ನವದೆಹಲಿ: ದೊಡ್ಡ ಇ-ಕಾಮರ್ಸ್ ಕಂಪನಿಗಳಲ್ಲಿ ಒಂದಾದ ಅಮೆಜಾನ್‌ನ ಗ್ರೇಟ್ ರಿಪಬ್ಲಿಕ್ ಡೇ ಸೇಲ್ ಶೀಘ್ರದಲ್ಲೇ ಆರಂಭವಾಗುವ ನಿರೀಕ್ಷೆ ಇದೆ. ಅಮೆಜಾನ್‌ನ ವೆಬ್‌ಸೈಟ್‌ನಲ್ಲಿ ಈ ಮಾರಾಟದ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತಿದೆ. ಇದರಲ್ಲಿ ಸ್ಮಾರ್ಟ್‌ಫೋನ್‌ಗಳು, ಲ್ಯಾಪ್‌ಟಾಪ್‌ಗಳು, ಟ್ಯಾಬ್ಲೆಟ್‌ಗಳು ಮತ್ತು ಟೆಲಿವಿಷನ್‌ಗಳು ಸೇರಿದಂತೆ ಗ್ರಾಹಕ ಎಲೆಕ್ಟ್ರಾನಿಕ್ಸ್‌ಗಳ ಮೇಲೆ ಭಾರಿ ರಿಯಾಯಿತಿಗಳನ್ನು ನೀಡಲಾಗುವುದು ಎನ್ನಲಾಗಿದೆ. ಈ ಮಾರಾಟವು ಗಣರಾಜ್ಯೋತ್ಸವದ ಕೆಲವು ದಿನಗಳ ಮೊದಲು ಆರಂಭಗೊಳ್ಳಲಿದೆ. (Technology News In Kannada)


COMMERCIAL BREAK
SCROLL TO CONTINUE READING

ಈ ಸೇಲ್‌ನಲ್ಲಿ, ಆಯ್ದ ಬ್ಯಾಂಕ್‌ಗಳ ಕಾರ್ಡ್‌ಗಳ ಮೂಲಕ ಮಾಡಿದ ವಹಿವಾಟುಗಳ ಮೇಲೆ ತ್ವರಿತ ರಿಯಾಯಿತಿ ಕೂಡ ಲಭ್ಯವಿರುತ್ತದೆ. ಗ್ರೇಟ್ ರಿಪಬ್ಲಿಕ್ ಡೇ ಸೇಲ್‌ನ ಟೀಸರ್ ಅನ್ನು ಅಮೆಜಾನ್ ವೆಬ್‌ಸೈಟ್‌ನಲ್ಲಿ ಹರಿಬಿಡಲಾಗಿದೆ . ಆದಾಗ್ಯೂ, ಈ ಮಾರಾಟದ ಪ್ರಾರಂಭದ ದಿನಾಂಕವನ್ನು ಘೋಷಿಸಲಾಗಿಲ್ಲ. ಕಳೆದ ವರ್ಷ ಈ ಮಾರಾಟ ಜನವರಿ 15 ರಂದು ಆರಂಭಗೊಂಡಿತು. ಇತರ ಸೇಲ್ ಈವೆಂಟ್‌ಗಳಂತೆ, ಈ ಸೇಲ್‌ನಲ್ಲಿಯೂ, ಅಮೆಜಾನ್‌ನ ಪ್ರೈಮ್ ಚಂದಾದಾರರು ಮಾರಾಟಕ್ಕೆ ಆರಂಭಿಕ ಪ್ರವೇಶವನ್ನು ಪಡೆಯುತ್ತಾರೆ ಎಂದು ಅಮೆಜಾನ್ ಹೇಳಿದೆ. 


ಇದನ್ನೂ ಓದಿ-Big News: ಮಾರ್ಚ್ 1 ರಿಂದ ಜಿಎಸ್ಟಿ ನಿಯಮಗಳಲ್ಲಿ ಬದಲಾವಣೆ, ಇದು ಇಲ್ಲದೆ ಹೋದಲ್ಲಿ ಇ-ವೇ ಬಿಲ್ ಸಾಧ್ಯವಿಲ್ಲ!


ಈ ಅಮೆಜಾನ್ ಸೇಲ್‌ನ ಲ್ಯಾಂಡಿಂಗ್ ಪೇಜ್‌ನಲ್ಲಿ ಸ್ಮಾರ್ಟ್‌ಫೋನ್‌ಗಳು ಮತ್ತು ಪರಿಕರಗಳ ಮೇಲೆ ಶೇಕಡಾ 40 ರಷ್ಟು ರಿಯಾಯಿತಿಯನ್ನು ನೀಡಬಹುದು ಎಂದು ನಮೂದಿಸಲಾಗಿದೆ. ಇದರಲ್ಲಿ 5G ಸ್ಮಾರ್ಟ್‌ಫೋನ್‌ಗಳ ಬೆಲೆ ರೂ 9,999 ರಿಂದ ಆರಂಭವಾಗಲಿದೆ. ಇದರಲ್ಲಿ ಆಯ್ದ ಸ್ಮಾರ್ಟ್‌ಫೋನ್‌ಗಳ ಮೇಲೆ 50,000 ರೂ.ವರೆಗೆ ರಿಯಾಯಿತಿಯನ್ನು ಪಡೆಯಬಹುದು. ಈ ಸೇಲ್‌ನಲ್ಲಿ ಲ್ಯಾಪ್‌ಟಾಪ್‌ಗಳು ಮತ್ತು ಸ್ಮಾರ್ಟ್‌ವಾಚ್‌ಗಳ ಮೇಲೆ ಶೇಕಡಾ 75 ರಷ್ಟು ರಿಯಾಯಿತಿ ಲಭ್ಯವಿರುತ್ತದೆ. ಸ್ಮಾರ್ಟ್ ಟೆಲಿವಿಷನ್ ಮತ್ತು ಇತರ ಉಪಕರಣಗಳನ್ನು 65 ಪ್ರತಿಶತದಷ್ಟು ಕಡಿಮೆ ಬೆಲೆಯಲ್ಲಿ ಖರೀದಿಸಬಹುದು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ಗ್ರಾಹಕರು ಕ್ರೆಡಿಟ್ ಕಾರ್ಡ್ ಮತ್ತು ಇಎಮ್ಐ ವಹಿವಾಟುಗಳ ಮೇಲೆ 10 ಪ್ರತಿಶತ ತ್ವರಿತ ರಿಯಾಯಿತಿಯನ್ನು ಪಡೆಯಬಹುದು.


ಇದನ್ನೂ ಓದಿ-Tax Exemption Tips: ಹನ್ನೆರಡು ಲಕ್ಷ ವಾರ್ಷಿಕ ಆದಾಯವಿದ್ದರೂ ಕೂಡ ನೈಯಾ ಪೈಸೆ ತೆರಿಗೆ ಪಾವತಿಸಬೇಕಾಗಿಲ್ಲ!


ಅಮೆಜಾನ್‌ನ ಗ್ರೇಟ್ ರಿಪಬ್ಲಿಕ್ ಡೇ ಸೇಲ್ ಕುರಿತು ಹೆಚ್ಚಿನ ಮಾಹಿತಿಯು ಮುಂದಿನ ಕೆಲವು ದಿನಗಳಲ್ಲಿ ಲಭ್ಯವಾಗುವ ಸಾಧ್ಯತೆ ಇದೆ. ಅಮೆಜಾನ್ ಈ ಮಾರಾಟದ ಪ್ರಾರಂಭ, ರಿಯಾಯಿತಿ ಉತ್ಪನ್ನಗಳು ಮತ್ತು ಪ್ರೈಮ್ ಸದಸ್ಯರಿಗೆ ಮಾರಾಟದ ಪ್ರಾರಂಭವನ್ನು ಸಹ ಬಹಿರಂಗಪಡಿಸುತ್ತದೆ. ಇತ್ತೀಚೆಗೆ, ಚೀನಾದ ಸ್ಮಾರ್ಟ್‌ಫೋನ್ ತಯಾರಕ ಒನೆ ಪ್ಲಸ್ ನ ಮೊದಲ ಫೋಲ್ಡ್ಎಬಲ್ ಸ್ಮಾರ್ಟ್‌ಫೋನ್ ಒನ್ ಪ್ಲಸ್  ಓಪನ್ ಭಾರತದಲ್ಲಿ ಅಮೆಜಾನ್‌ನಲ್ಲಿ ಮಾರಾಟದ ದಾಖಲೆಯನ್ನು ಮಾಡಿದೆ. ಒನ್‌ಪ್ಲಸ್ ಓಪನ್ ಭಾರತ ಮತ್ತು ಉತ್ತರ ಅಮೆರಿಕಾದಲ್ಲಿ ಏಕದಿನ ಮಾರಾಟದ ದಾಖಲೆಯನ್ನು ಸೃಷ್ಟಿಸಿದೆ ಎಂದು ಕಂಪನಿಯ ಅಧ್ಯಕ್ಷ ಮತ್ತು ಸಿಒಒ ಕಿಂಡರ್ ಲಿಯು ಹೇಳಿದ್ದಾರೆ. ಈ ಸ್ಮಾರ್ಟ್‌ಫೋನ್ 16 GB RAM ಮತ್ತು 512 GB ಸಂಗ್ರಹಣೆಯೊಂದಿಗೆ ಒಂದೇ ರೂಪಾಂತರದಲ್ಲಿ ಬಿಡುಗಡೆಯಾಗಿದೆ. ಇದರ ಬೆಲೆ 1,39,999 ರೂ.ಗಲಾಗಿದೆ. ಇದು ಎಮರಾಲ್ಡ್ ಡಸ್ಕ್ ಮತ್ತು ವಾಯೇಜರ್ ಬ್ಲಾಕ್ ಬಣ್ಣಗಳಲ್ಲಿ ಲಭ್ಯವಿದೆ. ಒನ್ ಪ್ಲಸ್ ಮತ್ತು ಇತರ ಸ್ಮಾರ್ಟ್‌ಫೋನ್ ಕಂಪನಿಗಳ ಮಾರಾಟದಲ್ಲಿ ಅಮೆಜಾನ್ ನ ಮಾರಾಟ ಇವೆಂಟ್ ಗಳು ಪ್ರಮುಖ ಪಾತ್ರವಹಿಸುತ್ತವೆ.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ