Realme Narzo 70 Pro : ರಿಯಲ್ ಮಿ ಹೊಸ ಸ್ಮಾರ್ಟ್ಫೋನ್ ಮಾರ್ಚ್ 19ರಂದು ಮಾರುಕಟ್ಟೆಗೆ
Realme Narzo : Realme ತನ್ನ ಇನ್ನೊಂದು Narzo ಸಿರೀಸ್ ಅನ್ನು ಬಿಡುಗಡೆ ಮಾಡಿದೆ, ಮಾರ್ಚ್ 19ರಂದು ಮಾರುಕಟ್ಟೆಗೆ ರಿಯಲ್ ಮಿ ನಾರ್ಜೋ 70 ಪ್ರೋ 5ಜಿ ಗ್ರಾಹಕರ ಕೈಗೆ ಸಿಗಲಿದೆ.
Realme Narzo series : ಆಕರ್ಷಕ ಫೀಚರ್‌ಗಳ ಸ್ಮಾರ್ಟ್ ಫೋನನ್ನು ಗ್ರಾಹಕರಿಗೆ ನೀಡಿ ಸೈ ಎನಿಸಿಕೊಂಡಿರುವ ರಿಯಲ್ ಮಿ ಈಗ ಮಾರುಕಟ್ಟೆಯಲ್ಲಿ ರಿಯಲ್ ಮಿ ನಾರ್ಜೋ 70 ಪ್ರೋ 5ಜಿ ಬಿಡಲು ಸಜ್ಜಾಗುತ್ತಿದೆ. 50 MP IMX890 ಪ್ರೀಮಿಯರ್ ಶೂಟರ್ primary shooter ಜೊತೆಗೆ ಏರ್ ಗೆಸ್ಚರ್ Air Gesture ಬೆಂಬಲದೊಂದಿಗೆ ಕಾರ್ಯ ನಿರ್ವಹಿಸುವ ಸ್ಮಾರ್ಟ್ ಫೋನ್ ಇದಾಗಿದೆ.
ಇದೇ ತಿಂಗಳು, ಮಾರ್ಚ್ 19ರಂದು ಮಾರುಕಟ್ಟೆಗೆ ರಿಯಲ್ ಮಿ ನಾರ್ಜೋ 70 ಪ್ರೋ 5ಜಿ ಗ್ರಾಹಕರ ಕೈಗೆ ಸಿಗಲಿದೆ. 50 MP IMX890 ಪ್ರೀಮಿಯರ್ ಶೂಟರ್ primary shooter ಜೊತೆಗೆ ಏರ್ ಗೆಸ್ಚರ್ Air Gesture ಬೆಂಬಲದೊಂದಿಗೆ ಕಾರ್ಯ ನಿರ್ವಹಿಸುವ ಸ್ಮಾರ್ಟ್ ಫೋನ್ ಇದಾಗಿದೆ.
ಅಮೇಜಾನ್ ನ ಮೈಕ್ರೋಸೈಟ್ ನಲ್ಲಿ ಈ ಸ್ಮಾರ್ಟ್ ಫೋನ್ ಖರೀದಿಗೆ ಲಭ್ಯವಿದೆ. ರಿಯಲ್ ಮಿ ನಾರ್ಜೋ 70 ಪ್ರೋ 5ಜಿ, ಮಾರುಕಟ್ಟೆಗೆ ಎಂಟ್ರಿ ಕೊಟ್ಟರೆ ಭಾರತದಲ್ಲಿ ಒಂದೇ ತಿಂಗಳು ಮೂರು ಸ್ಮಾರ್ಟ್ ಫೋನ್ ಗಳು ಪರಿಚಯಿಸಿದಂತಾಗುತ್ತದೆ. ಆಲ್ ರೌಂಡರ್ ಆಗಿರುವ ರಿಯಲ್ ಮಿ ನಾರ್ಜೋ 70 ಪ್ರೋ 5ಜಿ ಗ್ರಾಹಕರ ಕೈಗೆ ಸಿಗಲಿದೆ. ಮಾರ್ಚ್ 19ರಂದು ಮಾರುಕಟ್ಟೆಯಲ್ಲಿ ರಿಯಲ್ ಮಿ ನಾರ್ಜೋ 70 ಪ್ರೋ 5ಜಿ ದೊರೆಯುತ್ತದೆ ಎಂದು ರಿಯಲ್ ಮಿ ಕಂಪನಿ ತನ್ನ ಅಧಿಕೃತ ವೆಬ್ ಸೈಟ್ ನಲ್ಲಿ ಮಾಹಿತಿ ನೀಡಿದೆ.
ಇದನ್ನು ಓದಿ : ಗುರುವಾರ 50 ಗಂಟೆಗಳ ಕಾಲ ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್ ನಲ್ಲಿ ಕಾಂಕ್ರೀಟ್ ಸ್ಲ್ಯಾಬ್ ಕಾಮಗಾರಿ
ಏನಿದರ ವೈಶಿಷ್ಟ್ಯತೆ?
ರಿಯಲ್ ಮಿ ನಾರ್ಜೋ 70 ಪ್ರೋ 5ಜಿ ಸ್ಮಾರ್ಟ್ ಫೋನ್ 256 ಜಿಬಿ ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿದೆ. ಇದರಲ್ಲಿ ಸಾಮಾನ್ಯವಾದ ಬ್ಯಾಟರಿ ಸಾಮರ್ಥ್ಯ 5,000 mAh ಹಾಗೂ ವೇಗವಾಗಿ ಚಾರ್ಜಿಂಗ್ ಸಾಮರ್ಥ್ಯವನ್ನು 67W ಹೊಂದಿಸಲಾಗಿದೆ.6.67 ಇಂಚಿನಷ್ಟು ಉದ್ದವುಳ್ಳ ಪರದೆಯಿದ್ದು, 120 Hz ಮತ್ತು FHD+ ರೆಸಲ್ಯೂಷನ್ ನ್ನು ಒಳಗೊಂಡಿದೆ. MediaTek Dimensity 7050 ಚಿಪ್ ಬಳಕೆಯಿಂದ ಈ ಸ್ಮಾರ್ಟ್ಫೋನ್ ಮತ್ತಷ್ಟು ಶಕ್ತಿಶಾಲಿಯಾಗಿದೆ.
3 ಕ್ಯಾಮರಾ ಹೊಂದಿರುವ ಸ್ಮಾರ್ಟ್‌ಫೋನ್
ರಿಯಲ್ ಮಿ ನಾರ್ಜೋ 70 ಪ್ರೋ 5ಜಿ ನೋಡಲು ತುಂಬಾ ಆಕರ್ಷಕವಾಗಿದೆ. ಫೋನ್ ಪರದೆ ಎರಡು ಹಂತದಲ್ಲಿ ದಪ್ಪನೆಯ ಗಾಜಿನಿಂದ ರೂಪುಗೊಂಡಿದೆ. ಕ್ಯಾಮೆರಾಗಳಿರುವ ಜಾಗದಲ್ಲೂ ಮಂದವಾಗಿ ಗಾಜಿನಿಂದ ವಿನ್ಯಾಸಗೊಳಿಸಲಾಗಿದೆ. ಬಳಸಲು ಅತ್ಯುತ್ತಮ ಎನಿಸುವಂತ ವಿನ್ಯಾಸದಲ್ಲಿ ನಾರ್ಜೋ 70 ಪ್ರೋ 5ಜಿ ಸ್ಮಾರ್ಟ್ ಫೋನ್ ತಯಾರಿಸಲಾಗಿದೆ.
ಈ ಸ್ಮಾರ್ಟ್ ಫೋನ್ ನಲ್ಲಿ 3 ಕ್ಯಾಮೆರಾಗಳಿವೆ. ಮೂರು ಕ್ಯಾಮೆರಾಗಳು 50 MP ಸೋನಿ IMX890 ಸೆನ್ಸಾರ್ ನಲ್ಲಿ 8 MP ಅಲ್ಟ್ರಾ ವೈಡ್ ಲೆನ್ಸ್ ultra-wide lens ಮತ್ತು 2 MP ಮ್ಯಾಕ್ರೋ ಲೆನ್ಸ್ macro lensನ್ನು ಒಳಗೊಂಡಿದೆ. ಈ ಸ್ಮಾರ್ಟ್ ಫೋನ್ ನಲ್ಲ ವ್ಯಕ್ತಿಯ ಭಂಗಿಗಳನ್ನು ಸರಿಯಾಗಿರಿಸುವಲ್ಲಿ, ಮಾಡುತ್ತಿರುವ ಕೆಲಸ ಸರಿಯಾಗಿ ನಿರ್ವಹಿಸಲು ಸಹಾಯ ಮಾಡುತ್ತದೆ.
ಇದನ್ನು ಓದಿ : ಬ್ಯಾಡಗಿ ಮೆಣಸಿನಕಾಯಿ ಬೆಲೆ ದಿಢೀರ್ ಕುಸಿತ : ಆಕ್ರೋಶ ವ್ಯಕ್ತಪಡಿಸಿದ ರೈತರು
ರಿಯಲ್ ಮಿ ನಾರ್ಜೋ 70 ಪ್ರೋ 5ಜಿ ಬೆಲೆ ಎಷ್ಟು?
Realme Narzo 70 Pro 5G ₹30 ಸಾವಿರದ ಸ್ಮಾರ್ಟ್ ಫೋನ್ ವಿಭಾಗದಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಆದರೆ, ರಿಯಲ್ ಮಿ ಇನ್ನು ಈ ಆಧುನಿಕ ಸ್ಮಾರ್ಟ್ ಫೋನ್ ಇಂತಿಷ್ಟೇ ಬೆಲೆ ಎಂದು ನಿಗದಿಪಡಿಸಿಲ್ಲ.ಮುಂದಿನ ದಿನಗಳಲ್ಲಿ ತಿಳಿಸಲಾಗುವುದು ಎಂದು ಮಾಹಿತಿ ನೀಡಿದೆ. https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.