ಬೆಂಗಳೂರು : ಇಂದು ಅಂದರೆ ಮಾರ್ಚ್ 4 ರಂದು Samsung Galaxy F15 5G ಅನ್ನು ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ. ಇದು ಕಂಪನಿಯ ಹೊಸ F ಸರಣಿಯ ಸ್ಮಾರ್ಟ್‌ಫೋನ್ ಆಗಿದೆ. ಈ ಫೋನ್ 90Hz AMOLED ಸ್ಕ್ರೀನ್ ಅನ್ನು ಹೊಂದಿದ್ದು, ಇದು MediaTek ಡೈಮೆನ್ಸಿಟಿ 6100+ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. Galaxy F15 5G ಮೂರು ಬಣ್ಣಗಳಲ್ಲಿ ಲಭ್ಯವಿದೆ.   ಅದರ ಬ್ಯಾಟರಿ ಎರಡು ದಿನಗಳವರೆಗೆ ಇರುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. 


COMMERCIAL BREAK
SCROLL TO CONTINUE READING

ಭಾರತದಲ್ಲಿ Samsung Galaxy F15 5G ಬೆಲೆ : 
Ash Black, Groovy Violet ಮತ್ತು Jazzy Green ಹೀಗೆ ಈ ಫೋನ್ ಮೂರು ಬಣ್ಣಗಳಲ್ಲಿ ಬರುತ್ತಿದೆ. Samsung Galaxy F15 5G ಎರಡು ಮಾದರಿಗಳಲ್ಲಿ ಲಭ್ಯವಿದೆ. 4GB RAM + 128GB ಸ್ಟೋರೇಜ್ ಮತ್ತು 6GB RAM + 128GB  ಸ್ಟೋರೇಜ್ ಗಳಲ್ಲಿ ಈ ಫೋನ್ ಲಭ್ಯವಿದೆ. ಈ ಫೋನ್ ಮಾರ್ಚ್ 11 ರಿಂದ Flipkart, Samsung.com ಮತ್ತು ಕೆಲವು ಆಯ್ದ ಚಿಲ್ಲರೆ ಅಂಗಡಿಗಳಲ್ಲಿ ಲಭ್ಯವಿರುತ್ತದೆ. ವಿಶೇಷವೆಂದರೆ Galaxy F15 5G ನ ಆರಂಭಿಕ ಮಾರಾಟವು ಇಂದು ಫ್ಲಿಪ್‌ಕಾರ್ಟ್‌ನಲ್ಲಿ ಸಂಜೆ 7 ರಿಂದ ಪ್ರಾರಂಭವಾಗುತ್ತಿದೆ.ಈ ಆರಂಭಿಕ ಮಾರಾಟದಲ್ಲಿ ಫೋನ್ ಖರೀದಿಸುವವರಿಗೆ 1299 ರೂಪಾಯಿ ಮೌಲ್ಯದ ಸ್ಯಾಮ್‌ಸಂಗ್ ಟ್ರಾವೆಲ್ ಅಡಾಪ್ಟರ್ ಅನ್ನು ಕೇವಲ 299 ರೂಪಾಯಿಗೆ  ನೀಡಲಾಗುತ್ತದೆ.


ಇದನ್ನೂ ಓದಿ Internet: ಮನೆಯಲ್ಲಿ ವೈಫೈ ರೂಟರ್‌ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲವೇ? ಹಾಗಾದರೆ ಈ ಟ್ರೀಕ್‌ ಟ್ರೈ ಮಾಡಿ..


Samsung Galaxy F15 5G ವಿಶೇಷಣಗಳು : 
Samsung Galaxy F15 5G 6.5-ಇಂಚಿನ FHD+ sAMOLED ಸ್ಕ್ರೀನ್ ಅನ್ನು ಹೊಂದಿದ್ದು, ಅದರ ರಿಫ್ರೆಶ್ ರೇಟ್ 90Hz ಆಗಿದೆ. ಈ ಫೋನ್ MediaTek ಡೈಮೆನ್ಸಿಟಿ 6100+ ಪ್ರೊಸೆಸರ್ ಅನ್ನು ಹೊಂದಿದ್ದು, 4GB RAM + 128GB,  6GB RAM + 128GB  ಸ್ಟೋರೇಜ್ ಆಯ್ಕೆಯೊಂದಿಗೆ ಬರುತ್ತದೆ. ಮೆಮೊರಿ ಕಾರ್ಡ್ ಅನ್ನು ಸೇರಿಸುವ ಮೂಲಕ 1TB ವರೆಗೆ  ಸ್ಟೋರೇಜ್ ಅನ್ನು ಹೆಚ್ಚಿಸಬಹುದು.


Samsung Galaxy F15 5G ಕ್ಯಾಮೆರಾ : 
ಈ ಫೋನ್ ಮೂರು ಕ್ಯಾಮೆರಾಗಳನ್ನು ಹೊಂದಿದೆ. ಹಿಂಭಾಗದಲ್ಲಿ 50MP ಮೇನ್ ಕ್ಯಾಮೆರಾ, ಜೊತೆಗೆ ಇನ್ನೂ ಎರಡು ಕ್ಯಾಮೆರಾಗಳು ಲಭ್ಯವಿದೆ. ಅದರಲ್ಲಿ ಒಂದು 5MP ಮತ್ತು ಇನ್ನೊಂದು 2MP ಆಗಿದೆ. ಈ ಫೋನ್ ನಲ್ಲಿ ಸೆಲ್ಫಿಗಾಗಿ 13MP ಫ್ರಂಟ್ ಕ್ಯಾಮೆರಾ ನೀಡಲಾಗಿದೆ. ಪ್ರಮುಖ ವಿಷಯವೆಂದರೆ ಈ ಫೋನ್ 6,000mAh ನ  ಬ್ಯಾಟರಿಯನ್ನು ಹೊಂದಿದೆ. ಈ ಫೋನ್ ಅನ್ನು ಒಮ್ಮೆ ಚಾರ್ಜ್ ಮಾಡಿದರೆ  ಎರಡು ದಿನಗಳವರೆಗೆ ಬಳಸಬಹುದು ಎನುತ್ತದೆ ಕಂಪನಿ.


ಇದನ್ನೂ ಓದಿ : Google Chrome Features: ಗೂಗಲ್ ಕ್ರೋಮ್‌ನಲ್ಲಿ ಒಮ್ಮೆಗೆ ಮೂರು ವೈಶಿಷ್ಟ್ಯಗಳನ್ನು ಪರಿಚಯಿಸಿದ ಗೂಗಲ್


ಇದಲ್ಲದೇ ವಾಯ್ಸ್ ಫೋಕಸ್ ಆನ್ ಫೀಚರ್ ಕೂಡಾ ಫೋನ್‌ನಲ್ಲಿ ಲಭ್ಯವಿದೆ. ನೀವು ಥಿಯೇಟರ್‌ನಲ್ಲಿ ಅಥವಾ ಸದ್ದು ಗದ್ದಲವಿರುವ ಜಾಗಲ್ಲಿದ್ದು ಕರೆ ಸ್ವೀಕರಿಸಲೇ ಬೇಕಾದಾಗ, ಈ ವೈಶಿಷ್ಟ್ಯವನ್ನು ಆನ್ ಮಾಡಿದರೆ ಸಾಕು. ನಿಮ್ಮ ಧ್ವನಿ ಮಾತ್ರ  ರವಾನೆಯಾಗುತ್ತದೆ. ಯುಎಸ್‌ಬಿ ಟೈಪ್-ಸಿ ಪೋರ್ಟ್, 3.5 ಎಂಎಂ ಹೆಡ್‌ಫೋನ್ ಜ್ಯಾಕ್ ಮುಂತಾದ ಇತರ ವೈಶಿಷ್ಟ್ಯಗಳನ್ನು ಹೊಂದಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.