JioBook launched in India: ಭಾರತೀಯ ಟೆಲಿಕಾಂ ದೈತ್ಯ ರಿಲಯನ್ಸ್ ಜಿಯೋ ಜಿಯೋಬುಕ್ ಎಂಬ ಹೆಸರಿನ ಕೈಗೆಟುಕುವ ಲ್ಯಾಪ್ ಟಾಪ್ ಬಿಡುಗಡೆ ಮಾಡಲಿದೆ ಎಂಬ ವರದಿಗಳು 2021 ರ ಆರಂಭದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿದ್ದವು. ಆದರೆ, ಇದೀಗ ಕಂಪನಿಯು ಸದ್ದಿಲ್ಲದೆ ಲ್ಯಾಪ್‌ಟಾಪ್ ಅನ್ನು ದೇಶದಲ್ಲಿ ಬಿಡುಗಡೆ ಮಾಡಿದೆ. ಜಿಯೋಬುಕ್ ಈಗಾಗಲೇ ಸರ್ಕಾರಿ ಇ-ಮಾರ್ಕೆಟ್‌ಪ್ಲೇಸ್ (GeM) ಮೂಲಕ ಮಾರಾಟದಲ್ಲಿದೆ ಮತ್ತು ದೆಹಲಿಯ ಪ್ರಗತಿ ಮೈದಾನದಲ್ಲಿ ನಡೆಯುತ್ತಿರುವ ಇಂಡಿಯಾ ಮೊಬೈಲ್ ಕಾಂಗ್ರೆಸ್ (IMC 2022) ನಲ್ಲಿ ಸಹ ಪ್ರದರ್ಶನಕ್ಕಿಡಲಾಗಿದೆ. ರಿಲಯನ್ಸ್ ಜಿಯೋಬುಕ್ ಬೆಲೆ ಮತ್ತು ವೈಶಿಷ್ಟ್ಯಗಳೇನು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ,


COMMERCIAL BREAK
SCROLL TO CONTINUE READING

ಈ ಜನರು ಮಾತ್ರ ಖರೀದಿಸಬಹುದು
JioBook ಕಡಿಮೆ ಬಜೆಟ್ ಲ್ಯಾಪ್‌ಟಾಪ್ ಮತ್ತು ವಿಶೇಷವಾಗಿ 20 ಸಾವಿರಕ್ಕಿಂತ ಕಡಿಮೆ ಲ್ಯಾಪ್‌ಟಾಪ್ ಖರೀದಿಸಲು ಬಯಸುವವರಿಗೆ ಮಾತ್ರ ಇದೆ. ಆದರೆ, ಪ್ರಸ್ತುತ,  ಸರ್ಕಾರಿ ಅಧಿಕಾರಿಗಳು ಮಾತ್ರ ಇದೀಗ ಲ್ಯಾಪ್‌ಟಾಪ್ ಖರೀದಿಸಬಹುದು ಎಂಬಂತೆ ತೋರುತಿದ್ದು,  ಶೀಘ್ರದಲ್ಲಿಯೇ ಅದರ ಸಾಮಾನ್ಯ ಲಭ್ಯತೆಯನ್ನು ನಿರೀಕ್ಷಿಸಲಾಗುತ್ತಿದೆ. 


JioBook ವೈಶಿಷ್ಟ್ಯಗಳು
JioBook ಪ್ಲಾಸ್ಟಿಕ್ ಬಾಡಿಯನ್ನು ಹೊಂದಿದೆ ಮತ್ತು ಹಿಂಬದಿಯ ಫಲಕದಲ್ಲಿ Jio ಬ್ರ್ಯಾಂಡಿಂಗ್ ಜೊತೆಗೆ ಕೀಬೋರ್ಡ್‌ನಲ್ಲಿ ವಿಂಡೋಸ್ ಕೀಯನ್ನು ಹೊಂದಿದೆ. ಲ್ಯಾಪ್‌ಟಾಪ್‌ನಲ್ಲಿ ಅಂತರ್ಗತ 4G LTE ಬೆಂಬಲವು ಅನೇಕ ಜನರ ಮುಖ್ಯ ಆಕರ್ಷಣೆಯಾಗಿದೆ. ಸಾಧನವು 1366×768 ರೆಸಲ್ಯೂಶನ್‌ನೊಂದಿಗೆ 11.6-ಇಂಚಿನ TN ಡಿಸ್‌ಪ್ಲೇಯನ್ನು ಫಲಕ ಹೊಂದಿದೆ. ಲ್ಯಾಪ್‌ಟಾಪ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 665 ಚಿಪ್‌ಸೆಟ್‌ನಿಂದ ಚಾಲಿತವಾಗಿದ್ದು ಅದು ಅಡ್ರಿನೊ 610 ಜಿಪಿ ಸೆಟ್ ನೊಂದಿಗೆ ಬರುತ್ತದೆ. ಇದು 2GB LPDDR4X RAM ನೊಂದಿಗೆ ಬರುತ್ತದೆ (ವಿಸ್ತರಿಸಲು ಸಾಧ್ಯವಿಲ್ಲ) ಮತ್ತು ಇದು ಬೋರ್ಡ್‌ನಲ್ಲಿ 32GB ಮೆಮೊರಿಯನ್ನು ಹೊಂದಿದೆ ಎಂದು ಪಟ್ಟಿ ತೋರಿಸುತ್ತದೆ. ಇದರ ಆಪರೇಟಿಂಗ್ ಸಿಸ್ಟಮ್ ಅನ್ನು JioOS ಎಂದು ಪಟ್ಟಿ ಮಾಡಲಾಗಿದೆ.


ಇದನ್ನೂ ಓದಿ-ಒಂಟಿಯಾಗಿರುವಾಗ ಹೆಣ್ಣು ಮಕ್ಕಳು ಗೂಗಲ್ ನಲ್ಲಿ ಈ ವಿಷಯಗಳ ಬಗ್ಗೆ ಹುಡುಕುತ್ತಾರಂತೆ ! ವರದಿಯಲ್ಲಿ ಬಹಿರಂಗವಾದ ಸತ್ಯ

ಜಿಯೋ ಬುಕ್ ವಿಶೇಷತೆಗಳು
ಇದಲ್ಲದೇ, ಡ್ಯುಯಲ್ ಮೈಕ್ರೊಫೋನ್‌ಗಳೊಂದಿಗೆ ಡ್ಯುಯಲ್ ಸ್ಪೀಕರ್ ಸೆಟಪ್ ಮತ್ತು ಹೆಡ್‌ಸೆಟ್‌ಗಾಗಿ ಟು-ಇನ್-ಒನ್ ಕಾಂಬೊ ಪೋಸ್ಟ್ ಇದರಲ್ಲಿದೆ. ಪೋಸ್ಟ್ ಕುರಿತು ಹೇಳುವುದಾದರೆ, ಲ್ಯಾಪ್‌ಟಾಪ್ ಯುಎಸ್‌ಬಿ 2.0 ಪೋರ್ಟ್, ಯುಎಸ್‌ಬಿ 3.0 ಪೋರ್ಟ್ ಮತ್ತು ಎಚ್‌ಡಿಎಂಐ ಪೋರ್ಟ್ ಅನ್ನು ಹೊಂದಿದೆ. ಇದು Wi-Fi 802.11ac, ಬ್ಲೂಟೂತ್ 5.0 ಅನ್ನು ಸಹ ಬೆಂಬಲಿಸುತ್ತದೆ ಮತ್ತು ಮೈಕ್ರೊ SD ಕಾರ್ಡ್ ಸ್ಲಾಟ್ ಅನ್ನು ಕೂಡ ಇದು ಹೊಂದಿದೆ.


ಇದನ್ನೂ ಓದಿ-Android ಬಳಕೆದಾರರ ಮೇಲೆ ಡಬಲ್ ಅಟ್ಯಾಕ್! 'ಜೋಕರ್' ಬಳಿಕ ಇದೀಗ ಆತನ ಗೆಳತಿ 'ಹಾರ್ಲೆ' ದಾಳಿ


ಭಾರತದಲ್ಲಿ ಜಿಯೋ ಬುಕ್ ಬೆಲೆ
JioBook ಲ್ಯಾಪ್‌ಟಾಪ್‌ನ ಬೆಲೆ 19,500 ರೂಪಾಯಿ ಮತ್ತು ಸರ್ಕಾರಿ ಇ-ಮಾರುಕಟ್ಟೆ (GeM) ಮೂಲಕ ಇದನ್ನು ಮಾರಾಟ ಮಾಡಲಾಗುತ್ತಿದೆ. ಪ್ರಸ್ತುತ, ಲ್ಯಾಪ್‌ಟಾಪ್ ಅನ್ನು ಸರ್ಕಾರಿ ಇಲಾಖೆ ನೌಕರರು ಮಾತ್ರ ಖರೀದಿಸಲು ಅವಕಾಶವಿದೆ, ಆದರೂ ಕೂಡ ದೀಪಾವಳಿಯಿಂದ ಇದು ಸಾಮಾನ್ಯ ಗ್ರಾಹಕರನ್ನು ತಲುಪುವ ನಿರೀಕ್ಷೆ ವ್ಯಕ್ತವಾಗಿದೆ. 


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.