How to Boost Smartphone Performance: ಇಂದಿನ ತಂತ್ರಜ್ಞಾನದ ಯುಗದಲ್ಲಿ ಮನುಷ್ಯನಿಗೆ ಊಟ-ಉಪಹಾರ ಬಿಟ್ಟರೆ ಬೇಕಾಗುವ ಮತ್ತೊಂದು ಸಂಗತಿ ಎಂದರೆ ಅದುವೇ ಸ್ಮಾರ್ಟ್ಫೋನ್. ಇತ್ತೀಚಿನ ವರ್ಷಗಳಲ್ಲಿ, ಸ್ಮಾರ್ಟ್‌ಫೋನ್‌ಗಳ ಮೇಲೆ ಜನರ ಅವಲಂಬನೆಯು ಸಾಕಷ್ಟು ಹೆಚ್ಚಾಗಿದೆ. ಹೆಚ್ಚಿನ ಅಪ್ಲಿಕೇಶನ್ ಬಳಕೆ ಮತ್ತು ಇತರ ಹಲವು ಕಾರಣಗಳಿಂದಾಗಿ ಜನರು ಶಾಪಿಂಗ್‌ಗೆ ಮತ್ತು ಇತರೆ ಕೆಲಸಗಳನ್ನು ಮಾಡಲು ಸ್ಮಾರ್ಟ್ ಫೋನ್ ಅನ್ನು ಬಳಸುತ್ತಾರೆ, ಇದು ಕೆಲವೊಮ್ಮೆ ಸ್ಮಾರ್ಟ್‌ಫೋನ್ ಕಾರ್ಯಕ್ಷಮತೆಯ ಮೇಲೂ ಪರಿಣಾಮ ಬೀರುತ್ತದೆ. ಬಳಕೆದಾರರು ಇದರ ಬಗ್ಗೆ ಹೆಚ್ಚು ಗಮನ ಹರಿಸದಿದ್ದರೂ, ಅವರು ಮಾಡುವ ಕೆಲ ಸಣ್ಣ ತಪ್ಪುಗಳು ಮಾತ್ರ ಸ್ಮಾರ್ಟ್‌ಫೋನ್‌ನ ಜೀವಿತಾವಧಿಯನ್ನು ಕಡಿಮೆ ಮಾಡುತ್ತದೆ. ಹೀಗಾಗಿ ಬಳಕೆದಾರರು ಮಾಡಬಾರದ ಅಂತಹ ಕೆಲವು ತಪ್ಪುಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ


COMMERCIAL BREAK
SCROLL TO CONTINUE READING

ಮರೆತು ಕೂಡ ಈ ತಪ್ಪಗಳನ್ನು ಪುನರಾವರ್ತಿಸಬೇಡಿ
ಸಾಮಾನ್ಯವಾಗಿ ಫೋನ್ ಬಳಸುವಾಗ ನಮ್ಮ ಅಗತ್ಯಕ್ಕೆ ತಕ್ಕಂತೆ, ಅನುಕೂಲಕ್ಕೆ ತಕ್ಕಂತೆ ಯಾವುದನ್ನು ಯೋಚಿಸದೆ ನಾವು ಮಾಡಬಾರದ ಅನೇಕ ಕೆಲಸಗಳನ್ನು ಮಾಡುತ್ತೇವೆ. ಹೀಗಾಗಿ ಸ್ಮಾರ್ಟ್ಫೋನ್ ಬಳಸುವಾಗ ಈ ಕೆಳಗೆ ನೀಡಲಾಗಿರುವ ತಪ್ಪುಗಳನ್ನು ಎಂದಿಗೂ ಕೂಡ ಪುನರಾವರ್ತಿಸಬೇಡಿ.


1. ಪ್ಲೇ ಸ್ಟೋರ್ ಹೊರತುಪಡಿಸಿ ಬೇರೆ ಪ್ಲ್ಯಾಟ್‌ಫಾರ್ಮ್‌ಗಳಿಂದ ಅಪ್ಲಿಕೇಶನ್‌ಗಳನ್ನು ಇನ್ಸ್ಟಾಲ್ ಮಾಡಬೇಡಿ
ನೀವು ಆಂಡ್ರಾಯ್ಡ್ ಬಳಕೆದಾರರಾಗಿದ್ದರೆ, ಪ್ಲೇ ಸ್ಟೋರ್‌ ಬಗ್ಗೆ ನಿಮಗೆ ಮಾಹಿತಿ ಇದ್ದೆ ಇರುತ್ತದೆ. ಅಲ್ಲಿಂದಲೇ ನೀವು ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮತ್ತು ಇನ್ಸ್ಟಾಲ್ ಮಾಡಿ. Google ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಸುರಕ್ಷಿತವಾದ ಮತ್ತು ಕಾನೂನುಬದ್ಧ ಅಪ್ಲಿಕೇಶನ್‌ಗಳಿಗೆ ಮಾತ್ರ ಸ್ಥಾನ ನೀಡುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಪ್ಲೇ ಸ್ಟೋರ್‌ ಹೊರತುಪಡಿಸಿ ವಿವಿಧ ವೆಬ್ ಸೈಟ್ ಗಳಲ್ಲಿ APK ಸ್ವರೂಪದಲ್ಲಿ ಅನೇಕ ಅಪ್ಲಿಕೇಶನ್‌ಗಳು ಲಭ್ಯವಿವೆ. ಜನರು ಏನನ್ನೂ ಯೋಚಿಸದೆ ಅವುಗಳನ್ನು ಇನ್ಸ್ಟಾಲ್ ಮಾಡುತ್ತಾರೆ. ಆದರೆ ಈ ರೀತಿ ನೀವು ತಪ್ಪಿಸಬೇಕು. ಈ ರೀತಿಯ ಆ್ಯಪ್‌ಗಳು ಮಾಲ್‌ವೇರ್ ಮತ್ತು ವೈರಸ್‌ಗಳನ್ನು ಹೊಂದಿದ್ದು, ಅವು ನಿಮ್ಮ ಫೋನ್ ಗೆ  ಹಾನಿಗೊಳಿಸುವುದಲ್ಲದೆ ನಿಮಗೆ ಆರ್ಥಿಕ ನಷ್ಟವನ್ನು ಕೂಡ ಉಂಟುಮಾಡಬಹುದು. ಪ್ಲೇ ಸ್ಟೋರ್ ಹೊರತುಪಡಿಸಿ ಬೇರೆಲ್ಲಿಂದಲೂ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬೇಡಿ.


2. ಹೊರಗೆ ವೈ-ಫೈ ಬಳಸುವುದು
ಹಣ ಮತ್ತು ಡೇಟಾವನ್ನು ಉಳಿಸುವ ಭರದಲ್ಲಿ ಅನೇಕರು ಉಚಿತ ವೈ-ಫೈಗಾಗಿ ಹುಡುಕಾಟ ನಡೆಸುತ್ತಾರೆ. ಒಂದೊಮ್ಮೆ ಉಚಿತ ವೈಫೈ ದೊರೆತ ತಕ್ಷಣ, ಅವರು ತಮ್ಮ ಸಾಧನವನ್ನು ಅದಕ್ಕೆ ಸಂಪರ್ಕಿಸುತ್ತಾರೆ, ಆದರೆ ಇದು ಸುರಕ್ಷಿತ ವಿಧಾನವಲ್ಲ. ಇದು ನಿಮ್ಮ ಫೋನ್ ಅನ್ನು ಹಾನಿಗೊಳಿಸಬಹುದು.


3. ಇನ್ನೊಬ್ಬರ ಚಾರ್ಜರ್ ಅನ್ನು ಬಳಸುವುದು
ಪ್ರತಿ ಫೋನ್‌ನ ಚಾರ್ಜರ್ ವಿಭಿನ್ನವಾಗಿರುತ್ತದೆ, ಆದರೆ ಆಗಾಗ, ಜನರು ತಮ್ಮ ಫೋನ್‌ನ ಚಾರ್ಜರ್ ಅನ್ನು ಬಿಟ್ಟು ಬೇರೆ ಮಾದರಿಯ ಚಾರ್ಜರ್‌ನೊಂದಿಗೆ ಮೊಬೈಲ್ ಅನ್ನು ಚಾರ್ಜ್ ಮಾಡುತ್ತಾರೆ. ಇದು ಫೋನ್‌ನ ಜೀವಿತಾವಧಿಯನ್ನು ಕಡಿಮೆ ಮಾಡುತ್ತದೆ.


ಇದನ್ನೂ ಓದಿ-ಗ್ರಾಹಕರಿಗೆ ಭಾರಿ ರಿಯಾಯಿತಿ ದರದಲ್ಲಿ ಸಿಗಲಿದೆ iPhone 13..!


4. ಅಪ್ಲಿಕೇಶನ್ ಅನ್ನು ನವೀಕರಿಸದಿರುವಲ್ಲಿ ದೋಷ
ಅಪ್ಲಿಕೇಶನ್ ಅನ್ನು ನವೀಕರಿಸುವುದರಿಂದ ಫೋನ್‌ನ ಮೆಮೊರಿ ಕಡಿಮೆಯಾಗುತ್ತದೆ ಎಂದು ಅನೇಕ ಬಳಕೆದಾರರು ಭಾವಿಸುತ್ತಾರೆ. ಹೀಗಿರುವಾಗ ಅವರು ಯಾವುದೇ ಅಪ್ಲಿಕೇಶನ್‌ನ ಹಳೆಯ ಆವೃತ್ತಿಯನ್ನು ಮಾತ್ರ ತಮ್ಮ ಬಳಿ ಇಟ್ಟುಕೊಳ್ಳುತ್ತಾರೆ. ಅವರು ಅಪ್ಲಿಕೇಶನ್ ನವೀಕರಣಗಳ ಅಧಿಸೂಚನೆಯನ್ನು ನಿರ್ಲಕ್ಷಿಸುತ್ತಲೇ ಇರುತ್ತಾರೆ, ಆದರೆ ಇದು ಫೋನ್‌ಗೆ ಮಾರಕವಾಗಿದೆ ಮತ್ತು ಇದರಿಂದ ಮೊಬೈಲ್‌ನ ಜೀವಿತಾವಧಿ ಕಡಿಮೆಯಾಗುತ್ತದೆ.


ಇದನ್ನೂ ಓದಿ-YouTube ಯೂಸರ್ಸ್‌ಗೆ ಗುಡ್‌ ನ್ಯೂಸ್‌! ಅದೇನು? ಇಲ್ಲಿದೆ ನೋಡಿ..


5. ಇತ್ತೀಚಿನ ಆಪರೇಟಿಂಗ್ ಸಿಸ್ಟಮ್ ಇಲ್ಲದಿರುವುದು
ಮೊಬೈಲ್ ಕಂಪನಿಗಳು ತಮ್ಮ ಫೋನ್ ಅನ್ನು ಕಾಲಕಾಲಕ್ಕೆ ನವೀಕರಿಸುತ್ತಲೇ ಇರುತ್ತವೆ. ಈ ನಿಟ್ಟಿನಲ್ಲಿ ಕಂಪನಿಗಳು ಮೊಬೈಲ್ ಗೆ  ನೋಟಿಫಿಕೇಶನ್ ಕಳುಹಿಸುತ್ತಲೇ. ಆದರೆ ಹೆಚ್ಚಿನ ಬಳಕೆದಾರರು ಅದನ್ನು ನಿರ್ಲಕ್ಷಿಸುತ್ತಾರೆ ಮತ್ತು ಫೋನ್‌ನ ಇತ್ತೀಚಿನ ಆವೃತ್ತಿಯನ್ನು ಅಂದರೆ ನವೀಕರಿಸಿದ ಆಪರೇಟಿಂಗ್ ಸಿಸ್ಟಮ್ ಅನ್ನು ಇಟ್ಟುಕೊಳ್ಳುವುದಿಲ್ಲ. ಇದು ಫೋನ್‌ನಲ್ಲಿ ತೊಂದರೆಗಳನ್ನು ಉಂಟುಮಾಡುತ್ತದೆ.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.