Cheapest Recharge Plan: ಜಿಯೋ ಫೈಬರ್‌ನ ಹಲವು ರೀಚಾರ್ಜ್ ಯೋಜನೆಗಳು ನಿಮಗೆ ಸಾಕಷ್ಟು ಇಷ್ಟವಾಗಬಹುದು ಮತ್ತು ನೀವು ನಿಮ್ಮ ಅಗತ್ಯಕ್ಕೆ ತಕ್ಕಂತೆ ಹಾಗೂ ಬಜೆಟ್‌ಗೆ ಅನುಗುಣವಾಗಿ ಅವುಗಳನ್ನು  ಬಳಸಬಹುದು. ಕಡಿಮೆ ಬಜೆಟ್ ಶ್ರೇಣಿಯ ಹೊರತಾಗಿಯೂ, ಜನರಿಗೆ ಹಲವಾರು ಆಯ್ಕೆಗಳು ಈ ಯೋಜನೆಗಳಲ್ಲಿ ಸಿಗುತ್ತವೆ. ಈ ಸರಣಿಯಲ್ಲಿ ಇಂದು ನಾವು ನಿಮಗಾಗಿ ಒಂದು ಪವರ್ಫುಲ್ ರೀಚಾರ್ಜ್ ಯೋಜನೆಯನ್ನು ತಂದಿದ್ದೇವೆ. ಈ ರೀಚಾರ್ಜ್ ಯೋಜನೆಯಲ್ಲಿನ ಪ್ರಯೋಜನಗಳು ಸಾಕಷ್ಟಿವೆ ಮತ್ತು  ಅವುಗಳ ವೆಚ್ಚವು ಕೂಡ ತುಂಬಾ ಕಡಿಮೆಯಾಗಿದೆ, ಈ ರೀಚಾರ್ಜ್ ಯೋಜನೆ ನಿಮಗೂ ಇಷ್ಟವಾಗಲಿದ್ದು, ಇದು ನಿಮ್ಮ ಜೇಬಿನ ಮೇಲೆ ಹೆಚ್ಚುವರಿ ಹೊರೆಯನ್ನು ಹಾಕುವುದಿಲ್ಲ.  ಹಾಗಾದರೆ ಈ ರೀಚಾರ್ಜ್ ಪ್ಲಾನ್ ಯಾವುದು ಮತ್ತು ಅದರ ವಿಶೇಷತೆ ಏನು ಎಂಬುದನ್ನು ತಿಳಿದುಕೊಳ್ಳೋಣ,


COMMERCIAL BREAK
SCROLL TO CONTINUE READING

ಇದನ್ನೂ ಓದಿ-Jabardast Recharge Plan: ಟೆಲಿಕಾಂ ಮಾರುಕಟ್ಟೆಯಲ್ಲಿ ಭಾರಿ ಧೂಳೆಬ್ಬಿಸಿದೆ ಜಿಯೋ ಕಂಪನಿಯ ಈ ರೀಚಾರ್ಚ್ ಯೋಜನೆ!


ಈ ರೀಚಾರ್ಜ್ ಯೋಜನೆಯಲ್ಲಿ, ಬಳಕೆದಾರರು ಸಾಕಷ್ಟು ಪ್ರಯೋಜನಗಳನ್ನು ಪಡೆಯುತ್ತಾರೆ, ಮೊದಲನೆಯದಾಗಿ ಈ ಯೋಜನೆಯ ಮಾನ್ಯತೆ ಕುರಿತು ಹೇಳುವುದಾದರೆ, ಈ ರೀಚಾರ್ಜ್ ಯೋಜನೆಯಲ್ಲಿ ಗ್ರಾಹಕರಿಗೆ 30 ದಿನಗಳ ಮಾನ್ಯತೆಯನ್ನು ನೀಡಲಾಗುತ್ತದೆ. ಈ ಮಾನ್ಯತೆಯಿಂದಾಗಿ, ನೀವು ಇಡೀ ತಿಂಗಳು ಇಂಟರ್ನೆಟ್ ಅನ್ನು ಸುಲಭವಾಗಿ ಬಳಸಬಹುದು. ರೀಚಾರ್ಜ್ ಯೋಜನೆಯಲ್ಲಿ ನೀವು 30 Mbps ಇಂಟರ್ನೆಟ್ ವೇಗವನ್ನು ಪಡೆಯುತ್ತೀರಿ, ಇದು ಅಪ್‌ಲೋಡ್ ಮಾಡಲು 30 Mbps ಮತ್ತು ಡೌನ್‌ಲೋಡ್ ಮಾಡಲು 30 Mbps ಆಗಿರುತ್ತದೆ. ಈ ಯೋಜನೆಯಲ್ಲಿ, ಗ್ರಾಹಕರು ಅನಿಯಮಿತ ಇಂಟರ್ನೆಟ್ ಅನ್ನು ಪಡೆಯುತ್ತಾರೆ, ಇಂತಹ ಪರಿಸ್ಥಿತಿಯಲ್ಲಿ, ನೀವು ಅಡಚಣೆಯಿಲ್ಲದೆ ಇಂಟರ್ನೆಟ್ ಅನ್ನು ಬಳಸುವ ಆನಂದವನ್ನು ಪಡೆಯುವಿರಿ. ಈ ರೀಚಾರ್ಜ್ ಯೋಜನೆಯಲ್ಲಿ, ಉಚಿತ ಅನಿಯಮಿತ ಧ್ವನಿ ಕರೆ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ನೀವು ಕಾಣಬಹುದು. ಅನಿಯಮಿತ ಧ್ವನಿ ಕರೆಯಿಂದಾಗಿ, ಬಳಕೆದಾರರಿಗೆ ದೇಶದಲ್ಲಿ ಎಲ್ಲಿ ಬೇಕಾದರೂ ಉಚಿತವಾಗಿ ಎಷ್ಟು ಬೇಕಾದರೂ ಮಾತನಾಡಬಹುದು.


ಇದನ್ನೂ ಓದಿ-Indian Railways Update:ದೇಶದ ಕೋಟ್ಯಾಂತರ ರೈಲು ಯಾತ್ರಿಗಳಿಗೊಂದು ಭಾರಿ ಸಂತಸದ ಸುದ್ದಿ!


ಸೌಲಭ್ಯಗಳು ಇಲ್ಲಿಗೆ ಸೀಮಿತವಾಗುವುದಿಲ್ಲ
ಈ ರೀಚಾರ್ಜ್ ಯೋಜನೆಯಲ್ಲಿ, ಬಳಕೆದಾರರ ಮನರಂಜನೆಯ ಕಾಳಜಿಯನ್ನು ಕೂಡ ವಹಿಸಲಾಗಿದೆ, ಏಕೆಂದರೆ ಈ ಪ್ರಯೋಜನಗಳ ಹೊರತಾಗಿ, ಕಂಪನಿಯು ಒಂದು ಹೆಜ್ಜೆ ಮುಂದೆ ಹೋಗಿದೆ ಮತ್ತು ಹೆಚ್ಚುವರಿ ಪ್ರಯೋಜನಗಳನ್ನು ತನ್ನ ಗ್ರಾಹಕರಿಗೆ ನೀಡಿದೆ. ಈ ರೀಚಾರ್ಜ್ ಪ್ಲಾನ್‌ನಲ್ಲಿ, ಗ್ರಾಹಕರು ಉಚಿತ OTT ಅಪ್ಲಿಕೇಶನ್‌ಗಳ ಚಂದಾದಾರಿಕೆಯನ್ನು ಪಡೆಯುತ್ತಾರೆ, ಅದು ಒಂದಲ್ಲ ಎರಡಲ್ಲ, ಒಟ್ಟು 6  ಒಟಿಟಿ ಪ್ಲಿಕೇಶನ್‌ಗಳ ಉಚಿತ ಚಂದಾದಾರಿಕೆಯನ್ನು ನೀವು ಇದರಲ್ಲಿ ಪಡೆಯುವಿರಿ. ಅಂದರೆ ನೀವು ಈ ಆಪ್ ಗಳಿಗೆ ಪ್ರತ್ಯೇಕವಾಗಿ ಯಾವುದೇ  ರೀತಿಯ ಶುಲ್ಕವನ್ನು ಪಾವತಿಸಬೇಕಾಗಿಲ್ಲ. 


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.