ನವದೆಹಲಿ: Spiders On Mars - ಮಂಗಳ ಗ್ರಹದ ಮೇಲೆ ಜೀವನದ ಅಸ್ತಿತ್ವದ ಹುಡುಕಾಟದಲ್ಲಿ ಒಂದೆಡೆ ಕೆಲ ವಿಜ್ಞಾನಿಗಳು ನಿರತರಾಗಿದ್ದರೆ, ಇನ್ನೊಂದೆಡೆ ಮಂಗಳನ ಅಂಗಳದ ಕೆಲ ವಿಚಿತ್ರ ಸಂಗತಿಗಳ ಅಸ್ತಿತ್ವ ಕೂಡ ವಿಜ್ಞಾನಿಗಳ ಪಾಲಿಗೆ ರಹಸ್ಯ ಎಂದು ಸಾಬೀತಾಗುತ್ತಿದೆ. ಏತನ್ಮಧ್ಯೆ ಮಂಗಳ ಗ್ರಹದ ಮೇಲೆ ನಿರ್ಮಾಣಗೊಂಡಿರುವ ಜೇಡರ ಹುಳುವಿನಾಕೃತಿಗಳನ್ನು ತಿಳಿದುಕೊಳ್ಳಲು ವಿಜ್ಞಾನಿಗಳು ಯತ್ನಿಸಿದ್ದಾರೆ. ಇವುಗಳಿಗೆ Araneiforms ಎಂದು ಕರೆಯುತ್ತಾರೆ ಹಾಗೂ ಮಂಗಳ ಗ್ರಹದ ಎತ್ತರ ಮತ್ತು ತಗ್ಗು ಪ್ರದೇಶಗಳಿಂದ ಇವು ನಿರ್ಮಾಣಗೊಂಡಿವೆ.


COMMERCIAL BREAK
SCROLL TO CONTINUE READING

ಮಂಗಳನ ಮೇಲೆ ಜೇಡರ ಹುಳುಗಳು
ಇಲ್ಲಿ ವಿಶೇಷ ಎಂದರೆ ಇಂತಹ ಆಕೃತಿಗಳು ಭೂಮಿಯ ಮೇಲೆ ಇದುವರೆಗೂ ಕಂಡುಬಂದಿಲ್ಲ . ಮಂಗಳ ಗ್ರಹದ ಮೇಲೆ ಇವು ಹೇಗೆ ನಿರ್ಮಾಣಗೊಂಡಿವೆ ಎಂಬುದು ಇದೀಗ ವಿಜ್ಞಾನಿಗಳಿಗೆ ಸವಾಲಾಗಿ ಪರಿಣಮಿಸಿದೆ.  ಈ ಕುರಿತು ಹೇಳಿಕೆ ನೀಡಿರುವ ವಿಜ್ಞಾನಿಗಳು ಕಾರ್ಬನ್ ಡೈಆಕ್ಸೈಡ್ ನ ಮಂಜು ಕರಗದೆ ಆವಿಯಾಗಿರುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.


ಏನಿದರ ಹಿಂದಿನ ರಹಸ್ಯ?
ಬ್ರಿಟನ್ ಹಾಗೂ ಐರ್ಲೆಂಡ್ ವಿಜ್ಞಾನಿಗಳು ತಮ್ಮ ಓಪನ್ ಯುನಿವರ್ಸಿಟಿ ಮಾಸ್ ಸಿಮ್ಯೋಲೆಶನ್ ಚೇಂಬರ್ (Open University Mass Simulation Chamber)  ಸಹಾಯದಿಂದ ಮಂಗಳದಂತಹ ಪರಿಸ್ಥಿತಿಗಳನ್ನು ನಿರ್ಮಿಸಿ, ಇಂತಹ ಯಾವುದಾದರೊಂದು ಪ್ರಕ್ರಿಯೆಯಿಂದ ಇಂತಹ ಆಕೃತಿಗಳು ನಿರ್ಮಾಣಗೊಳ್ಳುತ್ತವೆಯೇ ಎಂಬುದರ ಅಧ್ಯಯನ ನಡೆಸಿದ್ದಾರೆ.  ಇದಕ್ಕಾಗಿ ಅವರು ಕಾರ್ಬನ್ ಡೈಆಕ್ಸೈಡ್ ನ ಮಂಜುಗಡ್ಡೆ ತಯಾರಿಸಿ ಅದರಲ್ಲಿ ರಂಧ್ರಗಳನ್ನು ನಿರ್ಮಿಸಿ ಬಳಿಕ ವಿವಿಧ ಗಾತ್ರದ ಕಾಲುಗಳ ಮೇಲೆ ಅದನ್ನು ಆಡಿಸಿದ್ದಾರೆ. ಬಳಿಕ ಮಂಗಳನ ಮೇಲ್ಮೈ ಮೇಲಿರುವ ಒತ್ತಡದ ವಾತಾವರಣವನ್ನು ಅವರು ನಿರ್ಮಿಸಿ ನಂತರ ಆ ಬಾಕ್ಸ್ ಅನ್ನು ಮೇಲ್ಮೈ ಮೇಲಿಟ್ಟಿದ್ದಾರೆ. ಈ ವೇಳೆ ಕಾರ್ಬನ್ ಡೈಆಕ್ಸೈಡ್ ಮಂಜುಗಡ್ಡೆ ಸಬ್ಲಿಮೆಟ್ ಆಗಿದೆ. ನಂತರ ಅವುಗಳನ್ನು ತೆರವುಗೊಳಿಸಿದಾಗ ಜೇಡರಹುಳುವಿನ ಆಕಾರದ ಆಕೃತಿಗಳು ನಿರ್ಮಾಣಗೊಂಡಿದ್ದು ಅವರ ಗಮನಕ್ಕೆ ಬಂದಿದೆ.


ಇದನ್ನೂ ಓದಿ-Earth Rotation Video: ಭೂಮಿ ತಿರುಗುವಿಕೆಯನ್ನು ನೀವು ನೋಡಿದ್ದಿರಾ? ಇಲ್ಲಿದೆ ರೋಮಾಂಚಕ ವಿಡಿಯೋ


ಈ ಆಕೃತಿಗಳು ಹೇಗೆ ನಿರ್ಮಾಣಗೊಳ್ಳುತ್ತವೆ? (Science News In Kannada)
ಈ ಕುರಿತು ಹೇಳುವ ವಿಜ್ಞಾನಿಗಳು. ಮಂಗಳನ ಮೇಲೆ ನಿರ್ಮಾಣಗೊಂಡ ಈ ಆಕೃತಿಗಳ ರಹಸ್ಯ ಭೇದಿಸಬಹುದು ಮತ್ತು ಈ ಹೈಪೋಥಿಸಿಸ್ ಅನ್ನು ಕಾಯಿಫರ್ಸ್ ಹೈಪೋಥಿಸಿಸ್ ಎಂದು ಕರೆಯಲಾಗುತ್ತದೆ ಎನ್ನುತ್ತಾರೆ. ವಸಂತ ಕಾಲದಲ್ಲಿ ಸೂರ್ಯನ ಕಿರಣಗಳು ಮಂಜುಗಡ್ಡೆಗಳ ಮೂಲಕ ಹಾಯ್ದು ಕೆಳಗಿರುವ ಮೇಲ್ಮೈಮೇಲೆ ಬಿಳುತ್ತವೆ. ಇದರಿಂದ ಮಂಜುಗಡ್ಡೆ ಸಬ್ಲಿಮೆಟ್ ಆಗುತ್ತದೆ ಮತ್ತು ಕೆಳಗೆ ಒತ್ತಡ ಸೃಷ್ಟಿಯಾಗಿ ಅದು ಛಿದ್ರಗಳ ಮೂಲಕ ಹೊರಬರಲು ಆರಂಭಿಸುತ್ತದೆ. ಇದರಿಂದ ಗ್ಯಾಸ್ ಹೊರಬರುವುದರ ಜೊತೆಗೆ ಕೆಳಗೆ ಜೇಡರಹುಳುವಿನ ಆಕಾರದ ಆಕೃತಿಗಳು ನಿರ್ಮಾಣಗೊಳ್ಳುತ್ತವೆ. ಹಲವು ದಶಕಗಳಿಂದ ಈ ಥಿಯರಿಯನ್ನು ಒಪ್ಪಿಕೊಂಡಿದ್ದರೂ ಕೂಡ ಇದಕ್ಕೆ ಯಾವುದೇ ಭೌತಿಕ ಪ್ರಮಾಣ ದೊರೆತಿಲ್ಲ .


ಇದನ್ನೂ ಓದಿ- Existance Of Theia Inside Earth - ಭೂಮಿಯ ಗರ್ಭದಲ್ಲೊಂದು Alien ಪ್ರಪಂಚ! Giant Impact Hypothesis ರಹಸ್ಯ ಭೇದಿಸಿದ್ರಾ ವಿಜ್ಞಾನಿಗಳು?


ಮಂಗಳನ ಮೋಡಗಳು
ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ NASAದ Curiosity Roverನಿಂದ ಕ್ಲಿಕ್ಕಿಸಲಾಗಿರುವ ಎಂಟು ಛಾಯಾಚಿತ್ರಗಳಲ್ಲಿ ನ್ಯಾವಿಗೇಶನ್ ಕ್ಯಾಮರಾ ಕಣ್ಣಿನಿಂದ ಐದು ನಿಮಿಷಗಳ ಕಾಲ ಈ ದೃಶ್ಯಗಳನ್ನು ಗಮನಿಸಲಾಗಿದೆ. ಕೆಂಪುಗ್ರಹದ ಮೇಲೆ ಇವು ಭೂಮಿಯ ಮೋಡಗಳ ಮಾದರಿಯಲ್ಲಿ ಚಲಿಸುತ್ತಿವೆ. ಉತ್ತರ ಕ್ಯಾರೊಲಿನಾ ವಿವಿ ವಿಜ್ಞಾನಿಯಾಗಿರುವ ಪಾಲ್ ಬ್ರಾಯಿನ್ ಅವರು ಈ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಮಂಗಳಗ್ರಹದ ವಾಯು ಮಂಡಲ ತುಂಬಾ ತೆಳ್ಳಗಾಗಿದೆ ಹೀಗಾಗಿ ಇವು ತುಂಬಾ ವಿಭಿನ್ನ ಆಕ್ರುತಿಯಲ್ಲಿವೆ ಎಂದೂ ಕೂಡ ಹೇಳಲಾಗುತ್ತಿದೆ. ಮಂಗಳಗ್ರಹದ ಈ ಒಂದೇ ವಾತಾವರಣ ಭೂಮಿಯ ಮಾದರಿಯಲ್ಲಿಲ್ಲ ಆದರೂ ಕೂಡ ವಿಶೇಷತೆಗಳಿಂದ ಕೂಡಿದೆ.


ಇದನ್ನೂ ಓದಿ- NASA, GJ 1132 b: ಎರಡನೇ ಭೂಮಿಯ ಕುರಿತು ಸಿಕ್ಕ ಸಂಕೇತ! ಲಾವಾರಸದಿಂದ ಕೂಡಿದ ಈ Alien ಗ್ರಹ (Alien Planet) ತನ್ನದೇ ವಾಯುಮಂಡಲ ಸೃಷ್ಟಿಸುತ್ತಿದೆ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.