ನವದೆಹಲಿ: ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಹಲವು ಬ್ರ್ಯಾಂಡ್‌ಗಳಿವೆ. ಈ ಬ್ರ್ಯಾಂಡ್‌ಗಳು ಕೋಟ್ಯಂತರ ಅಭಿಮಾನಿಗಳನ್ನು ಸೃಷ್ಟಿಸಿಕೊಂಡಿವೆ. ಭಾರತೀಯ ಮಾರುಕಟ್ಟೆಯಲ್ಲಿ ಚೈನೀಸ್ ಸ್ಮಾರ್ಟ್‌ಫೋನ್ ತಯಾರಕ ವಿವೋ ಫೋನ್‌ಗಳಿಗೆ ಹೆಚ್ಚಿನ ಬೇಡಿಕೆಯಿದೆ. ಕೋಟ್ಯಂತರ ಜನರು ಈ ಸ್ಮಾರ್ಟ್‍ಫೋನ್‍ಗಳನ್ನು ಇಷ್ಟಪಡುತ್ತಾರೆ. Vivo ಇತ್ತೀಚೆಗೆ Vivo Y52t 5G ಹೊಸ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ.


COMMERCIAL BREAK
SCROLL TO CONTINUE READING

ಸ್ಮಾರ್ಟ್‌ಫೋನ್‌ನ ಬೆಲೆ 15 ಸಾವಿರ ರೂ.ಗಿಂತ ಕಡಿಮೆಯಿದ್ದು, ಈ ಬಜೆಟ್ ಫೋನ್‌ನಲ್ಲಿ ನಿಮಗೆ ಹಲವಾರು ವೈಶಿಷ್ಟ್ಯಗಳನ್ನು ನೀಡಲಾಗಿದೆ. ಈ ಫೋನ್‌ನ ವಿಶೇಷತೆಗಳು ಯಾವುವು ಮತ್ತು ಅದರ ಬೆಲೆ ಎಷ್ಟು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.    


ಇದನ್ನೂ ಓದಿ: iPhone 14 ಸಿರೀಸ್ ಮೊಬೈಲ್ ಖರೀದಿಗೆ Flipkart-Amazon ಅಲ್ಲದೆ ಈ ಆಪ್ ಸೂಕ್ತ: ನಿಮಿಷಗಳಲ್ಲಿ ಡೆಲಿವರಿಯಾಗುತ್ತೆ!


Vivo Y52t 5G ಬಿಡುಗಡೆ


Vivo ಹೊಚ್ಚ ಹೊಸ Vivo Y52t 5G ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಫೋನ್ Vivo Y52 ಸ್ಮಾರ್ಟ್‌ಫೋನ್‌ನ ಅಪ್‌ಗ್ರೇಡ್‍ Version ಎಂದು ಹೇಳಲಾಗುತ್ತಿದೆ. ಸದ್ಯಕ್ಕೆ ಇದನ್ನು ಚೀನಾದಲ್ಲಿ ಮಾತ್ರ ಪರಿಚಯಿಸಲಾಗಿದೆ. ಶೀಘ್ರವೇ ಭಾರತ ಸೇರಿದಂತೆ ಇತರ ದೇಶಗಳಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಲಾಗಿದೆ.


Vivo Y52t 5G ಬೆಲೆ


ಈ ಸ್ಮಾರ್ಟ್‌ಫೋನ್‌ನ ದೊಡ್ಡ ವೈಶಿಷ್ಟ್ಯವೆಂದರೆ ಅದರ ಬೆಲೆ. Vivo Y52t 5Gಯನ್ನು ಚೀನಾದಲ್ಲಿ 1,299 ಯುವಾನ್ (ಸುಮಾರು 14,900 ರೂ.) ಬೆಲೆಗೆ ಬಿಡುಗಡೆ ಮಾಡಲಾಗಿದೆ. ಈ ಬೆಲೆಗೆ 128GB ಸ್ಟೋರೇಜ್ ಹೊಂದಿರುವ ಫೋನ್ ನಿಮಗೆ ಸಿಗಲಿದೆ. Vivo Y52t 5Gನ 256GB ಮಾದರಿಗೆ 1,499 ಯುವಾನ್ (ಸುಮಾರು 17 ಸಾವಿರ ರೂ) ಬೆಲೆ ನಿಗದಿಪಡಿಸಲಾಗಿದೆ. 


ಇದನ್ನೂ ಓದಿ: Fast Charging: ಗರಿಷ್ಠ ವೇಗದಲ್ಲಿ ಸ್ಮಾರ್ಟ್ ಫೋನ್ ಚಾರ್ಜ್ ಮಾಡಲು ಬಿಡುಗಡೆಯಾಗಿದೆ UBON CH-161 ಚಾರ್ಜರ್


Vivo Y52t 5G ವಿಶೇಷಣಗಳು


ಡ್ಯುಯಲ್ ಸಿಮ್ ಹೊಂದಿರುವ Vivo Y52t 5Gನಲ್ಲಿ ನಿಮಗೆ 1600 x 720 ಪಿಕ್ಸೆಲ್‌ಗಳೊಂದಿಗೆ 6.56-ಇಂಚಿನ HD + IPS LCD ಡಿಸ್ಪ್ಲೇ ನೀಡಲಾಗುತ್ತದೆ. ಈ ಫೋನ್‌ನಲ್ಲಿ 60Hz ರಿಫ್ರೆಶ್ ರೇಟ್‍ನೊಂದಿಗೆ 600nitsವರೆಗಿನ ಗರಿಷ್ಠ ಹೊಳಪು ಸಹ ಲಭ್ಯವಿದೆ. Mediatek ಡೈಮೆನ್ಸಿಟಿ 700 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಈ 5G ಸ್ಮಾರ್ಟ್‌ಫೋನ್ 8GB RAM ಮತ್ತು 256GBವರೆಗೆ ಸ್ಟೋರೇಜ್ ಹೊಂದಿರುತ್ತದೆ. ಈ ಫೋನ್‌ನ SD ಕಾರ್ಡ್ ಸ್ಲಾಟ್‌ನೊಂದಿಗೆ ನೀವು 1TBವರೆಗೆ ಸ್ಟೋರೇಜ್ ಕೆಪ್ಯಾಸಿಟಿ ವಿಸ್ತರಿಸಬಹುದು. 13MP ಪ್ರಾಥಮಿಕ ಸೆನ್ಸಾರ್ ಮತ್ತು 2MP 2ನೇ ಸೆನ್ಸಾರ್ ಒಳಗೊಂಡಿರುವ ಈ ಫೋನ್‌ನಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ನೀಡಲಾಗಿದೆ. 8MP ಮುಂಭಾಗದ ಕ್ಯಾಮೆರಾದೊಂದಿಗೆ ಫೋನ್ ಬಿಡುಗಡೆ ಮಾಡಲಾಗಿದೆ. 5000mAh ಬ್ಯಾಟರಿ ಮತ್ತು 10W ಚಾರ್ಜಿಂಗ್ ಬೆಂಬಲವನ್ನು ಈ ಫೋನ್‌ನಲ್ಲಿ ನೀಡಲಾಗಿದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.