ಕೇವಲ 11 ರೂಪಾಯಿಗೆ ಸಿಗಲಿದೆ 1 GB data, ಇಲ್ಲಿದೆ Jio ಅಗ್ಗದ ರಿಚಾರ್ಜ್ ಆಫರ್
ರಿಲಯನ್ಸ್ ಜಿಯೋ ಅನೇಕ ಡೇಟಾ ವೋಚರ್‌ಗಳನ್ನು ಬಿಡುಗಡೆ ಮಾಡಿದೆ. ನಿಮ್ಮ ಡೇಟಾ ಮುಗಿದಿದ್ದರೆ, ನೀವು ಈ ಅಗ್ಗದ ರೀಚಾರ್ಜ್ ಮಾಡಬಹುದು.
ನವದೆಹಲಿ : ರಿಲಯನ್ಸ್ ಜಿಯೋ (Reliance Jio) ವಿಭಿನ್ನ ವ್ಯಾಲಿಡಿಟಿಯೊಂದಿಗೆ ಅನೇಕ ಹೊಸ ಪ್ಲಾನ್ ಗಳನ್ನೂ ಪ್ರಾರಂಭಿಸಿದೆ. ಇದರಲ್ಲಿ ದಿನಕ್ಕೆ 1 GBಯಿಂದ 3 GBವರೆಗಿನ ಪ್ಲಾನ್ ಕೂಡಾ ಸೇರಿದೆ. ಇನ್ನುಕೆಲವು ಪ್ಲಾನ್ ಗಳಲ್ಲಿ ದೈನಂದಿನ ಡೇಟಾ ಮಿತಿ ನೀಡಿಲ್ಲ. ಇಂದು ನಾವು ಜಿಯೋನ ಅಗ್ಗದ ಮತ್ತು ಉತ್ತಮ ಪ್ಲಾನ್ ಗಳ ಬಗ್ಗೆ ಹೇಳಲಿದ್ದೇವೆ. ಇದರಲ್ಲಿ ಅತ್ಯಂತ ಕಡಿಮೆ ಹಣಕ್ಕೆ ಒಂದು ಜಿಬಿ ಡೇಟಾವನ್ನು ಪಡೆಯಬಹುದು. ಇದರ ಇನ್ನೊಂಡು ವಿಶೇಷವೆಂದರೆ ಈ ವೋಚರ್ ಗೆ ಯಾವುದೇ ವ್ಯಾಲಿಡಿಟಿ ಇಲ್ಲ.
11 ರೂ.ಗೆ ಸಿಗಲಿದೆ 4G ಡೇಟಾ :
ರಿಲಯನ್ಸ್ ಜಿಯೋ (Reliance jio) ಅನೇಕ ಡೇಟಾ ವೋಚರ್‌ಗಳನ್ನು ಬಿಡುಗಡೆ ಮಾಡಿದೆ. ನಿಮ್ಮ ಡೇಟಾ ಮುಗಿದಿದ್ದರೆ, ನೀವು ಈ ಅಗ್ಗದ ರೀಚಾರ್ಜ್ (Jio Recharge plan) ಮಾಡಬಹುದು. ಈ ಪ್ಲಾನ್ ನಲ್ಲಿ ದೈನಂದಿನ ಮಿತಿಯಿರುವುದಿಲ್ಲ. ನಿಮ್ಮ ಆಕ್ಟಿವ್ ಪ್ಲಾನ್ ಸಿಂಧುತ್ವ ಇರುವವರೆಗೆ ಈ ವೋಚರ್ ಕಾರ್ಯನಿರ್ವಹಿಸುತ್ತದೆ.
ಇದನ್ನೂ ಓದಿ : Samsung Galaxy F22: 6000mah ಬ್ಯಾಟರಿ ಸಾಮರ್ಥ್ಯದ ಸ್ಯಾಮ್‌ಸಂಗ್‌ನ ಈ ಸ್ಮಾರ್ಟ್‌ಫೋನ್ ಬೆಲೆ, ವೈಶಿಷ್ಟ್ಯ ತಿಳಿಯಿರಿ
11 ರೂ ರೀಚಾರ್ಜ್‌ನಲ್ಲಿ 1 ಜಿಬಿ ಡೇಟಾವನ್ನು ಸಿಗಲಿದೆ. ಡೇಟಾವನ್ನು ಹೊರತುಪಡಿಸಿ, ಈ ಯೋಜನೆಯಲ್ಲಿ ಬೇರೆ ಯಾವ ಸೌಲಭ್ಯವೂ ದೊರೆಯುವುದಿಲ್ಲ. ಇದಕ್ಕೆ ಯಾವುದೇ ವ್ಯಾಲಿಡಿಟಿ ಕೂಡಾ ಇರುವುದಿಲ್ಲ. ಇದರ ಸಿಂಧುತ್ವವು ಆಕ್ಟಿವ್ ಪ್ಲಾನ್ (Jio Active plan) ಅನ್ನು ಅವಲಂಬಿಸಿರುತ್ತದೆ. ನೀವು ಒಂದು ವರ್ಷದ ಮಾನ್ಯತೆಯನ್ನು ಹೊಂದಿರುವ ಪ್ಲಾನ್ ಅನ್ನು ಹಾಕಿಸಿಕೊಂಡಿದ್ದರೆ, ಇದು ಒಂದು ವರ್ಷದವರೆಗೆ ಸಕ್ರಿಯವಾಗಿರುತ್ತದೆ.
21, 51 ಮತ್ತು 101 ರೂಗಳ ವೋಚರ್ :
11 ರೂಗಳಲ್ಲದೆ, ಜಿಯೋ 21, 51 ಮತ್ತು 101 ರೂಗಳ ವೋಚರ್ ಗಳನ್ನೂ ಸಹಾ ತಂದಿದೆ. 21 ರೂ ರಿಚಾರ್ಜ್ (recharge) ಮಾಡಿಸಿದರೆ 2 ಜಿಬಿ ಡೇಟಾ ಸಿಗಲಿದೆ. 51 ರೂಗಳ ವೋಚರ್ ನಲ್ಲಿ 6 ಜಿಬಿ ಡೇಟಾ ಮತ್ತು 101 ರೂಗೆ 12 ಜಿಬಿ ಡೇಟಾ ಲಭ್ಯವಿರುತ್ತದೆ.
ಇದನ್ನೂ ಓದಿ : Zomato IPO opens today : ಇಂದಿನಿಂದ ಜೊಮ್ಯಾಟೋ IPO ಆರಂಭ : ಚಂದಾದಾರರಾಗುವ ಮೊದಲು ತಿಳಿದಿರಲಿ ಈ 5 ಪ್ರಮುಖ ಅಂಶಗಳು!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ