಫಿ camera ಇದೆ. ಆಕ್ಸಿಜನ್ ಬ್ಲೂಮತ್ತು ಆಕ್ಸಿಜನ್ ಗ್ರೀನ್ ಎಂಬ ಎರಡು ಬಣ್ಣಗಳಲ್ಲಿ ಲಭ್ಯವಿದೆ. ಫೋನಿನ ಎರಡು ರೂಪಾಂತರಗಳಿವೆ. ಒಂದು 4GB RAM + 64GB ಸ್ಟೋರೇಜ್ ನೊಂದಿಗೆ ಬರುತ್ತದೆ. ಇನ್ನೊಂದು 4GB RAM + 128GB ಇನಟರ್ನಲ್ ಸ್ಟೋರೆಜ್ ನೊಂದಿಗೆ ಲಭ್ಯವಿದೆ.
Narzo 50i ನ ವಿಶೇಷತೆಗಳು :
Narzo 50A ಜೊತೆಗೆ, ಹೊಸ Narzo 50i ಅನ್ನು ಕೂಡಾ ಬಿಡುಗಡೆ ಮಾಡಿದೆ. ಈ ಡಿವೈಸ್ ಬಗ್ಗೆ ಕಂಪನಿಯು ಇನ್ನೂ ಯಾವುದೇ ನಿರ್ದಿಷ್ಟ ವಿವರಗಳನ್ನು ನೀಡಿಲ್ಲ. ಆದರೆ, ಕಂಪನಿಯ ಕಾರ್ಯನಿರ್ವಾಹಕರು ಈ ಸ್ಮಾರ್ಟ್ ಫೋನ್ (Smartphone) ಆಕ್ಟಾ ಕೋರ್ ಪ್ರೊಸೆಸರ್ ಅನ್ನು ಹೊಂದಿರುತ್ತದೆ ಮತ್ತು 2GB RAM ಮತ್ತು 32GB ಸ್ಟೋರೇಜ್ ಅಥವಾ 4GB RAM ಮತ್ತು 64GB ಸ್ಟೋರೇಜ್ ಅನ್ನು ಹೊಂದಿರುತ್ತದೆ ಎಂದು ಹೇಳಿದ್ದಾರೆ. ಇದು ಬೃಹತ್ 5,000mAh ಬ್ಯಾಟರಿಯಿಂದ ಚಾಲಿತವಾಗಿದೆ ಮತ್ತು ಮಿಂಟ್ ಗ್ರೀನ್ ಮತ್ತು ಕಾರ್ಬನ್ ಬ್ಲಾಕ್ ಬಣ್ಣಗಲ್ಲಿ ಲಭ್ಯವಿರುತ್ತದೆ. ಅದೇ ರೀತಿ ನಾರ್ಜೊ 50A ನಂತೆ, ಇದು ಮೈಕ್ರೋ SD ಕಾರ್ಡ್ ಸ್ಲಾಟ್ ಮೂಲಕ ಮೆಮೊರಿ ವಿಸ್ತರಣೆಯನ್ನು ಸಹ ನೀಡುತ್ತದೆ. ಹಿಂಭಾಗದಲ್ಲಿ, ಇದು 8 ಮೆಗಾಪಿಕ್ಸೆಲ್ AI ಕ್ಯಾಮೆರಾವನ್ನು ಮಾತ್ರ ಹೊಂದಿದೆ.
ಇದನ್ನೂ ಓದಿ : Disney + Hotstar for free: ಜಿಯೋ ಬಳಕೆದಾರರಿಗೆ ಗುಡ್ ನ್ಯೂಸ್; ಉಚಿತವಾಗಿ ವೀಕ್ಷಿಸಿ ಡಿಸ್ನಿ + ಹಾಟ್‌ಸ್ಟಾರ್, ಇಲ್ಲಿದೆ ಸುಲಭ ಮಾರ್ಗ
Narzo 50A ಮತ್ತು Narzo 50i ಬೆಲೆ :
Narzo 50A (4GB + 64GB) ಬೆಲೆ - 11,499 ರೂ
Narzo 50A (4GB + 128GB) ಬೆಲೆ - 12,499 ರೂ
12,499 Narzo 50i (2GB + 32GB) ಬೆಲೆ - .7,499 ರೂ
Narzo 50i (4GB + 64GB) ಬೆಲೆ - 8,999 ರೂ
ಹೊಸ ನಾರ್ಜೊ 50 ಸರಣಿಯ ಮಾರಾಟವು ಅಕ್ಟೋಬರ್ 7, 2021 ರಿಂದ ಆರಂಭವಾಗಲಿದೆ, ಇದು ಭಾರತದಲ್ಲಿ ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಮಾರಾಟದ ಮೊದಲ ದಿನವಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.