ಒಮ್ಮೆ ಚಾರ್ಜ್ ಮಾಡಿದರೆ ಏಳು ದಿನ ನಡೆಯುತ್ತದೆ ಈ Smartphone, ಅದ್ಭುತ ಕ್ಯಾಮರಾದೊಂದಿಗೆ ತೆಗೆಯಬಹುದು HD photo
Ulefone Power Armor 13 Rugged Smartphone ಅನ್ನು ಉತ್ತಮ ವೈಶಿಷ್ಟ್ಯಗಳೊಂದಿಗೆ ಬಿಡುಗಡೆ ಮಾಡಲಾಗಿದೆ. ಬ್ಯಾಟರಿ ಡ್ರೈನ್ ಪರೀಕ್ಷೆ, ಕಾರ್ಯಕ್ಷಮತೆ ಪರೀಕ್ಷೆ ಮತ್ತು ಗುಣಮಟ್ಟ ಪರೀಕ್ಷೆಯ ನಂತರ, ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಲಾಗಿದೆ.
ನವದೆಹಲಿ : Ulefone Power Armor 13 Rugged Smartphone ಅನ್ನು ಉತ್ತಮ ವೈಶಿಷ್ಟ್ಯಗಳೊಂದಿಗೆ ಬಿಡುಗಡೆ ಮಾಡಲಾಗಿದೆ. ಬ್ಯಾಟರಿ ಡ್ರೈನ್ ಪರೀಕ್ಷೆ, ಕಾರ್ಯಕ್ಷಮತೆ ಪರೀಕ್ಷೆ ಮತ್ತು ಗುಣಮಟ್ಟ ಪರೀಕ್ಷೆಯ ನಂತರ, ಸ್ಮಾರ್ಟ್‌ಫೋನ್ (Smartphone) ಅನ್ನು ಬಿಡುಗಡೆ ಮಾಡಲಾಗಿದೆ. ಈ ಫೋನ್ ನ ಹೊಸ ವೀಡಿಯೊವನ್ನು ಕೂಡಾ ಬಿಡುಗಡೆ ಮಾಡಲಾಗಿದೆ. ವಿಡಿಯೋದಲ್ಲಿ ಅದರ ವೇಗದ ಚಾರ್ಜಿಂಗ್ ಸಾಮರ್ಥ್ಯವನ್ನು ತೋರಿಸುತ್ತದೆ. Ulefone Power Armor 13 , 13200mAH ಬ್ಯಾಟರಿಯನ್ನು ಹೊಂದಿದ್ದು, ಕೇವಲ 3 ಗಂಟೆಗಳಲ್ಲಿ ಪೂರ್ತಿ ಚಾರ್ಜ್ ಆಗಲಿದೆ ಎನ್ನುವುದನ್ನು ಈ ವಿಡಿಯೋದಲ್ಲಿ ತೋರಿಸಲಾಗಿದೆ.
ಈ ಫೋನ್ 13200mAh ಬ್ಯಾಟರಿಯನ್ನು ಹೊಂದಿದ್ದು, 33W PD ಚಾರ್ಜರ್ 3 ಗಂಟೆಗಳ ಒಳಗೆ ಫುಲ್ ಚಾರ್ಜ್ ಮಾಡುತ್ತದೆ. ವೀಡಿಯೋ (Video) ಪ್ರಕಾರ, ಮೊದಲ 10 ನಿಮಿಷಗಳಲ್ಲಿ ಸ್ಮಾರ್ಟ್ಫೋನ್ (Smartphone) 10% ಮತ್ತು ಮುಂದಿನ 30 ನಿಮಿಷಗಳಲ್ಲಿ 20% ಚಾರ್ಜ್ ಮಾಡುತ್ತದೆ. ಇದು ಒಂದು ಗಂಟೆಯಲ್ಲಿ 55 ಪ್ರತಿಶತವನ್ನು ಚಾರ್ಜ್ ಮಾಡುವಲ್ಲಿ ಯಶಸ್ವಿಯಾಗುತ್ತದೆ. ವೇಗದ ಚಾರ್ಜಿಂಗ್ ವೈಶಿಷ್ಟ್ಯವು ಸಾಕಷ್ಟು ಸಮಯವನ್ನು ಉಳಿಸುತ್ತದೆ ಎಂಬ ಪ್ರಶಂಸೆಗೆ ಪಾತ್ರವಾಗಿದೆ.
ಇದನ್ನೂ ಓದಿ : Fraud Alert! Gmail-Outlook ಬಳಕೆದಾರರೇ ಎಚ್ಚರ! ಈ ಖತರ್ನಾಕ್ ಲಿಂಕ್ ಮೇಲೆ ಕ್ಲಿಕ್ಕಿಸಿದರೆ...!
Ulefone Power Armor 13 ವಿಶೇಷತೆಗಳು :
ಆದರೂ, ಒಮ್ಮೆ ಸಂಪೂರ್ಣವಾಗಿ ಚಾರ್ಜ್ ಮಾಡಿದರೆ, ಒಂದು ವಾರದ ಬ್ಯಾಟರಿ ಸ್ಟ್ಯಾಂಡ್‌ಬೈ ಪಡೆಯಬಹುದು. ಆದ್ದರಿಂದ, ನೀವು ಗ್ರಾಮೀಣ ಪ್ರದೇಶಗಳಲ್ಲಿ ಪದೇ ಪದೇ ಪ್ರಯಾಣಿಸುತ್ತಿದ್ದರೆ, ಈ ಸ್ಮಾರ್ಟ್ ಫೋನ್ (Smartphone) ಪರಿಗಣನೆಗೆ ಯೋಗ್ಯವಾಗಿದೆ. ಉಲೆಫೋನ್ ಪವರ್ ಆರ್ಮರ್ 13, 6.81 ಇಂಚಿನ FHD + ಡಿಸ್ಪ್ಲೇ ಹೊಂದಿದೆ. ಇದು 1080 X 2400 ಪಿಕ್ಸೆಲ್ ರೆಸಲ್ಯೂಶನ್ ಹೊಂದಿದೆ. ಉಲೆಫೋನ್ ಪವರ್ ಆರ್ಮರ್ 13 ಹೆಲಿಯೋ ಜಿ 95 ಪ್ರೊಸೆಸರ್ ನಲ್ಲಿ ಕೆಲಸ ಮಾಡುತ್ತದೆ. ಇದರಲ್ಲಿ ನೀವು 8 GB RAM ಮತ್ತು 256 GB ಸ್ಟೋರೇಜ್ ಇರಲಿದೆ. ಸ್ಟೋರೇಜ್ ಹೆಚ್ಚಿಸಲು 1 TB SD ಕಾರ್ಡ್ ಅನ್ನು ಬಳಸಬಹುದು.
ಉಲೆಫೋನ್ ಪವರ್ ಆರ್ಮರ್ 13 ಕ್ಯಾಮೆರಾ :
ಈ ಫೋನಿನ ಹಿಂಭಾಗದಲ್ಲಿ ನಾಲ್ಕು ಕ್ಯಾಮೆರಾಗಳಿವೆ. ಪ್ರಾಥಮಿಕ 48 ಮೆಗಾಪಿಕ್ಸೆಲ್ ಆಗಿದೆ. ದ್ವಿತೀಯ 8 ಮೆಗಾಪಿಕ್ಸೆಲ್ ಆಗಿರುತ್ತದೆ. ಇನ್ನು ಉಳಿದ ಎರಡು ಕ್ಯಾಮೆರಾಗಳು 2-2 ಮೆಗಾಪಿಕ್ಸೆಲ್‌ಗಳಾಗಿರುತ್ತವೆ. ಸೆಲ್ಫಿಗಾಗಿ 16 ಮೆಗಾಪಿಕ್ಸೆಲ್ ಕ್ಯಾಮೆರಾ ಇದೆ. ಈ ಫೋನ್‌ನಲ್ಲಿ ನೀವು 4K ಫೋಟೋಗಳು ಅಥವಾ ವೀಡಿಯೊಗಳನ್ನು ರೆಕಾರ್ಡ್ ಮಾಡಬಹುದು.
ಇದನ್ನೂ ಓದಿ : BSNL 4G Network: BSNLನಿಂದ ಮೊಟ್ಟಮೊದಲ 4G ಕರೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.