Bullet Military Edition ಭಾರತದಲ್ಲಿ ಬಿಡುಗಡೆ, ಇಲ್ಲಿದೆ ಬೆಲೆ ಮತ್ತು ವೈಶಿಷ್ಟ್ಯಗಳ ವಿವರ
RE Military Edition Launched In India: ರಾಯಲ್ ಎಂಫೀಲ್ಡ್ ಬುಲ್ಲೆಟ್ ಮಿಲಿಟರಿ ಆವೃತ್ತಿಯನ್ನು ಭಾರತದಲ್ಲಿ ಪರಿಚಯಿಸಲಾಗಿದೆ. ಅದರ ಇಂಧನ ಟ್ಯಾಂಕ್ ಮೇಲಿನ ಪಟ್ಟಿಯನ್ನು ಕೈಯಿಂದ ಮಾಡಲಾಗಿದೆ. ಇದರ ವೈಶಿಷ್ಟ್ಯಗಳು ಮತ್ತು ಬೆಲೆಯನ್ನು ತಿಳಿದುಕೊಳ್ಳಲು ಈ ಸಂಪೂರ್ಣ ಲೇಖನ ಓದಿ (Technology News In Kannada).
ನವದೆಹಲಿ: ರಾಯಲ್ ಎನ್‌ಫೀಲ್ಡ್ ಬುಲೆಟ್‌ನ ಮಿಲಿಟರಿ ಆವೃತ್ತಿಯನ್ನು ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ. ಈ ರೂಪಾಂತರವು ಮಾರುಕಟ್ಟೆಯಲ್ಲಿ ಇರುವ ಮೂಲ ಮಾದರಿಗಿಂತ ದುಬಾರಿಯಾಗಿದೆ. ಅದರ ಇಂಧನ ಟ್ಯಾಂಕ್ ಮೇಲಿನ ಪಟ್ಟೆಗಳನ್ನು ಕೈಯಿಂದ ಮಾಡಲಾಗಿದೆ, ಮತ್ತು ಅದು ಬೆಳ್ಳಿಯ ಬಣ್ಣದ್ದಾಗಿದೆ. ಆದಾಗ್ಯೂ, ಅದರ ವೈಶಿಷ್ಟ್ಯಗಳು ಮತ್ತು ಎಂಜಿನ್‌ನಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ಆಟೋ ಬ್ರಾಂಡ್ ರಾಯಲ್ ಎನ್‌ಫೀಲ್ಡ್ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಬುಲೆಟ್ 350 2023 ಮಾದರಿಯನ್ನು ಬಿಡುಗಡೆ ಮಾಡಿದೆ ಎಂಬುದು ಇಲ್ಲಿ ಗಮಹಾರ್ಹ. (Technology News In Kannada).
ವಿನ್ಯಾಸ ಮತ್ತು ವೈಶಿಷ್ಟ್ಯಗಳು
ರಾಯಲ್ ಎನ್‌ಫೀಲ್ಡ್ ಬುಲೆಟ್ 350 ಮಿಲಿಟರಿ ಆವೃತ್ತಿಯ ವಿನ್ಯಾಸವು ಪ್ರಮಾಣಿತ ರೂಪಾಂತರದಂತಿದೆ. ಉದ್ದವಾದ ಫೆಂಡರ್‌ಗಳೊಂದಿಗೆ ಬದಲಾದ ಇಂಧನ ಟ್ಯಾಂಕ್ ಅನ್ನು ಇದಕ್ಕೆ ನೀಡಲಾಗಿದೆ. ಇದಲ್ಲದೇ ಸೀಟಿನಲ್ಲೂ ಕೆಲ ಬದಲಾವಣೆ ಮಾಡಲಾಗಿದೆ. ಆರಾಮದಾಯಕ ಸವಾರಿಗಾಗಿ, ಬೈಕು ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್‌ಗಳನ್ನು ಮತ್ತು ಹಿಂಭಾಗದಲ್ಲಿ ಡ್ಯುಯಲ್ ಶಾಕ್ ಅಬ್ಸಾರ್ಬರ್‌ಗಳನ್ನು ನೀಡಲಾಗಿದೆ. ಇದು ಸಿಂಗಲ್-ಚಾನಲ್ ಎಬಿಎಸ್ ಮತ್ತು ಡಿಸ್ಕ್ ಬ್ರೇಕ್ಗಳನ್ನು ಹೊಂದಿದೆ. ಬೈಕ್ ಡಿಜಿಟಲ್ ಅನಲಾಗ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು USB ಚಾರ್ಜಿಂಗ್ ಪೋರ್ಟ್ ಅನ್ನು ಸಹ ಹೊಂದಿದೆ.
ಕಂಪನಿಯು ಹೊಸ ಬುಲೆಟ್‌ನಲ್ಲಿ 349cc ಸಿಂಗಲ್ ಸಿಲಿಂಡರ್ ಎಂಜಿನ್ ಅನ್ನು ಒದಗಿಸಿದೆ, ಇದು 6,100rpm ನಲ್ಲಿ 20.2bhp ಪವರ್ ಮತ್ತು 4,000rpm ನಲ್ಲಿ 27Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು 5-ಸ್ಪೀಡ್ ಗೇರ್ ಬಾಕ್ಸ್ ಹೊಂದಿದೆ. ಇದಲ್ಲದೆ, ಬೈಕು ದುಂಡಗಿನ ಆಕಾರದ ಹೆಡ್‌ಲ್ಯಾಂಪ್ ಮತ್ತು 3D ಲೋಗೋವನ್ನು ಸಹ ಹೊಂದಿದೆ.
ರಾಯಲ್ ಎನ್‌ಫೀಲ್ಡ್ ಬುಲೆಟ್‌ನ ಇತ್ತೀಚಿನ ಮಿಲಿಟರಿ ಆವೃತ್ತಿಯ ಬೆಲೆಯನ್ನು 1.79 ಲಕ್ಷ ರೂಪಾಯಿಗಳಲ್ಲಿ ಇರಿಸಲಾಗಿದೆ. ಈ ಆವೃತ್ತಿಯು ಕಪ್ಪು ಮತ್ತು ಕೆಂಪು ಬಣ್ಣದ ಎರಡು ಬಣ್ಣಗಳಲ್ಲಿ ಲಭ್ಯವಿದೆ. ಅಧಿಕೃತ ಮಳಿಗೆಗೆ ಭೇಟಿ ನೀಡುವ ಮೂಲಕ ಈ ಬೈಕ್ ಅನ್ನು ಬುಕ್ ಮಾಡಬಹುದು.
ರಾಯಲ್ ಎನ್‌ಫೀಲ್ಡ್ ಶಾಟ್‌ಗನ್ 650 ನ ವಿವರಗಳು
ಆಟೋ ಬ್ರಾಂಡ್ ರಾಯಲ್ ಎನ್‌ಫೀಲ್ಡ್ ಈ ತಿಂಗಳ ಆರಂಭದಲ್ಲಿ ಶಾಟ್‌ಗನ್ 650 ಬೈಕನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಬೈಕಿನ ಬೆಲೆ 3,59,430 ರೂ.ನಿಂದ ಆರಂಭವಾಗುತ್ತದೆ. ಇದು ಎಲ್‌ಇಡಿ ಹೆಡ್‌ಲ್ಯಾಂಪ್‌ಗಳು, ಡಿಸ್ಕ್ ಬ್ರೇಕ್‌ಗಳು, ಡ್ಯುಯಲ್-ಚಾನೆಲ್ ಎಬಿಎಸ್ ಮತ್ತು 18-ಇಂಚಿನ ಚಕ್ರಗಳನ್ನು ಹೊಂದಿದ್ದರೆ, ಹಿಂಭಾಗವು 19-ಇಂಚಿನ ಚಕ್ರವನ್ನು ಹೊಂದಿದೆ. ಇದು ಟ್ವಿನ್ ಶಾಕ್ ರಿಯರ್ ಅಬ್ಸಾರ್ಬರ್‌ಗಳು, ಡಿಜಿಟಲ್-ಅನಲಾಗ್ ಕ್ಲಸ್ಟರ್ ಮತ್ತು ಟ್ರಿಪಲ್ ನ್ಯಾವಿಗೇಷನ್ ಪಾಡ್ ಅನ್ನು ಹೊಂದಿದೆ. ಇದರ ಉದ್ದ 2170 ಮಿಮೀ, ಅಗಲ 820 ಮಿಮೀ ಮತ್ತು ಎತ್ತರ 1105 ಮಿಮೀ.ಗಳಾಗಿದೆ.
ಶಾಟ್‌ಗನ್ ಬೈಕ್ 648cc ಟ್ವಿನ್ 4 ಸ್ಟೋಕ್ SOHC ಏರ್ ಕೂಲ್ಡ್ ಎಂಜಿನ್ ಹೊಂದಿದೆ. ಈ ಎಂಜಿನ್ 46.3 HP ಪವರ್ ಮತ್ತು 52.3 Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು 6-ಸ್ಪೀಡ್ ಗೇರ್ ಬಾಕ್ಸ್ ಹೊಂದಿದೆ.
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ