ರಿಲಯನ್ಸ್ ಜಿಯೋ ಬಳಕೆದಾರರಿಗೆ ಗುಡ್ ನ್ಯೂಸ್: ಕೈಗೆಟುಕುವ ಬೆಲೆಯಲ್ಲಿ 2 ರಿಚಾರ್ಜ್ ಪ್ಲಾನ್ ಘೋಷಣೆ
Jio Recharge Plan: ಭಾರತದ ಅತಿದೊಡ್ಡ ಟೆಲಿಕಾಂ ನೆಟ್ವರ್ಕ್ ರಿಲಯನ್ಸ್ ಜಿಯೋ ತನ್ನ ಬಳಕೆದಾರರಿಗಾಗಿ ಎರಡು ಅತ್ಯುತ್ತಮ ಕೈಗೆಟುಕುವ ಬೆಲೆಯ ಹೊಸ ಪ್ರಿಪೇಯ್ಡ್ ಮೊಬೈಲ್ ರೀಚಾರ್ಜ್ ಯೋಜನೆಗಳನ್ನು ಪರಿಚಯಿಸಿದೆ.
Affordable Jio Plans: ಏರ್ಟೆಲ್, ವೋಡಾಫೋನ್-ಐಡಿಯಾ ಟೆಲಿಕಾಂ ಕಂಪನಿಗಳಿಗೆ ಟಕ್ಕರ್ ನೀಡಿರುವ ಭಾರತದ ಅತಿದೊಡ್ಡ ಟೆಲಿಕಾಂ ನೆಟ್ವರ್ಕ್ ರಿಲಯನ್ಸ್ ಜಿಯೋ (Reliance Jio) ತನ್ನ ಬಳಕೆದಾರರಿಗಾಗಿ ಎರಡು ಕೈಗೆಟುಕುವ ಬೆಲೆಯ ಪ್ರಿಪೇಯ್ಡ್ ರೀಚಾರ್ಜ್ ಯೋಜನೆಗಳನ್ನು (Prepaid Recharge Plans) ಘೋಷಿಸಿದೆ. ಗಮನಾರ್ಹವಾಗಿ ಈ ರಿಚಾರ್ಜ್ ಯೋಜನೆಗಳ ಬೆಲೆ 200 ರೂ.ಗಿಂತಲೂ ಕಡಿಮೆ.
ಎದುರಾಳಿ ಟೆಲಿಕಾಂ ಕಂಪನಿಗಳಿಗೆ ಪ್ರಬಲ ಸ್ಪರ್ಧೆ ನೀಡಲು ಯೋಜಿಸಿರುವ ಮುಖೇಶ್ ಅಂಬಾನಿಯವರ (Mukesh Ambani) ರಿಲಯನ್ಸ್ ಜಿಯೋ ಜಬರ್ದಸ್ತ್ ಆಗಿರುವ ಕಡಿಮೆ ಬೆಲೆಯ ಎರಡು ಪ್ರಿಪೇಯ್ಡ್ ಯೋಜನೆಗಳನ್ನು (Prepaid Plans) ಬಿಡುಗಡೆ ಮಾಡಿದೆ. ಇವುಗಳ ಬೆಲೆ ಕೇವಲ 198 ರೂ. ಮತ್ತು 199 ರೂಪಾಯಿಗಳು. ಈ ಎರಡೂ ರಿಚಾರ್ಜ್ ಯೋಜನೆಗಳಲ್ಲಿ ಅನ್ಲಿಮಿಟೆಡ್ ಕಾಲ್ ಜೊತೆಗೆ ಹಲವು ಆಫರ್‌ಗಳನ್ನು ಕೂಡ ನೀಡಲಾಗಿದೆ.
ಇದನ್ನೂ ಓದಿ- ವಾಟ್ಸಾಪ್‌ನಲ್ಲೂ ಬಂತು ಇನ್‌ಸ್ಟಾಗ್ರಾಮ್‌ನಂತ ಫೀಚರ್!
ರಿಲಯನ್ಸ್ ಜಿಯೋ 198 ರೂ. ಪ್ಲಾನ್ (Reliance Jio 198 Rs. Plan):
ರಿಲಯನ್ಸ್ ಜಿಯೋದ 198ರೂ. ರಿಚಾರ್ಜ್ ಪ್ಲಾನ್ (Reliance Jio 198 Rs. Plan), 14ದಿನಗಳ ವ್ಯಾಲಿಡಿಟಿಯೊಂದಿಗೆ ಬರುತ್ತದೆ. ಈ ಯೋಜನೆಯಲ್ಲಿ ಗ್ರಾಹಕರಿಗೆ ಅನ್ಲಿಮಿಟೆಡ್ ಕರೆ ಜೊತೆಗೆ ನಿತ್ಯ 2ಜಿಬಿ 5G ಡೇಟಾ ಮತ್ತು ಉಚಿತ ಎಸ್‌ಎಮ್‌ಎಸ್ ಸೌಲಭ್ಯವೂ ಸಹ ಸಿಗುತ್ತದೆ. ಇದಲ್ಲದೆ, ಜಿಯೋ ಆಪ್ ಮೂಲಕ ಹಲವು ಚಾನೆಲ್ಗಳಿಗೂ ಉಚಿತ ಪ್ರವೇಶ ಲಭ್ಯವಾಗಲಿದೆ.
ರಿಲಯನ್ಸ್ ಜಿಯೋ 199 ರೂ. ಪ್ಲಾನ್ (Reliance Jio 199 Rs. Plan):
ನೀವು ಹೆಚ್ಚಿನ ವ್ಯಾಲಿಡಿಟಿ ಬಯಸಿದರೆ 199 ರೂ. ರಿಚಾರ್ಜ್ ಪ್ಲಾನ್ (Reliance Jio 199 Rs. Plan) ನಿಮಗೆ ಪ್ರಯೋಜನಕಾರಿ ಆಗಿದೆ. ಈ ಯೋಜನೆಯು 18 ದಿನಗಳ ವ್ಯಾಲಿಡಿಟಿಯೊಂದಿಗೆ ಬರುತ್ತದೆ. ಇದರಲ್ಲಿ ಗ್ರಾಹಕರಿಗೆ ಪ್ರತಿದಿನ ಅನಿಯಮಿತ ಕರೆಗಳ ಜೊತೆಗೆ 1.5ಜಿಬಿ 5G ಡೇಟಾ ಹಾಗೂ ನಿತ್ಯ 100 ಉಚಿತ ಎಸ್‌ಎಮ್‌ಎಸ್ ಸಿಗುತ್ತದೆ. ಇದು JioTV, JioCinema ಮತ್ತು JioCloud ಅಪ್ಲಿಕೇಶನ್‌ಗಳಿಗೆ ಪ್ರವೇಶವನ್ನು ನೀಡುತ್ತದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.