ನವದೆಹಲಿ: Realme ತನ್ನ ಹಲವು ಸ್ಮಾರ್ಟ್‌ಫೋನ್‌ಗಳನ್ನು ಇಂಡೋನೇಷ್ಯಾದಲ್ಲಿ ಬಿಡುಗಡೆ ಮಾಡಿದೆ. ಇಲ್ಲಿ ರಿಯಲ್ ಮೀ ಸ್ಮಾರ್ಟ್‌ಫೋನ್‌ಗಳು ಸಾಕಷ್ಟು ಜನಪ್ರಿಯವಾಗಿವೆ. ಆದರೆ ಈಗ ಅಲ್ಲಿಂದಲೇ ಆಘಾತಕಾರಿ ಸುದ್ದಿಯೊಂದು ಬಂದಿದೆ. ಈ ಸುದ್ದಿ ಕೇಳಿದ ಬಳಿಕ ಅನೇಕರು ಈ ಫೋನ್ ಬಳಸಲು ಹಿಂದೇಟು ಹಾಕುತ್ತಿದ್ದಾರೆ. ಅಷ್ಟಕ್ಕೂ ಏನಾಯ್ತು ಅಂತೀರಾ..?


COMMERCIAL BREAK
SCROLL TO CONTINUE READING

ಇಂಡೋನೇಷ್ಯಾದಲ್ಲಿ ರಿಯಲ್ ಮೀ ಫೋನ್ ಸ್ಫೋಟಗೊಂಡಿದೆ. ಈ ಬಗ್ಗೆ ಬಳಕೆದಾರರೊಬ್ಬರು ಟ್ವಿಟರ್ ಖಾತೆಯಲ್ಲಿ ಮಾಹಿತಿ ನೀಡಿದ್ದು, ತಮ್ಮ Realme Narzo 50A ಸ್ಮಾರ್ಟ್‌ಫೋನ್ ಸ್ಫೋಟಗೊಂಡಿದೆ ಎಂದು ಹೇಳಿಕೊಂಡಿದ್ದಾರೆ. ಬಾಂಬ್‍ನಂತೆ ಸ್ಫೋಟಗೊಂಡು ಚಿದ್ರವಾಗಿರುವ ಫೋನಿನ ಚಿತ್ರವನ್ನು ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಇದು ಸಖತ್ ವೈರಲ್ ಆಗುತ್ತಿದೆ. ಬ್ಯಾಗ್‍ನಲ್ಲಿಟ್ಟುಕೊಂಡಾಗ ಇದ್ದಕ್ಕಿದ್ದಂತೆಯೇ ಫೋನ್ ಸ್ಫೋಟಗೊಂಡಿದೆ ಎಂದು ವರದಿಯಾಗಿದೆ.


Vi ಗ್ರಾಹಕರಿಗೆ ಶಾಕ್! ಈಗ ಬಳಕೆದಾರರಿಗೆ ಸಿಗಲ್ಲ ಈ ಸೌಲಭ್ಯ


ಟ್ವಿಟರ್ ಬಳಕೆದಾರರು ತಮ್ಮ ಬ್ಯಾಗ್‌ನಲ್ಲಿ ಫೋನ್ ಸ್ಫೋಟಗೊಳ್ಳುವಂತಹ ಯಾವುದೇ ವಸ್ತುಗಳು ಇರಲಿಲ್ಲ ಎಂದು ಹೇಳಿಕೊಂಡಿದ್ದಾರೆ. ಗ್ರಾಹಕರ ಅಚಾತುರ್ಯದಿಂದಲೇ ಫೋನ್ ಸ್ಫೋಟಗೊಂಡಿದೆ ಎಂದು ಕಂಪನಿ ಹೇಳಿದ್ದು, ‘ಇದು ಬಳಕೆದಾರರ ದೋಷ’ ಎಂದು ಸ್ಪಷ್ಟನೆ ನೀಡಿದೆ. ಈ ಸ್ಮಾರ್ಟ್‌ಫೋನ್‌ನ ಬ್ಯಾಟರಿ ಸ್ಫೋಟಗೊಂಡಿಲ್ಲ, ಫೋನ್‌ನ ಇತರ ಭಾಗಗಳಲ್ಲಿ ಸ್ಫೋಟಗೊಂಡಿದೆ ಎಂದು ಬಳಕೆದಾರರು ಮಾಹಿತಿ ನೀಡಿದ್ದಾರೆ. ಹೀಗಾಗಿ ಬಳಕೆದಾರರ ತಪ್ಪಿನಿಂದ ಸ್ಫೋಟ ಸಂಭವಿಸಿರಬಹುದು ಎಂದು ಅನೇಕರು ಕಾಮೆಂಟ್ ಮಾಡಿದ್ದಾರೆ.


Redmi Note 11 Pro Plus 5G ಸಹ ಸ್ಫೋಟವಾಗಿದೆ


Redmi Note 11 Pro Plus 5G ಫೋನ್ ಸಹ ಸ್ಫೋಟಗೊಂಡಿರುವ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಫೋನ್ ಖರೀದಿಸಿ ಇನ್ನೂ 10 ದಿನಗಳು ಕಳೆದಿಲ್ಲ, ಅಷ್ಟರಲ್ಲಿಯೇ ಮೊಬೈಲ್ ಸ್ಫೋಟಗೊಂಡಿದೆ ಎಂದು ಬಳಕೆದಾರರು ಅಳಲು ತೋಡಿಕೊಂಡಿದ್ದಾರೆ. ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಬಳಕೆದಾರ ತಕ್ಷಣವೇ Redmi ಕಂಪನಿ ವಿರುದ್ಧ ಕ್ರಮ ಕೈಕೊಳ್ಳುವಂತೆ ಒತ್ತಾಯಿಸಿದ್ದಾರೆ.


ಇದನ್ನೂ ಓದಿ: WhatsApp ಬಂಪರ್ ಧಮಾಕಾ! ಈ ವೈಶಿಷ್ಟ್ಯ ಬಳಸುವವರಿಗೆ ಸಿಗಲಿದೆ ಹಣ, ಲಾಭ ಗಳಿಸುವುದು ಹೇಗೆ?


ಇತ್ತೀಚೆಗೆ Realme GT Neo 3 ಬಿಡುಗಡೆ ಮಾಡಿದೆ


Realme ಕೆಲವೇ ದಿನಗಳ ಹಿಂದೆ Realme GT Neo 3 ಫೋನ್ ಬಿಡುಗಡೆ ಮಾಡಿದೆ. Realme GT Neo 3ನಲ್ಲಿ ನಿಮಗೆ 6.7 ಇಂಚಿನ 2K ಡಿಸ್ಪ್ಲೇ, HDR10 + ಮತ್ತು DC ಡಿಮ್ಮಿಂಗ್ ಬೆಂಬಲ ಮತ್ತು 120Hz ನ ರಿಫ್ರೆಶ್ ರೇಟ್‍ಅನ್ನು ನೀಡಲಾಗುತ್ತಿದೆ. ಇತರ ವೈಶಿಷ್ಟ್ಯಗಳ ಹೊರತಾಗಿ ಈ ಫೋನ್ ಅಲ್ಟ್ರಾ ಡಾರ್ಟ್ ಚಾರ್ಜ್‌ನಿಂದಾಗಿ ಚರ್ಚೆಯಲ್ಲಿದೆ. ಈ ಫೋನ್ ಕೇವಲ 5 ನಿಮಿಷಗಳಲ್ಲಿ ಶೇ.50ರವರೆಗೆ ಚಾರ್ಜ್ ಆಗುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.