Jio Recharge Plan : ಜಿಯೋ ತನ್ನ ಲಕ್ಷಾಂತರ ಬಳಕೆದಾರರಿಗೆ ಮತ್ತೊಮ್ಮೆ ಬಂಪರ್ ಆಫರ್ ನೀಡಿದೆ.ಕಂಪನಿಯು ಉಚಿತ 365-ದಿನಗಳ ಮೊಬೈಲ್ ರೀಚಾರ್ಜ್ ಯೋಜನೆಯನ್ನು ಪರಿಚಯಿಸಿದೆ.ದೇಶದ ಅತಿದೊಡ್ಡ ಟೆಲಿಕಾಂ ಕಂಪನಿ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಈ ಆಫರ್ ಅನ್ನು ಪ್ರಕಟಿಸಿದೆ.ಜಿಯೋ ಬಳಕೆದಾರರು ಈ ಕೊಡುಗೆಯ ಲಾಭವನ್ನು ಪಡೆಯಬಹುದು.ಇದು ವರ್ಷವಿಡೀ ರೀಚಾರ್ಜ್ ಮಾಡುವ ತೊಂದರೆಯಿಂದ ಗ್ರಾಹಕರಿಗೆ ಮುಕ್ತಿ ನೀಡುತ್ತದೆ.ಈ ಕೊಡುಗೆಯು ದೇಶದ ಎಲ್ಲಾ ಟೆಲಿಕಾಂ ವಲಯಗಳಲ್ಲಿ ಲಭ್ಯವಿದೆ.ಜಿಯೋ ಪ್ರಿಪೇಯ್ಡ್ ಬಳಕೆದಾರರು ಇದರ ಲಾಭವನ್ನು ಪಡೆಯಬಹುದು. 


COMMERCIAL BREAK
SCROLL TO CONTINUE READING

ರಿಲಯನ್ಸ್ ಜಿಯೋ ಆಫರ್ : 
ಜಿಯೋ ತನ್ನ ಫೈಬರ್ ಬ್ರಾಡ್‌ಬ್ಯಾಂಡ್ ಸೇವೆಯನ್ನು ಹೆಚ್ಚಿಸಲು ಈ ಆಫರ್ ಅನ್ನು ಪರಿಚಯಿಸಿದೆ.ಜಿಯೋ ಬಳಕೆದಾರರು ಹೊಸ ಏರ್‌ಫೈಬರ್ ಯೋಜನೆಗೆ ಸೈನ್ ಅಪ್ ಮಾಡುವ ಮೂಲಕ ಉಚಿತ ಮೊಬೈಲ್ ರೀಚಾರ್ಜ್ ಪ್ರಯೋಜನವನ್ನು ಪಡೆಯಬಹುದು.Jioನ ವೆಬ್‌ಸೈಟ್ ಪ್ರಕಾರ,ಬಳಕೆದಾರರು 3,599 ರೂ.ಗಳ ಉಚಿತ ವಾರ್ಷಿಕ ಮೊಬೈಲ್ ರೀಚಾರ್ಜ್ ಯೋಜನೆಯನ್ನು ಪಡೆಯುತ್ತಾರೆ.ಈ ಪ್ಲಾನ್ 365 ದಿನಗಳವರೆಗೆ ಮಾನ್ಯವಾಗಿರುತ್ತದೆ.ಈ ಯೋಜನೆಯಲ್ಲಿ ಪ್ರತಿದಿನ 2.5GB ಹೈ-ಸ್ಪೀಡ್ ಡೇಟಾದ ಪ್ರಯೋಜನ ಸಿಗುತ್ತದೆ. 


ಇದನ್ನೂ ಓದಿ : ಕೇವಲ 38 ಸಾವಿರ ರೂಪಾಯಿಗೆ ಖರೀದಿಸಿ iPhone!ದುಬಾರಿ ಫೋನ್ ಅನ್ನು ಅಗ್ಗದ ಬೆಲೆಯಲ್ಲಿ ಖರೀದಿಸಲು ಇದುವೇ ಬೆಸ್ಟ್ ಟೈಮ್ !


ಯಾವ ಪ್ರಯೋಜನ ಸಿಗುತ್ತದೆ ? :
ಜಿಯೋ ಬಳಕೆದಾರರು ಹೊಸ AirFiber ಅನ್ನು ಕಂಪನಿಯ ವೆಬ್‌ಸೈಟ್ ಅಥವಾ My Jio ಅಪ್ಲಿಕೇಶನ್ ಮೂಲಕ ಬುಕ್ ಮಾಡಬಹುದು.ಕಂಪನಿಯು ಏರ್ ಫೈಬರ್ ಬ್ರಾಡ್‌ಬ್ಯಾಂಡ್‌ಗೆ ಬುಕಿಂಗ್ ಶುಲ್ಕವನ್ನು ಕೇವಲ 50 ರೂಪಾಯಿಗಳಿಗೆ ನಿಗದಿಪಡಿಸಿದೆ.ಇದಲ್ಲದೇ,ಏರ್‌ಫೈಬರ್ ಫ್ರೀಡಂ ಆಫರ್‌ನ ಅಡಿಯಲ್ಲಿ ಬಳಕೆದಾರರಿಗೆ 3 ತಿಂಗಳ ಪ್ಲಾನ್‌ನಲ್ಲಿ 30% ರಿಯಾಯಿತಿಯನ್ನು ನೀಡಲಾಗುತ್ತಿದೆ. ಅಂದರೆ ಈ ಪ್ಲಾನ್ ಬೆಲೆ 2121ರೂ.ಗೆ ಇಳಿಯುತ್ತದೆ. ಈ ಪ್ಲಾನ್ ನಲ್ಲಿ 800ಕ್ಕೂ ಹೆಚ್ಚು ಡಿಜಿಟಲ್ ಟಿವಿ ಚಾನೆಲ್‌ಗಳು,13 ಕ್ಕೂ ಹೆಚ್ಚು OTT ಅಪ್ಲಿಕೇಶನ್‌ಗಳು ಮತ್ತು ಅನಿಯಮಿತ ವೈ-ಫೈಯನ್ನು (ಪ್ರತಿ ತಿಂಗಳು 1000GB ಡೇಟಾ FUP ಮಿತಿಯೊಂದಿಗೆ)ಒಳಗೊಂಡಿದೆ.


AirFiber ಅನ್ನು ಬುಕ್ ಮಾಡುವ ಒಬ್ಬ ಅದೃಷ್ಟವಂತ ಬಳಕೆದಾರರು ಈ ವಾರ್ಷಿಕ ಯೋಜನೆಯನ್ನು ಉಚಿತವಾಗಿ ಪಡೆಯುತ್ತಾರೆ.ಈ ಯೋಜನೆಯು ಪ್ರತಿದಿನ 2.5GB ಹೈ-ಸ್ಪೀಡ್ ಡೇಟಾ,ಉಚಿತ ಅನಿಯಮಿತ 5G ಡೇಟಾ,ಪ್ರತಿದಿನ 100 ಉಚಿತ SMS ಮತ್ತು ದೇಶದಾದ್ಯಂತ ಯಾವುದೇ ನೆಟ್‌ವರ್ಕ್‌ನಲ್ಲಿ ಉಚಿತ ರಾಷ್ಟ್ರೀಯ ರೋಮಿಂಗ್ ಅನ್ನು ನೀಡುತ್ತದೆ. 


ಇದನ್ನೂ ಓದಿ :  ಫೋನ್ ಚಾರ್ಜ್ ಮಾಡುವಾಗ ಮರೆತೂ ಸಹ ಈ ತಪ್ಪುಗಳನ್ನು ಮಾಡ್ಬೇಡಿ, ಬ್ಯಾಟರಿ ಅಷ್ಟೇ ಅಲ್ಲ, ಜೀವಕ್ಕೂ ಅಪಾಯ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.