How To check If Your Smartphone Has Virus - ಇಂದಿನ ಸ್ಮಾರ್ಟ್ ಫೋನ್ ಯುಗದಲ್ಲಿ ನಿಮಗೆ ಸ್ಮಾರ್ಟ್ ಫೋನ್ ಬಳಸದೆ ಇರುವ ವ್ಯಕ್ತಿ ಸಿಗುವುದು ತುಂಬಾ ವಿರಳ. ಸ್ಮಾರ್ಟ್ ಫೋನ್ ಬಳಕೆಯ ಹಲವು ಲಾಭಗಳಿವೆ. ಆದರೆ, ಅದರಿಂದ ಕೆಲ ಹಾನಿಗಳೂ ಕೂಡ ಇವೆ. ಈ ಹಾನಿಗಳಲ್ಲಿ ಅತಿ ದೊಡ್ಡ ಹಾನಿ ಅಥವಾ ಅಪಾಯ ಎಂದರೆ ಅದು ವೈರಸ್ ಸಮಸ್ಯೆ ಮತ್ತು ಹ್ಯಾಕಿಂಗ್ ಸಮಸ್ಯೆ. ನೀವು ಬಳಸುವ ಸ್ಮಾರ್ಟ್ ಫೋನ್ ಮೂಲಕ ಹ್ಯಾಕರ್ ಗಳು ನಿಮ್ಮ ವೈಯಕ್ತಿಕ ಮಾಹಿತಿಯನ್ನು ಕದಿಯುತ್ತಾರೆ ಮತ್ತು ನಿಮ್ಮ ಬ್ಯಾಂಕ್ ಖಾತೆಯವರೆಗೆ ತಲುಪಿ ಅದನ್ನು ಖಾಲಿ ಮಾಡುತ್ತಾರೆ. ಸಾಮಾನ್ಯವಾಗಿ ಜನರ ಸ್ಮಾರ್ಟ್ ಫೋನ್ ನಲ್ಲಿ ವೈರಸ್ ಇರುತ್ತದೆ ಮತ್ತು ಆಶ್ಚರ್ಯದ ಸಂಗತಿ ಎಂದರೆ ಆ ಕುರಿತು ಅವರಿಗೆ ಮಾಹಿತಿಯೇ ಇರುವುದಿಲ್ಲ. ಇಂದು ನಾವು ನಿಮಗೆ ಸುಲಭವಾದ ವಿಧಾನವೊಂದರ ಕುರಿತು ಮಾಹಿತಿ ನೀಡುತ್ತಿದ್ದು, ತನ್ಮೂಲಕ ನೀವು ನಿಮ್ಮ ಮೊಬೈಲ್ ನಲ್ಲಿರುವ ವೈರಸ್ ಅನ್ನು ಪತ್ತೆಹಚ್ಚಬಹುದು.


COMMERCIAL BREAK
SCROLL TO CONTINUE READING

ನಿಮ್ಮ ಸ್ಮಾರ್ಟ್ ಫೋನ್ ನಲ್ಲಿಯೂ ವೈರಸ್ ಇಲ್ವಲ್ಲಾ?
ಇತ್ತೀಚಿನ ದಿನಗಳಲ್ಲಿ ಸ್ಪೈವೇರ್ ಆಪ್ ಗಳು ಸಾಮಾನ್ಯವಾಗಿವೆ ಮತ್ತು ಅವು ಸ್ಮಾರ್ಟ್ ಫೋನ್ ಗೆ ಸೇರಿರುವ ಸಂಗತಿ ಫೋನ್ ಮಾಲೀಕರಿಗೂ ಕೂಡ ಗೊತ್ತಾಗುವುದಿಲ್ಲ. ಈ ಸ್ಪೈವೇರ್ ಗಳು ಆಪ್ ಗಳ ಮೂಲಕ ನಿಮ್ಮ ಮೊಬೈಲ್ ಗೆ ಹೊಕ್ಕು, ನಿಮ್ಮ ದತ್ತಾಂಶಗಳಿಗೆ ಕನ್ನಹಾಕುತ್ತವೆ. ಆದರೆ, ಅವುಗಳ ಕುರಿತು ಬಳಕೆದಾರರಿಗೆ ಮಾಹಿತಿ ಕೂಡ ಸಿಗುವುದಿಲ್ಲ. ಈ ದತ್ತಾಂಶಗಳಲ್ಲಿ ಪಾಸ್ವರ್ಡ್, ವೈಯಕ್ತಿಕ ಫೋಟೋಗಳು ಹಾಗೂ ಬ್ಯಾಂಕ್ ವಿವರಗಳು ಶಾಮೀಲಾಗಿವೆ. ಟೆಕ್ ಕ್ರಂಚ್ ಗೆ ಇತ್ತೀಚಿಗೆ ಇಂತಹುದೇ ಒಂದು ಕ್ಯಾಶೈ ಫೈಲ್ ದೊರೆತಿದ್ದು, ಅದರಲ್ಲಿ ಹಲವು ಅಂಡ್ರಾಯಿಡ್ ಡಿವೈಸ್ ಗಳ ಮಾಹಿತಿ ಇತ್ತು ಮತ್ತು ದಿ ಟ್ರೂ ಸ್ಪೈ ಹೆಸರಿನ ಸ್ಪೈವೇರ್ ಜಾಲವಿತ್ತು. 


ಸ್ಪೈವೇರ್ ಒಂದೇ ಆಗಿದ್ದರು ಕೂಡ ಅದರ ಹೆಸರು ಭಿನ್ನವಾಗಿದೆ
ದಿ ಟ್ರೂ ಸ್ಪೈವೇರ್ ನೆಟ್ವರ್ಕ್ ನಲ್ಲಿ Copy9, MxSpy, iSpyoo, SecondClone, TheSpyApp, ExactSpy, GuestSpy ಹಾಗೂ  FoneTracker ಗಳಂತಹ ಸ್ಪೈವೇರ್ ಆಪ್ ಗಳು ಶಾಮೀಲಾಗಿವೆ. ಎಲ್ಲವೂ ಕೂಡ ಭಿನ್ನ ಭಿನ್ನ ಹೆಸರಿನಡಿ ಕಾರ್ಯನಿರ್ವಹಿಸುತ್ತವೆ.ಈ ಆಪ್ ಗಳ ಸಹಾಯದಿಂದ ಸ್ಮಾರ್ಟ್ ಫೋನ್ ಗಳ IMEI ಸಂಖ್ಯೆ ಹಾಗೂ ಯುನಿಕ್ ಅಡ್ವರ್ಟೈಸಿಂಗ್ ಐಡಿ ಡಿಟೇಲ್ ಗಳನ್ನು ಕದಿಯಬಹುದು. 


ಇದನ್ನೂ ಓದಿ-5G ಸೇವೆಗಾಗಿ ಕಾಯುತ್ತಿರುವವರಿಗೆ ಗುಡ್ ನ್ಯೂಸ್


ಚಿಟಿಕೆ ಹೊಡೆಯೋದ್ರಲ್ಲಿ ಈ ರೀತಿ ಪತ್ತೆಹಚ್ಚಿ
ಬನ್ನಿ, ಹಾಗಾದರೆ ಇದನ್ನು ನೀವು ಹೇಗೆ ಪರಿಶೀಲಿಸಬಹುದು ಎಂಬುದನ್ನು ತಿಳಿದುಕೊಳ್ಳೋಣ. ಅಂದರೆ, ನಿಮ್ಮ ಮೊಬೈಲ್ ನಲ್ಲಿ ಸ್ಪೈವೇರ್ ಇದೆಯೋ ಅಥವಾ ಇಲ್ಲವೋ ಎಂಬುದನ್ನು ತಿಳಿದುಕೊಳ್ಳೋಣ. ಇದಕ್ಕಾಗಿ ಮೊದಲು ನೀವು ನಿಮ್ಮ ಫೋನ್ ಅಥವಾ ಕಂಪ್ಯೂಟರ್ ಮೂಲಕ https://techcrunch.com/pages/thetruthspy-investigation/ ಪುಟಕ್ಕೆ ಭೇಟಿ ನೀಡಬೇಕು. ಅಲ್ಲಿ ನಿಮಗೆ  IMEI ಹಾಗೂ Ads ID ಆಪ್ಶನ್ ಕಾಣಿಸಲಿದೆ. ಅದರಲ್ಲಿ ನೀವು IMEI ಸಂಖ್ಯೆ ಹಾಗೂ Ads ID ಅನ್ನು ನಮೂದಿಸಬೇಕು.


ಇದನ್ನೂ ಓದಿ-Amazon ನಲ್ಲಿ ದಿನಕ್ಕೆ ಕೆಲವೇ ಗಂಟೆ ಕೆಲಸ ಮಾಡಿ ತಿಂಗಳಿಗೆ 1 ಲಕ್ಷಕ್ಕೂ ಅಧಿಕ ಸಂಪಾದಿಸುವ ಸುವರ್ಣಾವಕಾಶ


ಒಂದು ವೇಳೆ ನಿಮ್ಮ ಸ್ಮಾರ್ಟ್ ಫೋನಿನ ಆಡ್ಸ್ ಐಡಿಯಲ್ಲಿ ಯಾವುದೇ ರೀತಿಯ ಬದಲಾವಣೆ ನಿಮಗೆ ಕಂಡುಬಂದರೆ ಖಂಡಿತವಾಗಿಯೂ ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ ವೈರಸ್ ಇದೆ ಎಂದರ್ಥ. ಒಂದು ವೇಳೆ ಲೈಕಲೀ ಮ್ಯಾಚ್ ಬರೆದಿರುವುದು ಕಂಡುಬಂದರೆ. ಫೋನ್ ವೈರಲ್ ಲಿಸ್ಟ್ ನಲ್ಲಿ ಶಾಮೀಲಾಗಿದೆ ಆದರೆ ನಿಮ್ಮ ಹೆಚ್ಚಿನ ಡೇಟಾ ಅವರ ಬಳಿ ಇಲ್ಲ ಎಂದರ್ಥ. ಪರೀಶೀಲಿಸುವಾಗ ನಿಮಗೆ ಸ್ಕ್ರೀನ್ ಮೇಲೆ ನೋ ಮ್ಯಾಚ್ ಕಂಡುಬಂದರೆ. ನಿಮ್ಮ ಫೋನ್ ಸೇಫಾಗಿದೆ ಎಂದರ್ಥ. 


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.