ಪೋರ್ಟಬಲ್ ಟೇಬಲ್ ಫ್ಯಾನ್:  ಬದಲಾಗುತ್ತಿರುವ ಜಗತ್ತಿನಲ್ಲಿ ದಿನೇ ದಿನೇ ತಾಪಮಾನ ಏರಿಕೆ ಆಗುತ್ತಲೇ ಇದೆ. ಇದರಿಂದಾಗಿ ಶಾಖವೂ ಹೆಚ್ಚಾಗುತ್ತಿದೆ. ಈ ಕಾರಣದಿಂದಾಗಿ ಫ್ಯಾನ್, ಕೂಲರ್, ಎಸಿ ಇಲ್ಲದೆ ಹೇಗಿರುವುದು ಎಂಬಂತಾಗಿದೆ ಜೀವನ.  ಈ ಎಲ್ಲಾ ಸಾಧನಗಳಿದ್ದರೂ ಕರೆಂಟ್ ಇಲ್ಲದಿದ್ದಾಗ ಎಲ್ಲವೂ ವ್ಯರ್ಥ. ಆದರೆ, ಈ ಬಗ್ಗೆ ಚಿಂತಿಸಬೇಕಿಲ್ಲ, ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಹಲವು ವೈವಿದ್ಯಮಯ ಪೋರ್ಟಬಲ್ ಟೇಬಲ್ ಫ್ಯಾನ್‌ಗಳು ಲಭ್ಯವಿದೆ. ಇವುಗಳ ಬಹಳ ಮುಖ್ಯವಾದ ವೈಶಿಷ್ಟ್ಯವೆಂದರೆ ಕರೆಂಟ್ ಇಲ್ಲದಿದ್ದರೂ ಗಂಟೆಗಟ್ಟಲೆ ಕಾರ್ಯನಿರ್ವಹಿಸುವ ಸಾಮರ್ಥ್ಯ ಹೊಂದಿವೆ. ಮಾತ್ರವಲ್ಲ, ಇವುಗಳನ್ನು ಸುಲಭವಾಗಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಾಗಿಸಬಹುದು.


COMMERCIAL BREAK
SCROLL TO CONTINUE READING

ಈ ಲೇಖನದಲ್ಲಿ ಪ್ರಚಂಡ  ಪೋರ್ಟಬಲ್ ಫ್ಯಾನ್‌ಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ. ಇದು ವಿದ್ಯುತ್ ಇಲ್ಲದೆ ಇದ್ದಾಗಲೂ ಸುಮಾರು 15 ಗಂಟೆಗಳ ಕಾಲ ತಂಪಾದ ಹವಾ ನೀಡುತ್ತಂತೆ. ಅದೇ, ಸ್ಮಾರ್ಟ್‌ಡೆವಿಲ್ ಪೋರ್ಟಬಲ್ ಟೇಬಲ್ ಫ್ಯಾನ್.


ಬಲವಾದ ಕೂಲಿಂಗ್ ಸಾಮರ್ಥ್ಯ ಹೊಂದಿರುವ ಸ್ಮಾರ್ಟ್‌ಡೆವಿಲ್ ಪೋರ್ಟಬಲ್ ಟೇಬಲ್ ಫ್ಯಾನ್ ವಿನ್ಯಾಸದ ವಿಷಯದಲ್ಲಿಯೂ ಸಖತ್ ಸ್ಟೈಲಿಶ್ ಆಗಿದೆ.  3000mAh ಬ್ಯಾಟರಿ ಸಾಮರ್ಥ್ಯದ ಈ ಟೇಬಲ್ ಫ್ಯಾನ್ ಅನ್ನು ಒಮ್ಮೆ ಫುಲ್ ಚಾರ್ಜ್ ಮಾಡಿದರೆ ಸುಮಾರು 14 ರಿಂದ 15 ಗಂಟೆಗಳ ಕಾಲ ವಿದ್ಯುತ್ ಇಲ್ಲದೆ ಓಡಿಸಬಹುದು ಎಂದು ಕಂಪನಿ ಹೇಳಿಕೊಂಡಿದೆ. 


ಇದನ್ನೂ ಓದಿ- ಅಮೆಜಾನ್‌ನಿಂದ 48ಗಂಟೆಗಳ ವಿಶೇಷ ಸೇಲ್: ಈ ಸ್ಪೆಷಲ್ ಜನರಿಗೆ ಭಾರೀ ರಿಯಾಯಿತಿ


ಸ್ಮಾರ್ಟ್‌ಡೆವಿಲ್ ಪೋರ್ಟಬಲ್ ಟೇಬಲ್ ಫ್ಯಾನ್ ಬೆಲೆ ಬಗ್ಗೆ ಕೂಡ ಚಿಂತಿಸುವ ಅಗತ್ಯವಿಲ್ಲ. ಈ ಆಕರ್ಷಕ ಫ್ಯಾನ್  ಆನ್‌ಲೈನ್ ಮತ್ತು ಆಫ್‌ಲೈನ್ ಎರಡರಲ್ಲೂ ಲಭ್ಯವಿದೆ. ಇದನ್ನು  ಅಮೆಜಾನ್‌ನಲ್ಲಿ 1,999 ರೂ.ಗೆ ಖರೀದಿಸಬಹುದು. 


ಫಿಪ್ಪಿ ಎಂಆರ್-2912 ರೀಚಾರ್ಜ್ ಮಾಡಬಹುದಾದ ಬ್ಯಾಟರಿ ಟೇಬಲ್ ಫ್ಯಾನ್:
ಫಿಪ್ಪಿ ಎಂಆರ್-2912 ರೀಚಾರ್ಜ್ ಮಾಡಬಹುದಾದ ಬ್ಯಾಟರಿ ಟೇಬಲ್ ಫ್ಯಾನ್ ಆಗಿದೆ. ಇದು ಮೂರು ಬ್ಲೇಡ್‌ಗಳೊಂದಿಗೆ ಬರುತ್ತದೆ. ಇದರ ವಿಶೇಷತೆ ಎಂದರೆ ಇದನ್ನು ನೀವು ಗೋಡೆಗೂ ಫಿಕ್ಸ್ ಮಾಡಬಹುದು, ಇಲ್ಲವೇ ಟೇಬಲ್ ಮೇಲೂ ಇರಿಸಬಹುದು. ನಿಮ್ಮ ಅವಶ್ಯಕತೆಗೆ ತಕ್ಕಂತೆ ಮನೆಯ ಯಾವುದೇ ಮೂಲೆಯಲ್ಲಿ ಇದನ್ನು ಬಳಸಬಹುದು. ಈ ರಿಚಾರ್ಜ್ ಮಾಡಬಹುದಾದ ಫ್ಯಾನ್ ಯುಎಸ್‌ಬಿ ಮತ್ತು ಎಸಿ ಡಿಸಿ ಮೋಡ್‌ಗಳನ್ನು ಹೊಂದಿದೆ. ಪೂರ್ಣ ಚಾರ್ಜ್‌ನಲ್ಲಿ, ಇದು ಪೂರ್ಣವಾಗಿ 3.5 ಗಂಟೆಗಳವರೆಗೆ, ಮಧ್ಯಮದಲ್ಲಿ 5.5 ಗಂಟೆಗಳವರೆಗೆ ಮತ್ತು ಲೋ ಸ್ಪೀಡ್ ನಲ್ಲಿ ಸುಮಾರು 9 ಗಂಟೆಗಳವರೆಗೆ ಕಾರ್ಯನಿರ್ವಹಿಸುತ್ತದೆ ಎನ್ನಲಾಗಿದೆ. ಇದನ್ನು ಅಮೆಜಾನ್‌ನಿಂದ 3,299 ರೂ.ಗೆ ಖರೀದಿಸಬಹುದು. 


ಇದನ್ನೂ ಓದಿ- ವಾಟ್ಸಾಪ್‌ನಲ್ಲಿ ಬರಲಿದೆ ಅದ್ಭುತ ಫೀಚರ್


ಬಜಾಜ್ ಪಿಗ್ಮಿ ಮಿನಿ 110 ಎಂಎಂ ಫ್ಯಾನ್:-
ಬಜಾಜ್ ಅತ್ಯುತ್ತಮವಾಗಿ ವಿನ್ಯಾಸಗೊಳಿಸಿದ ಚಾರ್ಜ್ ಮಾಡಬಹುದಾದ ಮಿನಿ ಫ್ಯಾನ್ ಅನ್ನು ಬಿಡುಗಡೆ ಮಾಡಿದೆ. ಇದು ಪೂರ್ಣ ಚಾರ್ಜ್‌ನಲ್ಲಿ 4 ಗಂಟೆಗಳ ಕಾಲ ತಡೆರಹಿತವಾಗಿ ಚಲಿಸುವ ಸಾಮರ್ಥ್ಯ ಹೊಂದಿದೆ ಎಂದು ಕಂಪನಿ ಹೇಳಿಕೊಂಡಿದೆ. ಈ ಫ್ಯಾನ್ ಅನ್ನು ಯುಎಸ್‌ಬಿ  ಮೂಲಕ ಚಾರ್ಜ್ ಮಾಡಲಾಗುತ್ತದೆ, ಇದು Li-Ion ಬ್ಯಾಟರಿಯನ್ನು ಹೊಂದಿದೆ. ಫ್ಯಾನ್‌ನಲ್ಲಿ ಕ್ಲಿಪ್ ಇದೆ, ಆದ್ದರಿಂದ ಅದನ್ನು ಎಲ್ಲಿ ಬೇಕಾದರೂ ಅಳವಡಿಸಬಹುದು. ವಾಸ್ತವವಾಗಿ, ಇದರ ಬಿಡುಗಡೆಯ ಬೆಲೆ  1,395ರೂ. ಆಗಿದೆ. ಆದರೆ ಅಮೆಜಾನ್‌ನಲ್ಲಿ ಇದನ್ನು 1,129 ರೂ.ಗಳಿಗೆ ಮಾರಾಟ ಮಾಡಲಾಗುತ್ತಿದೆ. ಇದಲ್ಲದೆ, ಇನ್ನೊಂದು ಇ-ಕಾಮರ್ಸ್ ಕಂಪನಿಯಾದ  ಫ್ಲಿಪ್‌ಕಾರ್ಟ್‌ನಿಂದಲೂ ಇದನ್ನು ಖರೀದಿಸಬಹುದಾಗಿದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.