Reliance Jio Update - ಜಿಯೋ ಮತ್ತೊಮ್ಮೆ ತನ್ನ ಬಳಕೆದಾರರಿಗೆ ಶಾಕ್ ನೀಡಿದೆ. ಕಂಪನಿಯು ತನ್ನ ಅಗ್ಗದ ರೀಚಾರ್ಜ್ ಯೋಜನೆಗಳ ದರಗಳನ್ನು ಶೇಕಡಾ 20 ರಷ್ಟು ಹೆಚ್ಚಿಸಿದೆ. ಇತ್ತೀಚೆಗೆ, ಕಂಪನಿಯು JioPhone ನ ರೂ 749 ಪ್ರಿಪೇಯ್ಡ್ ರೀಚಾರ್ಜ್ ಯೋಜನೆಯ ಬೆಲೆಯನ್ನು ರೂ 150 ರಷ್ಟು ಹೆಚ್ಚಿಸಿದೆ. ಇದೀಗ ಕಂಪನಿಯು ಮತ್ತೆ ಎರಡು ಪ್ರಿಪೇಯ್ಡ್ ಯೋಜನೆಗಳ ಬೆಲೆಯನ್ನು ಹೆಚ್ಚಿಸಿದೆ. ಈ ಪ್ರಿಪೇಯ್ಡ್ ಯೋಜನೆಗಳಿಗೆ ಬಳಕೆದಾರರು ಇದೀಗ ಶೇ. 20 ರಷ್ಟು ಹೆಚ್ಚು ಹಣ ಪಾವತಿಸಬೇಕಾಗಲಿದೆ.


COMMERCIAL BREAK
SCROLL TO CONTINUE READING

ರಿಲಯನ್ಸ್ ಜಿಯೋ ಪ್ರಸ್ತುತ ಬಳಕೆದಾರರ ಆಧಾರದ ಮೇಲೆ ದೇಶದ ಅತಿದೊಡ್ಡ ಟೆಲಿಕಾಂ ಕಂಪನಿಯಾಗಿದೆ. ಶೇ.20 ರಷ್ಟು ಬೆಲೆ ಏರಿಕೆಯ ನಂತರ, JioPhone ಬಳಕೆದಾರರು ಈಗ ಕ್ರಮವಾಗಿ ರೂ. 155, ರೂ. 185 ಮತ್ತು ರೂ. 749 ರ ಪ್ರಿಪೇಯ್ಡ್ ಯೋಜನೆಗಳಿಗೆ ರೂ. 186, ರೂ. 222 ಮತ್ತು ರೂ. 899 ಪಾವತಿಸಬೇಕಾಗಲಿದೆ.


ಕಂಪನಿಯು ಈ ಎಲ್ಲಾ ಪ್ರಿಪೇಯ್ಡ್ ಯೋಜನೆಗಳನ್ನು Jio ನ ಅಧಿಕೃತ ವೆಬ್‌ಸೈಟ್‌ನಲ್ಲಿ ನವೀಕರಿಸಿದೆ. ಇನ್ನೊಂದೆಡೆ, ಈ ಯೋಜನೆಗಳ ಬೆಲೆಗಳನ್ನು ಹೆಚ್ಚಿಸಿದ ಬಳಿಕವೂ ಕೂಡ, ಕಂಪನಿಯು ಪ್ರಯೋಜನಗಳಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ.


186 ರ ಹೊಸ ಯೋಜನೆ
JioPhone ಬಳಕೆದಾರರಿಗಾಗಿ ಇರುವ ಈ ಪ್ರಿಪೇಯ್ಡ್ ಯೋಜನೆಯಲ್ಲಿ 28 ದಿನಗಳ ಮಾನ್ಯತೆ ಲಭ್ಯವಿದೆ. ಈ ಯೋಜನೆಯಲ್ಲಿ, ಬಳಕೆದಾರರು ಉಚಿತ ರಾಷ್ಟ್ರೀಯ ರೋಮಿಂಗ್‌ನ ಪ್ರಯೋಜನವನ್ನು ಪಡೆಯುತ್ತಾರೆ. ಬಳಕೆದಾರರು ಯಾವುದೇ ನೆಟ್‌ವರ್ಕ್‌ನಲ್ಲಿ ಅನಿಯಮಿತ ಉಚಿತ ಕರೆಗಳ ಲಾಭವನ್ನು ಪಡೆಯಬಹುದು. ಅಲ್ಲದೆ, ಇದರಲ್ಲಿ ಬಳಕೆದಾರರು ನಿತ್ಯ 1GB ಡೇಟಾದ ಪ್ರಯೋಜನವನ್ನು ಸಹ ಪಡೆಯುತ್ತಾರೆ. ಇದಲ್ಲದೆ, ಬಳಕೆದಾರರಿಗೆ ನಿತ್ಯ 100 ಉಚಿತ ಎಸ್‌ಎಂಎಸ್‌ಗಳ ಲಾಭವನ್ನು ನೀಡಲಾಗುತ್ತದೆ.


ಇದನ್ನೂ ಓದಿ-ದೇಶದಲ್ಲಿ 5G ಇಂಟರ್ನೆಟ್‌ ಸೇವೆ ಆರಂಭ: ಯಾವಾಗ? ಇಲ್ಲಿದೆ ಮಾಹಿತಿ


ರೂ 222 ರ ಹೊಸ ಯೋಜನೆ
JioPhone ನ ಈ ಪ್ರಿಪೇಯ್ಡ್ ಯೋಜನೆಯಲ್ಲಿ ಬಳಕೆದಾರರು 28 ದಿನಗಳ ಮಾನ್ಯತೆಯನ್ನು ಪಡೆಯುತ್ತಾರೆ. ರೂ 186 ಪ್ರಿಪೇಯ್ಡ್ ಯೋಜನೆಯಂತೆ, ಇದರಲ್ಲಿಯೂ ಕೂಡ ಬಳಕೆದಾರರಿಗೆ ನಿತ್ಯ 100 ಉಚಿತ SMS ಮತ್ತು ಅನಿಯಮಿತ ಧ್ವನಿ ಕರೆಗಳ ಪ್ರಯೋಜನವನ್ನು ಪಡೆಯುತ್ತಾರೆ. ಆದರೆ, ಈ ಯೋಜನೆಯಲ್ಲಿ, ಬಳಕೆದಾರರಿಗೆ ನಿತ್ಯ 1GB ಬದಲಿಗೆ 2GB ಡೇಟಾದ ಪ್ರಯೋಜನ ಸಿಗುತ್ತದೆ. ಇದರಲ್ಲಿ ಬಳಕೆದಾರರು ಒಟ್ಟು 56GB ಡೇಟಾವನ್ನು ಪಡೆಯುತ್ತಾರೆ.


ಇದನ್ನೂ ಓದಿ-OPPO 5G ಸ್ಮಾರ್ಟ್‌ಫೋನ್ ಅನ್ನು ಕೇವಲ 3,499 ರೂ.ಗೆ ಖರೀದಿಸಬಹುದು


ರೂ 899 ರ ಹೊಸ ಪ್ರಿಪೇಯ್ಡ್ ಯೋಜನೆ
JioPhone ಬಳಕೆದಾರರಿಗೆ ಇರುವ ಈ ಪ್ರಿಪೇಯ್ಡ್ ಯೋಜನೆಯು ದೀರ್ಘ ಮಾನ್ಯತೆಯೊಂದಿಗೆ ಬರುತ್ತದೆ. ಇದರಲ್ಲಿ ಬಳಕೆದಾರರಿಗೆ 336 ದಿನಗಳ ವ್ಯಾಲಿಡಿಟಿಯ ಲಾಭ ಸಿಗುತ್ತದೆ. ಅಂದರೆ, ಒಮ್ಮೆ ರೀಚಾರ್ಜ್ ಮಾಡುವ ಮೂಲಕ, ನೀವು ಸುಮಾರು 11 ತಿಂಗಳವರೆಗೆ ಅದನ್ನು ಬಳಸಬಹುದು. ಇದರಲ್ಲಿ ಲಭ್ಯವಿರುವ ಪ್ರಯೋಜನಗಳ ಕುರಿತು ಹೇಳುವುದಾದರೆ, ಈ ಯೋಜನೆಯು ಉಚಿತ ಧ್ವನಿ ಕರೆ ಮತ್ತು ರಾಷ್ಟ್ರೀಯ ರೋಮಿಂಗ್‌ನೊಂದಿಗೆ ಬರುತ್ತದೆ. ಇದರಲ್ಲಿ, ಬಳಕೆದಾರರಿಗೆ ಒಟ್ಟು 24GB ಡೇಟಾ ಪ್ರಯೋಜನ ನೀಡಲಾಗುತ್ತಿದೆ, ಅಂದರೆ,  ಬಳಕೆದಾರರು ಪ್ರತಿ 28 ದಿನಗಳಿಗೊಮ್ಮೆ 2GB ಡೇಟಾವನ್ನು ಬಳಸಲು ಸಾಧ್ಯವಾಗುತ್ತದೆ. ಅಲ್ಲದೆ, ಪ್ರತಿ 28 ದಿನಗಳಿಗೊಮ್ಮೆ 50 ಉಚಿತ ಎಸ್‌ಎಂಎಸ್‌ಗಳ ಪ್ರಯೋಜನವನ್ನು ನೀಡಲಾಗುತ್ತದೆ.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.