Reliance Jio Launched Jio AirFiber : ಸೋಮವಾರ ನಡೆದ ತನ್ನ 45 ನೇ ಎಜಿಎಂನಲ್ಲಿ ರಿಲಯನ್ಸ್ 5 ಜಿ ಸೇವೆಯ ಪ್ರಾರಂಭ ದಿನಾಂಕ ಸೇರಿದಂತೆ ಹಲವು ಪ್ರಮುಖ ಘೋಷಣೆಗಳನ್ನು ಮಾಡಿದೆ. ಈ ಸಂಚಿಕೆಯಲ್ಲಿನ ಮುಖ್ಯ ಉತ್ಪನ್ನವೆಂದರೆ ಜಿಯೋ ಏರ್‌ಫೈಬರ್. ಜಿಯೋ ಫೈಬರ್ ಅನ್ನು ಜನರು ಈಗಾಗಲೇ ಬಳಸುತ್ತಿದ್ದಾರೆ. ಆದರೆ ಇದೀಗ ಜಿಯೋ ಏರ್ ಫೈಬರ್ ಅನ್ನು ಪರಿಚಯಿಸಲಾಗಿದೆ. ಅಷ್ಟಕ್ಕೂ ಜಿಯೋ ಏರ್ ಫೈಬರ್  ಅಂದರೆ ಏನು ಎನ್ನುವ ಪ್ರಶ್ನೆ ಇದೀಗ ಜನರ ಮನದಲ್ಲಿ ಮೂಡಿದೆ. 


COMMERCIAL BREAK
SCROLL TO CONTINUE READING

ಏನಿದು ಜಿಯೋ ಏರ್‌ಫೈಬರ್ ? ಹೇಗೆ ಕಾರ್ಯ ನಿರ್ವಹಿಸುತ್ತದೆ ? :
ಜಿಯೋ ಏರ್‌ಫೈಬರ್ ಸಂಪೂರ್ಣ ವೈರ್‌ಲೆಸ್ ಸೇವೆಯಾಗಿರಲಿದೆ.  ಇದು Jio True 5G ನೆಟ್‌ವರ್ಕ್ ಅನ್ನು ಆಧರಿಸಿರುತ್ತದೆ. ಅಲ್ಟ್ರಾ-ಹೈ-ಸ್ಪೀಡ್ ಇಂಟರ್ನೆಟ್ ಸಂಪರ್ಕವನ್ನು ಒದಗಿಸುವ ವೈರ್‌ಲೆಸ್ ಸಿಂಗಲ್-ಡಿವೈಸ್ ಪರಿಹಾರವಾಗಿದೆ ಎಂದು ಹೇಳಲಾಗುತ್ತಿದೆ. ಅಂದರೆ, ಸರಳ ಪದಗಳಲ್ಲಿ ಹೇಳುವುದಾದರೆ, ವೈರ್‌ಲೆಸ್ ಜಿಯೋ ಏರ್‌ಫೈಬರ್ ಅನ್ನು ಮನೆ, ಕಚೇರಿ ಮತ್ತು ಅಂಗಡಿಯಲ್ಲಿ ಎಲ್ಲಿ ಬೇಕಾದರೂ ಬಳಸಬಹುದು. ಇದರೊಂದಿಗೆ, ನಿಮ್ಮ ಮನೆ ಅಥವಾ ಕಚೇರಿಯನ್ನು ಕೆಲವೇ ಸೆಕೆಂಡುಗಳಲ್ಲಿ 5G ವೈಫೈ ಹಾಟ್‌ಸ್ಪಾಟ್‌ಗೆ ಪರಿವರ್ತಿಸಲು ಸಾಧ್ಯವಾಗುತ್ತದೆ. ಈ ಸಾಧನ ಕೆಲಸ ಮಾಡಬೇಕಾದರೆ ಅದನ್ನು ವಿದ್ಯುತ್‌ಗೆ ಸಂಪರ್ಕಿಸಬೇಕು.  ಹೀಗೆ ಒಮ್ಮೆ ಕನೆಕ್ಟ್ ಆದರೆ ನಂತರ ನಿಮ್ಮ ಸುತ್ತ ಮುತ್ತಲಿನ ಪ್ರದೇಶ  5G ವೈಫೈ ಹಾಟ್‌ಸ್ಪಾಟ್ ಆಗಿ ಪರಿವರ್ತನೆಯಾಗುತ್ತದೆ.  ಏಕಕಾಲದಲ್ಲಿ ಬಹು ಸಾಧನಗಳಲ್ಲಿ ಅಲ್ಟ್ರಾ ಹೈ ಸ್ಪೀಡ್ ಇಂಟರ್ನೆಟ್ ಅನ್ನು ಚಲಾಯಿಸಲು ಸಾಧ್ಯವಾಗುತ್ತದೆ.


ಇದನ್ನೂ ಓದಿ : Smartphone Tips: ಫೋನ್‌ನಲ್ಲಿ ಈ ಲಕ್ಷಣಗಳು ಕಂಡುಬಂದರೆ ಹುಷಾರಾಗಿರಿ, ನಿಮ್ಮ ಫೋನ್ ಹ್ಯಾಕ್ ಆಗಿರಬಹುದು


ಬೆಲೆ ಮತ್ತು ಯೋಜನೆ :
ಈ ಸೇವೆಯೊಂದಿಗೆ ಭಾರತವು ಸ್ಥಿರ ಬ್ರಾಡ್‌ಬ್ಯಾಂಡ್‌ನಲ್ಲಿ ಅಗ್ರ 10 ದೇಶಗಳ ಸಾಲಿನಲ್ಲಿ ಸೇರಲಿದೆ ಎಂದು ಕಂಪನಿಯ ಹೇಳಿದೆ. ಇದಕ್ಕೆ ಸಂಬಂಧಪಟ್ಟಂತಹ  ಡೆಮೊವನ್ನು ಕೂಡಾ ತೋರಿಸಲಾಗಿದೆ. ಈ ಸಮಯದಲ್ಲಿ ಯಾವುದೇ ವಿಳಂಬವಿಲ್ಲದೆ ಸಾಧನದಲ್ಲಿ ಲೈವ್ ಕ್ರೀಡಾ ಕಾರ್ಯಕ್ರಮಗಳನ್ನು ವೀಕ್ಷಿಸಬಹುದು. ಅದರ ಬೆಲೆ ಮತ್ತು ಬೆಲೆ ಯೋಜನೆ ಬಗ್ಗೆ ಕಂಪನಿಯು ಈಗಲೇ  ಏನನ್ನೂ ಹೇಳಲಿಲ್ಲ. 5G ಬಿಡುಗಡೆಯೊಂದಿಗೆ, ಬೆಲೆ ಮತ್ತು ಯೋಜನೆ ಕೂಡ ತಿಳಿಯಲಿದೆ. 


ಇದನ್ನೂ ಓದಿ : ಗುರುಗ್ರಹ ಹೋಲುವ ಮತ್ತೊಂದು ಗ್ರಹ ಸೌರಮಂಡಲದ ಹೊರಗೆ ಪತ್ತೆ


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.