ವಾಷಿಂಗ್ಟನ್: Research On Average Human Lifespan - ವಿಶ್ವಾದ್ಯಂತ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕಾಯಿಲೆಗಳಿಂದ ಮನುಷ್ಯರ ಆಯಸ್ಸು ಕಡಿಮೆಯಾಗುತ್ತಿದೆ. ಆದರೆ, ಇದಕ್ಕೆ ವಿಪರೀತ ಎಂಬಂತೆ ಅಮೆರಿಕಾದ ಸಂಶೋಧಕರು ನಡೆಸಿರುವ ಸಂಶೋಧನೆ ಫಲಿತಾಂಶ ಅಚ್ಚರಿಗೆ ಕಾರಣವಾಗಿದೆ. ಏಕೆಂದರೆ ಮನುಷ್ಯರ ಸರಾಸರಿ ಜೀವಿತಾವಧಿ ಹೆಚ್ಚಾಗಿದೆ ಎಂದು ಅಮೆರಿಕಾದ (US) ಈ ಸಂಶೋಧನೆ ಹೇಳಿದೆ. ಈ ಶತಮಾನದ ಅಂತ್ಯದ ವೇಳೆಗೆ ಮಾನವರ ಸರಾಸರಿ ಜೀವತಾವಧಿ 130ಕ್ಕೆ ತಲುಪಲಿದೆ ಎಂದು ವಾಷಿಂಗ್ಟನ್ ವಿವಿಯಲ್ಲಿ ನಡೆದ ಒಂದು ಸಂಶೋಧನೆ ಹೇಳಿದೆ.


COMMERCIAL BREAK
SCROLL TO CONTINUE READING

ಮನುಷ್ಯರ ಸರಾಸರಿ ಜೀವಿತಾವಧಿಯನ್ನು (Average Lifespan) ಪತ್ತೆಹಚ್ಚಲು ವಾಷಿಂಗ್ಟನ್ ವಿಶ್ವವಿದ್ಯಾಲಯದ (Washington University) ಸಂಶೋಧಕರು ಅಂತರರಾಷ್ಟ್ರೀಯ ದತ್ತಸಂಚಯ (Database) ಬಳಸಿದ್ದಾರೆ. ಇದನ್ನು ಜರ್ಮನಿಯ ಮ್ಯಾಕ್ಸ್ ಪ್ಲಾಂಕ್ ಸಂಸ್ಥೆಯಿಂದ ತರಸಿಕೊಳ್ಳಲಾಗಿದೆ. ಮುಂಬರುವ ದಿನಗಳಲ್ಲಿ ಮನುಷ್ಯರ ಜೀವಿತಾವಧಿ ಹೆಚ್ಚಾಗಲಿದೆ ಎಂದು ಈ ಸಂಶೋಧನೆ ಹೇಳಿದೆ. ಶತಮಾನದ ಅಂತ್ಯದ ವೇಳೆಗೆ ಮನುಷ್ಯ 125 ರಿಂದ 130ವರ್ಷ ಜೀವಿಸಬಲ್ಲ ಎಂದು ಹೇಳಲಾಗಿದೆ.


ಅಧ್ಯಯನದ ಪ್ರಕಾರ, ಈ ಅಧ್ಯಯನದಲ್ಲಿ ವಿಜ್ಞಾನಿಗಳು 100 ಕ್ಕಿಂತ ಹೆಚ್ಚು ವಯಸ್ಸಿನ ಸುಪರ್ ಸೆಂಟೇರಿಯನ್ (Supercentenarian) ಜನರನ್ನು ಕೂಡ ಈ ಅಧ್ಯಯನದಲ್ಲಿ ಶಾಮೀಲುಗೊಳಿಸಿದ್ದರು. ಅಧ್ಯಯನದ ಅವಧಿಯಲ್ಲಿ ಕೆನಡಾ, ಜಪಾನ್, ಬ್ರಿಟನ್, ಅಮೇರಿಕಾ ಹಾಗೂ ಯುರೋಪಿಯನ್ ದೇಶಗಳ ಸುಪರ್ ಸೆಂಟೇರಿಯನ್ ಜನರು ಮೇಲೂ ಕೂಡ ವಿಜ್ಞಾನಿಗಳು ತಮ್ಮ ಗಮನ ಕೇಂದ್ರೀಕರಿಸಿದ್ದರು.


ಇದನ್ನೂ ಓದಿ-China Rapidly Increasing Its Nuclear Capacity: ವೇಗವಾಗಿ ಪರಮಾಣು ಶಸ್ತ್ರಾಸ್ತ್ರಗಳನ್ನು ಹೆಚ್ಚಿಸಿಕೊಳ್ಳುತ್ತಿದೆ ಚೀನಾ


10 ಲಕ್ಷ ಜನರು 100ರ ಗಡಿ ದಾಟಿದ್ದಾರೆ (Average Human Lifespan In World)
ಈ ಅಧ್ಯಯನದಲ್ಲಿ ಪಾಲ್ಗೊಂಡ ಮೈಕಲ್ ಪಿಯರ್ಸ್ ಹೇಳುವ ಪ್ರಕಾರ, " ವಿಶ್ವಾದ್ಯಂತ ಸುಮಾರು 10 ಲಕ್ಷ  ಜನರು 100ರ ಗಡಿ ದಾಟಿದ್ದಾರೆ. 600 ಜನರು 110 ಅಥವಾ 120ಕ್ಕೆ ತಲುಪಿದ್ದಾರೆ. ಶುದ್ಧ ನೀರು, ಆರೋಗ್ಯಕರ ಆಹಾರ ಮತ್ತು ಆರೋಗ್ಯಕರ ಜೀವನಶೈಲಿಯ ಬಗ್ಗೆ ಗಮನ ಹರಿಸಬೇಕು" ಎಂದಿದ್ದಾರೆ.


ಇದನ್ನೂ ಓದಿ-Foreign Policy: ಮಾಡಿದ್ದುಣ್ಣೋ ಮಹರಾಯ! ಪಾಕ್ ಬಿಟ್ಟರೆ ಚೀನಾ ಬಳಿಯಿಂದ ಯಾರು ಶಸ್ತ್ರಾಸ್ತ್ರ ಖರೀದಿಸುತ್ತಿಲ್ಲವಂತೆ


ಕೇನ್ ತನಾಕಾ ಅತ್ಯಂತ ಹಿರಿಯ ಮಹಿಳೆ ಎಂಬ ದಾಖಲೆ ಹೊಂದಿದ್ದಾರೆ
ಪ್ರಸ್ತುತ, ವಿಶ್ವದ ಅತ್ಯಂತ ಹಿರಿಯ ಮಹಿಳೆ ಎಂಬ ದಾಖಲೆಗೆ ಜಪಾನ್ ನ ಕೇನ್ ತನಾಕಾ (Kane Tanaka)ಪಾತ್ರರಾಗಿದ್ದಾರೆ. ಕೇನ್ ವಯಸ್ಸು 118 ವರ್ಷಗಳು ಗಿನ್ನೆಸ್ ಬುಕ್ ಆಫ್ ರೆಕಾರ್ಡ್ಸ್ (Guinness Book Of World Records) ನಲ್ಲಿ ಕೇನ್ ತನಾಕಾ ಅವರ ಹೆಸರನ್ನು ವಿಶ್ವದ ಅತ್ಯಂತ ಹಿರಿಯ ಮಹಿಳೆ ಎಂದು ದಾಖಲಿಸಲಾಗಿದೆ.


ಇದನ್ನೂ ಓದಿ-Coronavirus Latest Update - ಇನ್ಮುಂದೆ ಮಾಸ್ಕ್ ಮೂಲಕ Corona Positive ಪತ್ತೆಹಚ್ಚಲಾಗುವುದು


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.