ಬೆಂಗಳೂರು : ದೈತ್ಯ ಕ್ಷುದ್ರಗ್ರಹದ ಬಗ್ಗೆ ವಿಜ್ಞಾನಿಗಳು ತಮ್ಮ ಅಭಿಪ್ರಾಯವನ್ನು ಬದಲಾಯಿಸಿದ್ದಾರೆ.99942 ಅಪೋಫಿಸ್ ಹೆಸರಿನ ಕ್ಷುದ್ರಗ್ರಹ ಭೂಮಿಗೆ ಡಿಕ್ಕಿ ಹೊಡೆಯುವ ಸಾಧ್ಯತೆಗಳು ತುಂಬಾ ಕಡಿಮೆ ಎಂದು ಈ ಹಿಂದೆ ಹೇಳಲಾಗಿತ್ತು. ಆದರೆ,ಬಾಹ್ಯಾಕಾಶದಲ್ಲಿ ನಡೆಯುವ ಒಂದು ಸಣ್ಣ ಘರ್ಷಣೆ ಕೂಡಾ ಕ್ಷುದ್ರಗ್ರಹದ ಪಥವನ್ನು ಬದಲಾಯಿಸಬಹುದು ಎಂದು ಕೆನಡಾದ ಖಗೋಳಶಾಸ್ತ್ರಜ್ಞ ಪೊಲ್ಲಿ ವೀಗರ್ಟ್ ಅವರ ಹೊಸ ಅಧ್ಯಯನ ಹೇಳಿದೆ. 


COMMERCIAL BREAK
SCROLL TO CONTINUE READING

ಸಣ್ಣ ಘರ್ಷಣೆಯಿಂದ ಪಥ ಬದಲು :
ದಿ ಪ್ಲಾನೆಟರಿ ಸೈನ್ಸ್ ಜರ್ನಲ್‌ನಲ್ಲಿ ಪ್ರಕಟವಾದ ಇತ್ತೀಚಿನ ಅಧ್ಯಯನದ ಪ್ರಕಾರ,ಬಾಹ್ಯಾಕಾಶದಲ್ಲಿ ಅಂಥಹ ಘರ್ಷಣೆ ಸಂಭವಿಸುವ ಮತ್ತು ಭೂಮಿಯ ಕಡೆಗೆ ಕ್ಷುದ್ರಗ್ರಹದ ಹಾದಿಯಲ್ಲಿ ಬದಲಾವಣೆಯನ್ನು ಉಂಟುಮಾಡುವ ಸಂಭವನೀಯತೆಯು ಸರಿಸುಮಾರು ಎರಡು ಶತಕೋಟಿಯಲ್ಲಿ ಒಂದು ಎಂದು ಹೇಳುತ್ತದೆ. ವೀಗರ್ಟ್ ಪ್ರಕಾರ, ಅಪೋಫಿಸ್ ತನ್ನ ಮಾರ್ಗವನ್ನು ಬದಲಾಯಿಸಲು, ಕನಿಷ್ಠ 3.4 ಮೀಟರ್ ಗಾತ್ರದ ಸಣ್ಣ ವಸ್ತುವು ಪ್ರತಿ ಸೆಕೆಂಡಿಗೆ 510 ಮೀಟರ್‌ಗಿಂತ ಹೆಚ್ಚಿನ ವೇಗದಲ್ಲಿ ಕ್ಷುದ್ರಗ್ರಹದೊಂದಿಗೆ ಡಿಕ್ಕಿ ಹೊಡೆಯಬೇಕಾಗುತ್ತದೆ.


ಇದನ್ನೂ ಓದಿ : ಈ ವಸ್ತುಗಳನ್ನು ಪಾಕಿಸ್ತಾನದಿಂದ ಆಮದು ಮಾಡಿಕೊಳ್ಳುತ್ತದೆ ಭಾರತ: ಪ್ರತಿ ಮನೆಯಲ್ಲೂಇದರ ಬಳಕೆಯಾಗುತ್ತೆ!!


99942 ಅಪೋಫಿಸ್ ಅಥವಾ God of Chaos  :
99942 ಅಪೋಫಿಸ್ ಅನ್ನು 'ಗಾಡ್ ಆಫ್ ಚೋಸ್'(God of Chaos) ಎಂದೂ ಕರೆಯುತ್ತಾರೆ.ಪುರಾತನ ಈಜಿಪ್ಟಿನ ಪುರಾಣಗಳಲ್ಲಿ ರಾಕ್ಷಸ ಹಾವಿನಿಂದ ಈ ಹೆಸರು ಬಂದಿದೆ.  99942 ಅಪೋಫಿಸ್ ಅನ್ನು ಮೊದಲು 2004 ರಲ್ಲಿ ಕಂಡುಹಿಡಿಯಲಾಯಿತು.ಇದು ಭೂಮಿಯ ಸಮೀಪವಿರುವ 1,210 ಅಡಿ ಅಗಲದ ಕ್ಷುದ್ರಗ್ರಹವಾಗಿದೆ.ಈ ಬೃಹತ್ ಬಾಹ್ಯಾಕಾಶ ಬಂಡೆಯು ಪ್ರತಿ 7,500 ವರ್ಷಗಳಿಗೊಮ್ಮೆ ಭೂಮಿಯ ಸಮೀಪ ಬರುತ್ತದೆ. 99942 ಅಪೋಫಿಸ್ ಏಪ್ರಿಲ್ 13, 2029 ರಂದು ಭೂಮಿಯ ಮೂಲಕ ಹಾದುಹೋಗುವ ನಿರೀಕ್ಷೆಯಿದೆ.ಈ ಸಂದರ್ಭದಲ್ಲಿ ಅದು ಭೂಮಿಗೆ ಅಪ್ಪಳಿಸಬಹುದು ಎನ್ನುವ ಸಾಧ್ಯತೆಯನ್ನು ತಜ್ಞರು ಆರಂಭದಲ್ಲಿ ತಳ್ಳಿಹಾಕಿದ್ದರು. ಅದರ ಸಂಭವನೀಯತೆ ಕೇವಲ 2.7% ನಲ್ಲಿ  ಎಂದಿದ್ದರು. 


ಭೂಮಿಗೆ ಅಪ್ಪಳಿಸುವ ಸಾಧ್ಯತೆ ಇದೆಯೇ? : 
ಕ್ಷುದ್ರಗ್ರಹದ ಮಾರ್ಗ ಸ್ವಲ್ಪಮಟ್ಟಿಗೆ ಬದಲಾದರೂ ಅದು ಭೂಮಿಯ ಕಡೆಗೆ ಹಿಂತಿರುಗುವ ಸಂಭವನೀಯತೆ ತುಂಬಾ ಕಡಿಮೆ. ಅಂದರೆ ಈ ಸಾಧ್ಯತೆ ಕೇವಲ 5% ಎಂದು ವೀಗರ್ಟ್ ಹೊಸ ಅಧ್ಯಯನದಲ್ಲಿ ಹೇಳಿದ್ದಾರೆ.ಅಂದರೆ ದುರಂತದ ಘರ್ಷಣೆಯ ಸಂಭವನೀಯತೆಯು 2 ಶತಕೋಟಿಯಲ್ಲಿ 1 ಕ್ಕಿಂತ ಕಡಿಮೆ.


ಇದನ್ನೂ ಓದಿ : QR ಕೋಡ್ ಎಂದರೇನು? ಇದು ಹೇಗೆ ಕೆಲಸ ಮಾಡುತ್ತದೆ ಗೊತ್ತಾ?


99942 ಅಪೋಫಿಸ್ ಭೂಮಿಗೆ ಅಪ್ಪಳಿಸುವ ಸಂಭವನೀಯತೆ ತುಂಬಾ ಕಡಿಮೆ ಇರಬಹುದು,ಆದರೆ ಇದು ಭೂಮಿಗೆ ಅತಿ ನಿಕಟವಾಗಿ ಹಾದುಹೋಗುವ ಅತಿದೊಡ್ಡ ಕ್ಷುದ್ರಗ್ರಹಗಳಲ್ಲಿ ಒಂದಾಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ