Sim Card New Rules: ಈಗ ಒಂದು ಐಡಿಯಲ್ಲಿ ಇಷ್ಟು ಸಿಮ್ ಕಾರ್ಡ್‌ಗಳನ್ನು ಮಾತ್ರ ಪಡೆಯಬಹುದು
SIM Rules: ಸಿಮ್ ಕಾರ್ಡ್ ವಿತರಣೆ ಸಂಬಂಧಿಸಿದಂತೆ ಟೆಲಿಕಾಂ ಸಚಿವ ಅಶ್ವಿನಿ ವೈಷ್ಣವ್ ಮಹತ್ವದ ಘೋಷಣೆ ಮಾಡುವ ಸಾಧ್ಯತೆ ಇದ್ದು ಒಂದು ಐಡಿಯಲ್ಲಿ ಕೊಳ್ಳಬಹುದಾದ ಸಿಮ್ ಕಾರ್ಡ್ ಸಂಖ್ಯೆಯನ್ನು ಸೀಮಿತಗೊಳಿಸುವ ನಿರೀಕ್ಷೆಯಿದೆ ಏನೂಡ್ ಹೇಳಲಾಗುತ್ತಿದೆ.
SIM Rules: ಟೆಲಿಕಾಂ ನೆಟ್‌ವರ್ಕ್‌ನಲ್ಲಿ ವಂಚನೆಯನ್ನು ನಿರ್ಗಹಿಸುವ ನಿಟ್ಟಿನಲ್ಲಿ ಟೆಲಿಕಾಂ ಸಚಿವ ಅಶ್ವಿನಿ ವೈಷ್ಣವ್ ಮಹತ್ವದ ಘೋಷಣೆ ಮಾಡುವ ಸಾಧ್ಯತೆ ಇದ್ದು ಒಂದು ಐಡಿಯಲ್ಲಿ 9ರ ಬದಲಿಗೆ ಇನ್ನು ಮುಂದೆ ಕೇವಲ 4 ಸಿಮ್ ಕಾರ್ಡ್‌ಗಳನ್ನು ಗಳನ್ನಷ್ಟೇ ವಿತರಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಮೂಲಗಳ ಪ್ರಕಾರ, ಟೆಲಿಕಾಂ ಸಚಿವರು ಇಂದು ಹೊಸ ಸಿಮ್ ಕಾರ್ಡ್ ಮಾರ್ಗಸೂಚಿ ಹೊರಡಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಅಷ್ಟಕ್ಕೂ ಒಂದು ಐಡಿಯಲ್ಲಿ ಹೆಚ್ಚಿನ ಸಿಮ್ ಕಾರ್ಡ್ ಕೊಳ್ಳುವುದರಿಂದ ಏನು ಸಮಸ್ಯೆ? ಈ ಸಂಖ್ಯೆಯನ್ನು ಏಕೆ ನಿಯಂತ್ರಿಸಲಾಗುತ್ತಿದೆ ಎಂಬ ಪ್ರಶ್ನೆ ನಿಮ್ಮಲ್ಲೂ ಇದ್ದರೆ, ಇದಕ್ಕೆ ಮುಖ್ಯ ಕಾರಣ ಸೈಬರ್ ವಂಚನೆ. ಇತ್ತೀಚಿನ ದಿನಗಳಲ್ಲಿ ಸೈಬರ್ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇಂತಹ ವಂಚನೆಗಳನ್ನು ತಡೆಯುವ ನಿಟ್ಟಿನಲ್ಲಿ ಟೆಲಿಕಾಂ ನೆಟ್‌ವರ್ಕ್‌ನಲ್ಲಿ ಕರೆ ಡ್ರಾಪ್, ವಂಚನೆಯನ್ನು ನಿಯಂತ್ರಿಸಲು ಸರ್ಕಾರ ಈ ರೀತಿಯ ಮಹತ್ವದ ಹೆಜ್ಜೆ ತೆಗೆದುಕೊಳ್ಳಲು ಮುಂದಾಗಿದೆ.
ಇದನ್ನೂ ಓದಿ- ರಾತ್ರಿ ವೇಳೆ ಫ್ರೀಡ್ಜ್ ಆಫ್ ಮಾಡಿದ್ರೆ ವಿದ್ಯುತ್ ಬಿಲ್ ಕಡಿಮೆ ಬರುತ್ತಾ? ಇಲ್ಲಿದೆ ಸತ್ಯಾಸತ್ಯತೆ
ಹೆಚ್ಚುವರಿ ಸಿಮ್ ಕಾರ್ಡ್‌ಗಳು ಬಂದ್ ಆಗಲಿವೆಯೇ?
ವಾಸ್ತವವಾಗಿ, ಇದುವರೆಗಿನ ಟೆಲಿಕಾಂ ನಿಯಮದ ಅನ್ವಯ ಒಬ್ಬರು ಒಂದು ಐಡಿಯನ್ನು ಬಳಸಿ 9 ಸಿಮ್‌ಗಳನ್ನು ಕೊಳ್ಳಲು ಅವಶಾಶವಿತ್ತು. ಒಂದೊಮ್ಮೆ ಹೊಸ ನಿಯಮ ಜಾರಿಗೆ ಬಂದರೆ ಸೀಮಿತ ಸಿಮ್‌ಗಳನ್ನಷ್ಟೇ ಬಳಸಲು ಅವಕಾಶವಿರುತ್ತದೆ. ಆದಾಗ್ಯೂ, ನಿಮ್ಮ ಚಾಲ್ತಿಯಲ್ಲಿರುವ ಸಿಮ್‌ಗಳಲ್ಲಿ ಯಾವುದೇ ಸಮಸ್ಯೆ ಇರುವುದಿಲ್ಲ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ- ನಿಮ್ಮ ಫೋನ್ ಗೆ ಸ್ಕ್ರೀನ್ ಗಾರ್ಡ್ ಹಾಕಿದ್ದೀರಾ ? ಹಾಗಿದ್ದರೆ ನೀವು ತಿಳಿದುಕೊಳ್ಳಲೇ ಬೇಕಾದ ಮಾಹಿತಿ ಇದು
ಭಾರತ ಸರ್ಕಾರದ ಸಂಚಾರ ಸಾಥಿ ಪೋರ್ಟಲ್:
ಇನ್ನು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ವಂಚನೆ ಪ್ರಕರಣಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಭಾರತ ಸರ್ಕಾರವು ಸಂಚಾರ ಸಾಥಿ ಪೋರ್ಟಲ್ ಅನ್ನು ಆರಂಭಿಸಿದೆ. ಒಂದೊಮ್ಮೆ ನಿಮ್ಮ ಫೋನ್ ಕಳುವಾಗಿದ್ದರೆ ನೀವು ಈ ಪೋರ್ಟಲ್‌ನಲ್ಲಿ ದೂರು ದಾಖಲಿಸಬಹುದು. ಅಷ್ಟೇ ಅಲ್ಲ, ಈ ಸಂಚಾರ ಸಾಥಿ ಪೋರ್ಟಲ್‌ನಲ್ಲಿ ನಿಮ್ಮ ಐಡಿಯಲ್ಲಿ ಇದುವರೆಗೂ ಎಷ್ಟು ಸಿಮ್ ಕಾರ್ಡ್‌ಗಳನ್ನು ಖರೀದಿಸಲಾಗಿದೆ ಎಂಬುದನ್ನೂ ಕೂಡ ಪತ್ತೆ ಮಾಡಬಹುದು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.