ಶೀಘ್ರದಲ್ಲೇ ಸ್ಮಾರ್ಟ್‌ಫೋನ್‌ಗಳ ಬೆಲೆ ಏರಿಕೆ! ನೀವು ಹೊಸ ಮೊಬೈಲ್ ಖರೀದಿಸಲು ಬಯಸಿದರೆ ಈಗಲೇ ಖರೀದಿಸಿ
Smartphones Price Hike: ನೀವು ಹೊಸ ಸ್ಮಾರ್ಟ್‌ಫೋನ್ ಖರೀದಿಸುವ ಬಗ್ಗೆ ಚಿಂತಿಸುತ್ತಿದ್ದರೆ ತಡಮಾಡಬೇಡಿ. ಮುಂಬರುವ ಸಮಯದಲ್ಲಿ ಫೋನ್ಗಳ ಬೆಲೆ ಹೆಚ್ಚಾಗಲಿದೆ.
ಶೀಘ್ರದಲ್ಲೇ ಸ್ಮಾರ್ಟ್‌ಫೋನ್‌ಗಳ ಬೆಲೆ ಏರಿಕೆ: ಇಂದಿನ ಕಾಲದಲ್ಲಿ ಬಹುತೇಕ ಪ್ರತಿಯೊಬ್ಬರ ಕೈಯಲ್ಲೂ ಸ್ಮಾರ್ಟ್‌ಫೋನ್ ಇದ್ದೇ ಇರುತ್ತದೆ. ಮಾರುಕಟ್ಟೆಯಲ್ಲಿ ಹಲವಾರು ಬ್ರಾಂಡ್‌ಗಳ ಸ್ಮಾರ್ಟ್‌ಫೋನ್‌ಗಳು ಲಭ್ಯವಿದೆ. ನಮ್ಮಲ್ಲಿ ಕೆಲವರು ಅವಶ್ಯಕತೆಗಾಗಿ ಸ್ಮಾರ್ಟ್‌ಫೋನ್ ಖರೀದಿಸಿದರೆ ಇನ್ನೂ ಕೆಲವರು ಮಾರುಕಟ್ಟೆಯಲ್ಲಿ ಲಭ್ಯವಿರುವ ಉನ್ನತ ಮಟ್ಟದ ಸ್ಮಾರ್ಟ್‌ಫೋನ್ ಖರೀದಿಸುವ ಸಲುವಾಗಿ ಆಗಾಗ್ಗೆ ಫೋನ್ ಬದಲಿಸುವ ಗೀಳು ಹೊಂದಿರುತ್ತಾರೆ. ನೀವೂ ಸಹ ಹೊಸ ಸ್ಮಾರ್ಟ್‌ಫೋನ್ ಖರೀದಿಸುವ ಬಗ್ಗೆ ಯೋಚಿಸುತ್ತಿದ್ದರೆ ತಡಮಾಡಬೇಡಿ. ಏಕೆಂದರೆ ಸ್ಮಾರ್ಟ್‌ಫೋನ್‌ಗಳ ಬೆಲೆ ಗಣನೀಯವಾಗಿ ಹೆಚ್ಚಾಗಬಹುದು ಎಂದು ಹೇಳಲಾಗುತ್ತಿದೆ.
ತಕ್ಷಣ ಸ್ಮಾರ್ಟ್‌ಫೋನ್ ಖರೀದಿಸಿ ಇಲ್ಲದಿದ್ದರೆ ಬೆಲೆ ಹೆಚ್ಚಾಗಬಹುದು:
ಇತ್ತೀಚಿನ ವರದಿಯೊಂದರ ಪ್ರಕಾರ ಮುಂಬರುವ ತಿಂಗಳುಗಳಲ್ಲಿ ಚಿಪ್ ಪ್ರೊಡಕ್ಷನ್ ನಲ್ಲಿ ಬಳಸುವ ಸರ್ವಿಸೇಜ್ ಬೆಲೆಯನ್ನು ಹೆಚ್ಚಿಸಲು ಸ್ಯಾಮ್ಸಂಗ್ ಯೋಜಿಸುತ್ತಿದೆ. ಚಿಪ್ ಪ್ರೊಡಕ್ಷನ್ ನಲ್ಲಿ ಬಳಸುವ ಸರ್ವಿಸೇಜ್ ಬೆಲೆಯನ್ನು 15 ರಿಂದ 20 ರಷ್ಟು ಹೆಚ್ಚಿಸಬಹುದು ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ- Huawei AX3 WiFi 6+ Router in India: ಈಗ ಒಂದೇ ಸೆಕೆಂಡಿನಲ್ಲಿ ಡೌನ್‌ಲೋಡ್ ಆಗುತ್ತೆ ಫುಲ್ ಫಿಲ್ಮ್
ಸ್ಮಾರ್ಟ್‌ಫೋನ್‌ಗಳ ಬೆಲೆ ಏಕೆ ಹೆಚ್ಚಾಗಬಹುದು?
ಸ್ಯಾಮ್‌ಸಂಗ್‌ನ ಈ ಕ್ರಮವು ಸ್ಮಾರ್ಟ್‌ಫೋನ್‌ಗಳ ಬೆಲೆಯನ್ನು ಏಕೆ ಹೆಚ್ಚಿಸಬಹುದು ಎಂದು ನೀವು ಆಶ್ಚರ್ಯ ಪಡುತ್ತಿದ್ದರೆ, ಅದಕ್ಕೂ ಕಾರಣವಿದೆ. ಬೆಲೆ ಏರಿಕೆಯ ಹಿಂದಿನ ಕಾರಣವೆಂದರೆ ಜಾಗತಿಕ ಚಿಪ್ ಕೊರತೆ ಮತ್ತು ಪೂರೈಕೆ ಸರಪಳಿಯ ನಿರ್ಬಂಧಗಳು. ಜಾಗತಿಕ ಚಿಪ್ ಕೊರತೆಯು ಸ್ಮಾರ್ಟ್‌ಫೋನ್‌ಗಳು, ಲ್ಯಾಪ್‌ಟಾಪ್‌ಗಳು ಮತ್ತು ಆಟೋಮೊಬೈಲ್‌ಗಳ ಬೆಲೆಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಲಾಗಿದೆ. ಈ ಚಿಪ್‌ಗಳು ಹೆಚ್ಚಿನ ಸ್ಮಾರ್ಟ್‌ಫೋನ್‌ಗಳು, ಟ್ಯಾಬ್ಲೆಟ್‌ಗಳು ಮತ್ತು ಗೇಮಿಂಗ್ ಕನ್ಸೋಲ್‌ಗಳಲ್ಲಿ ಬಳಸಲ್ಪಡುತ್ತವೆ ಮತ್ತು ಈ ಕಾರಣದಿಂದಾಗಿ ಸ್ಮಾರ್ಟ್‌ಫೋನ್‌ಗಳ ಬೆಲೆ ಏರಿಕೆ ಆಗಬಹುದು ಎಂದು ಊಹಿಸಲಾಗಿದೆ.
ಇದನ್ನೂ ಓದಿ- Basavaraj Bommai : 'ZEE ಈ ಪ್ರಯಾಣದಲ್ಲಿ ನಾವು ಹೆಗಲಿಗೆ ಹೆಗಲು ಕೊಟ್ಟು ನಡೆಯುತ್ತೇವೆ'
ಸ್ಯಾಮ್ಸಂಗ್ ಚಿಪ್ಸ್ ಬೆಲೆಯನ್ನು ಏಕೆ ಹೆಚ್ಚಿಸುತ್ತಿದೆ?
ನಿಮಗೆ ತಿಳಿದಿಲ್ಲದಿರಬಹುದು, ಸ್ಯಾಮ್‌ಸಂಗ್ ತನ್ನ ಚಿಪ್‌ಗಳ ಉತ್ಪಾದನಾ ವೆಚ್ಚವನ್ನು ದೀರ್ಘಕಾಲದವರೆಗೆ ಹೆಚ್ಚಿಸಿಲ್ಲ. ಈಗ, ಕೋವಿಡ್ ಪ್ರಕರಣಗಳು, ಏರುತ್ತಿರುವ ವಸ್ತುಗಳ ಬೆಲೆಗಳು ಮತ್ತು ತಾತ್ಕಾಲಿಕ ಮಾರುಕಟ್ಟೆ ಪರಿಸ್ಥಿತಿಗಳ ದೃಷ್ಟಿಯಿಂದ, ಬ್ರ್ಯಾಂಡ್ ಸೆಮಿಕಂಡಕ್ಟರ್ ಉತ್ಪಾದನಾ ಕಾರ್ಯಕ್ರಮದ ವೆಚ್ಚವನ್ನು ಹೆಚ್ಚಿಸಿದೆ ಮತ್ತು ಇದು ಸ್ಮಾರ್ಟ್‌ಫೋನ್‌ಗಳ ಬೆಲೆಯ ಮೇಲೂ ಇದು ಪರಿಣಾಮ ಬೀರಬಹುದು ಎನ್ನಲಾಗಿದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.