ಸ್ಯಾಮ್‌ಸಂಗ್ ತರುತ್ತಿದೆ 200MP ಕ್ಯಾಮೆರಾ ಹೊಂದಿರುವ ಸ್ಮಾರ್ಟ್‌ಫೋನ್ ..! ಹೊಸ ಫೋನ್ ವಿಡಿಯೋ ಇಲ್ಲಿದೆ
ಇಲ್ಲಿಯವರೆಗಿನ ವರದಿಗಳ ಆಧಾರದ ಮೇಲೆ, Galaxy S23 ಸರಣಿಯ ಸ್ಮಾರ್ಟ್‌ಫೋನ್‌ಗಳು 10Hz ನಿಂದ 120Hz ವರೆಗಿನ ಡೈನಾಮಿಕ್ ಸ್ಕ್ರೀನ್ ರಿಫ್ರೆಶ್ ರೇಟ್ ಜೊತೆಗೆ LTPO ಡಿಸ್ಪ್ಲೇಯೊಂದಿಗೆ ಬರುತ್ತವೆ ಎನ್ನಲಾಗಿದೆ.
ಬೆಂಗಳೂರು : ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್-ಸರಣಿಯ ಪ್ರಮುಖ ಸ್ಮಾರ್ಟ್‌ಫೋನ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ. ಸ್ಯಾಮ್‌ಸಂಗ್ ಮುಂದಿನ ದಿನಗಳಲ್ಲಿ ಬಿಡುಗಡೆ ಮಾಡುವ ಸ್ಮಾರ್ಟ್‌ಫೋನ್ ಕುರಿತ ವಿವರಗಳು ಈಗಾಗಲೇ ಆನ್‌ಲೈನ್‌ನಲ್ಲಿ ಹಲವಾರು ಬಾರಿ ಸೋರಿಕೆಯಾಗಿದೆ. ಕಂಪನಿಯು Galaxy S23 ಅಲ್ಟ್ರಾದಲ್ಲಿ 200MP ಕ್ಯಾಮೆರಾ ಸೆನ್ಸಾರ್ ಹೊಂದಿದೆ. ಈಗ, ಮುಂಬರುವ ಪ್ರಮುಖ ಸ್ಮಾರ್ಟ್‌ಫೋನ್‌ನ ಕ್ಯಾಮೆರಾ ಮಾಡ್ಯೂಲ್ ಹೇಗಿರುತ್ತದೆ ಎಂಬುದನ್ನು ಟೆಕ್ನಿಜೋದ ಹೊಸ ಪರಿಕಲ್ಪನೆಯ ವೀಡಿಯೊ ತೋರಿಸುತ್ತದೆ.
Samsung Galaxy S23 Ultraದಲ್ಲಿ 200MP ಕ್ಯಾಮೆರಾ :
ವರದಿಗಳ ಪ್ರಕಾರ, Samsung Galaxy S23 Ultra 200-ಮೆಗಾಪಿಕ್ಸೆಲ್ Samsung HM1 ISOCELL ಸೆನ್ಸಾರ್ ಅನ್ನು ಹೊಂದಿರುತ್ತದೆ. ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 8 ಜೆನ್ 1 ನಂತಹ ಪ್ರೊಸೆಸರ್‌ಗಳು, 200MP ವರೆಗಿನ ಸಿಂಗಲ್ -ಕ್ಯಾಮೆರಾ ರೆಸಲ್ಯೂಶನ್ ಅನ್ನು ಬೆಂಬಲಿಸುತ್ತವೆ. ಮತ್ತೊಂದೆಡೆ, ಇತರ ಎರಡು ಮಾದರಿಗಳಾದ ಗ್ಯಾಲಕ್ಸಿ ಎಸ್ 23 ಮತ್ತು ಗ್ಯಾಲಕ್ಸಿ ಎಸ್ 23 ಪ್ಲಸ್ 108 ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮೆರಾ ಸೆನ್ಸಾರ್ ಹೊಂದಿರುವ ನಿರೀಕ್ಷೆಯಿದೆ. ಎಲ್ಲಾ ಮೂರು ಮಾದರಿಗಳು ಹಿಂದಿನ ಪ್ಯಾನೆಲ್‌ನಲ್ಲಿ ಬಹು ಕ್ಯಾಮೆರಾ ಸೆನ್ಸಾರ್ ನೊಂದಿಗೆ ಬರುತ್ತವೆ.
ಇದನ್ನೂ ಓದಿ : Moto G62 5G: ಕೈಗೆಟುಕುವ ಬೆಲೆಯಲ್ಲಿ 5ಜಿ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದ ಮೋಟೋರೊಲಾ
Samsung Galaxy S23 Ultra ಡಿಸ್‌ಪ್ಲೇ :
ಇಲ್ಲಿಯವರೆಗಿನ ವರದಿಗಳ ಆಧಾರದ ಮೇಲೆ, Galaxy S23 ಸರಣಿಯ ಸ್ಮಾರ್ಟ್‌ಫೋನ್‌ಗಳು 10Hz ನಿಂದ 120Hz ವರೆಗಿನ ಡೈನಾಮಿಕ್ ಸ್ಕ್ರೀನ್ ರಿಫ್ರೆಶ್ ರೇಟ್ ಜೊತೆಗೆ LTPO ಡಿಸ್ಪ್ಲೇಯೊಂದಿಗೆ ಬರುತ್ತವೆ ಎನ್ನಲಾಗಿದೆ. ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 8 ಜೆನ್ 2 ಪ್ರೊಸೆಸರ್ ಮತ್ತು ಸ್ಯಾಮ್ ಸಂಗ್ ನ Exynos ಫ್ಲ್ಯಾಗ್‌ಶಿಪ್ ಚಿಪ್‌ಸೆಟ್‌ನಿಂದ ಚಾಲಿತವಾಗುತ್ತವೆ.
Vodafone-Idea ನಿಂದ ನಿತ್ಯ 3.5ಜಿಬಿ ಡೇಟಾ ನೀಡುವ ವಿಶೇಷ ಪ್ಲಾನ್ ಬಿಡುಗಡೆ
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.