ಬೆಂಗಳೂರು :ಈ ವೇಗದ ಬದುಕಿನಲ್ಲಿ ನಿದ್ದೆ ಬಹಳ ಮುಖ್ಯ.ಹೆಚ್ಚಿನವರಿಗೆ ಬ್ಯುಸಿ ಜೀವ ಶೈಲಿಯಿಂದ ನಿದ್ದೆ ಮಾಡುವುದಕ್ಕೆ ಸರಿಯಾಗಿ ಸಮಯ ಸಿಗುವುದಿಲ್ಲ.ನಿದ್ರೆಯ ಕೊರತೆಯಿಂದ ಅನೇಕ ರೋಗಗಳು ಬರುತ್ತವೆ.ಹಣ ಸಂಪಾದಿಸುವ ಅಥವಾ ಓದುವ ಭರಾಟೆಯಲ್ಲಿ 9 ಗಂಟೆ ಕೇವಲ ಕನಸಾಗಿ ಬಿಟ್ಟಿದೆ.ಆದರೆ ಈ ಕಂಪನಿಯಲ್ಲಿ ಮಲಗುವುದಕ್ಕೂ ಹಣ ಸಿಗುತ್ತದೆ. ಮಲಗುವುದೆಂದರೆ ಸುಮ್ಮನೆ ಬಿದ್ದು ಕೊಳ್ಳುವುದಲ್ಲ, ದಿನಕ್ಕೆ 9 ಗಂಟೆ ನಿದ್ದೆ ಮಾಡಬೇಕು. 


COMMERCIAL BREAK
SCROLL TO CONTINUE READING

2023 ರಲ್ಲಿ,ಬೆಂಗಳೂರು ಮೂಲದ ಲೆಕ್ಕಪರಿಶೋಧಕಿ ಸಾಯಿಶ್ವರಿ ಪಾಟೀಲ್ ಈ ಕಂಪನಿಯ 'ವರ್ಷದ ಸ್ಲೀಪ್ ಚಾಂಪಿಯನ್' ಪ್ರಶಸ್ತಿಯನ್ನು ಗೆಲ್ಲುವುದರ ಮೂಲಕ 9 ಲಕ್ಷ ರೂಪಾಯಿ ಬಹುಮಾನವನ್ನು ಗೆದ್ದುಕೊಂಡಿದ್ದರು. 


ಇದನ್ನೂ ಓದಿ : ಗೂಗಲ್‌ನಲ್ಲಿ ಅಪ್ಪಿತಪ್ಪಿಯೂ ಈ 'ಐದು' ವಿಷಯಗಳನ್ನು ಸರ್ಚ್ ಮಾಡಲೇಬೇಡಿ! ಇಲ್ಲವೇ ಜೈಲೂಟ ಫಿಕ್ಸ್!


ನಿದ್ರೆ ಇಂಟರ್ನ್ಶಿಪ್ :
ವೇಕ್‌ಫಿಟ್ ಕೆಲವು ಸಮಯದಿಂದ "ಸ್ಲೀಪ್ ಇಂಟರ್ನ್‌ಶಿಪ್" ಅನ್ನು ಆಯೋಜಿಸುತ್ತಿದೆ. ಈ ಸ್ಲೀಪ್ ಇಂಟರ್ನ್‌ಶಿಪ್ ದೇಶದಾದ್ಯಂತ ಗಮನ ಸೆಳೆಯುತ್ತಿದೆ. ಇದು 60 ದಿನಗಳ ಸ್ಲೀಪ್ ಇಂಟರ್ನ್‌ಶಿಪ್. ಇಲ್ಲಿ ಬೇರೇನೂ ಕೆಲಸ ಇಲ್ಲ. 9 ಗಂಟೆಗಳ ಕಾಲ ನಿದ್ರೆ ಮಾಡಬೇಕಾಗುತ್ತದೆ ಅಷ್ಟೇ. ಪವರ್ ನ್ಯಾಪ್‌ಗಳನ್ನು ತೆಗೆದುಕೊಳ್ಳುವ ಮೂಲಕ ಹೊಸ ವೇಕ್‌ಫಿಟ್ ಹಾಸಿಗೆಯನ್ನು ಪರೀಕ್ಷಿಸಬೇಕು.


ಚಾಂಪಿಯನ್ ಆದ ಸಾಯಿಶ್ವರಿ  : 
ಕಳೆದ ಬಾರಿ ವೇಕ್‌ಫಿಟ್ ಸ್ಲೀಪ್ ಇಂಟರ್ನ್‌ಶಿಪ್‌ನಲ್ಲಿ  5 ಲಕ್ಷ ಮಂದಿ ಭಾಗಿಯಾಗಿದ್ದರು.ನಂತರ, ಶಾರ್ಟ್‌ಲಿಸ್ಟ್ ಮಾಡಿ ಕೊನೆಗೆ 11 ಮಡಿ ಈ ಸ್ಲೀಪ್ ಇಂಟರ್ನ್‌ಶಿಪ್ ನಲ್ಲಿ ಉಳಿದುಕೊಂಡಿದ್ದರು. ಇವರೆಲ್ಲರಿಗೂ 1 ಲಕ್ಷ ಸ್ಟೈಫಂಡ್ ನೀಡಲಾಯಿತು. 2-ತಿಂಗಳ ಸುದೀರ್ಘ ಕಾರ್ಯಕ್ರಮದಲ್ಲಿ, ಈ ಸ್ಲೀಪ್ ಇಂಟರ್ನ್‌ಗಳು ಒಟ್ಟು 7,000 ಗಂಟೆಗಳ ಕಾಲ ನಿದ್ರಿಸಿದ್ದರು. ಸ್ಪರ್ಧೆಯು ಲೈವ್ "ಸ್ಲೀಪ್-ಆಫ್" ನೊಂದಿಗೆ ಮೆರಗು ಪಡೆದಿತ್ತು.ಅಲ್ಲಿ ಟಾಪ್ ಫೋರ್ ಸ್ಪರ್ಧಿಗಳು ಕಸ್ಟಮ್ ಸ್ಲೀಪ್ ಪಾಡ್‌ಗಳಲ್ಲಿ ಮಲಗಬೇಕಾಗಿತ್ತು. ಇವರು ಅಂತಿಮ ಬಹುಮಾನಕ್ಕಾಗಿ ಸ್ಪರ್ಧೆಗೆ ಇಳಿದಿದ್ದರು. ಇದರಲ್ಲಿ ಸಾಯಿಶ್ವರಿ 99% ನ ಗಮನಾರ್ಹ ನಿದ್ರೆಯ ದಕ್ಷತೆಯ ಸ್ಕೋರ್‌ನೊಂದಿಗೆ ವಿಜಯಶಾಲಿಯಾಗಿ ಹೊರಹೊಮ್ಮಿದರು. 


ಇದನ್ನೂ ಓದಿ : ಇಂಟರ್ನೆಟ್ ಇಲ್ಲದಿದ್ದರೂ google pay ಮೂಲಕ ಹಣ ಕಳುಹಿಸಬಹುದು..! ಜಸ್ಟ್‌ ಹೀಗೆ ಮಾಡಿ..


10 ಲಕ್ಷ ರೂ ಗೆಲ್ಲಬಹುದು : 
ಒಳ್ಳೆಯ ಸುದ್ದಿ ಏನೆಂದರೆ,ನೀವು  ಕೂಡಾ ಈ ವರ್ಷದ ಮುಂದಿನ ಸ್ಲೀಪ್ ಚಾಂಪಿಯನ್ ಕಿರೀಟವನ್ನು ಅಲಂಕರಿಸುವ ಅವಕಾಶವಿದೆ. ಹಿಂದಿನ ಸೀಸನ್‌ಗಳ ಯಶಸ್ಸಿನ ಆಧಾರದ ಮೇಲೆ, ವೇಕ್‌ಫಿಟ್ ತನ್ನ ಸ್ಲೀಪ್ ಇಂಟರ್ನ್‌ಶಿಪ್‌ನ ನಾಲ್ಕನೇ ಆವೃತ್ತಿಗೆ ಈಗಾಗಲೇ ನೋಂದಣಿ ಆರಂಭಿಸಿದೆ. ಈ ಬಾರಿಯಾ ಮೊತ್ತ ಇನ್ನಷ್ಟು ಹೆಚ್ಚಿದ್ದು, ವಿಜೇತರು 10 ಲಕ್ಷದವರೆಗೆ ಗಳಿಸುವ ಅವಕಾಶವಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.