ಬೆಂಗಳೂರು : ಮಳೆಗಾಲದಲ್ಲಿ ರೆಫ್ರಿಜರೇಟರ್ ಅನ್ನು ಸರಿಯಾದ ತಾಪಮಾನದಲ್ಲಿ ಇಡುವುದು ಮುಖ್ಯ.ಇದರಿಂದ ರೆಫ್ರಿಜರೇಟರ್‌ನಲ್ಲಿ ಇರಿಸಲಾದ ವಸ್ತುಗಳು ತಂಪಾಗಿ, ತಾಜಾವಾಗಿ ಸುರಕ್ಷಿತವಾಗಿ ಉಳಿಯುತ್ತವೆ.ಮಳೆಯ ಸಮಯದಲ್ಲಿ ತಾಪಮಾನದಲ್ಲಿ ಬದಲಾವಣೆಗಳಾಗುತ್ತವೆ. ಆದ್ದರಿಂದ ಫ್ರಿಜ್‌ನ ತಾಪಮಾನವನ್ನು ಸರಿಯಾಗಿ ಇರಿಸಿಕೊಳ್ಳುವುದು ಬಹಳ ಮುಖ್ಯ.


COMMERCIAL BREAK
SCROLL TO CONTINUE READING

ಮಳೆಗಾಲದಲ್ಲಿ ರೆಫ್ರಿಜರೇಟರ್‌ನ ತಾಪಮಾನಎಷ್ಟಿರಬೇಕು ? :
ಮಳೆಗಾಲದಲ್ಲಿ ರೆಫ್ರಿಜರೇಟರ್‌ನ ತಾಪಮಾನ ಎಷ್ಟಿರಬೇಕು ಎನ್ನುವುದು ಎಲ್ಲರಿಗೂ ತಿಳಿದಿರುವುದಿಲ್ಲ.ಮಳೆಗಾಲ ಬಂದಾಗ ಸುತ್ತಮುತ್ತಲಿನ ತಾಪಮಾನವು ಕಡಿಮೆಯಾಗುತ್ತದೆ. ಹೀಗಾದಾಗ ವಾತಾವರಣದಲ್ಲಿನ ತೇವಾಂಶದ ಪ್ರಮಾಣವು ಹೆಚ್ಚಾಗುತ್ತದೆ.ಆದರೆ,ಈ ಆರ್ದ್ರ ಋತುವಿನಲ್ಲಿ,ಆಹಾರ ಪದಾರ್ಥಗಳನ್ನು ದೀರ್ಘಕಾಲದವರೆಗೆ ತಾಜಾವಾಗಿಡಲು ರೆಫ್ರಿಜರೇಟರ್ ತಾಪಮಾನವನ್ನು ಸರಿಯಾಗಿ ಇಡುವುದು ಬಹಳ ಮುಖ್ಯ. 


ಇದನ್ನೂ ಓದಿ : ಗ್ರಾಹಕರನ್ನು ಹಿಡಿದಿಟ್ಟುಕೊಳ್ಳಲು ಜಿಯೋ ಸೂಪರ್ ಪ್ಲಾನ್ !ಕೇವಲ 175 ರೂ.ಗೆ ನೀಡುತ್ತಿದೆ ತಿಂಗಳ ವ್ಯಾಲಿಡಿಟಿ ಹೈ ಸ್ಪೀಡ್ ಡೇಟಾ ಜೊತೆಗೆ 12 OTT


ಮಳೆಗಾಲದಲ್ಲಿ ಫ್ರಿಜ್‌ಗೆ ಸರಿಯಾದ ತಾಪಮಾನ 3 ಡಿಗ್ರಿ ಸೆಲ್ಸಿಯಸ್ ಎಂದು ಸ್ಯಾಮ್‌ಸಂಗ್‌ನ ಬ್ಲಾಗ್ ಪೋಸ್ಟ್‌ನಲ್ಲಿ ಹೇಳಲಾಗಿದೆ.ಈ ತಾಪಮಾನದಲ್ಲಿ ಇರಿಸಲಾದ ರೆಫ್ರಿಜರೇಟರ್ ಆಹಾರ ಪದಾರ್ಥಗಳನ್ನು ತಾಜಾವಾಗಿಡಲು ಸಹಾಯ ಮಾಡುತ್ತದೆ. ಇನ್ನು ಮಳೆಗಾಲ ಅಥವಾ ಇತರ ಯಾವುದೇ ಋತುವಿನಲ್ಲಿ, ಫ್ರಿಜ್ ನ ತಾಪಮಾನ 1.7 ಡಿಗ್ರಿಗಳಿಂದ 3.3 ಡಿಗ್ರಿಗಳ ನಡುವೆ ಇರಬೇಕು ಎನ್ನುತ್ತಾರೆ ತಜ್ಞರು. 


ಬ್ಯಾಕ್ಟೀರಿಯಾ ಬೆಳೆಯುವುದನ್ನು ತಡೆಯಲು ಫ್ರಿಜ್ ಅನ್ನು ಈ ತಾಪಮಾನದಲ್ಲಿ ಸೆಟ್ ಮಾಡಿಕೊಳ್ಳುವುದು ಸೂಕ್ತ.ಇದು ಆಹಾರವನ್ನು ದೀರ್ಘಕಾಲದವರೆಗೆ ತಾಜಾವಾಗಿರಿಸಅಳು ಸಹಾಯ ಮಾಡುತ್ತದೆ.ಈ ತಾಪಮಾನದಲ್ಲಿ ಸೆಟ್ ಮಾಡಲಾದ ರೆಫ್ರಿಜರೇಟರ್ ಆಹಾರದ ರುಚಿ ಕೆಡದಂತೆಯೂ ನೋಡಿಕೊಳ್ಳುತ್ತದೆ.


ಇದನ್ನೂ ಓದಿ :   Screen Time For Children: ಯಾವ ವಯಸ್ಸಿನ ಮಕ್ಕಳು ಎಷ್ಟೊತ್ತು ಸ್ಕ್ರೀನ್ ವೀಕ್ಷಿಸಬಹುದು? ಇಲ್ಲಿದೆ ಮಹತ್ವದ ಮಾಹಿತಿ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.