OLA-ಅಥರ್ಗೆ ಕಠಿಣ ಸ್ಪರ್ಧೆ ನೀಡಲಿದೆ ಸಿಂಪಲ್ ಎನರ್ಜಿಯ ಮುಂಬರುವ ಎಲೆಕ್ಟ್ರಿಕ್ ಸ್ಕೂಟರ್: ಬೆಲೆಯೂ ಕಡಿಮೆ
Simple Energys Upcoming Electric Scooter: ಪ್ರಸ್ತುತ ಎಲೆಕ್ಟ್ರಿಕ್ ಸ್ಕೂಟರ್‌ಗಳ ಜನರ ಒಲವು ಹೆಚ್ಚಾಗಿದೆ. ಭಾರತೀಯ ಮಾರುಕ್ಟ್ಟೆಯಲ್ಲಿ ಓಲಾ ಮತ್ತು ಅಥರ್ ನಂತಹ ದೊಡ್ಡ ದೊಡ್ಡ ಕಂಪನಿಗಳು ಮುಂಚೂಣಿಯಲ್ಲಿವೆ. ಇದೀಗ ಈ ಕಂಪನಿಗಳಿಗೆ ಖಡಕ್ ಪೈಪೋಟಿ ನೀಡಲು ಮಾರುಕಟ್ಟೆಗೆ ಲಗ್ಗೆ ಇಡಲು ಸಜ್ಜಾಗಿದೆ ಸಿಂಪಲ್ ಎನರ್ಜಿ.
Simple Energys Upcoming Electric Scooter: ಭಾರತದಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗಳ ಕ್ರಾಂತಿ ಆರಂಭವಾಗಿದೆ. ಭಾರತೀಯ ಮಾರುಕಟ್ಟೆಯಲ್ಲಿ OLA ಮತ್ತು Ather ನಂತಹ ದೊಡ್ಡ ದೊಡ್ಡ ಕಂಪನಿಗಳು ಎಲೆಕ್ಟ್ರಿಕ್ ಸ್ಕೂಟರ್‌ಗಳ ಹಲವು ಆಯ್ಕೆಗಳನ್ನು ಹೊಂದಿವೆ. ಆದರೀಗ ಓಲಾ-ಅಥರ್ ಕಂಪನಿಗಳಿಗೆ ಕಠಿಣ ಸ್ಪರ್ಧೆ ಒಡ್ಡಲು ಮಾರುಕಟ್ಟೆಗೆ ಲಗ್ಗೆ ಇಡಲು ಸಜ್ಜಾಗಿದೆ ಮತ್ತೊಂದು ಎಲೆಕ್ಟ್ರಿಕ್ ಸ್ಕೂಟರ್. ಅದುವೇ ಸಿಂಪಲ್ ಎನರ್ಜಿ ಕಂಪನಿಯ ಹೊಸ ಎಲೆಕ್ಟ್ರಿಕ್ ಸ್ಕೂಟರ್.
ದೇಶದ ಪ್ರಮುಖ ಎಲೆಕ್ಟ್ರಿಕ್ ವೆಹಿಕಲ್ ಮತ್ತು ಕ್ಲೀನ್ ಎನರ್ಜಿ ಸ್ಟಾರ್ಟಪ್ ಸಿಂಪಲ್ ಎನರ್ಜಿ ತನ್ನ ಮುಂಬರುವ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ದಿನಾಂಕವನ್ನು ಅಧಿಕೃತವಾಗಿ ಪ್ರಕಟಿಸಿದೆ. ಈ ಸ್ಕೂಟರ್‌ಗೆ ಸಿಂಪಲ್ ಡಾಟ್ ಒನ್ ಎಂದು ಹೆಸರಿಡಲಾಗಿದ್ದು ಇದೇ 15 ಡಿಸೆಂಬರ್ 2023 ರಂದು ಸಿಂಪಲ್ ಎನರ್ಜಿ ಬಿಡುಗಡೆ ಆಗಲಿದೆ ಎಂದು ಹೇಳಲಾಗುತ್ತಿದೆ. ಲಭ್ಯವಿರುವ ಮಾಹಿತಿಯ ಪ್ರಕಾರ, ಈ ಸ್ಕೂಟರ್ ಓಲಾ ಮತ್ತು ಅಥರ್ ಕಂಪನಿಗಳ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ಭಾರೀ ಸ್ಪರ್ಧೆ ನೀಡಲಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ- Shocking News: ಉಬರ್‌ಗೆ ಕರೆ ಮಾಡಿ 5 ಲಕ್ಷ ಕಳೆದುಕೊಂಡ ವ್ಯಕ್ತಿ!
ಸಿಂಪಲ್ ಡಾಟ್ ಒನ್ ಎಲೆಕ್ಟ್ರಿಕ್ ಸ್ಕೂಟರ್‌ನ ವಿಶೇಷತೆಗಳು:
ಕಂಪನಿಯ ಪೋರ್ಟ್‌ಫೋಲಿಯೊದಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ ಸಿಂಪಲ್ ಒನ್‌ನ ಅದೇ ಪ್ಲಾಟ್‌ಫಾರ್ಮ್‌ನಲ್ಲಿ ಸಿಂಪಲ್ ಡಾಟ್ ಒನ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಕೂಡ ನಿರ್ಮಿಸಲಾಗಿದೆ ಎಂದು ತಿಳಿದುಬಂದಿದೆ.
>> ಸಿಂಪಲ್ ಡಾಟ್ ಒನ್ ಎಲೆಕ್ಟ್ರಿಕ್ ಸ್ಕೂಟರ್ 3.7 kWh ಬ್ಯಾಟರಿಯನ್ನು ಹೊಂದಿರುತ್ತದೆ.
>> ಈ ಸ್ಕೂಟರ್‌ನ ಪ್ರಮಾಣೀಕೃತ ಶ್ರೇಣಿಯು 151 ಕಿಲೋಮೀಟರ್‌ಗಳು ಮತ್ತು ಐಡಿಸಿಯಲ್ಲಿ ಇದು 160 ಕಿಲೋಮೀಟರ್‌ಗಳವರೆಗೆ ಚಲಿಸುತ್ತದೆ.
>> ಸ್ಕೂಟರ್ 30 ಲೀಟರ್ ಬೂಟ್ ಸ್ಪೇಸ್ ಹೊಂದಿದೆ.
>> ಇದರ ಹೊರತಾಗಿ, ಸಿಂಪಲ್ ಡಾಟ್ ಒನ್ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಟಚ್‌ಸ್ಕ್ರೀನ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಲಭ್ಯವಿರುತ್ತದೆ. ಮಾತ್ರವಲ್ಲ ಇದರಲ್ಲಿ ಅಪ್ಲಿಕೇಶನ್ ಸಂಪರ್ಕದ ಆಯ್ಕೆಯು ಲಭ್ಯವಿರುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.
ಇದನ್ನೂ ಓದಿ- ಅತ್ಯಂತ ಅಗ್ಗದ 7 ಸೀಟರ್ ಕಾರುಗಳು ಇವು ! ನಿಮ್ಮ ಕನಸಿನ ಗಾಡಿಯೂ ಇದರಲ್ಲಿದೆ
ಮುಂದಿನ ವರ್ಷದಿಂದ ವಿತರಣೆ ಆರಂಭವಾಗಲಿದೆ
ಸಿಂಪಲ್ ಡಾಟ್ ಒನ್ ಎಲೆಕ್ಟ್ರಿಕ್ ಸ್ಕೂಟರ್‌ನ ಪ್ರೀ-ಬುಕಿಂಗ್ ಡಿಸೆಂಬರ್ 15, 2023 ರಿಂದ ಪ್ರಾರಂಭವಾಗುತ್ತದೆ. ಆದಾಗ್ಯೂ, ಈ ಎಲೆಕ್ಟ್ರಿಕ್ ಸ್ಕೂಟರ್‌ನ ವಿತರಣೆಯು ಮುಂದಿನ ವರ್ಷ ಅಂದರೆ ಜನವರಿ 2024 ರಿಂದ ಪ್ರಾರಂಭವಾಗುತ್ತದೆ ಎಂದು ಕಂಪನಿ ತಿಳಿಸಿದೆ.
ಸಿಂಪಲ್ ಡಾಟ್ ಒನ್ ಎಲೆಕ್ಟ್ರಿಕ್ ಸ್ಕೂಟರ್‌ನ ಬೆಲೆ:
ಇದರ ಬೆಲೆ ಸುಮಾರು ಒಂದು ಲಕ್ಷಕ್ಕಿಂತ ಕಡಿಮೆ ಇರಲಿದೆ ಎಂದು ಹೇಳಲಾಗುತ್ತಿದೆ.
ಸಿಂಪಲ್ ಡಾಟ್ ಒನ್ ಎಲೆಕ್ಟ್ರಿಕ್ ಸ್ಕೂಟರ್‌ನ ಬಗ್ಗೆ ಮಾತನಾಡಿರುವ ಕಂಪನಿಯ ಸಂಸ್ಥಾಪಕ ಮತ್ತು ಸಿಇಒ ಸುಹಾಸ್ ರಾಜ್‌ಕುಮಾರ್ ಅವರು, ಭವಿಷ್ಯದಲ್ಲಿ ಎಲೆಕ್ಟ್ರಿಕ್ ವೆಹಿಕಲ್ ಮತ್ತು ಕ್ಲೀನ್ ಎನರ್ಜಿ ಸ್ಟಾರ್ಟಪ್ ಸಿಂಪಲ್ ಎನರ್ಜಿ ಆರ್ & ಡಿ ಮೇಲೆ ಗಮನವನ್ನು ಮುಂದುವರಿಸಲಿದ್ದು ಮುಂಬರುವ ಸಮಯದಲ್ಲಿ ಅನೇಕ ಉತ್ಪನ್ನಗಳು ಕಂಪನಿಯಿಂದ ಹೊರಬರಲಿವೆ ಎಂದು ಹೇಳಿದರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://youtu.be/--phA9ji8NM
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.