Shocking News! Facebook ನಿಮ್ಮ ಖಾಸಗಿ WhatsApp ಸಂದೇಶಗಳನ್ನು ಓದುತ್ತಂತೆ! ಹೊಸ ವರದಿಯಲ್ಲಿ ಅಂಶ ಬಹಿರಂಗ
WhatsApp Private Message - Propublica ವತಿಯಿಂದ ಬಂದ ವರದಿಯೊಂದು WhatsApp ಬಳಕೆದಾರರನ್ನು ಬೆಚ್ಚಿಬೀಳಿಸಿದೆ. ವರದಿಯಲ್ಲಿ Facebook ನಿಮ್ಮ WhatsAppನಲ್ಲಿ ಬರುವ ಖಾಸಗಿ ಸಂದೇಶಗಳನ್ನು ಸುಲಭವಾಗಿ ಓದಬಹುದು ಎಂದು ಹೇಳಲಾಗಿದೆ. ಹೇಗೆ ತಿಳಿದುಕೊಳ್ಳೋಣ ಬನ್ನಿ.
ನವದೆಹಲಿ: WhatsApp Messages - ವಾಟ್ಸ್ ಆಪ್ ನಲ್ಲಿ ಬರುವ ನಿಮ್ಮ ಖಾಸಗಿ ಸಂದೇಶಗಳು ಸುರಕ್ಷಿತವಾಗಿವೆಯೇ? ಈ ರೀತಿಯ ಪ್ರಶ್ನೆಗಳು ಪದೇ ಪದೇ ಏಳುತ್ತಿವೆ. ಆದರೆ, ಈ ಕುರಿತು ಹಲವು ಬಾರಿ ಸ್ಪಷ್ಟನೆ ನೀಡಿರುವ ಕಂಪನಿ ನಿಮ್ಮ ಖಾಸಗಿ ಸಂದೇಶಗಳು ಸುರಕ್ಷಿತವಾಗಿವೆ ಮತ್ತು ಕಂಪನಿಯೂ ಕೂಡ ಅವುಗಳನ್ನು ಓದಲು ಸಾಧ್ಯವಿಲ್ಲ ಎಂದಿದೆ. ಆದರೆ ಇತ್ತೀಚಿಗೆ ಪ್ರಕಟಗೊಂಡಿರುವ ಹೊಸ ವರದಿಯೊಂದು ಕಂಪನಿಯ ಈ ಹಕ್ಕನ್ನು ಹೊಡೆದು ಹಾಕಿದೆ. Propublica ವತಿಯಿಂದ ಬಂದ ವರದಿಯೊಂದು WhatsApp ಬಳಕೆದಾರರನ್ನು ಬೆಚ್ಚಿಬೀಳಿಸಿದೆ. ವರದಿಯಲ್ಲಿ Facebook ನಿಮ್ಮ WhatsAppನಲ್ಲಿ ಬರುವ ಖಾಸಗಿ ಸಂದೇಶಗಳನ್ನು ಸುಲಭವಾಗಿ ಓದಬಹುದು ಎಂದು ಹೇಳಲಾಗಿದೆ. ಅಷ್ಟೇ ಅಲ್ಲ ಅವುಗಳನ್ನು ಫೇಸ್ಬುಕ್ ಶೇರ್ (Facebook Reads WhatsApp Message) ಕೂಡ ಮಾಡಬಹುದು ಎನ್ನಲಾಗಿದೆ. ಹಾಗಾದರೆ ಬನ್ನಿ ಈ ವರದಿ ಇನ್ನೂ ಯಾವ ಯಾವ ಅಂಶಗಳ ಮೇಲೆ ಬೆಳಕು ಚೆಲ್ಲಿದೆ ತಿಳಿಯೋಣ.
ಸಾವಿರಕ್ಕೂ ಹೆಚ್ಚು ಜನ ವಾಟ್ಸ್ ಆಪ್ ಪ್ರೈವೇಟ್ ಸಂದೇಶಗಳನ್ನು ಟ್ರ್ಯಾಕ್ ಮಾಡುತ್ತಾರಂತೆ
ಈ ಕೆಲಸಕ್ಕಾಗಿ ವಾಟ್ಸ್ ಆಪ್ ಸಾವಿರಕ್ಕೂ ಹೆಚ್ಚು ಜನರನ್ನು ಕಾಂಟ್ರಾಕ್ಟ್ ಮೇಲೆ ನೇಮಿಸಿದ್ದು, ಇವರು ಆಸ್ಟಿನ್, ಟೆಕ್ಸಾಸ್, ಡಬಲೀನ್ ಹಾಗೂ ಸಿಂಗಾಪುರ್ ಕಚೇರಿಗಳಲ್ಲಿ ಕಾರ್ಯನಿರ್ವಹಿಸುತ್ತಾರೆ. ಅಲ್ಲಿಂದ ಈ ಜನರು ಲಕ್ಷಾಂತರ ಜನರ ಕಂಟೆಂಟ್ ಅನ್ನು ಪರಿಶೀಲಿಸುತ್ತಾರೆ. ಈ ಜನರು ಫೇಸ್ಬುಕ್ ಸಾಫ್ಟ್ವೆಯರ್ ಬಳಸಿ ಬಳಕೆದಾರರ ಖಾಸಗಿ ಸಂದೇಶಗಳು, ಭಾವಚಿತ್ರಗಳು ಹಾಗೂ ವಿಡಿಯೋಗಳನ್ನು ನೋಡಬಹುದು. ಇದಕ್ಕಾಗಿ ಕಂಪನಿ ಅವರಿಗೆ ವೇತನ ಕೂಡ ಪಾವತಿಸುತ್ತದೆ.
ವಾಟ್ಸ್ ಆಪ್ ಹಕ್ಕನ್ನು ವರದಿಯಲ್ಲಿ ತಳ್ಳಿಹಾಕಲಾಗಿದೆ
ಯಾರಾದರೂ WhatsApp ನಲ್ಲಿ ಸೈನ್ ಅಪ್ ಮಾಡಿದರೆ, ಕಂಪನಿಯು ಬಳಕೆದಾರರಿಗೆ ಅವರ ಸಂದೇಶಗಳು ಸಾಕಷ್ಟು ಸುರಕ್ಷಿತ ವಾಗಿವೆ ಎಂದು ಹೇಳುತ್ತದೆ. ಸಂದೇಶವನ್ನು ತುಂಬಾ ಖಾಸಗಿಯಾಗಿ ಇರಿಸಲಾಗಿದೆ ಮತ್ತು ಅದನ್ನು ಕಂಪನಿ ಕೂಡ ನೋಡುವುದಿಲ್ಲ ಎಂದು ಹೇಳುತ್ತದೆ. ಆದರೆ ವರದಿಯು ವಾಟ್ಸ್ ಆಪ್ ಮಂಡಿಸಿರುವ ಹಕ್ಕನ್ನು ತೀವ್ರವಾಗಿ ತಿರಸ್ಕರಿಸಿದೆ.
ಇದನ್ನೂ ಓದಿ-ನ.1ರಿಂದ ಈ ಆಂಡ್ರಾಯ್ಡ್ ಫೋನ್‌ಗಳು, ಐಫೋನ್‌ಗಳಲ್ಲಿ ವಾಟ್ಸಾಪ್ ವರ್ಕ್ ಆಗಲ್ಲ..!
ವಾಟ್ಸ್ ಆಪ್ ನ ಡೈರೆಕ್ಟ್ ಆಫ್ ಕಮ್ಯೂನಿಕೇಶನ್ ಹೇಳಿದ್ದೇನು?
ಈ ಕುರಿತು ಹೇಳಿಕೆ ನೀಡಿರುವ ಕಂಪನಿಯ ಡೈರೆಕ್ಟ್ ಆಫ್ ಕಮ್ಯೂನಿಕೇಶನ್ ಕಾರ್ಲ್ ವೂಗ್, ಕಂಪನಿಯ ಆಸ್ಟಿನ್ ಹಾಗೂ ಇತರ ಕಚೇರಿಗಳಲ್ಲಿ ಕಾಂಟ್ರಾಕ್ಟ್ ಮೇಲೆ ನೇಮಿಸಲಾಗಿರುವ ಜನರು ಸಂದೇಶಗಳನ್ನು ಪರಿಶೀಲಿಸಿ ದುರ್ವರ್ತನೆ ತೋರುವ ಜನರನ್ನು ವೇದಿಕೆಯಿಂದ ತೆರವುಗೊಳಿಸಲು ನೇಮಿಸಲಾಗಿದೆ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಆದರೆ, ಕೇವಲ ಹಾನಿ ತಲುಪಿಸುವ ಸಂದೇಶಗಳನ್ನು ಮಾತ್ರ ಅವರು ರಿವ್ಯೂ ಮಾಡುತ್ತಾರೆ ಎಂದು ವೂಗ್ ಹೇಳಿದ್ದಾರೆ. ವಂಚನೆ, ಚೈಲ್ಡ್ ಪಾರ್ನ್ ನಿಂದ ಹಿಡಿದು ಉಗ್ರರ ಸಂಚುಗಳು ಇದರಲ್ಲಿ ಶಾಮೀಲಾಗಿವೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ-Johns Hopkins Study: ಮದುವೆಗೂ ಮುನ್ನ ಮಕ್ಕಳನ್ನು ಪಡೆವ ಬಯಕೆ ಮಹಿಳೆಯರಲ್ಲಿ ಯಾಕೆ ಜಾಸ್ತಿಯಾಗುತ್ತಿದೆ?
ಕೃತಕ ಬುದ್ಧಿಮತ್ತೆಯ ಸಹಾಯದಿಂದ ಈ ಕೆಲಸ ಮಾಡಲಾಗುತ್ತದೆ.
ಸಾಮಾನ್ಯವಾಗಿ ವಾಟ್ಸ್ ಆಪ್ ಸಂದೇಶಗಳು ಎನ್ಕ್ರಿಪ್ಟ್ (End-To-End Encryption Message)ಆಗಿರುತ್ತವೆ. ಈ ಸಂದೇಶಗಳನ್ನು ಕೃತಕ ಬುದ್ಧಿಮತ್ತೆಯ ಸಹಾಯದಿಂದ ಓದಲಾಗುತ್ತದೆ. ಇದು ಫೇಸ್ ಬುಕ್ ಹಾಗೂ ಇನ್ಸ್ಟಾ ಗ್ರಾಮ್ ಗಳಲ್ಲಿಯೂ ಕೂಡ ಸಾಧ್ಯವಿದೆ. ಯಾವುದೇ ಓರ್ವ ಬಳಕೆದಾರ ಯಾವುದಾದರೊಂದು ಸಂದೇಶದ ಕುರಿತು ರಿಪೋರ್ಟ್ ಮಾಡಿದರೆ, ಇದೆ ತಂತ್ರಜ್ಞಾನ ಬಳಸಿ ಆ ಸಂದೇಶವನ್ನು ರಿವ್ಯೂ ಮಾಡಲಾಗುತ್ತದೆ.
ಇದನ್ನೂ ಓದಿ-INTERNET ಇಲ್ಲದೆಯೂ ಕೂಡ UPI ಮೂಲಕ ಆನ್ಲೈನ್ ಪೇಮೆಂಟ್ ಮಾಡಬಹುದು! ಹೇಗೆ?
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.