Cockpit Seating Technology: ಮಿಲಿಟರಿ ವಿಮಾನದ ಕಾಕ್‌ಪಿಟ್ ಸೀಟ್ ಅತ್ಯಂತ ಸಂಕೀರ್ಣವಾಗಿದೆ. ಒಂದು ವೇಳೆ ಪೈಲಟ್ ಹೊರ ಜಿಗಿಯುವ ಪರಿಸ್ಥಿತಿ ಎದುರಾದರೆ ಆಗ ಉಂಟಾಗುವ ಒತ್ತಡವನ್ನು ತಡೆಯಲು ಆಸನ ಸಮರ್ಥವಾಗಿರಬೇಕು. ಅದರೊಡನೆ ಪೈಲಟ್‌ಗೆ ಆರಾಮದಾಯಕವಾಗಿಯೂ ಇರಬೇಕು.


COMMERCIAL BREAK
SCROLL TO CONTINUE READING

ಒಂದು ತಿಂಗಳ ಹಿಂದೆ, 2023ರ ಎಪ್ರಿಲ್ 4ರಂದು ಹಾರಾಡುತ್ತಿದ್ದ ವಿಮಾನವೊಂದರ ಕಾಕ್‌ಪಿಟ್‌ನಲ್ಲಿ ಅತ್ಯಂತ ವಿಷಕಾರಿ ಸರ್ಪವಾದ ಕೇಪ್ ಕೋಬ್ರಾ ತಲೆಯೆತ್ತಿತ್ತು. ಆದರೂ ಧೃತಿಗೆಡದ ಪೈಲಟ್ ರುಡಾಲ್ಫ್ ಎರಾಸ್ಮಸ್ ಧೈರ್ಯ ಮಾಡಿ, ವಿಮಾನವನ್ನು ತುರ್ತು ಭೂಸ್ಪರ್ಶ ನಡೆಸಿದರು. ಅವರ ಸಾಹಸವನ್ನು ಎಲ್ಲರೂ ಮುಕ್ತಕಂಠದಿಂದ ಶ್ಲಾಘಿಸಿದರು. ಆ ಸರ್ಪ ಕೆಲಕಾಲ ತನ್ನ ಆಸನದ ಹಿಂಭಾಗದಲ್ಲಿ ಸರಿದಾಡುವುದನ್ನು ಗಮನಿಸಿದರೂ ಎರಾಸ್ಮಸ್ ಧೈರ್ಯದಿಂದಿದ್ದರು. ಅವರು ವಾರ್ಸೆಸ್ಟರ್‌ನಿಂದ ನೆಲ್ಸ್ಪ್ರುಯಿಟ್‌ಗೆ ನಾಲ್ವರು ಪ್ರಯಾಣಿಕರಿದ್ದ ಸಣ್ಣ ವಿಮಾನವನ್ನು ಚಲಾಯಿಸುತ್ತಿದ್ದರು.


ಈ ಕುರಿತು ವಿವರಣೆ ನೀಡಿದ ಎರಾಸ್ಮಸ್, ತಾನು ತನ್ನ ಕಾಲು ಮತ್ತು ಬೆನ್ನಿನ ಬಳಿ, ವಿಮಾನದ ಬದಿಗೆ ತಾಗಿದಂತೆ ನೀರಿನ ಬಾಟಲಿ ಇಟ್ಟುಕೊಂಡು ವಿಮಾನ ಚಲಾಯಿಸುತ್ತಿದ್ದೆ ಎಂದರು. ಕೆಲ ಸಮಯದ ಬಳಿಕ ಅವರಿಗೆ ಸೊಂಟದ ಬಳಿ ತಣ್ಣಗಿನ ಅನುಭವ ಆಯಿತು. ಎರಾಸ್ಮಸ್ ನೀರಿನ ಬಾಟಲಿಯಿಂದ ನೀರು ಚೆಲ್ಲುತ್ತಿದೆ ಎಂದುಕೊಂಡರು. ಆದರೂ ಎರಾಸ್ಮಸ್ ಕೆಳಗೆ ನೋಡಿದಾಗ ಅಲ್ಲಿ ಒಂದು ಹಾವು ತನ್ನ ತಲೆಯನ್ನು ಸೀಟಿನ ಕೆಳಗೆ ತೂರಿಸುತ್ತಿತ್ತು. ಆ ವೇಳೆಗೆ ವಿಮಾನ ವೆಲ್‌ಕಾಮ್ ವಿಮಾನ ನಿಲ್ದಾಣದ ಸಮೀಪ ಹಾರಾಡುತ್ತಿತ್ತು. ಎರಾಸ್ಮಸ್ ತಕ್ಷಣವೇ ಜೊಹಾನ್ಸ್‌ಬರ್ಗ್ ವಾಯು ನಿಯಂತ್ರಣ ಕಚೇರಿಗೆ ತುರ್ತು ಕರೆ ಮಾಡಿದರು.


ಇದನ್ನೂ ಓದಿ- ಯುದ್ಧ ವಿಮಾನದಿಂದ ಜಿಗಿದ ಬಳಿಕ ಯಾಕೆ ಪೈಲಟ್ ಆರೋಗ್ಯ ತಪಾಸಣೆ ನಡೆಸಲಾಗುತ್ತದೆ?


ಹಾಗೆಂದು ಎಲ್ಲ ವಿಮಾನ ಪ್ರಯಾಣಗಳೂ ಹೀಗೆ ಭಯಪಡಿಸುವಂತಿರುವುದಿಲ್ಲ. ಆದರೆ ಮಿಲಿಟರಿ ವಿಮಾನಗಳ ಕಾಕ್‌ಪೀಟ್ ಆಸನದ ಹಿಂದಿನ ತಂತ್ರಜ್ಞಾನ ಅತ್ಯಂತ ಸಂಕೀರ್ಣವಾಗಿದೆ.


ಇಜೆಕ್ಷನ್ ವ್ಯವಸ್ಥೆ:
ಕಾಕ್‌ಪಿಟ್ ಆಸನದ ಒಂದು ಬಹುಮುಖ್ಯ ಅಂಶವೆಂದರೆ ಅದರ ಇಜೆಕ್ಷನ್ ವ್ಯವಸ್ಥೆ. ಈ ವ್ಯವಸ್ಥೆ ಏನಾದರೂ ಅಪಘಾತವಾದರೆ, ತುರ್ತು ಪರಿಸ್ಥಿತಿ ಎದುರಾದರೆ, ಪೈಲಟ್‌ಗೆ ಅತ್ಯಂತ ಕ್ಷಿಪ್ರವಾಗಿ ವಿಮಾನದಿಂದ ಹೊರಜಿಗಿಯಲು ನೆರವಾಗುತ್ತದೆ. ಈ ಇಜೆಕ್ಷನ್ ವ್ಯವಸ್ಥೆ ಸಾಮಾನ್ಯವಾಗಿ ಒಂದು ರಾಕೆಟ್ ಮೋಟರ್, ಒಂದು ಆಸನ, ಹಾಗೂ ಪ್ಯಾರಾಶೂಟ್‌ಗಳನ್ನು ಒಳಗೊಂಡಿರುತ್ತದೆ. ಈ ರಾಕೆಟ್ ಮೋಟಾರ್ ಆಸನವನ್ನು ವಿಮಾನದಿಂದ ಹೊರಗೆ ಚಲಿಸುವಂತೆ ಮಾಡುತ್ತದೆ. ಈ ಒತ್ತಡದ ಸಂದರ್ಭದಲ್ಲಿ ಆಸನ ಪೈಲಟ್‌ನನ್ನು ರಕ್ಷಿಸುತ್ತದೆ. ಪ್ಯಾರಾಶೂಟ್ ಪೈಲಟ್ ನಿಧಾನವಾಗಿ ನೆಲಕ್ಕಿಳಿಯುವಂತೆ ನೋಡಿಕೊಳ್ಳುತ್ತದೆ.


ಈ ಇಜೆಕ್ಷನ್ ವ್ಯವಸ್ಥೆಯ ಜೊತೆಗೆ, ಕಾಕ್‌ಪಿಟ್ ಸೀಟ್ ತಂತ್ರಜ್ಞಾನದಲ್ಲಿ ಇನ್ನಷ್ಟು ವೈಶಿಷ್ಟ್ಯಗಳು, ವ್ಯವಸ್ಥೆಗಳೂ ಇವೆ. ಅವೆಂದರೆ,


• ಪೈಲಟ್‌ನನ್ನು ಆಸನಕ್ಕೆ ಬಲವಾಗಿ ಬಂಧಿಸುವ ಬೆಲ್ಟ್ ವ್ಯವಸ್ಥೆ


• ಪೈಲಟ್ ತಲೆಗೆ ಗಾಯಗಳಾಗದಂತೆ ರಕ್ಷಿಸುವ ಹೆಡ್ ರೆಸ್ಟ್ ವ್ಯವಸ್ಥೆ


• ಪೈಲಟ್ ಆಸನ ಹೊರ ಚಲಿಸಿದಾಗ ಸ್ವಯಂಚಾಲಿತವಾಗಿ ಕಾರ್ಯಾಚರಿಸುವ ಪ್ಯಾರಾಶೂಟ್ ವ್ಯವಸ್ಥೆ


• ವಿಮಾನದಿಂದ ಜಿಗಿದು, ಭೂಸ್ಪರ್ಶ ನಡೆಸಿದ ಬಳಿಕ ಪೈಲಟ್‌ಗೆ ಅಗತ್ಯ ಬಿದ್ದರೆ ಉಪಯೋಗಿಸಲು ಆಹಾರ, ನೀರು ಮತ್ತಿತರ ವಸ್ತುಗಳು


ಪೈಲಟ್‌ನ ಸುರಕ್ಷತೆಯನ್ನು ಖಾತ್ರಿಪಡಿಸಲು ಕಾಕ್‌ಪಿಟ್ ಸೀಟನ್ನು ಇಷ್ಟೊಂದು ಸಂಕೀರ್ಣವಾಗಿರುವಂತೆ ಮಾಡಲಾಗುತ್ತದೆ. ಸುರಕ್ಷತೆ ಮತ್ತು ಆರಾಮವನ್ನು ಒದಗಿಸುವ ಕಾಕ್‌ಪಿಟ್ ಆಸನದಲ್ಲಿ ಪೈಲಟ್ ಜಿಗಿದ ಬಳಿಕ ಸುರಕ್ಷಿತವಾಗಿರುವಂತೆ ಹಲವು ವೈಶಿಷ್ಟ್ಯಗಳನ್ನು ಅಳವಡಿಸಿ, ಪೈಲಟ್‌ನ್ನು ಸುರಕ್ಷಿತವಾಗಿಡಲಾಗುತ್ತದೆ.


ಮಿಲಿಟರಿ ವಿಮಾನಗಳ ಪ್ರಮುಖ ಕಾಕ್‌ಪಿಟ್ ಸೀಟ್ ತಂತ್ರಜ್ಞಾನದ ಕೆಲವು ಪ್ರಮುಖ ವೈಶಿಷ್ಟ್ಯಗಳು:
ಜ಼ೀರೋ - ಜೀ಼ರೋ ಇಜೆಕ್ಷನ್ ಸಾಮರ್ಥ್ಯ: 

ಈ ವ್ಯವಸ್ಥೆಯ ಮೂಲಕ ಪೈಲಟ್ ವಿಮಾನದಿಂದ ಅದು ಭೂಮಿಯಲ್ಲಿದ್ದಾಗಲೂ, ಅಥವಾ ಅತ್ಯಂತ ಕಡಿಮೆ ವೇಗದಲ್ಲಿ ಚಲಿಸುತ್ತಿರುವಾಗಲೂ ಜಿಗಿಯಲು ಸಾಧ್ಯವಾಗುತ್ತದೆ.


ಹೆಚ್ಚಿನ ವೇಗ ಪರಿಣಾಮ ಸಹಿಷ್ಣುತೆ: 
ಈ ಆಸನ ಇಜೆಕ್ಷನ್ ಸಂದರ್ಭದಲ್ಲಿ ಹೆಚ್ಚಿನ ಒತ್ತಡವನ್ನು ಸಹಿಸಿಕೊಂಡು, ಪೈಲಟ್‌ಗೆ ಗಾಯವಾಗದಂತೆ ರಕ್ಷಿಸಬೇಕಾಗುತ್ತದೆ.


ಆರಾಮ ಮತ್ತು ದಕ್ಷತೆ: 
ಈ ಆಸನ ದೀರ್ಘಾವಧಿಯ ತನಕ ಕುಳಿತುಕೊಳ್ಳಲು ಮತ್ತು ಚಲಾಯಿಸಲು ಪೈಲಟ್‌ಗೆ ಆರಾಮದಾಯಕವಾಗಿರಬೇಕು. ಅದರೊಡನೆ, ಬೇರೆ ಬೇರೆ ದೇಹಗಾತ್ರಕ್ಕೆ ಅನುಗುಣವಾಗಿ ಹೊಂದಿಕೊಳ್ಳಲು ಅನುಕೂಲಕರವಾಗಿರಬೇಕು.


ಬಾಳಿಕೆ: 
ಈ ಆಸನ ಮಿಲಿಟರಿ ಬಳಕೆಯ ವಿಪರೀತ ಸ್ಥಿತಿಗಳಾದ ಉಷ್ಣತೆ ಮತ್ತು ಅಲುಗಾಡುವಿಕೆಯನ್ನು ತಾಳಿಕೊಳ್ಳಬೇಕು.


ಇತರ ಸುರಕ್ಷತಾ ಅಂಶಗಳು: 
ಈ ಆಸನ ಇಜೆಕ್ಷನ್ ಸಂದರ್ಭದಲ್ಲಿ ಪೈಲಟ್ ಅನ್ನು ರಕ್ಷಿಸುವ ಸಲುವಾಗಿ ಹೆಡ್ ರೆಸ್ಟ್, ಪ್ಯಾರಾಶೂಟ್ ನಿಯೋಜನಾ ವ್ಯವಸ್ಥೆ, ಮತ್ತಿತರ ಸುರಕ್ಷತಾ ಅಂಶಗಳನ್ನು ಒಳಗೊಂಡಿರುತ್ತದೆ.


ಇದನ್ನೂ ಓದಿ- 1980ರ ದಶಕದ ಎಚ್‌ಜಿಯು-55/ಪಿ ಹೆಲ್ಮೆಟ್‌ಗೆ ಮುಕ್ತಿ: ಈಗಾಗಲೇ ಲಗ್ಗೆಯಿಟ್ಟಿವೆ 4+ ತಲೆಮಾರಿನ ಮಿಲಿಟರಿ ಪೈಲಟ್ ಹೆಲ್ಮೆಟ್‌ಗಳು


ಕಾಕ್‌ಪಿಟ್ ಆಸನ ತಂತ್ರಜ್ಞಾನ ಸತತವಾಗಿ ಅಭಿವೃದ್ಧಿ ಹೊಂದುತ್ತಿದೆ. ಉತ್ಪಾದಕ ಸಂಸ್ಥೆಗಳು ಚಾಲಕರ ಸುರಕ್ಷತೆ ಮತ್ತು ಆರಾಮವನ್ನು ಹೆಚ್ಚಿಸಲು ಪ್ರಯತ್ನ ನಡೆಸುತ್ತಲೇ ಇದ್ದಾರೆ. ನೂತನ ತಂತ್ರಜ್ಞಾನಗಳಾದ ಏರ್ ಬ್ಯಾಗ್, ಹಾಗೂ ಇತರ ಆಧುನಿಕ ಉತ್ಪನ್ನಗಳನ್ನು ಪೈಲಟ್‌ಗಳಿಗೆ ಹೆಚ್ಚಿನ ಸುರಕ್ಷತೆ ಮತ್ತು ಆರಾಮ ಒದಗಿಸಲು ಅಭಿವೃದ್ಧಿ ಪಡಿಸಲಾಗುತ್ತಿದೆ.


ಜಾಗತಿಕ ಜನಪ್ರಿಯ ಉತ್ಪಾದಕರು:
ಮಿಲಿಟರಿ ವಿಮಾನಗಳ ಕಾಕ್‌ಪಿಟ್ ಆಸನವನ್ನು ಹಲವು ಪ್ರಸಿದ್ಧ ಸಂಸ್ಥೆಗಳು ಉತ್ಪಾದಿಸುತ್ತವೆ. ಅವುಗಳಲ್ಲಿ ಕೆಲವು ಈ ಕೆಳಗಿನಂತಿವೆ.


• ಮಾರ್ಟಿನ್ ಬೇಕರ್ ಏರ್‌ಕ್ರಾಫ್ಟ್ ಕಂಪನಿ (ಯುಕೆ)


• ಕಾಲಿನ್ಸ್ ಏರೋಸ್ಪೇಸ್ (ಅಮೆರಿಕಾ)


• ಸಾಬ್ (ಸ್ವೀಡನ್)


• ಥೇಲ್ಸ್ ಗ್ರೂಪ್ (ಫ್ರಾನ್ಸ್)


• ಲಿಯೋನಾರ್ಡೋ (ಇಟಲಿ)


• ಜ಼್ವೆಜ್ಡ (ರಷ್ಯಾ)


• ರಾಕ್‌ವೆಲ್ ಕಾಲಿನ್ಸ್ (ಅಮೆರಿಕಾ)


• ಗುಡ್‌ರಿಚ್ ಕಾರ್ಪೋರೇಷನ್ (ಅಮೆರಿಕಾ)


• ಟೆಕ್ಸ್‌ಟ್ರಾನ್ (ಅಮೆರಿಕಾ)


ಈ ಸಂಸ್ಥೆಗಳು ಯುದ್ಧ ವಿಮಾನಗಳಿಗಾಗಿ ವಿವಿಧ ಶ್ರೇಣಿಯ ಕಾಕ್‌ಪಿಟ್ ಆಸನಗಳನ್ನು ಉತ್ಪಾದಿಸುತ್ತವೆ. ಅದರಲ್ಲಿ ತರಬೇತಿ ವಿಮಾನಗಳಿಗೆ ಸರಳ ಆಸನಗಳು ಮತ್ತು ಅತ್ಯಧಿಕ ಸಾಮರ್ಥ್ಯದ ಯುದ್ಧ ವಿಮಾನಗಳಿಗೆ ಸಂಕೀರ್ಣ ಆಸನಗಳು ಸೇರಿವೆ. ಈ ಆಸನಗಳನ್ನು ವಿಮಾನಗಳು ಮತ್ತು ಅವುಗಳ ಪೈಲಟ್‌ಗಳ ಅಗತ್ಯಗಳಿಗೆ ತಕ್ಕಂತೆ ವಿನ್ಯಾಸಗೊಳಿಸಲಾಗುತ್ತದೆ.


ಈ ಸಂಸ್ಥೆಗಳು ಅಭಿವೃದ್ಧಿ ಪಡಿಸುವ ಕಾಕ್‌ಪಿಟ್ ಆಸನಗಳನ್ನು ಜಗತ್ತಿನಾದ್ಯಂತ ಮಿಲಿಟರಿಗಳು ಬಳಸುತ್ತವೆ. ಅವುಗಳು ಅಸಂಖ್ಯಾತ ಮಿಲಿಟರಿ ಪೈಲಟ್‌ಗಳ ಪ್ರಾಣ ರಕ್ಷಿಸುವಲ್ಲಿ ನೆರವಾಗಿದ್ದು, ಮಿಲಿಟರಿ ಕಾರ್ಯಾಚರಣೆಗಳಲ್ಲಿ ಅತ್ಯಂತ ಮಹತ್ವದ ಪಾತ್ರ ನಿರ್ವಹಿಸಿವೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.