Smartphone Network: ನಿಮ್ಮ ಸ್ಮಾರ್ಟ್ ಫೋನ್ ನಲ್ಲಿಯೂ ಕೂಡ ನೆಟ್‌ವರ್ಕ್ ಸಮಸ್ಯೆ ಇದೆಯಾ? ತಕ್ಷಣ ಈ ಸೆಟ್ಟಿಂಗ್ ಬದಲಾಯಿಸಿ
Mobile Network Setting: ನೆಟ್‌ವರ್ಕ್ ಸೆಟ್ಟಿಂಗ್ ಗಳನ್ನು ರಿಸೆಟ್ ಮಾಡಿದರೆ, ನಿಮ್ಮ ಆಪ್ ಗಳಿಗೆ ಅಥವಾ ನಿಮ್ಮ ಡಾಟಾಗೆ ಯಾವುದೇ ರೀತಿಯ ಧಕ್ಕೆ ಉಂಟಾಗುವುದಿಲ್ಲ. ಇದು ನಿಮ್ಮ ನೆಟ್‌ವರ್ಕ್ ಸೆಟ್ಟಿಂಗ್, ಇಂಟಿಗ್ರೇಟೆಡ್ ವೈ-ಫೈ ಪಾಸ್‌ವರ್ಡ್ ಹಾಗೂ ಬ್ಲೂ ಟೂಥ್ ಸಂಪರ್ಕವನ್ನು ಡಿಲೀಟ್ ಮಾಡುತ್ತದೆ.
Mobile Network Setting: ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್ ಫೋನ್ ಬಳಕೆದಾರರು ಎದುರಿಸುತ್ತಿರುವ ಸಾಮಾನ್ಯ ಸಮಸ್ಯೆಗಳನ್ನು ಮೊಬೈಲ್ ನೆಟ್‌ವರ್ಕ್ ಸಮಸ್ಯೆ ಕೂಡ ಒಂದು. ಆದರೆ, ನೆಟ್‌ವರ್ಕ್ ಸಮಸ್ಯೆ ಯಾವಾಗಲೂ ನಿಮ್ಮ ನೆಟ್‌ವರ್ಕ್ ಸೇವಾ ಪೂರೈಕೆದಾರರ ದೋಷದಿಂದ ಉಂಟಾಗುವುದಿಲ್ಲ. ಕೆಲವೊಮ್ಮೆ ಇದಕ್ಕೆ ನಿಮ್ಮ ಸ್ಮಾರ್ಟ್ ಫೋನ್ ಕೂಡ ಕಾರಣವಾಗಿರಬಹುದು.
ಒಂದು ವೇಳೆ ನೀವು Android ಸ್ಮಾರ್ಟ್‌ಫೋನ್ ಬಳಕೆದಾರರಾಗಿದ್ದರೆ ಮತ್ತು ವೈ-ಫೈ, ಬ್ಲೂಟೂತ್ ಅಥವಾ ಸೆಲ್ಯುಲಾರ್ ಸಂಪರ್ಕವನ್ನು ಬಳಸಲು ಪ್ರಯತ್ನಿಸುತ್ತಿರುವಾಗ ಸಮಸ್ಯೆ ಎದುರಾಗುತ್ತಿದ್ದರೆ, ನಿಮ್ಮ ಸ್ಮಾರ್ಟ್ ಫೋನ್ ನೆಟ್‌ವರ್ಕ್ ಸೆಟ್ಟಿಂಗ್‌ಗಳಲ್ಲಿ ಏನಾದರೂ ದೋಷ ಉಂಟಾಗಿರುವ ಸಾಧ್ಯತೆ ಇರುತ್ತದೆ.
ನಿಮ್ಮ ಸ್ಮಾರ್ಟ್‌ಫೋನ್‌ನ ನೆಟ್‌ವರ್ಕ್ ಸೆಟ್ಟಿಂಗ್‌ಗಳು ನಿಮ್ಮ ಸ್ಮಾರ್ಟ್ ಫೋನ್ ಹೊಂದಿರುವ ಎಲ್ಲಾ ಸಂಪರ್ಕಗಳ ಸಾಮರ್ಥ್ಯಕ್ಕೆ ಜವಾಬ್ದಾರಿಯಾಗಿರುತ್ತದೆ ಮತ್ತು ಅದು ಕೆಲವು ಕಾರಣಗಳಿಂದ ವಿಫಲವಾಗಬಹುದು. ಈ ಸಮಸ್ಯೆಗಳನ್ನು ಪರಿಹರಿಸಲು ನೆಟ್‌ವರ್ಕ್ ಸೆಟ್ಟಿಂಗ್‌ಗಳನ್ನು ರಿಸೆಟ್ ಮಾಡಲು ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳು ಬಳಕೆದಾರರಿಗೆ ಅನುಮತಿಸುತ್ತವೆ..
ನಿಮ್ಮ ಸಾಧನದ ನೆಟ್‌ವರ್ಕ್ ಸೆಟ್ಟಿಂಗ್‌ಗಳನ್ನು ಮರುಹೊಂದಿಸುವ ಕುರಿತು ತಿಳಿದುಕೊಳ್ಳಬೇಕಾದ ವಿಷಯಗಳು
ನೆಟ್‌ವರ್ಕ್ ಸೆಟ್ಟಿಂಗ್‌ಗಳನ್ನು ಮರುಹೊಂದಿಸುವುದರಿಂದ ನಿಮ್ಮ ಅಪ್ಲಿಕೇಶನ್‌ಗಳು ಅಥವಾ ಡೇಟಾವನ್ನು ಅಳಿಸುವುದಿಲ್ಲ. ಇದು ನಿಮ್ಮ ನೆಟ್‌ವರ್ಕ್ ಸೆಟ್ಟಿಂಗ್‌ಗಳು, ಇಂಟಿಗ್ರೇಟೆಡ್ ವೈ-ಫೈ ಪಾಸ್‌ವರ್ಡ್ ಮತ್ತು ಬ್ಲೂಟೂತ್ ಸಂಪರ್ಕವನ್ನು ಅಳಿಸುತ್ತದೆ, ಆದರೆ ಇದು ಸೇವಾ ಪೂರೈಕೆದಾರರಿಂದ ಆಗಿದ್ದರೆ ನೆಟ್‌ವರ್ಕ್ ಕವರೇಜ್ ಸಮಸ್ಯೆಗಳನ್ನು ಪರಿಹರಿಸುವುದಿಲ್ಲ.
Android ಸ್ಮಾರ್ಟ್ ಫೋನ್ ನಲ್ಲಿ ನಿಮ್ಮ ನೆಟ್‌ವರ್ಕ್ ಸೆಟ್ಟಿಂಗ್‌ಗಳನ್ನು ರಿಸೆಟ್ ಮಾಡುವುದು ಹೇಗೆ?
>> ಮೊದಲು ನಿಮ್ಮ Android ಸ್ಮಾರ್ಟ್‌ಫೋನ್ ಅಥವಾ ಟ್ಯಾಬ್ಲೆಟ್‌ನಲ್ಲಿ ಸೆಟ್ಟಿಂಗ್‌ಗಳ ವಿಭಾಗಕ್ಕೆ ಭೇಟಿ ನೀಡಿ
>> ಬಳಿಕ ಸಾಮಾನ್ಯ ನಿರ್ವಹಣೆ ಅಥವಾ ವ್ಯವಸ್ಥೆ ಸೆಟ್ಟಿಂಗ್ ಗೆ ಹೋಗಿ. (ನೀವು ಬಳಸುತ್ತಿರುವ ಸಾಧನವನ್ನು ಅವಲಂಬಿಸಿ)
>> ನಂತರ ರೀಸೆಟ್ ಅಥವಾ ಮರುಹೊಂದಿಸುವ ಆಯ್ಕೆಗೆ ಹೋಗಿ ಮತ್ತು 'ನೆಟ್‌ವರ್ಕ್ ಸೆಟ್ಟಿಂಗ್ ರೀಸೆಟ್' ಅನ್ನು ಆಯ್ದುಕೊಳ್ಳಿ.
>> ಈಗ, ರೀಸೆಟ್ ಬಟನ್ ಮೇಲೆ ಟ್ಯಾಪ್ ಮಾಡಿ.
ಇದನ್ನೂ ಓದಿ-ಬೆರಳಿಗಿಂತಲೂ ಚಿಕ್ಕದಾಗಿರುವ ಮೊಬೈಲ್ ಫೋನ್- ಇಲ್ಲಿದೆ ಇದರ ಬೆಲೆ, ವೈಶಿಷ್ಟ್ಯ!
>> ಈಗ ನಿಮ್ಮ ಸ್ಮಾರ್ಟ್ ಫೋನ್ ನಿಮಗೆ ಪಿನ್, ಪಾಸ್‌ವರ್ಡ್ ಅಥವಾ ಬಯೋಮೆಟ್ರಿಕ್‌ಗಳನ್ನು ನಮೂದಿಸಲು ಕೇಳುತ್ತದೆ.
ಇದನ್ನೂ ಓದಿ-Smart 4g Electric Meters: ಬಂದಿದೆ 4G ವಿದ್ಯುತ್ ಬಿಲ್ ಮೀಟರ್ .! ಇದು ಹೇಗೆ ಕೆಲಸ ಮಾಡಲಿದೆ ಗೊತ್ತಾ ?
>> ಈ ಪ್ರಕ್ರಿಯೆ ಪೂರ್ಣಗೊಂಡ ಬಳಿಕ, ಸಾಧನವು ರೀಸ್ಟಾರ್ಟ್ ಆಗುತ್ತದೆ ಮತ್ತು ನಿಮ್ಮ ಎಲ್ಲಾ ನೆಟ್‌ವರ್ಕ್ ಸೆಟ್ಟಿಂಗ್‌ಗಳನ್ನು ಮರುಹೊಂದಿಸಲಾಗುತ್ತದೆ.
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ