ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತುಳಸಿಕೆರೆ ಗ್ರಾಮದಲ್ಲಿ 170ಕ್ಕೂ ಹೆಚ್ಚು ಕುಟುಂಬಗಳಿದ್ದು 1000 ಜನಸಂಖ್ಯೆ ಹೊಂದಿರುವ ಕುಗ್ರಾಮದಲ್ಲಿ  ಸೋಲಾರ್ ವಿದ್ಯುತ್ ಪ್ಲಾಂಟ್ ಕೆಟ್ಟ ಪರಿಣಾಮ ತಿಂಗಳಿನಿಂದ ವಿದ್ಯುತ್ ಇಲ್ಲದೇ ಪರಿತಪಿಸುತ್ತಿದ್ದಾರೆ.


COMMERCIAL BREAK
SCROLL TO CONTINUE READING

ಕಳೆದ ಒಂದು ತಿಂಗಳಿನಿಂದ ಗ್ರಾಮಸ್ಥರು ಸಂಬಂಧಪಟ್ಟ ಚೆಸ್ಕಾಂ ಸಿಬ್ಬಂದಿ ಹಾಗೂ ಗ್ರಾಮ ಪಂಚಾಯಿತಿ ಸೇರಿದಂತೆ ವಿವಿಧ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ದುರಸ್ತಿಗೆ ಮುಂದಾಗದೆ ಇರುವುದರಿಂದ ಒಂದು ತಿಂಗಳಿನಿಂದ ಕತ್ತಲಲ್ಲೇ ಇವರ ಜೀವನವಾಗಿದೆ.


ವಾಟ್ಸಾಪ್‌ನಲ್ಲಿ ಈ 3 ಬದಲಾವಣೆ ಕಂಡ್ರೆ ನಿಮ್ಮ ಅಕೌಂಟ್ ಹ್ಯಾಕ್ ಆಗಿದೆ ಅಂತಾನೆ ಅರ್ಥ..!


ಮಲೆ ಮಹದೇಶ್ವರ ಬೆಟ್ಟದಿಂದ  3 ಕಿಲೋಮೀಟರ್ ದೂರದಲ್ಲಿರುವ  ನಮ್ಮ ಗ್ರಾಮ ಕಗ್ಗತ್ತಲ್ಲಿನಲ್ಲಿ ಇರುವುದರಿಂದ ಹಳ್ಳದ ನೀರು- ಕೊಳ್ಳಿ ಬೆಳಕಿನಲ್ಲಿ ಅಡುಗೆ ಮಾಡುವಂತಾಗಿದೆ, ವಿದ್ಯಾರ್ಥಿಗಳ ಓದಿಗೂ ತೊಂದರೆಯಾಗಿದೆ,  ಸಂಬಂಧಪಟ್ಟ ಜನಪ್ರತಿನಿಧಿಗಳು ಸಹ ಇತ್ತ ಗಮನ ಹರಿಸದೆ ಗ್ರಾಮವನ್ನು ಕಡೆಗಣಿಸಿದ್ದಾರೆ ಎಂದು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಕೆಂಪಯ್ಯ ಕಿಡಿಕಾರಿದ್ದಾರೆ.


ಲೋಕಸಭಾ ಚುನಾವಣೆ ಹೊತ್ತಲ್ಲಿ ಜಿಲ್ಲಾಡಳಿತ ಗ್ರಾಮಗಳಿಗೆ ಭೇಟಿ ನೀಡಿ ಮೂಲಸೌಕರ್ಯ ಕೊಡಲಾಗುವುಸು ಎಂದು ಭರವಸೆ ಕೊಟ್ಟಿದ್ದರು.‌ಈಗ ಅದು ಸುಳ್ಳಾಗಿದೆ,  ಕನಿಷ್ಠ ಸೋಲಾರ್ ವಿದ್ಯುತ್ ನ್ನು ಕೂಡ  ರಿಪೇರಿ ಮಾಡಿಲ್ಲ ಅಳಲನ್ನು ತೋಡಿಕೊಂಡರು.


ಎಣ್ಣೆ, ಮಸಾಲೆಗಳಿಂದ ಅಡುಗೆ ಮನೆ ಟೈಲ್ಸ್ ಜಿಡ್ಡು ಹಿಡಿದಿದೆಯಾ? ಹೀಗೆ ಮಾಡಿದರೆ ಸ್ವಚ್ಛಗೊಳಿಸಲು ಕೇವಲ 5 ನಿಮಿಷ ಸಾಕು !


ವಿದ್ಯುತ್ ಸೋಲಾರ್ ಪ್ಲಾಂಟ್ ದುರಸ್ತಿ ಪಡಿಸಲು ಈಗಾಗಲೇ ಸಂಬಂಧಪಟ್ಟ ಗುತ್ತಿಗೆದಾರರ ಜೊತೆ ಮಾತನಾಡಿದ್ದೇವೆ ಒಂದೆರಡು ದಿನದಲ್ಲಿ ದುರಸ್ತಿಪಡಿಸಿ ಗ್ರಾಮಸ್ಥರಿಗೆ ಸೋಲಾರ್ ವಿದ್ಯುತ್ ನೀಡಲು ಕ್ರಮ ವಹಿಸಲಾಗುವುದು ಎಂದು ಹನೂರಿನ ಸೆಸ್ಕ್ ಎಇಇ
ಶಂಕರ್ ಮಾಹಿತಿ ಕೊಟ್ಟಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.