Reliance Jio Update: ತನ್ನ ಗ್ರಾಹಕರಿಗೆ ಬಿಗ್ ಶಾಕ್ ನೀಡಿದ ರಿಲಯನ್ಸ್ ಜಿಯೋ! ಈ ಪ್ಲಾನ್ ಬೆಲೆಯಲ್ಲಿ ರೂ.150 ಹೆಚ್ಚಳ
ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗೆ ಬಿಗ್ ಶಾಕ್ ನೀಡಿದೆ. ಕಂಪನಿಯು ತನ್ನ ಒಂದು ಯೋಜನೆಯ ಬೆಲೆಯಲ್ಲಿ ರೂ.150 ರಷ್ಟು ಹೆಚ್ಚಳ ಮಾಡಿದೆ. ಆದರೆ ಈ ಬೆಲೆ ಹೆಚ್ಚಳ ಕೇವಲ ಒಂದೇ ಒಂದು ಪ್ಲಾನ್ ಗೆ ಅನ್ವಯಿಸಲಾಗಿದೆ. ಉಳಿದೆಲ್ಲಾ ರಿಚಾರ್ಜ್ ಯೋಜನೆಗಳ ಬೆಲೆಗಳು ಮೊದಲಿನಂತೆ ಮುಂದುವರೆಯಲಿವೆ.
ರಿಲಯನ್ಸ್ ಜಿಯೋ: ಕಳೆದ ಹಲವು ದಿನಗಳಿಂದ, ಪ್ರಿಪೇಯ್ಡ್ ಯೋಜನೆಗಳು ದುಬಾರಿಯಾಗಿರುವ ಬಗ್ಗೆ ಚರ್ಚೆ ನಡೆಯುತ್ತಿದೆ. ಏತನ್ಮಧ್ಯೆ ದೇಶದ ಅತಿ ದೊಡ್ಡ ಟೆಲಿಕಾಂ ಕಂಪನಿಯಾಗಿರುವ ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗೆ ಶಾಕ್ ನೀಡಿದೆ. ಕಂಪನಿಯು ತನ್ನ ಯೋಜನೆಯೊಂದರ ಬೆಲೆಯನ್ನು 150 ರೂ.ಗಳಷ್ಟು ಹೆಚ್ಚಿಸಿದೆ. ಈ ಬೆಲೆ ಹೆಚ್ಚಳ ಕೇವಲ ಒಂದೇ ಒಂದು ಯೋಜನೆಗೆ ಅನ್ವಯಿಸಲಾಗಿದೆ, ಉಳಿದ ರೀಚಾರ್ಜ್ ಯೋಜನೆಗಳ ಬೆಲೆಗಳು ಮೊದಲಿನಂತೆಯೇ ಇರಲಿವೆ.
ರಿಲಯನ್ಸ್ ಜಿಯೋ ಬೆಲೆ ಏರಿಕೆ
ನಾವು ನಿಮಗೆ ಹೇಳಲು ಹೊರಟಿರುವ ಈ ರಿಲಯನ್ಸ್ ಯೋಜನೆಯು ವಿಶೇಷ ಜಿಯೋ ಫೋನ್ ಬಳಕೆದಾರರಿಗಾಗಿದೆ. ಕಂಪನಿಯು JioPhone 4G ಫೀಚರ್ ಫೋನ್ ಅನ್ನು ಖರೀದಿಸಲು ವಿವಿಧ ಆಯ್ಕೆಗಳನ್ನು ನೀಡುತ್ತದೆ. ಈ ಫೋನ್ ಅನ್ನು ಖರೀದಿಸಲು ಗ್ರಾಹಕರು ರೂ 1999, ರೂ 1499 ಮತ್ತು ರೂ 749 ಯೋಜನೆಗಳಲ್ಲಿ ಒಂದನ್ನು ಆಯ್ಕೆ ಮಾಡಬಹುದು. ಆದರೆ, ಇದೀಗ ಕಂಪನಿಯು ರೂ.749 ಪ್ಲಾನ್ ಬೆಲೆಯನ್ನು ರೂ.899ಕ್ಕೆ ಹೆಚ್ಚಿಸಿದೆ. ಈ ಯೋಜನೆಯಲ್ಲಿ ನೀವು ಯಾವಯಾವ ಸೌಲಭ್ಯಗಳನ್ನು ಪಡೆಯಬಹುದು ತಿಳಿದುಕೊಳ್ಳೋಣ ಬನ್ನಿ,
ಜಿಯೋಫೋನ್ ರೂ 899 ಆಫರ್
JioPhone ನ ಅಸ್ತಿತ್ವದಲ್ಲಿರುವ ಬಳಕೆದಾರರಿಗೆ ಈ ಕೊಡುಗೆಯು ಅನ್ವಯಿಸಲಿದೆ. ಹೊಸ JioPhone ಖರೀದಿಸಲು ಬಯಸಿದರೆ, ಅವರು 899 ರೂಗಳಿಗೆ Jio ಫೋನ್ ಅನ್ನು ಪಡೆಯಲಿದ್ದಾರೆ, ಜೊತೆಗೆ 1 ವರ್ಷದ ಅನಿಯಮಿತ ಯೋಜನೆಯನ್ನು ಸಹ ನೀಡಲಾಗುತ್ತದೆ. ಇದರಲ್ಲಿ, ವರ್ಷವಿಡೀ ಅನಿಯಮಿತ ಧ್ವನಿ ಕರೆಯೊಂದಿಗೆ ಒಟ್ಟು 24 GB ಡೇಟಾ ಸೌಲಭ್ಯ ಲಭ್ಯವಿದೆ. ಇದರೊಂದಿಗೆ, ಜಿಯೋ ಅಪ್ಲಿಕೇಶನ್‌ಗಳಿಗೆ ಉಚಿತ ಚಂದಾದಾರಿಕೆಯೂ ಕೂಡ ಇದರಲ್ಲಿ ಲಭ್ಯವಿದೆ.
ಉಳಿದ ಎರಡು ಯೋಜನೆಗಳು ಹೇಗಿವೆ?
ನಾವು ರೂ 1499 ರ ಯೋಜನೆಯನ್ನು ಕುರಿತು ಹೇಳುವುದಾದರೆ, ಈ ಯೋಜನೆ ಹೊಸ ಬಳಕೆದಾರರಿಗೆ ಅನ್ವಯಿಸಲಿದೆ. ಅಂದರೆ ನಿಖರವಾಗಿ 899 ರೂ.ಗಳ ಸೌಲಭ್ಯಗಳು ಇದರಲ್ಲಿ ದೊರೆಯಲಿವೆ. ಯೋಜನೆಯಲ್ಲಿ ಹೊಸ JioPhone ಹೊರತುಪಡಿಸಿ, ಒಟ್ಟು 24 GB ಡೇಟಾ ಮತ್ತು Jio ಅಪ್ಲಿಕೇಶನ್‌ಗಳ ಉಚಿತ ಚಂದಾದಾರಿಕೆಯು 1 ವರ್ಷಕ್ಕೆ ಧ್ವನಿ ಕರೆಯೊಂದಿಗೆ ಲಭ್ಯವಿದೆ.
ಅದೇ ರೀತಿ, ರೂ 1999 ರ ಯೋಜನೆಯಲ್ಲಿ, ನೀವು 2 ವರ್ಷಗಳವರೆಗೆ ಪ್ರಯೋಜನಗಳನ್ನು ಪಡೆಯುವಿರಿ. ಇದರಲ್ಲಿ, JioPhone ನೊಂದಿಗೆ 2 ವರ್ಷಗಳ ಯೋಜನೆಯನ್ನು ಉಚಿತವಾಗಿ ನೀಡಲಾಗುತ್ತಿದೆ. ನೀವು 2 ವರ್ಷಗಳವರೆಗೆ ಅನಿಯಮಿತ ಧ್ವನಿ ಕರೆಯೊಂದಿಗೆ ಒಟ್ಟು 48 GB ಡೇಟಾವನ್ನು ಇದರಲ್ಲಿ ಪಡೆಯಬಹುದು.
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.