ನವದೆಹಲಿ: ಚೀನಾದ ಖ್ಯಾತ ಸ್ಮಾರ್ಟ್‌ಫೋನ್ ತಯಾರಕ ರೆಡ್‌ಮಿ ಭಾರತದಲ್ಲಿ ರೆಡ್‌ಮಿ ನೋಟ್ 11(Redmi Note 11)ಅನ್ನು ರೆಡ್‌ಮಿ ನೋಟ್ 11ಟಿ 5ಜಿ(Redmi Note 11T 5G)ಎಂಬ ಹೆಸರಿನಲ್ಲಿ ಬಿಡುಗಡೆ ಮಾಡಲಿದೆ ಎಂದು ವರದಿಯಾಗಿದೆ. ಇದೇ ನವೆಂಬರ್ 30 ರಂದು Redmi ಈ ಸುಂದರವಾದ 5G ಸ್ಮಾರ್ಟ್‌ಫೋನ್ ಭಾರತೀಯ ಮಾರುಕಟ್ಟೆಯಲ್ಲಿ ರಿಲೀಸ್ ಮಾಡುವ ಸಾಧ್ಯತೆ ಇದೆ ಎಂದು ವಿಶ್ವಾಸಾರ್ಹ ಮೂಲವೊಂದು ಬಹಿರಂಗಪಡಿಸಿದೆ. ಸದ್ಯಕ್ಕೆ ಈ ಬಗ್ಗೆ ಕಂಪನಿಯಿಂದ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ. ಆದರೆ ಈ ಫೋನ್‌ನ ವೈಶಿಷ್ಟ್ಯಗಳು ಸೋಷಿಯಲ್ ಮೀಡಿಯಾದಲ್ಲಿ ಈಗಾಗಲೇ ಲೀಕ್ ಆಗಿವೆ.   


COMMERCIAL BREAK
SCROLL TO CONTINUE READING

Redmi Note 11T 5G ಅದ್ಭುತ ವೈಶಿಷ್ಟ್ಯಗಳು


Redmi Note 11T 5G HD ಸ್ಮಾರ್ಟ್‌ಫೋನ್ Redmi Note 11ಗೆ ಹೋಲುತ್ತದೆ ಎಂದು ಹೇಳಲಾಗುತ್ತಿದೆ. MediaTek ಡೈಮೆನ್ಸಿಟಿ 810 ಚಿಪ್‌ಸೆಟ್‌ನಿಂದ ಕಾರ್ಯನಿರ್ವಹಿಸಲ್ಪಡುವ ಈ ಸ್ಮಾರ್ಟ್‌ಫೋನ್ 6.6-ಇಂಚಿನ FHD+ ಪ್ಯಾನೆಲ್, 2,400 x 1,080 ಪಿಕ್ಸೆಲ್‌ಗಳ ರೆಸಲ್ಯೂಶನ್, 90Hz ನ ರಿಫ್ರೆಶ್ ರೇಟ್ ಮತ್ತು 240Hz ಟಚ್ ಸ್ಯಾಂಪ್ಲಿಂಗ್ ರೇಟ್ ನೊಂದಿಗೆ ಬರುತ್ತದೆ. ನೀವು ಈ ಸ್ಮಾರ್ಟ್‌ಫೋನ್ ಅನ್ನು 3 ಬಣ್ಣಗಳಲ್ಲಿ ಖರೀದಿಸಬಹುದು. ಇದು ಮ್ಯಾಟ್ ಬ್ಲಾಕ್, ಸ್ಟಾರ್ಡಸ್ಟ್ ವೈಟ್ ಮತ್ತು ಅಕ್ವಾಮರೀನ್ ಬ್ಲೂ ಕಲರ್ ಗಳಲ್ಲಿ ಲಭ್ಯವಿರಲಿದೆ.


ಇದನ್ನೂ ಓದಿ: Reels ಪೋಸ್ಟ್ ಮಾಡಿ, 7.4 ಲಕ್ಷ ರೂ. ಬೋನಸ್ ಗೆಲ್ಲಿರಿ


ಹೊಸ ಸ್ಮಾರ್ಟ್‌ಫೋನ್ ಕ್ಯಾಮೆರಾ ಮತ್ತು ಬ್ಯಾಟರಿ


Redmiಯ ಈ ಇತ್ತೀಚಿನ 5G ಸ್ಮಾರ್ಟ್‌ಫೋನ್ f/1.8 ಅಪರ್ಚರ್ ಮತ್ತು 8MP ಅಲ್ಟ್ರಾ-ವೈಡ್ ಕ್ಯಾಮೆರಾದೊಂದಿಗೆ 50MP ಮುಖ್ಯ ಕ್ಯಾಮೆರಾ ಸೆನ್ಸಾರ್ ನೊಂದಿಗೆ ಬರುತ್ತದೆ. ವಿಡಿಯೋ ಮತ್ತು ಸೆಲ್ಫಿಗಳನ್ನು ತೆಗೆದುಕೊಳ್ಳಲು ನಿಮಗೆ 16MP ಮುಂಭಾಗದ ಕ್ಯಾಮೆರಾ ಸೆನ್ಸಾರ್ ನೀಡಲಾಗಿದೆ. ಮಾಹಿತಿ ಸೋರಿಕೆಯಾಗಿರುವ ಪ್ರಕಾರ, ಈ ಸ್ಮಾರ್ಟ್‌ಫೋನ್ 5,000mAh ಬ್ಯಾಟರಿ ಮತ್ತು 33W ಚಾರ್ಜಿಂಗ್ ಬೆಂಬಲದೊಂದಿಗೆ ಬರುತ್ತದೆ ಎಂದು ಹೇಳಲಾಗಿದೆ.  


ಸ್ಮಾರ್ಟ್‌ಫೋನ್‌ನ ಸ್ಟೋರೇಜ್ ಸಾಮರ್ಥ್ಯ


Redmi Note 11T 5Gಯ ಸ್ಮಾರ್ಟ್‌ಫೋನ್‌ನ ​​ಸ್ಟೋರೇಜ್ ಸಾಮರ್ಥ್ಯವು ಕೂಡ ಉತ್ತಮವಾಗಿದೆ. ಈ ಫೋನ್ ನಿಮಗೆ 6GB RAM ಮತ್ತು 64GB, 6GB RAM ಮತ್ತು 128GB ಹಾಗೂ  8GB RAM ಮತ್ತು 128GB ಸ್ಟೋರೇಜ್ ಸಾಮರ್ಥ್ಯದೊಂದಿಗೆ ಲಭ್ಯವಾಗಲಿದೆ. ಈ ಸ್ಮಾರ್ಟ್‌ಫೋನ್ ಕುರಿತು ಕಂಪನಿಯಿಂದ ಇನ್ನೂ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಲಾಗಿಲ್ಲ. ಹೀಗಾಗಿ ಇದರ ನಿಖರ ಬೆಲೆ ಎಷ್ಟಿರುತ್ತದೆ ಎಂಬುದರ ಮಾಹಿತಿ ಲಭ್ಯವಾಗಿಲ್ಲ.


ಇದನ್ನೂ ಓದಿ: BSNL ಗ್ರಾಹಕರಿಗೆ ಸಿಹಿ ಸುದ್ದಿ : ₹36 ಗೆ ಸಿಗಲಿದೆ ಡೇಟಾ ಮತ್ತು ಹಲವು ಪ್ರಯೋಜನಗಳು! 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.