Flipkart Fraud: ಆನ್‌ಲೈನ್‌ನಲ್ಲಿ ಫ್ಲಿಪ್‌ಕಾರ್ಟ್‌ನಿಂದ ಸ್ಮಾರ್ಟ್‌ಫೋನ್ ಆರ್ಡರ್ ಮಾಡಿದ್ದ ವ್ಯಕ್ತಿಯೊಬ್ಬರು ಶಾಕಿಂಗ್ ಪಾರ್ಸಲ್ ಪಡೆದಿರುವ ಘಟನೆ ಕೇರಳದಲ್ಲಿ ಮುನ್ನಲೆಗೆ ಬಂದಿದೆ. ವಾಸ್ತವವಾಗಿ, ಕೇರಳದ ಕೊಚ್ಚಿ ನಿವಾಸಿ ಎಂಕೆ ಸತೀಶ್ ಎಂಬುವವರು ಇತ್ತೀಚೆಗೆ ಫ್ಲಿಪ್‌ಕಾರ್ಟ್‌ನಿಂದ OnePlus 11 5G ಸ್ಮಾರ್ಟ್‌ಫೋನ್ ಖರೀದಿಸಿದ್ದರು. ಆದರೆ, ಬಾಕ್ಸ್ ತೆರೆದು ನೋಡಿದ ಗ್ರಾಹಕರಿಗೆ ಆಘಾತವೇ ಕಾದಿತ್ತು... 


COMMERCIAL BREAK
SCROLL TO CONTINUE READING

ಲಭ್ಯವಿರುವ ಮಾಹಿತಿಯ ಪ್ರಕಾರ, ಸೆಪ್ಟೆಂಬರ್ 1, 2023ರಂದು ಕೇರಳದ ಕೊಚ್ಚಿ ನಿವಾಸಿ ಎಂಕೆ ಸತೀಶ್ ಎಂಬುವವರು 53,098 ರೂ. ಮೌಲ್ಯದ OnePlus 11 5G ಸ್ಮಾರ್ಟ್‌ಫೋನ್  ಅನ್ನು ಬುಕ್ ಮಾಡಿದ್ದರು. ಇನ್ನೇನು ಕೆಲವೇ ದಿನಗಳಲ್ಲಿ ಹೊಸ ಫೋನ್ ಕೈ ಸೇರಲಿದೆ ಎಂದು ಉತ್ಸುಕರಾಗಿದ್ದ ಸತೀಶ್ ಅವರಿಗೆ ಹೊಚ್ಚ ಹೊಸ 5G ಸ್ಮಾರ್ಟ್‌ಫೋನ್ ಬದಲಿಗೆ ಹಾನಿಗೊಳಗಾದ ಸ್ಮಾರ್ಟ್‌ಫೋನ್ ಸಿಕ್ಕಿದೆ.


ಮಾಧ್ಯಮಗಳಿಗೆ ಸತೀಶ್ ಅವರು ನೀಡಿರುವ ಮಾಹಿತಿಯ ಪ್ರಕಾರ, ಅವರು ಫ್ಲಿಪ್‌ಕಾರ್ಟ್‌ನಿಂದ ಹೊಸ 5ಜಿ ಸ್ಮಾರ್ಟ್‌ಫೋನ್ ಬುಕ್ ಮಾಡಿದ್ದರು. ಫೋನ್‌ನ ಬೆಲೆ 53,098 ರೂ. ಡೆಲಿವರಿ ಬಾಕ್ಸ್ ನಲ್ಲಿ ಫೋನ್ ಬೆಲೆಯನ್ನೂ ನಮೂದಿಸಲಾಗಿದೆ. ಆದರೆ, ತಮಗೆ ಹೊಸ ಸಾಧನದ ಬದಲು ಭೌತಿಕವಾಗಿ ಹಾನಿಗೊಳಗಾಗಿರುವ ಸ್ಮಾರ್ಟ್‌ಫೋನ್ ಅನ್ನು ಡೆಲಿವರಿ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. 


ಇದನ್ನೂ ಓದಿ- ATM Safety Tips: ಎಟಿಎಂನಿಂದ ಹಣ ಡ್ರಾ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ


ವಿಶೇಷವೆಂದರೆ ಗ್ರಾಹಕರು ದೋಷಯುಕ್ತ ಉತ್ಪನ್ನಗಳನ್ನು ಹಿಂದಿರುಗಿಸಲು ಅಥವಾ ಬದಲಾಯಿಸಲು ಎರಡು ಆಯ್ಕೆಗಳಿವೆ. ಮೊದಲನೆಯದಾಗಿ ಏಳು ದಿನಗಳೊಳಗೆ ಫೋನ್ ಅನ್ನು ಸರಬರಾಜುದಾರರ ಸೇವಾ ಕೇಂದ್ರಕ್ಕೆ ಹಿಂತಿರುಗಿಸಬಹುದು. ಇನ್ನೊಂದು ಆಯ್ಕೆ ಎಂದರೆ 12 ತಿಂಗಳ ವಾರಂಟಿ ಅಡಿಯಲ್ಲಿ ಫೋನ್ ರಿಪೇರ್ ಮಾಡಿಸಬಹುದು. ಆದರೆ, ದುರದೃಷ್ಟವಶಾತ್ ಸತೀಶ್ ಪ್ರಕರಣದಲ್ಲಿ ಇವೆರಡೂ ಸಾಧ್ಯವಾಗಿಲ್ಲ. ಇದಕ್ಕೆ ಮುಖ್ಯ ಕಾರಣ ಸತೀಶ್ ಎಂಬ ಗ್ರಾಹಕರು ಫ್ಲಿಪ್‌ಕಾರ್ಟ್‌ನಿಂದ ನೇರವಾಗಿ ಫೋನ್ ಖರೀದಿಸಿಲ್ಲ. ಬದಲಿಗೆ ಫ್ಲಿಪ್‌ಕಾರ್ಟ್‌ನಿಂದ 'ಟರ್ಸ್ಟ್' ಎಂಬ ಮಾರಾಟಗಾರರಿಂದ ಸತೀಶ್ ಅವರು OnePlus 11 5G ಸ್ಮಾರ್ಟ್‌ಫೋನ್ ಅನ್ನು ಖರೀದಿಸಿದ್ದಾರೆ. ಈ ಮಾರಾಟಗಾರನ ಬಳಿ 'ಫ್ಲಿಪ್‌ಕಾರ್ಟ್ ಅಶ್ಯೂರ್ಡ್ ಬ್ಯಾಡ್ಜ್'  ಕೂಡ ಇದ್ದದ್ದರಿಂದ ನಂಬಿಕೆಯಿಟ್ಟು ಸತೀಶ್ ಫೋನ್ ಬುಕ್ ಮಾಡಿದ್ದರಂತೆ. 


ಸತೀಶ್ ಫ್ಲಿಪ್‌ಕಾರ್ಟ್ ಮತ್ತು ಒನ್‌ಪ್ಲಸ್ ಎರಡೂ ಅವರು ಅಧಿಕೃತ ಮಾರಾಟಗಾರರಿಂದ ವಾರಂಟಿಯನ್ನು ಖರೀದಿಸದ ಕಾರಣ ಇವರಿಗೆ ದೋಷಯುಕ್ತ ಉತ್ಪನ್ನಗಳನ್ನು ಹಿಂದಿರುಗಿಸಲಾಗಲಿ, ಇಲ್ಲವೇ ಬದಲಾಯಿಸಲಾಗಲಿ ಸಾಧ್ಯವಾಗಿಲ್ಲ. ಸತೀಶ್ ಅವರು ಕೊಚ್ಚಿಯಲ್ಲಿರುವ OnePlus ಸೇವಾ ಕೇಂದ್ರಕ್ಕೆ ಹೋದಾಗ ಅವರಿಗೆ ಈ ಫೋನ್ ಗುಜರಾತ್ ನಿವಾಸಿಯ ಹೆಸರಿನಲ್ಲಿ ಖರೀದಿಸಲಾಗಿರುವ ಫೋನ್ ಎಂಬ ಮಾಹಿತಿ ಲಭ್ಯವಾಗಿದೆ. 


ಇದನ್ನೂ ಓದಿ- ದೇಶದ ಈ ಭಾಗದಲ್ಲಿ ತೆರೆದಿದೆ UPI-ATM: ಇಲ್ಲಿವೆ ಇದರ ಪ್ರಯೋಜನಗಳು


ಮೋಸ ಹೋಗಿರುವ ಗ್ರಾಹಕ ಸತೀಶ್ ಅವರ ಮುಂದಿನ ನಡೆ ಏನು? 
ಹೊಸ 5ಜಿ ಸ್ಮಾರ್ಟ್‌ಫೋನ್ ಖರೀದಿಸಲು 53,098 ರೂ. ಪಾವತಿಸಿ ಮೋಸ ಹೋಗಿರುವ ಸತೀಶ್ ಗ್ರಾಹಕರ ನ್ಯಾಯಾಲಯದ ಮೆಟ್ಟಿಲೇರಲು ನಿರ್ಧರಿಸಿದ್ದಾರೆ. ಸತೀಶ್ ಅವರ ಕಥೆ ಆನ್‌ಲೈನ್ ಶಾಪಿಂಗ್‌ನಿಂದ ಉಂಟಾಗಬಹುದಾದ ಅಪಾಯಗಳ ಬಗ್ಗೆ ಎಲ್ಲರಿಗೂ ಒಂದು ಪಾಠವಾಗಿದೆ. ಮಾತ್ರವಲ್ಲ, ಆನ್‌ಲೈನ್ ಶಾಪಿಂಗ್‌ ವೇಳೆ ಎಷ್ಟು ಸುರಕ್ಷತಾ ಕ್ರಮಗಳನ್ನು ಕೈಗೊಂಡರೂ ಕಡಿಮೆಯೇ ಎಂಬ ಸಂದೇಶವನ್ನು ನೀಡುತ್ತದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.