Spy Device: ಭ್ರಷ್ಟಾಭಾರಿಗಳೇ ಹುಷಾರ್...! ಈ ಮ್ಯಾಚ್ ಬಾಕ್ಸ್ ಸೈಜ್ ಉಪಕರಣ ನಿಮ್ಮನ್ನು ಜೈಲಿಗಟ್ಟಬಹುದು
Tracker Device: ಒಂದು ವೇಳೆ ನೀವೂ ಕೂಡ ನಿಮ್ಮ ಸರ್ಕಾರಿ ಅಥವಾ ಖಾಸಗಿ ಕೆಲಸಗಳನ್ನು ಮುಗಿಸಲು ವಿವಿಧ ಕಚೇರಿಗಳಿಗೆ ಅಲೆದಾಡುತ್ತಿದ್ದು ಮತ್ತು ನಿಮ್ಮ ಕೆಲಸವನ್ನು ಮುಗಿಸಿಕೊಡಲು ಲಂಚಕ್ಕಾಗಿ ಯಾರಾದರು ಮೀನಾಮೇಷ ಎಣಿಸುತ್ತಿದ್ದಾರೆ. ಈ ಸಣ್ಣದೊಂದು ಉಪಕರಣ ನಿಮಗೆ ಭಾರಿ ಸಹಾಯ ಮಾಡಲಿದೆ.
Spy Device: ನೀವು ಕೂಡ ಯಾವುದಾದರೊಂದು ಸರ್ಕಾರಿ ಅಥವಾ ಖಾಸಗಿ ಕೆಲಸವನ್ನು ಮಾಡಲು ಬಯಸುತ್ತಿದ್ದು ಮತ್ತು ಅದಕ್ಕೆ ಪ್ರತಿಯಾಗಿ ಯಾರಾದರೂ ನಿಮ್ಮಿಂದ ಭಾರಿ ಲಂಚವನ್ನು ಕೇಳುತ್ತಿದ್ದರೆ, ಈಗ ನೀವು ಸುಲಭವಾಗಿ ಆ ವ್ಯಕ್ತಿಯ ವಿರುದ್ಧ ಸಾಕ್ಷ್ಯವನ್ನು ಸಂಗ್ರಹಿಸಿ ಅವನನ್ನು ಕಂಬಿ ಎಣಿಸುವಂತೆ ಮಾಡಬಹುದು. ವ್ಯಕ್ತಿಯ ಶೋಷಣೆಯನ್ನು ಪೊಲೀಸರ ಮುಂದೆ ತರಬಲ್ಲ ಅಂತಹದೊಂದು ಸಾಧನ ಇದೀಗ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಇಂದು ನಾವು ನಿಮ್ಮೊಂದಿಗೆ ಆ ಸಾಧನದ ವೈಶಿಷ್ಟ್ಯಗಳನ್ನು ಹಂಚಿಕೊಳ್ಳಲಿದ್ದೇವೆ.
ಇದನ್ನೂ ಓದಿ-GPay ಮೂಲಕ ಯಾವುದೇ ಮಿತಿ ಇಲ್ಲದೆ ಹಣ ಪಾವತಿಸಿ, ರೂ.50 ರಿಂದ ರೂ.100 ಕ್ಯಾಶ್ ಬ್ಯಾಕ್ ಪಡೆಯಿರಿ!
ಆ ಸಾಧನ ಯಾವುದು ಮತ್ತು ಅದರ ವೈಶಿಷ್ಟ್ಯಗಳು ಯಾವುವು?
ನಾವು ಮಾತನಾಡುತ್ತಿರುವ ಸಾಧನದ ಹೆಸರು AE ಸೆಕ್ಯುರಿಟೀಸ್ ಮಿನಿ A8 ಹಿಡನ್ ಆಡಿಯೊ ರೆಕಾರ್ಡರ್ ಆಗಿದೆ. ಇದು ವಾಸ್ತವದಲ್ಲಿ ಒಂದು ಧ್ವನಿ ರೆಕಾರ್ಡಿಂಗ್ ಪತ್ತೇದಾರಿ ಮೈಕ್ರೊಫೋನ್ ಆಗಿದೆ. ಇದನ್ನು ಏಕಕಾಲಕ್ಕೆ ಅನೇಕ ಉದ್ದೇಶಗಳಿಗಾಗಿ ಬಳಸಬಹುದು. ನಿಸ್ಸಂಶಯವಾಗಿ, ಒಬ್ಬ ವ್ಯಕ್ತಿಯು ಲಂಚ ಕೇಳುತ್ತಿದ್ದರೆ ಅಥವಾ ನಿಮಗೆ ಬೆದರಿಕೆ ಹಾಕುತ್ತಿದ್ದರೆ, ನೀವು ಅವರ ಧ್ವನಿಯನ್ನು ರೆಕಾರ್ಡ್ ಮಾಡಬಹುದು. ಅಷ್ಟೇ ಅಲ್ಲ ದೂರದಲ್ಲಿ ಕುಳಿತ ಆ ವ್ಯಕ್ತಿಯ ಧ್ವನಿಯನ್ನೂ ಆಲಿಸಬಹುದು. ಈ ಸಾಧನವನ್ನು ನಿಮ್ಮ ಕಾರು ಅಥವಾ ಯಾವುದೇ ವಾಹನದಲ್ಲಿ ಅಳವಡಿಸಿದರೂ ಕೂಡ ವಾಹನ ಕಳ್ಳತನವಾದ ಸಂದರ್ಭದಲ್ಲಿ, ಅದರಲ್ಲಿ ಕುಳಿತವರ ಧ್ವನಿಯನ್ನು ಆಲಿಸಿ ಅವರನ್ನು ನೀವು ಜೈಲಿಗೆ ಕಳುಹಿಸಬಹುದು.
ಈ ಉಪಕರಣದ ಬೆಲೆ ಕುರಿತು ಹೇಳುವುದಾದರೆ, ಈ ಸಾಧನದ ಬೆಲೆ 1,035 ರೂ. ಈ ಸಾಧನವು ಅಗಾಧ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ ಎಂದರೆ ನೀವು ನಂಬುವುದಿಲ್ಲ, ಏಕೆಂದರೆ ಇದರ ಆಡಿಯೊ ಗುಣಮಟ್ಟ ಅತ್ಯುತ್ತಮವಾಗಿದೆ ಮತ್ತು ಈ ಸಾಧನದ ಬಳಿ ಕುಳಿತಿರುವ ವ್ಯಕ್ತಿಯ ಧ್ವನಿಯು ಶಬ್ದದಲ್ಲಿಯೂ ಸಹ ಸ್ಪಷ್ಟವಾಗಿರುತ್ತದೆ. ಈ ಸಾಧನವು ನಿಮ್ಮ ಮುಷ್ಟಿಯಲ್ಲಿ ಹೊಂದಿಕೊಳ್ಳುತ್ತದೆ ಮತ್ತು ನೀವು ಅದನ್ನು ನಿಮ್ಮ ಕೆಲಸದಲ್ಲಿ ತರಬಹುದು.
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.