Smartphone Under Rs 6000 : 6,000 ರೂಪಾಯಿಗಳಿಗಿಂತ ಕಡಿಮೆ ಬೆಲೆಗೆ ಸಿಗಲಿದೆ ಈ ಸ್ಮಾರ್ಟ್ ಫೋನ್
Smartphone Under Rs 6000: ಇತ್ತೀಚಿನ ದಿನಗಳಲ್ಲಿ ಪ್ರತಿದಿನ ಹೊಸ ಹೊಸ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಗೆ ಬರುತ್ತಿವೆ. ಇದರಲ್ಲಿ ಪ್ರೀಮಿಯಂ ರೇಂಜ್ ನಿಂದ ಹಿಡಿದು ಲೋ ಬಜೆಟ್ ಸ್ಮಾರ್ಟ್ ಫೋನ್ ಗಳೂ ಸೇರಿವೆ.
ನವದೆಹಲಿ : Smartphone Under Rs 6000: ಇತ್ತೀಚಿನ ದಿನಗಳಲ್ಲಿ ಪ್ರತಿದಿನ ಹೊಸ ಹೊಸ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಗೆ ಬರುತ್ತಿವೆ. ಇದರಲ್ಲಿ ಪ್ರೀಮಿಯಂ ರೇಂಜ್ ನಿಂದ ಹಿಡಿದು ಲೋ ಬಜೆಟ್ ಸ್ಮಾರ್ಟ್ ಫೋನ್ ಗಳೂ (low budget smartphones) ಸೇರಿವೆ. ಈ ಪೈಕಿ ನಿಮ್ಮ ಆಯ್ಕೆ ಮತ್ತು ಅಗತ್ಯಕ್ಕೆ ಅನುಗುಣವಾಗಿ ಫೋನ್ ಅನ್ನು ಆಯ್ಕೆ ಮಾಡಿಕೊಳ್ಳಬಹುದು. ಒಂದು ವೇಳೆ ನಿಮ್ಮ ಬಜೆಟ್ 6,000 ರೂ.ಗಿಂತ ಕಡಿಮೆಯಿದ್ದರೂ ಈಗ ಈ ಬೆಲೆಗೆ ಉತ್ತಮ ವೈಶಿಷ್ಟ್ಯಗಳನ್ನು ಹೊಂದಿರುವ ಅನೇಕ ಸ್ಮಾರ್ಟ್‌ಫೋನ್‌ಗಳನ್ನು ಸಿಗುತ್ತವೆ.
GIONEE Max: ಬೆಲೆ: 5,999 ರೂ
ಜಿಯೋನಿ ಮ್ಯಾಕ್ಸ್ (GIONEE Max) ಇತ್ತೀಚಿನ ಸ್ಮಾರ್ಟ್ಫೋನ್ ಆಗಿದೆ. ಇದರಲ್ಲಿ ಪವರ್ ಬ್ಯಾಕಪ್ ಗಾಗಿ 5000 mAh ಬ್ಯಾಟರಿಯನ್ನು ಹೊಂದಿದೆ. ಫೋನ್ 6.1-ಇಂಚಿನ ಎಚ್‌ಡಿ + ಡಿಸ್ಪ್ಲೇ ಹೊಂದಿದ್ದು, ಆಕ್ಟಾ ಕೋರ್ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಫೋನ್‌ನಲ್ಲಿ ಡ್ಯುಯಲ್ ರಿಯರ್ ಕ್ಯಾಮೆರಾ ಇದ್ದು, ಇದರ ಪ್ರೈಮರಿ ಸೆನ್ಸಾರ್ 13 ಎಂಪಿ ಆಗಿದೆ. ಅಲ್ಲದೆ ಇದರಲ್ಲಿ 5 ಎಂಪಿ ಫ್ರಂಟ್ ಕ್ಯಾಮೆರಾವನ್ನು (camera) ಕೂಡಾ ಅಳವಡಿಸಲಾಗಿದೆ. ಇದು 2 GB RAM ಮತ್ತು 32 GB ಇಂಟರ್ನಲ್ ಸ್ಟೋರೇಜ್ ಅನ್ನು ಹೊಂದಿದೆ. ಇದನ್ನು 256 GB ವರೆಗೆ ವಿಸ್ತರಿಸಲೂಬಹುದು.
ಇದನ್ನೂ ಓದಿ : Realme Days Saleನಲ್ಲಿ ಈ ಫೋನ್ ಗಳ ಮೇಲೆ ಸಿಗಲಿದೆ ಭಾರೀ ರಿಯಾಯಿತಿ
LAVA Z1 : ಬೆಲೆ: 5,199 ರೂ
LAVA Z1 ಸಹ ಕಡಿಮೆ ಬೆಲೆಯಲ್ಲಿ ಅನೇಕ ಉತ್ತಮ ವೈಶಿಷ್ಟ್ಯಗಳನ್ನು ಹೊಂದಿದೆ. ಇದನ್ನು ಮೀಡಿಯಾ ಟೆಕ್ ಹೆಲಿಯೊ ಎ 20 ಪ್ರೊಸೆಸರ್ ನಲ್ಲಿ ಪರಿಚಯಿಸಲಾಗಿದೆ. ಇದು 5.0-ಇಂಚಿನ ಡಿಸ್ಪ್ಲೇ ಮತ್ತು 3,100mAh ಬ್ಯಾಟರಿಯನ್ನು ಹೊಂದಿದೆ. ಫೋನ್ 5 ಎಂಪಿ ಹಿಂಬದಿಯ ಕ್ಯಾಮೆರಾ ಮತ್ತು 5 ಎಂಪಿ ಫ್ರಂಟ್ ಕ್ಯಾಮೆರಾವನ್ನು (Front camera) ಹೊಂದಿದೆ. ಇದಲ್ಲದೆ, 2 ಜಿಬಿ RAMನೊಂದಿಗೆ 16 GB ಇಂಟರ್ನಲ್ ಸ್ಟೋರೇಜ್ ಅನ್ನು ಹೊಂದಿದೆ. ಇದನ್ನು 256 ಜಿಬಿ ವರೆಗೆ ವಿಸ್ತರಿಸಬಹುದು.
Panasonic Eluga I7 : ಬೆಲೆ: 5,498 ರೂ
ನೀವು 6,000 ರೂ.ಗಿಂತ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್ ಅನ್ನು ಹುಡುಕುತ್ತಿದ್ದರೆ, Panasonic Eluga I7 ಉತ್ತಮ ಆಯ್ಕೆಯಾಗಿದೆ. ಈ ಸ್ಮಾರ್ಟ್‌ಫೋನ್ ಪವರ್ ಬ್ಯಾಕಪ್‌ಗಾಗಿ 4000mAh ಬ್ಯಾಟರಿಯನ್ನು ಹೊಂದಿದೆ. ಇದು 5.54 ಇಂಚಿನ ಡಿಸ್ಪ್ಲೇ ಮತ್ತು ಮೀಡಿಯಾ ಟೆಕ್ ಎಂಟಿ 6737 ಪ್ರೊಸೆಸರ್ ಹೊಂದಿದೆ. ಫೋನ್ ಎಲ್‌ಇಡಿ ಫ್ಲ್ಯಾಷ್‌ನೊಂದಿಗೆ 8 ಎಂಪಿ ಪ್ರೈಮರಿ ಸೆನ್ಸಾರ್ ಮತ್ತು 8 ಎಂಪಿ ಫ್ರಂಟ್ ಕ್ಯಾಮೆರಾವನ್ನು ಹೊಂದಿದೆ.
ಇದನ್ನೂ ಓದಿ : Smartphone: ಮಳೆಯಿಂದಾಗಿ ನಿಮ್ಮ ಫೋನ್‌ನಲ್ಲಿ ನೀರು ಹೋಗಿದೆಯೇ? ಭಯಬಿಡಿ, ಈ ಸುಲಭ ಟ್ರಿಕ್ ಬಳಸಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.