Reliance Jio: ಟೆಲಿಕಾಂ ಜಗತ್ತಿನ ಅತ್ಯಂತ ಜನಪ್ರಿಯ ಸಂಸ್ಥೆ ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗಾಗಿ ಮೂರು ಭರ್ಜರಿ ಪ್ರಿಪೇಯ್ಡ್ ಯೋಜನೆಗಳನ್ನು ಪರಿಚಯಿಸಿದೆ. ಈ ಯೋಜನೆಗಳಲ್ಲಿ ಜಿಯೋಟಿವಿ ಪ್ರೀಮಿಯಂ ಚಂದಾದಾರಿಕೆಯ ಜೊತೆಗೆ 14 ಒಟಿಟಿ ಪ್ಲಾಟ್‌ಫಾರ್ಮ್‌ಗಳಿಗೂ ಸಹ ಉಚಿತ ಪ್ರವೇಶ ಲಭ್ಯವಾಗಲಿದೆ.  ಈ ಯೋಜನೆಗಳು ಇಂದಿನಿಂದ (ಡಿಸೆಂಬರ್ 15) ಗ್ರಾಹಕರಿಗೆ ಲಭ್ಯವಾಗಲಿದೆ. 


COMMERCIAL BREAK
SCROLL TO CONTINUE READING

ಯಾವುದಾ ಮೂರು ಹೊಸ ಪ್ರಿಪೇಯ್ಡ್ ಯೋಜನೆಗಳು: 
ರಿಲಯನ್ಸ್ ಜಿಯೋ ಇಂದಿನಿಂದ ಪರಿಚಯಿಸುತ್ತಿರುವ ಮೂರು ಹೊಸ ಪ್ರಿಪೇಯ್ಡ್ ಯೋಜನೆಗಳು ಯಾವುವೆಂದರೆ...
* 398 ರೂ. ಪ್ರಿಪೇಯ್ಡ್ ಯೋಜನೆ
* 1198 ರೂ. ಪ್ರಿಪೇಯ್ಡ್ ಯೋಜನೆ
* 4498 ರೂ. ಪ್ರಿಪೇಯ್ಡ್ ಯೋಜನೆ


JioTV ಪ್ರೀಮಿಯಂ ಬಂಡಲ್ ಪ್ರಿಪೇಯ್ಡ್ ಯೋಜನೆಗಳ ಪ್ರಯೋಜನಗಳು: 
398 ರೂ. ಪ್ರಿಪೇಯ್ಡ್ ಯೋಜನೆ: 
28 ದಿನಗಳವರೆಗೆ ಮಾನ್ಯತೆಯೊಂದಿಗೆ ಲಭ್ಯವಿರುವ ಈ ಯೋಜನೆಯಲ್ಲಿ ದಿನಕ್ಕೆ 2GB ಡೇಟಾ,ಅನಿಯಮಿತ ಕರೆ ಮತ್ತು ದೈನಂದಿನ 100 ಉಚಿತ ಎಸ್ಎಂಎಸ್ ಸೌಲಭ್ಯಗಳು ಲಭ್ಯವಾಗಲಿದೆ. ಇದರೊಂದಿಗೆ ಗ್ರಾಹಕರಿಗೆ JioTV ಪ್ರೀಮಿಯಂ (12 OTT ಗಳು) ಗೆ ಚಂದಾದಾರಿಕೆಯೂ ಲಭ್ಯವಾಗಲಿದೆ. 


ಇದನ್ನೂ ಓದಿ- ಪತಿ ಪತ್ನಿ ಪರಸ್ಪರರ ವಾಟ್ಸಾಪ್ ಮೆಸೇಜ್ ಪರಿಶೀಲಿಸಬಹುದೇ? ಕಾನೂನು ಏನು ಹೇಳುತ್ತೇ?


1198 ರೂ. ಪ್ರಿಪೇಯ್ಡ್ ಯೋಜನೆ: 
1198 ರೂ. ಪ್ರಿಪೇಯ್ಡ್ ಯೋಜನೆಯು 84 ದಿನಗಳವರೆಗೆ ಮಾನ್ಯತೆ ಹೊಂದಿರಲಿದ್ದು, ಇದರಲ್ಲಿ ಗ್ರಾಹಕರು ನಿತ್ಯ 2GB ಡೇಟಾ, ಅನ್ಲಿಮಿಟೆಡ್ ಕರೆ ಸೌಲಭ್ಯ, ನಿತ್ಯ 100 ಉಚಿತ ಎಸ್‌ಎಮ್‌ಎಸ್ ಜೊತೆಗೆ JioTV ಪ್ರೀಮಿಯಂ (14 OTT ಗಳು) ಚಂದಾದಾರಿಗೆ ಪ್ರಯೋಜನವನ್ನು ಆನಂದಿಸಬಹುದು. 


* 4498 ರೂ. ಪ್ರಿಪೇಯ್ಡ್ ಯೋಜನೆ: 
ರಿಲಯನ್ಸ್ ಜಿಯೋದ 4498 ರೂ. ಪ್ರಿಪೇಯ್ಡ್ ಯೋಜನೆಯು ವಾರ್ಷಿಕ ಯೋಜನೆಯಾಗಿದ್ದು, ಇದರ ವ್ಯಾಲಿಡಿಟಿ 365ದಿನಗಳವರೆಗೆ ಇರಲಿದೆ. ಇದರಲ್ಲಿ ಪ್ರತಿನಿತ್ಯ 2ಜಿ‌ಬಿ ಡೇಟಾ, ಅನಿಯಮಿತ ಧ್ವನಿ ಕರೆ, ನಿತ್ಯ 100 ಉಚಿತ  ಎಸ್‌ಎಮ್‌ಎಸ್ ಸೌಲಭ್ಯಗಳು ಲಭ್ಯವಾಗಳಿವೆ. ಮಾತ್ರವಲ್ಲ ಈ ಯೋಜನೆಯು ಜಿಯೋಟಿವಿ ಪ್ರೀಮಿಯಂ (14 OTT ಗಳು), ಆದ್ಯತೆಯ ಗ್ರಾಹಕ ಸೇವೆ ಮತ್ತು JioCinema ಪ್ರೀಮಿಯಂ ಕೂಪನ್‌ಗಳನ್ನು ಸಹ ಒಳಗೊಂಡಿರಲಿದೆ. 


ಇದನ್ನೂ ಓದಿ- iPhone ಪ್ರಿಯರಿಗೆ ಗುಡ್ ನ್ಯೂಸ್: ಆಪಲ್ ತರುತ್ತಿದೆ 50,000ರೂ.ಗಿಂತ ಕಡಿಮೆ ಬೆಲೆಯ ಐಫೋನ್!


ಜಿಯೋ ಟಿವಿ ಒಳಗೊಂಡಿರುವ 14 ಅಪ್ಲಿಕೇಶನ್‌ಗಳೆಂದರೆ: 
JioCinema ಪ್ರೀಮಿಯಂ
Disney+ Hotstar
ZEE5
SonyLIV
ಪ್ರೈಮ್ ವೀಡಿಯೊ (ಮೊಬೈಲ್)
Lionsgate Play
Discovery+
Docubay
Hoichoi
SunNxt
Planet Marathi
Chaupal
EpicOn
Kanchha Lannka


ಜಿಯೋಟಿವಿ ಪ್ರೀಮಿಯಂ ಬಳಸುವ ವಿಧಾನ: 
JioTV ಪ್ರೀಮಿಯಂ ಅನ್ನು ಬಳಸಲು, ಮೊದಲಿಗೆ ನೀವು ಅರ್ಹ ಯೋಜನೆಯೊಂದಿಗೆ ರೀಚಾರ್ಜ್ ಮಾಡಿದ ನಿಮ್ಮ ಮೊಬೈಲ್ ಸಂಖ್ಯೆಯೊಂದಿಗೆ ಸೈನ್ ಇನ್ ಮಾಡಬೇಕಾಗುತ್ತದೆ. ಒಮ್ಮೆ ನೀವು ಸೈನ್ ಇನ್ ಮಾಡಿದ ನಂತರ, ನೀವು JioTV ಪ್ರೀಮಿಯಂ ಟ್ಯಾಬ್ ಅನ್ನು ನೋಡುತ್ತೀರಿ. ಈ ಟ್ಯಾಬ್‌ನಲ್ಲಿ, ನೀವು 14 OTT ಪ್ಲಾಟ್‌ಫಾರ್ಮ್‌ಗಳನ್ನು ಪ್ರವೇಶಿಸಬಹುದು. ಡಿಸ್ನಿ + ಹಾಟ್‌ಸ್ಟಾರ್ ಮತ್ತು ಪ್ರೈಮ್ ವಿಡಿಯೋ (ಮೊಬೈಲ್) ಆಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ಲಭ್ಯವಿರುತ್ತದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://youtu.be/--phA9ji8NM
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.