ಕಡಲ ದಾಟಿ ಉಪಗ್ರಹ ಉಡಾಯಿಸಿದ ಕನ್ನಡಿಗ: 25ನೇ ವಯಸ್ಸಿಗೆ ಸೈಟಿಂಸ್ಟ್ ಆಗಿ ಸಾಧನೆ
ಕಾಫಿನಾಡ ಆ ಕಣ್ಮಣಿಯೇ ಅವೈಜ್ ಅಹಮದ್. ಈತ ಚಿಕ್ಕಮಗಳೂರು ತಾಲೂಕಿನ ಆಲ್ದೂರು ನಿವಾಸಿ. ಇವ್ನಿಗೆ ಚಿಕ್ಕಂದಿನಿಂದ ಸೈಟಿಂಸ್ಟ್ ಆಗಬೇಕೆಂಬ ಬಯಕೆ. ಇಂದು ತಾನೊಬ್ಬ ಫೇಮಸ್ ಸೈಟಿಂಸ್ಟ್ ಆಗಿದ್ದಾನೆ. ವಯಸ್ಸು ಜಸ್ಟ್ 24 ಕ್ರಾಸ್ ಆಗಿ 25ಕ್ಕೆ ಬಿದ್ದಿದೆ. ಈ ವಯಸ್ಸಿಗೆ ಹುಡುಗ್ರು ಕೈಯಲ್ಲಿ ಬಯೋಡೇಟಾ ಇಟ್ಕೊಂಡು ಕೆಲಸಕ್ಕಾಗಿ ಅಲೀತಿರ್ತಾರೆ. ಆದ್ರೆ, ಈತ ತನ್ನ 25ನೇ ವಯಸ್ಸಿಗೆ ಕಡಲ ದಾಟಿ ಉಪಗ್ರಹವನ್ನ ಹಾರಿಸಿ ಹೊಸ ಮೈಲಿಗಲ್ಲು ಸೃಷ್ಠಿಸಿದ್ದಾನೆ.
ಆತ ಜಸ್ಟ್ 25 ವರ್ಷದ ಯುವಕ. ಹಳ್ಳಿಯಲ್ಲಿ ಹುಟ್ಟಿ, ಗಲ್ಲಿಯಲ್ಲಿ ಬೆಳ್ದೋನು. ಅಸಮಾನ್ಯ ತಲೆಯ ಆ ಯುವಕ ಅಸಂಖ್ಯಾತ ಕನಸು ಕಂಡಿದ್ದ. ವಿಜ್ಞಾನಿ ಆಗ್ತೀನಿ, ವಿಜ್ಞಾನಿ ಅಂತಿದ್ದ. ಕೊನೆಗೊಂದ್ ದಿನ ವಿಜ್ಞಾನಿ ಆಗೇಬಿಟ್ಟ. ಕಡಲ ದಾಟಿ ಉಪಗ್ರಹ ಉಡಾಯಿಸಿ ದೇಶಕ್ಕೂ ಕೀರ್ತಿ ತಂದ. ರೈತರ ಬಾಳಿಗೂ ಬೆಳಕಾದ. ಇದೀಗ ಅಮೇರಿಕಾದ ವಾಷಿಂಗ್ಟನ್‍ನಲ್ಲಿ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅರೈವಲ್ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾನೆ. ಕಾಫಿನಾಡಿಗರು ಕಾಫಿನಾಡ ಕಣ್ಮಣಿ ಅಂದ ಆ ಯುವಕ ಯಾರ್ ಗೊತ್ತಾ... ಈ ಸ್ಟೋರಿ ಓದಿ...
ಕಾಫಿನಾಡ ಆ ಕಣ್ಮಣಿಯೇ ಅವೈಜ್ ಅಹಮದ್. ಈತ ಚಿಕ್ಕಮಗಳೂರು ತಾಲೂಕಿನ ಆಲ್ದೂರು ನಿವಾಸಿ. ಇವ್ನಿಗೆ ಚಿಕ್ಕಂದಿನಿಂದ ಸೈಟಿಂಸ್ಟ್ ಆಗಬೇಕೆಂಬ ಬಯಕೆ. ಇಂದು ತಾನೊಬ್ಬ ಫೇಮಸ್ ಸೈಟಿಂಸ್ಟ್ ಆಗಿದ್ದಾನೆ. ವಯಸ್ಸು ಜಸ್ಟ್ 24 ಕ್ರಾಸ್ ಆಗಿ 25ಕ್ಕೆ ಬಿದ್ದಿದೆ. ಈ ವಯಸ್ಸಿಗೆ ಹುಡುಗ್ರು ಕೈಯಲ್ಲಿ ಬಯೋಡೇಟಾ ಇಟ್ಕೊಂಡು ಕೆಲಸಕ್ಕಾಗಿ ಅಲೀತಿರ್ತಾರೆ. ಆದ್ರೆ, ಈತ ತನ್ನ 25ನೇ ವಯಸ್ಸಿಗೆ ಕಡಲ ದಾಟಿ ಉಪಗ್ರಹವನ್ನ ಹಾರಿಸಿ ಹೊಸ ಮೈಲಿಗಲ್ಲು ಸೃಷ್ಠಿಸಿದ್ದಾನೆ.
ಈ ವಯಸ್ಸಲ್ಲಿ ಅಮೆರಿಕದ ಸ್ಪೇಸ್ ಏಕ್ಸ್‍ನಿಂದ ಶಕುಂತಲಾ ಎಂಬ ಉಪಗ್ರಹವೊಂದನ್ನ ಬಾಹ್ಯಾಕಾಶಕ್ಕೆ ಯಶಸ್ವಿಯಾಗಿ ಹಾರಿಸಿದ್ದಾನೆ. ಬೇರೆಲ್ಲಾ ಉಪಗ್ರಹಗಳಿಗಿಂತ ಹಳ್ಳಿ ಹೈದನ ಈ ಶಕುಂತಲಾ ಉಪಗ್ರಹ ಶೇಕಡ 50ಕ್ಕಿಂತ ಹೆಚ್ಚು ಡೇಟಾವನ್ನ ಬಿಡುಗಡೆ ಮಾಡುತ್ತೆ. ಭೂಮಿಯ ಚಲನವಲನದ ಫೋಟೋ, ಕೃಷಿ ಪ್ರಗತಿ, ಹವಾಮಾನದ ಮಾಹಿತಿ ಸೇರಿದಂತೆ ವಿವಿಧ ರೀತಿಯ ಮಾಹಿತಿ ರವಾನಿಸುತ್ತೆ. ಎಳೆ ವಯಸ್ಸಲ್ಲೇ ಮಗ ಅವೈಜ್ ಅಹಮದ್ ಸಾಧನೆ ಕಂಡು ಅವರ ಅಪ್ಪ ನದೀಮ್ ಸಂತಸ ವ್ಯಕ್ತಪಡಿಸಿದ್ದು, ಇಂದಿನ ಮೋದಿ ಅರೈವಲ್ ಕಾರ್ಯಕ್ರಮದಲ್ಲಿ ಮಗನ ನೋಡಲು ಉತ್ಸುಕರಾಗಿರುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ- AC Bed Sheet: ಎಸಿ ಗೊತ್ತು.. ಎಸಿ ಬೆಡ್‌ಶೀಟ್ ಬಗ್ಗೆ ಕೇಳಿದ್ದೀರಾ? ಕೇವಲ ರೂ.699!
ಅವೈಜ್ ಅಹಮದ್ ತಂದೆ ನದೀಮ್ ಆಲ್ದೂರಿನಲ್ಲಿ ಮೆಡಿಕಲ್ ಸ್ಟೋರ್ ಇಟ್ಟುಕೊಂಡಿದ್ದಾರೆ. ಆಲ್ದೂರಿನ ಗಲ್ಲಿಯಲ್ಲಿ ಓಡಾಡ್ಕೊಂಡಿದ್ದ ಹುಡ್ಗ ಇಂದು ಜಗತ್ತನ್ನೇ ಭಾರತದತ್ತ ತಿರುಗಿ ನೋಡುವಂತೆ ಮಾಡಿದ್ದಾನೆ. ಪೋಷಕರು ನೀನು ಇದೇ ಆಗಬೇಕೆಂದು ಎಂದೂ ಒತ್ತಡ ಹೇರಿರಲಿಲ್ಲ. ನಿನಗೆ ಇಷ್ಟ ಬಂದದ್ದು ಓದು ಎಂದು ಫ್ರೀಯಾಗಿ ಬಿಟ್ಟಿದ್ದಕ್ಕೆ ಇಂದು ದೇಶದ ಹೆಮ್ಮೆಯ ಮಗನಾಗಿದ್ದಾನೆ.
ಪಿಲಾನಿ, ಗೋವಾ ಯುನಿವರ್ಸಿಟಿಯಲ್ಲಿ ಓದಿದ ಈ ಯುವಕ ಇಂದು ಏರೋಸ್ಪೆಸ್ ಪಿಕ್ಸಲ್ ಅನ್ನೋ ಉಪಗ್ರಹ ತಯಾರಿಕಾ ಸ್ವಂತ ಕಂಪೆನಿಯನ್ನೂ ತೆರೆದಿದ್ದಾನೆ. ಮೊದಲು ರಷ್ಯಾದಿಂದ ಉಪಗ್ರಹ ಉಡಾವಣೆಗೆ ಸಿದ್ದತೆ ನಡೆದಿತ್ತಾದ್ರು, ಪ್ರಧಾನಿ ಮೋದಿ ಜೊತೆ ಮಾತುಕತೆ ನಡೆಸಿ ತನ್ನ ಕನಸಿನ ಯೋಜನೆಯನ್ನ ದೇಶದ ದೊರೆಯ ಮುಂದಿಟ್ಟಿದ್ದ. ಇದೀಗ ಜಗತ್ತಿನ ಗಮನ ಸೆಳೆದಿರುವ ನದೀಮ್ ಇಂದು ಅಮೇರಿಕಾದ ವಾಷಿಂಗ್ಟನ್‍ನಲ್ಲಿ ಮೋದಿ ಅರೈವಲ್ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗಿಯಾಗಲಿದ್ದಾನೆ. ಆ ಕ್ಷಣವನ್ನ ಕಣ್ತುಂಬಿಕೊಳ್ಳಲು ಅವರ ತಾಯಿ ಕೂಡ ಕುತೂಹಲದಿಂದಿದ್ದಾರೆ.
ಇದನ್ನೂ ಓದಿ- ಸದ್ದಿಲ್ಲದೇ ಹೊಸ ಕಾರು ಲಾಂಚ್ ಮಾಡಿದ ಮಹೀಂದ್ರ ! ಬೆಲೆಯೂ ಕಡಿಮೆ ಫೀಚರ್ಸ್ ಕೂಡಾ ಅದ್ಭುತ
ಒಟ್ಟಾರೆ, ಇಲ್ಲೇ ಹುಟ್ಟಿ ಇಲ್ಲೇ ಬೆಳೆದಿದ್ದೇವೆ. ಏನೇ ಮಾಡಿದರೂ ಇಲ್ಲಿಗೆ ಮಾಡಬೇಕೆಂಬುದು ಅವೇಜ್ ಅಹಮದ್ ಅವರ ಭಾವನೆಯಾಗಿತ್ತು. ವಿದೇಶದಲ್ಲಿ ಸಿಕ್ಕ ಕೆಲಸವನ್ನೂ ಬಿಟ್ಟು ಬೆಂಗಳೂರಲ್ಲಿ ಕಂಪನಿ ತೆರದು ತನ್ನ ಎಳೆಯ ವಯಸ್ಸಿನಲ್ಲೇ ಜಗತ್ತೇ ಭಾರತದತ್ತ ತಿರುಗಿ ನೋಡುವಂತೆ ಮಾಡಿದ್ದಾನೆ. ಅವೈಜ್ ಅಹಮದ್ ನ ಉಪಗ್ರಹ ಶಕುಂತಲಾ ಇದೀಗ ಅಮೆರಿಕದಿಂದ ಉಡಾವಣೆಯಾಗಿದೆ. ಎಳೆ ವಯಸ್ಸಿನಲ್ಲಿ ಇಡೀ ಜಗತ್ತೇ ಭಾರತದತ್ತ ತಿರುಗಿ ನೋಡುವಂತೆ ಮಾಡಿದ ಕಾಫಿನಾಡ ಈ ಹುಡುಗನಿಗೆ ನಾವು-ನೀವು ಹ್ಯಾಟ್ಸಾಫ್ ಹೇಳಿ, ಭವಿಷ್ಯಕ್ಕೆ ಗುಡ್‍ಲಕ್ ಹೇಳೋಣ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ